• Home
  • »
  • News
  • »
  • lifestyle
  • »
  • ಈಗಿನಿಂದಲೇ ನೆಗೆಟಿವ್ ಫೀಲಿಂಗ್ಸ್​ ಕಂಟ್ರೋಲ್ ಮಾಡಿಲ್ಲ ಅಂದ್ರೆ ಮುಂದೆ ಬಹಳ ಕಷ್ಟ- ವಿಜ್ಞಾನಿಗಳ ಎಚ್ಚರಿಕೆ!

ಈಗಿನಿಂದಲೇ ನೆಗೆಟಿವ್ ಫೀಲಿಂಗ್ಸ್​ ಕಂಟ್ರೋಲ್ ಮಾಡಿಲ್ಲ ಅಂದ್ರೆ ಮುಂದೆ ಬಹಳ ಕಷ್ಟ- ವಿಜ್ಞಾನಿಗಳ ಎಚ್ಚರಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅದೇ ರೀತಿ ಭಾವನೆಗಳನ್ನು ನಿಯಂತ್ರಿಸಲಾಗದವರು ಹಾಗೂ ಹೆಚ್ಚು ಸಮಯದವರೆಗೆ ಒಂದೇ ಭಾವನಾತ್ಮಕ ಸ್ಥಿತಿಯಲ್ಲಿರದವರಿಗೆ ಖಿನ್ನತೆ ಕಾಡುತ್ತದೆ ಎಂಬ ಸೂಚನೆಯನ್ನು ತಜ್ಞರು ತಿಳಿಸಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ನಕಾರಾತ್ಮಕ ಭಾವನೆಗಳು(Negative Feelings) ಎಂದರೆ ಕೋಪ, ಒಬ್ಬಂಟಿತನ, ಒತ್ತಡ, ಹತಾಶೆ, ಅಸಹಾಯಕತೆ, ಭಯ, ಪಾಪಪ್ರಜ್ಞೆ, ಖಿನ್ನತೆ ಹೀಗೆ ವಯಸ್ಸಾದಂತೆ ಈ ಲಕ್ಷಣಗಳು(Symptoms) ಹೆಚ್ಚಾಗುತ್ತಾ ಹೋಗುವುದು ಸಾಮಾನ್ಯವಾಗಿದೆ. ಮುಪ್ಪಿನ ಸಮಯದಲ್ಲಿ(Old age) ಪ್ರತಿಯೊಬ್ಬರೂ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ, ಈ ಸಮಯದಲ್ಲಿ ಇಂತಹ ನಕಾರಾತ್ಮಕ ಭಾವನೆಗಳು ನಮ್ಮನ್ನು ಕಾಡುವುದು ಸಹಜ ಎಂಬುದು ವಿಜ್ಞಾನಿಗಳ(Scientists) ಅಭಿಪ್ರಾಯವಾಗಿದೆ.


ನಕಾರಾತ್ಮಕ ಭಾವನೆಗಳಿಂದ ಉಂಟಾಗುವ ಅಪಾಯಗಳೇನು?


ವಯಸ್ಸಾದವರ ಮೆದುಳಿನ ಮೇಲೆ ಪ್ರಭಾವ ಬೀರುವ ಈ ಭಾವನೆಗಳು ಹೆಚ್ಚಾದಂತೆಲ್ಲಾ ಕೇಂದ್ರ ನರಮಂಡಲದ ಜೀವಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸುವ ಅಥವಾ ಮೃತವಾಗುವ ಅಪಾಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ ಹಾಗೂ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೆಚ್ಚಿಸುತ್ತವೆ ಎಂಬ ಸೂಚನೆಯನ್ನು ನೀಡಿದ್ದಾರೆ.


ಹಿರಿಯರ ಮೆದುಳು ಹೆಚ್ಚು ಸಕ್ರಿಯಗೊಳ್ಳುತ್ತದೆ


ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾನಿಲಯದ (UNIGE) ನರವಿಜ್ಞಾನಿಗಳು ಈ ಕುರಿತು ವಿವರವಾದ ಅಧ್ಯಯನವನ್ನು ಕೈಗೊಂಡಿದ್ದು ಮಾನಸಿಕ ನೋವನ್ನು ಎದುರಿಸುವಾಗ ಯುವ ಮತ್ತು ಹಿರಿಯ ವಯಸ್ಕರ ಮೆದುಳುಗಳ ಸಕ್ರಿಯಗೊಳಿಸುವಿಕೆಯನ್ನು ಗಮನಿಸಿದ್ದಾರೆ.


ನಕಾರಾತ್ಮಕ ಭಾವನೆಗಳು, ಆತಂಕ ಮತ್ತು ಖಿನ್ನತೆಯು ನ್ಯೂರೋ ಡಿಜೆನೆರೆಟಿವ್ (ಕೇಂದ್ರ ನರಮಂಡಲದ ಜೀವಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸುವ ಅಥವಾ ಮೃತವಾಗುವ ಅಪಾಯ) ಕಾಯಿಲೆಗಳು ಮತ್ತು ಬುದ್ಧಿಮಾಂದ್ಯತೆಯ ಪರಿಣಾಮವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.


ನರಕೋಶಗಳಲ್ಲಿ ಕಂಡುಬರುವ ಜಡತ್ವ


ವಿಜ್ಞಾನಿಗಳು ತಿಳಿಸಿರುವಂತೆ ಒಬ್ಬ ವ್ಯಕ್ತಿಗೆ ವಯಸ್ಸಾದಂತೆ ಅವರ ನರಕೋಶಗಳು ಒಂದು ರೀತಿಯ ಜಡತ್ವಕ್ಕೆ ಒಳಗಾಗುತ್ತವೆ. ಈ ಸಮಯದಲ್ಲಿ ನಕಾರಾತ್ಮಕ ಭಾವನೆಗಳು ಈ ನರಕೋಶಗಳನ್ನು ಇನ್ನಷ್ಟು ಸೋಮಾರಿಯಾಗಿ ಮಾರ್ಪಡಿಸುತ್ತವೆ.


ಇದನ್ನೂ ಓದಿ: Pregnancy Tips: 30ರ ಬಳಿಕ ಮಗು ಮಾಡಿಕೊಳ್ಳುವ ದಂಪತಿಗಳು ವೈದ್ಯರು ಹೇಳುವ ಈ ಸಲಹೆ ಪಾಲಿಸಿ!


ಭಾವನೆಗಳ ನಿರ್ವಹಣೆಯಲ್ಲಿ ಮುಖ್ಯವಾಗಿರುವ ಮೆದುಳಿನ ಎರಡು ಪ್ರದೇಶಗಳಾದ ಕಾರ್ಟೆಕ್ಸ್ ಮತ್ತು ಅಮಿಗ್ಡಾಲಾದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.


ಭಾವನೆಗಳ ನಿಯಂತ್ರಣ ಪರಿಣಾಮಕಾರಿ


ಇಂತಹ ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ನರಕೋಶಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಲು ಇಲ್ಲವೇ ಮಿತಿಯಲ್ಲಿರಿಸಲು ಸಹಾಯ ಮಾಡುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.


ಕಳೆದ 20 ವರ್ಷಗಳಿಂದ ಭಾವನೆಗಳಿಗೆ ಮೆದುಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಸಂಶೋಧಕರು ಸಂಶೋಧನೆ ನಡೆಸುತ್ತಿದ್ದು ಭಾವನಾತ್ಮಕವಾಗಿ ಏನನ್ನಾದರೂ ಗ್ರಹಿಸುವ ಸಮಯದಲ್ಲಿ ಮೆದುಳು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದು ಅಧ್ಯಯನದ ಲೇಖಕ ಡಾ ಓಲ್ಗಾ ಕ್ಲಿಮೆಕಿ ತಿಳಿಸಿದ್ದಾರೆ.


ಮೆದುಳಿನ ಪ್ರಕ್ರಿಯೆಗಳ ಅಧ್ಯಯನ


ಇದೊಂದು ರೀತಿಯ ನಿಗೂಢಕಾರಿಯಾದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿರುವ ಓಲ್ಗಾ, ಮೆದುಳು ಭಾವನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ? ಒಂದು ಭಾವನೆಯಿಂದ ಇನ್ನೊಂದಕ್ಕೆ ಹೇಗೆ ಮಾರ್ಪಾಡಾಗುತ್ತದೆ? ಆರಂಭಿಕ ಸ್ಥಿತಿಗೆ ಹೇಗೆ ಮರಳುತ್ತದೆ? ವಯಸ್ಸಾಗುವುದರೊಂದಿಗೆ ಇದು ಹೇಗೆ ಬದಲಾಗುತ್ತದೆ ಮೊದಲಾದ ಅಧ್ಯಯನಗಳನ್ನು ತಜ್ಞರು ಕೈಗೊಂಡಿದ್ದಾರೆ.


ಖಿನ್ನತೆಗೆ ಕಾರಣವಾಗುವ ಅಂಶ


ಈ ಹಿಂದಿನ ಅಧ್ಯಯನದ ಪ್ರಕಾರ ಭಾವನೆಗಳ ತ್ವರಿತ ಬದಲಾಯಿಸುವಿಕೆಯು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ಸೂಚಿಸಿವೆ.


ಅದೇ ರೀತಿ ಭಾವನೆಗಳನ್ನು ನಿಯಂತ್ರಿಸಲಾಗದವರು ಹಾಗೂ ಹೆಚ್ಚು ಸಮಯದವರೆಗೆ ಒಂದೇ ಭಾವನಾತ್ಮಕ ಸ್ಥಿತಿಯಲ್ಲಿರದವರಿಗೆ ಖಿನ್ನತೆ ಕಾಡುತ್ತದೆ ಎಂಬ ಸೂಚನೆಯನ್ನು ತಜ್ಞರು ತಿಳಿಸಿದ್ದಾರೆ.


ಯುವಕರಿಗಿಂತ ವಯಸ್ಸಾದವರಲ್ಲಿ ಮೆದುಳಿನ ಚಟುವಟಿಕೆ


ವಯಸ್ಸಾದ ಜನರಲ್ಲಿ ಮೆದುಳಿನ ಚಟುವಟಿಕೆ ವಿಭಿನ್ನವಾಗಿರುತ್ತದೆ ಹಾಗೂ ಯುವ ಜನರಿಗಿಂತ ಮೆದುಳಿನ ಸಂಪರ್ಕವು ವ್ಯತ್ಯಾಸವಾಗಿರುತ್ತದೆ ಎಂದು ಪ್ಯಾಟ್ರಿಕ್ ವುಲಿಯುಮಿಯರ್ ಪ್ರಯೋಗಾಲಯದ ಸಂಶೋಧಕ ಮತ್ತು ಈ ಕೃತಿಯ ಮೊದಲ ಲೇಖಕ ಸೆಬಾಸ್ಟಿಯನ್ ಬೇಜ್ ಲುಗೊ ತಿಳಿಸಿದ್ದಾರೆ.


ನಕಾರಾತ್ಮಕ ಭಾವನೆಗಳನ್ನು ಹೇಗೆ ನಿಯಂತ್ರಿಸಬಹುದು?


ವಯಸ್ಸಾದವರಲ್ಲಿ ಕಂಡುಬರುವ ಋಣಾತ್ಮಕ/ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಯೋಗ, ಧ್ಯಾನ, ಕೆಲಸದಲ್ಲಿ ಹೆಚ್ಚು ಬ್ಯುಸಿಯಾಗಿರುವುದು, ಧನಾತ್ಮಕ ಚಿಂತನೆಗಳಲ್ಲಿ ತೊಡಗುವುದು ಹೀಗೆ ಕೆಲವೊಂದು ಚಟುವಟಿಕೆಗಳನ್ನು ನಡೆಸಲು ತಿಳಿಸಿದ್ದಾರೆ.



ದೈಹಿಕ ಚಟುವಟಿಕೆಗಳನ್ನು ನಡೆಸುವುದು, ನೃತ್ಯ, ಸಂಗೀತ, ಇತರರೊಂದಿಗೆ ಸಂವಹನ ನಡೆಸುವುದು ಮೊದಲಾದ ಚಟುವಟಿಕೆಗಳಿಂದ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಬಹುದು ಎಂದು ತಿಳಿಸುತ್ತಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು