Leather: ಚಳಿಗಾಲದಲ್ಲಿ ನಿಮ್ಮ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ ಲೆದರ್ ಉತ್ಪನ್ನಗಳಿವು..!

ಇಂದಿನ ಫ್ಯಾಶನ್ ಟ್ರೆಂಡ್‍ಗಳಲ್ಲಿ ಲೆದರ್ ಬಟ್ಟೆಗಳು ಕೇವಲ ಜಾಕೆಟ್ ಅಥವಾ ಪ್ಯಾಂಟ್‍ಗಳನ್ನೊಳಗೊಂಡಂತೆ ಡ್ರೆಸ್‍ಗಳು, ಕೋ-ಆರ್ಡ್ ಸೆಟ್‍ಗಳು, ಶಾಟ್ರ್ಸ್ ಮತ್ತು ಟಾಪ್‍ಗಳಿಗೆ ವ್ಯಾಪಕವಾಗಿ ವಿಸ್ತರಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಚಳಿಗಾಲ(Winter)ದಲ್ಲಿ ನಮ್ಮ ದೇಹವು ಎಷ್ಟು ಬೆಚ್ಚಗಿದ್ದರೂ ಕಡಿಮೆಯೇ. ಚಳಿ ಹೆಚ್ಚಾದಷ್ಟು ನಮ್ಮ ದೇಹ(Body)ವು ಚಳಿಗೆ ಒಗ್ಗಿಕೊಳ್ಳಲು ಒದ್ದಾಡಬೇಕಾಗುತ್ತದೆ. ಹಾಗಾಗಿ ಚಳಿಗೆ ಅನುಗುಣವಾಗಿ ನಾವು ಧರಿಸುವ ಬಟ್ಟೆ(Clothes)ಗಳಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಉಣ್ಣೆ ಬಟ್ಟೆಯ ಜೊತೆಗೆ ಲೆದರ್ ಬಟ್ಟೆಗಳು(Leather Clothes) ಕೂಡ ನಿಮ್ಮ ವಾರ್ಡ್‍ರೋಬ್‍(Wardrobe)ನಲ್ಲಿದ್ದರೆ ಉತ್ತಮ. ಇದು ಬೆಚ್ಚಗೆ ಮಾಡುವುದಲ್ಲದೇ ತುಂಬಾ ಸ್ಟೈಲಿಶ್ ಆಗಿಯೂ ಕಾಣುವಂತೆ ಮಾಡುತ್ತದೆ.

ಇಂದಿನ ಫ್ಯಾಶನ್ ಟ್ರೆಂಡ್‍ಗಳಲ್ಲಿ ಲೆದರ್ ಬಟ್ಟೆಗಳು ಕೇವಲ ಜಾಕೆಟ್ ಅಥವಾ ಪ್ಯಾಂಟ್‍ಗಳನ್ನೊಳಗೊಂಡಂತೆ ಡ್ರೆಸ್‍ಗಳು, ಕೋ-ಆರ್ಡ್ ಸೆಟ್‍ಗಳು, ಶಾಟ್ರ್ಸ್ ಮತ್ತು ಟಾಪ್‍ಗಳಿಗೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಸ್ಟೈಲಿನ ಜಗತ್ತಿನಲ್ಲಿ ಲೆದರ್ ಸ್ಟೇಪಲ್ಸ್ ಇಲ್ಲದ ಜಗತ್ತನ್ನು ಕಲ್ಪಿಸುವುದು ಕಠಿಣವಾಗಿದೆ. ಅನೇಕ ಬಟ್ಟೆಗಳು ಸೀಮಿತವಾಗಿರಬಹುದು ಮತ್ತು ವಿಭಿನ್ನ ಸಂದರ್ಭಗಳಲ್ಲಿ ಮಾತ್ರ ಸೂಕ್ತವೆಂದು ಭಾವಿಸಬಹುದು, ಆದರೆ ಲೆದರ್ ಬಟ್ಟೆಗಳು ಬಹುಮುಖ ಮತ್ತು ಹಗಲು ರಾತ್ರಿಗನುಗುಣವಾಗಿ ಮನಬಂದಂತೆ ಪರಿವರ್ತನೆಯಾಗಬಹುದು.

1. ಲೆದರ್ ಬ್ಲೇಜರ್

ಇದು ಇತ್ತೀಚಿನ ದಿನಗಳಲ್ಲಿ ಸ್ಟೈಲಿಶ್ ಉಡುಪಾಗಿ ಬದಲಾಗಿದೆ. ಲೆದರ್ ಬ್ಲೇಜರ್ ಇದು ನಿಮಗೆ ವಿಭಿನ್ನವಾದ ಲುಕ್ ನೀಡುತ್ತದೆ. ಇದರ ಜೊತೆಗೆ ಡೆನಿಮ್ ಶಟ್ರ್ಸ್ ಮತ್ತು ಸ್ಟೀಕರ್ಸ್ ಕೂಡ ನಿಮ್ಮ ವಾರ್ಟ್‍ರೋಬ್ ಸೇರಿದರೆ ಫ್ಯಾಶನ್ ಜಗತ್ತೇ ನಿಮ್ಮ ಮೆನಯಲ್ಲಿದ್ದಂತೆ ಭಾಸವಾಗುತ್ತದೆ. ಜೊತೆಗೆ ನಿಮಗೆ ಚಳಿಗಾಲದಲ್ಲಿ ನಿಮಗೆ ಬೆಚ್ಚನೆಯ ಅನುಭವ ನೀಡುವುದರಲ್ಲಿ ಮೊದಲಿರುತ್ತದೆ.

ಇದನ್ನೂ ಓದಿ:Orange Benefits: ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನುವುದರಿಂದ ಸಿಗುವ ಲಾಭಗಳೆಷ್ಟು ಗೊತ್ತಾ?

2. ಲೆದರ್ ಪ್ಯಾಂಟ್‍ಗಳು

ವೈ2ಕೆ ಇದು ಮಾದಕ, ದೇಹವನ್ನು ಅಪ್ಪಿಕೊಳ್ಳುವ ಚರ್ಮದ ಪ್ಯಾಂಟ್‍ಗಳು ಇಂದಿನ ಟ್ರೆಂಡ್‍ಗಳಲ್ಲಿ ಅವರು ಮುಂದುವರಿದರೂ ಸಹ ಚರ್ಮದ ಪ್ಯಾಂಟ್‍ಗಳು ಹಲವಾರು ಇತರ ಶೈಲಿಗಳಲ್ಲಿ ವೈವಿಧ್ಯಗೊಂಡಿವೆ. ಉದಾಹರಣೆಗೆ ವೈಡ್ ಲೆಗ್ ಪ್ಯಾಂಟ್‍ಗಳು ಈಗ ಹೆಚ್ಚು ಪ್ರಚಲಿತಗೊಳ್ಳುತ್ತಿವೆ. ಆಕರ್ಷಕ ನೋಟಕ್ಕಾಗಿ ಅದನ್ನು ಕತ್ತರಿಸಿದ ಮೇಲ್ಭಾಗ ಮತ್ತು ಮುದ್ದಾದ ಕಾರ್ಡಿಜನ್‍ನೊಂದಿಗೆ ಸ್ಟೈಲ್ ಮಾಡಬಹುದು.

3. ಕೋ-ಆರ್ಡ್ ಸೆಟ್

ಪ್ಯಾಂಟ್ ಮತ್ತು ಶರ್ಟ್ ಮ್ಯಾಚಿಂಗ್ ಇಮದಿನ ಜಮಾನದಲ್ಲಿ ಟ್ರೆಂಡ್ ಆಗಿದೆ. ಇದರಲ್ಲಿ ಕೋ-ಆರ್ಡ್ ಸೆಟ್‍ಗಳು ಫ್ಯಾಷನ್‍ನಲ್ಲಿ ಯಾವುದೇ ಸಮಯದಲ್ಲಿ, ನಿರ್ದಿಷ್ಟ ಋತುವಿನ ಶೈಲಿಯನ್ನು ಪ್ರತಿಬಿಂಬಿಸುವ ಮತ್ತು ಸಂಯೋಜಿಸುವ ಬಟ್ಟೆ ಎಂದೆ ಹೇಳಬಹುದು. ಕೋ-ಆರ್ಡ್ ಸೆಟ್‍ಗಳು ಖ್ಯಾತಿ ಪಡೆಯುತ್ತಿದ್ದು ಧರಿಸಲು ಸುಲಭವಾಗಿದ್ದು, ನೋಟವು ಕೂಡ ಆಕರ್ಷಕವಾಗಿರುತ್ತದೆ.

4. ಲೆದರ್ ಬ್ಯಾಗ್

ಲೆದರ್ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದು ನಡೆಯುತ್ತಿದ್ದರೆ ಅದರ ಗತ್ತೇ ಬೇರೆ ಇರುತ್ತದೆ. ಅದು ಚಿಕ್ಕ ಬ್ಯಾಗೆಟ್ ಬ್ಯಾಗ್ ಆಗಿರಲಿ ಅಥವಾ ದೊಡ್ಡ ಟೋಟ್ ಬ್ಯಾಗ್ ಆಗಿರಲಿ ಲೆದರ್ ಲುಕ್ ಯಾವುದೇ ಉಡುಪನ್ನು ಇನ್ನು ಶ್ರೀಮಂತವಾಗಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ಈ ಚೀಲಗಳು ಕಂದು ಅಥವಾ ಕಪ್ಪು ಬಣ್ಣಕ್ಕೆ ಮಾತ್ರ ಸೀಮಿತವಾಗಿಲ್ಲ, ಹಲವಾರು ಬಣ್ನಗಳು ಮಾರುಕಟ್ಟೆಯಲ್ಲೊ ಲಭ್ಯವಿದೆ. ಧರಿಸುವ ಬಟ್ಟೆಗೆ ಅನುಗುಣವಾಗಿ ನಿಮ್ಮ ಲೆದರ್ ಬ್ಯಾಗ್ ಬಣ್ಣವನ್ನು ಬದಲಾಯಿಸಬಹುದು. ಅಷ್ಟೊಂದು ಬಣ್ಣಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ:Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬೇಡಿ; ಈ ಟಿಪ್ಸ್​ ಫಾಲೋ ಮಾಡಿ..!

5. ಬೂಟುಗಳು

ನೀವು ಬೂಟುಗಳ ಬಗ್ಗೆ ಯೋಚಿಸಿದಾಗ ತಕ್ಷಣವೇ ನಿಮ್ಮ ಮನಸ್ಸು ಚರ್ಮದ ಬೂಟುಗಳಿಗೆ ಹೋಗುತ್ತದೆ. ಈ ವರ್ಷ ಲೆದರ್ ಕೌಬಾಯ್ ಬೂಟುಗಳು ಆಶ್ಚರ್ಯಕರವಾಗಿ ಭಾರಿ ಪುನರಾಗಮನವನ್ನು ಮಾಡಿವೆ. ಇದರಲ್ಲಿ ವಿವಿಧ ಬಣ್ಣಗಳು ಮತ್ತು ಪ್ರಿಂಟ್‍ಗಳಿವೆ.

 
Published by:Latha CG
First published: