Netra Suraksha: ಆರೈಕೆ ನೀಡುವವರಾಗಿದ್ದರೆ ಜಾಗೃತರಾಗಿ! ನೀವು ಹೆಚ್ಚಿನ ಗಮನಹರಿಸಬೇಕಿರುವ ಮಧುಮೇಹದ ರೋಗಿಗಳ ರೋಗಲಕ್ಷಣಗಳು

ಸಂಭಾವ್ಯ ಆರೈಕೆ ನೀಡುವವರಾಗಿ, ನಾವೆಲ್ಲರೂ ತಿಳಿದಿರಲೇಬೇಕಾದ ಒಂದು ರೋಗವೆಂದರೆ ಮಧುಮೇಹ. ಮಧುಮೇಹ ಮತ್ತು ಅದರ ಸಂಬಂಧಿತ ತೊಂದರೆಗಳು ಪ್ರತಿ ವರ್ಷ ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನಮ್ಮ ಆರೋಗ್ಯದ ವಿಷಯಕ್ಕೆ ಬಂದರೆ ನಾವು ಸರಿಯಾದ ಕಾರ್ಯವನ್ನು ಕೈಗೊಳ್ಳಲು ನಾವು ಕಷ್ಟಪಡುತ್ತೇವೆ. ನಾವೇನು ಮಾಡಬೇಕು ಎಂಬುದು ನಮಗೆ ಗೊತ್ತು, ವ್ಯಾಯಾಮ ಮಾಡಬೇಕು, ನಮ್ಮ ವಿಟಮಿನ್ಸ್ ತೆಗೆದುಕೊಳ್ಳಬೇಕು, ಸಿಹಿತಿನಿಸುಗಳನ್ನು ತಿನ್ನಬಾರದು ಹಾಗೂ ನಮಗೆ ಹಸಿವಾದಾಗ ಮಾತ್ರ ಊಟ ಮಾಡಬೇಕು ಎಂದು ನಮಗೆ ತಿಳಿದಿದೆ,.. ಆದರೂ ನಾವು ಹಾಗೆ ಮಾಡುವುದಿಲ್ಲ. ಅದು ಕಠಿಣವಾದ ಕೆಲಸ.ನಮ್ಮ ವಯಸ್ಸು, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ನಾವು ಒಂಟಿಯಾಗಿರಲಿ ಅಥವಾ ವಿವಾಹಿತರಾಗಿರಲಿ, ನಮ್ಮ ದೈನಂದಿನ ಜೀವನದಲ್ಲಿನ ಒತ್ತಡವು ತುಂಬಾ ಕಠಿಣವಾಗಿದೆ. ನಾವು ನಮ್ಮ ಪ್ರೀತಿಪಾತ್ರರ ಆರೈಕೆಯ ಹೊಣೆಯನ್ನು ನಾವು ಹೊತ್ತುಕೊಂಡಿರುವಾಗ ಅದು ಅತ್ಯಲ್ಪವಾಗಿರುತ್ತದೆ ಮತ್ತು ಕಠಿಣವಾಗಿರುತ್ತದೆ. NetraSuraksha ಸೆಲ್ಫ್ ಚೆಕ್ ಅನ್ನು ಇಲ್ಲಿ ತೆಗೆದುಕೊಳ್ಳಿ. 

  ನಾವೆಲ್ಲರೂ ಬೆಳೆದು ದೊಡ್ಡವರಾದಂತೆ ನಮ್ಮ ಪೋಷಕರು, ಅಜ್ಜ-ಅಜ್ಜಿಯರು, ಆತ್ತೆ-ಮಾವ ಮತ್ತು ಎಲ್ಲಾ ಮನೆಯ ಹಿರಿಯರು ಮತ್ತು ಸಂಬಂಧಿಕರು ನಮ್ಮನ್ನು ತಮ್ಮ ಬೆಂಬಲ ವ್ಯವಸ್ಥೆಯ ರೂಪದಲ್ಲಿ ಕಾಣುತ್ತಾರೆ, ಇದು ನಮ್ಮ ಮೇಲೆ ಇರುವ ಜವಾಬ್ದಾರಿಯಾಗಿರುತ್ತದೆ ಕೂಡ. ಹಾಗಾದರೆ ನಾವು ಅದನ್ನು ಹೇಗೆ ನಿಭಾಯಿಸುತ್ತಿದ್ದೇವೆ? ಸರಿಯಾದ ಮಾಹಿತಿ ಪಡೆಯುವುದೊಂದೇ ಮಾರ್ಗ. ನಾವು ಹೆಚ್ಚು ಅರಿಯುತ್ತೇವೆ, ನಾವು ಹೆಚ್ಚು ನೋಡುತ್ತೇವೆ ಹಾಗೂ ಅಷ್ಟೇ ತ್ವರಿತವಾಗಿ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುತ್ತೇವೆ. ಸಮಯವು ಯಾವಾಗಲೂ ಬಹಳ ಮುಖ್ಯವಾಗಿರುತ್ತದೆ.

  ಸಂಭಾವ್ಯ ಆರೈಕೆ ನೀಡುವವರಾಗಿ, ನಾವೆಲ್ಲರೂ ತಿಳಿದಿರಲೇಬೇಕಾದ ಒಂದು ರೋಗವೆಂದರೆ ಮಧುಮೇಹ. ಮಧುಮೇಹ ಮತ್ತು ಅದರ ಸಂಬಂಧಿತ ತೊಂದರೆಗಳು ಪ್ರತಿ ವರ್ಷ ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತವೆ: ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಅಟ್ಲಾಸ್ 2019 ರ ಪ್ರಕಾರ, 2019 ರಲ್ಲಿ ಆ ಸಂಖ್ಯೆಯು 4.2 ಮಿಲಿಯನ್ ತಲುಪಿದೆ. ಮಧುಮೇಹವೊಂದರ ಕಾರಣದಿಂದಾಗಿಯೇ ಅಥವಾ ಅಧಿಕ ರಕ್ತದೊತ್ತಡದೊಂದಿಗೆ ಸೇರಿ, ಜಾಗತಿಕವಾಗಿ 80% ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತಿದೆ. ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಎರಡೂ ಕೂಡ ಹೃದಯರಕ್ತನಾಳದ ಕಾಯಿಲೆಗಳೊಂದಿಗೆ ಬಲವಾಗಿ ಸಂಬಂಧವನ್ನು ಹೊಂದಿವೆ1. ಪ್ರಪಂಚದಾದ್ಯಂತ ಮಧುಮೇಹ ಹೊಂದಿರುವ 40 ರಿಂದ 60 ಮಿಲಿಯನ್ ಜನರ ಮೇಲೆ ಮಧುಮೇಹದ ಪಾದ ಮತ್ತು ಮೊಣಕಾಲಿನ ಕೆಳಭಾಗದ ತೊಂದರೆಗಳು ಪರಿಣಾಮ ಬೀರುತ್ತವೆ1. ದೀರ್ಘಕಾಲದ ಹುಣ್ಣು ಮತ್ತು ದೇಹದ ಗಾಯಗಳು ಜೀವನದ ಗುಣಮಟ್ಟವು ಗಮನಾರ್ಹವಾಗಿ ಇಳಿಯಲು ಕಾರಣವಾಗುತ್ತವೆ ಮತ್ತು ಸಣ್ಣ ವಯಸ್ಸಿನಲ್ಲಿಯೇ ಮರಣ ಹೊಂದುವ ಅಪಾಯವನ್ನು ಹೆಚ್ಚಿಸುತ್ತವೆ1.

  ನಿಮ್ಮ ಕುಟುಂಬ ಮತ್ತು ಸಾಮಾಜಿಕ ವಲಯದಲ್ಲಿ ಮಧುಮೇಹ ಹೊಂದಿರುವ ವ್ಯಕ್ತಿಗಳಿದ್ದರೆ, ಇಂದೇ ಈ ತೊಂದರೆಗ ಕುರಿತು ಓದಲು ಮತ್ತು ಕಲಿಯಲು ಪ್ರಾರಂಭಿಸಿ. ಮಧುಮೇಹಕ್ಕೆ ಸಂಬಂಧಿಸಿದ ಎಲ್ಲಾ ತೊಡಕುಗಳಂತೆ, ರೋಗ ಉಲ್ಬಣಿಸದಂತೆ ತಡೆಗಟ್ಟುದರೆ, ಚೇತರಿಕೆಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ.

  ಅಷ್ಟೊಂದು ಅರಿಯದಿರುವ, ಆದರೆ ಪ್ರಾಯಶಃ ಅತ್ಯಂತ ಭಯಾನಕವಾದ ಮಧುಮೇಹದ ತೊಡಕುಗಳಲ್ಲಿ ದೃಷ್ಟಿ ದೋಷವು ಒಂದಾಗಿದೆ. ಮಧುಮೇಹಕ್ಕೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಲ್ಲಿ ಪ್ರಧಾನವಾಗಿ ಡಯಾಬಿಟಿಕ್ ರೆಟಿನೋಪತಿ, ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ, ಕಣ್ಣಿನ ಪೊರೆ ಮತ್ತು ಗ್ಲುಕೋಮಾ, ಜೊತೆಗೆ ಡಬಲ್ ವಿಷನ್ ಮತ್ತು ದೃಷ್ಟಿ ಕೇಂದ್ರೀಕರಿಸುವ ಅಸಮರ್ಥತೆ ಕೂಡ ಸೇರಿವೆ1. ಡಯಾಬಿಟಿಕ್ ರೆಟಿನೋಪತಿಯು ದುಡಿಯುವ ವಯಸ್ಸಿನ ಜನರಲ್ಲಿ ಕುರುಡುತನ ಕಂಡುಬರುವಲ್ಲಿ ಒಂದು ಪ್ರಮುಖ ಕಾರಣ ಎಂಬುದನ್ನು ಒಪ್ಪಿಕೊಳ್ಳಲಾಗಿದ್ದು, ಇದು ವಿನಾಶಕಾರಿಯಾದ ವೈಯಕ್ತಿಕ ಮತ್ತು ಸಾಮಾಜಿಕ ಆರ್ಥಿಕ ಪರಿಣಾಮಗಳನ್ನು ಬೀರುವುದನ್ನು ಅಲ್ಲಗಳೆಯುವಂತಿಲ್ಲ1. ರೋಗದ ಆರಂಭಿಕ ಹಂತಗಳಲ್ಲಿ ಇದು ಸಂಪೂರ್ಣವಾಗಿ ಲಕ್ಷಣರಹಿತವಾಗಿರುವುದರಿಂದ ಇದು ಗೊತ್ತಾಗುವುದೇ ಇಲ್ಲ. ಇದರರ್ಥ ನಿಮಗೆ ರೋಗಲಕ್ಷಣಗಳು ಗೊತ್ತಾಗುವ ಹೊತ್ತಿಗೆ, ನಿಮ್ಮ ಕಣ್ಣಿಗೆ ಸರಿಪಡಿಸಲಾಗದಷ್ಟು ಹಾನಿ ಈಗಾಗಲೇ ಸಂಭವಿಸಿರುತ್ತದೆ.

  ನೀವೊಬ್ಬ ಆರೈಕೆ ನೀಡುವವರಾಗಿ ಮತ್ತು ಹಿತೈಷಿಯಾಗಿ ನೀವು ಗಮನಿಸಬೇಕಾದ ಕೆಲವು ರೋಗಲಕ್ಷಣಗಳು ಹೀಗಿವೆ.

  ಓದುವುದಕ್ಕೆ ತೊಂದರೆ 

  ಇದು ಸ್ವಲ್ಪ ಗೋಜಲುಮಯವಾಗಿದೆ ಏಕೆಂದರೆ ಸಾಮಾನ್ಯವಾಗಿ ವಯಸ್ಸಾದಂತೆ ನಮ್ಮ ಕಣ್ಣುಗಳು ದುರ್ಬಲಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಆದರೂ, ನಾವು ಓದುವಾಗ, ತೀಕ್ಷ್ಣವಾದ ದೃಷ್ಟಿಗೆ ಮೀಸಲಾದ ಪ್ರದೇಶವಾದ ಮ್ಯಾಕುಲಾ ಎಂದು ಕರೆಯುವ ನಮ್ಮ ಕಣ್ಣಿನ ಭಾಗವನ್ನು ಬಳಸುತ್ತೇವೆ2. ನಾವು ಚಾಲನೆ ಮಾಡುವಾಗ ಮತ್ತು ಮುಖದ ಮೇಲೆ ದೃಷ್ಟಿ ಕೇಂದ್ರೀಕರಿಸುವಾಗ ನಾವು ಇದೇ ಕಣ್ಣಿನ ಭಾಗವನ್ನು ಬಳಸುತ್ತೇವೆ. ಮಧುಮೇಹವು ಮಕ್ಯುಲಾ ಊದಿಇಕೊಳ್ಳುವ ಸಮಸ್ಯೆಗೆ ಕಾರಣವಾಗಬಹುದು – ಇದು ಡಯಾಬಿಟಿಕ್ ರೆಟಿನೋಪತಿ ಕ್ಲಸ್ಟರ್‌ನ ಭಾಗವಾಗಿರುವ ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ ಎಂಬ ಸ್ಥಿತಿಯಾಗಿದೆ3.

  ಒಂದು ವೇಳೆ ಕನ್ನಡಕವನ್ನು ಬದಲಾಯಿಸಿದ ನಂತರವೂ ಕೂಡ ಓದಲು ಕಷ್ಟವಾಗುವುದನ್ನು ನೀವು ಗಮನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ. ರೆಟಿನಾ ಸೊಸೈಟಿ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಡಾ. ಮನೀಶಾ ಅಗರ್ವಾಲ್ ಅವರ ಪ್ರಕಾರ, ಇದು ಡಯಾಬಿಟಿಕ್ ರೆಟಿನೋಪತಿಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ ಮತ್ತು ದೃಷ್ಟಿಯ ಪ್ರದೇಶದಲಿ ಕಪ್ಪು ಅಥವಾ ಕೆಂಪು ಚುಕ್ಕೆಗಳ ಗುಚ್ಚೆಗಳಿಗೆ ಕಾರಣವಾಗಬಹುದು ಅಥವಾ ಕಣ್ಣಿನಲ್ಲಿ ರಕ್ತಸ್ರಾವ ಉಂಟಾಗಿ ಹಠಾತ್ ಬ್ಲ್ಯಾಕ್ಔಟ್ ಕೂಡ ಆಗಬಹುದು.

  ಕಣ್ಣಿನ ವೈದ್ಯರನ್ನು ಭೇಟಿ ಮಾಡಿಸಿ ಮತ್ತು ವೈದ್ಯರನ್ನು ಭೇಟಿಯಾಗುವವರೆಗೆ ದೃಷ್ಟಿಗೆ ಸಂಬಂಧಿಸಿದ ಯಾವುದೇ ಇತರ ರೋಗಲಕ್ಷಣಗಳ ದಾಖಲೆಯನ್ನು ನೀವು ಇರಿಸಿಕೊಳ್ಳಿ. ಕಣ್ಣಿಗೆ ವಿಷಯದಲ್ಲಿ, ಎಲ್ಲಾ ವಿವರಗಳು ಕೂಡಾ ಸಂಬಂಧಿತವಾಗಿರುತ್ತವೆ.

  ಮಬ್ಬು ದೃಷ್ಟಿ

  ಮಬ್ಬು ದೃಷ್ಟಿಯು ಬೇರೆ ಬೇರೆ ರೀತಿಯಲ್ಲಿ ಕಾಣಬಹುದು - ಕೆಲವು ಜನರು ಬಣ್ಣಗಳ ಸಾಮಾನ್ಯ ಮಂದತೆಯ ಕುರಿತು ದೂರುತ್ತಾರೆ, ಅವರಿಗೆ ವಿವಿಧ ಬಣ್ಣಗಳ ನಡುವಿನ ವ್ಯತ್ಯಾಸಗಳನ್ನು ಗರುತಿಸಲು ಸಾಧ್ಯವಾಗುವುದಿಲ್ಲ (ಬಿಳಿ ಗೋಡೆಯ ಎದುರಿನಲ್ಲಿ ಬಿಳಿ ದೀಪವನ್ನು ನೋಡಲು ಸಾಧ್ಯವಾಗದ ಹಾಗೆ), ಅವರು ರಾತ್ರಿಯಲ್ಲಿ ನೋಡಲು ಹೆಣಗಾಡಬಹುದು ಮತ್ತು ಸಹಜವಾಗಿ, ಹೆಚ್ಚು ಕಂಡುಬರುವ ಲಕ್ಷಣವೆಂದರೆ – ಅಸ್ಪಷ್ಟವಾಗಿ ಕಾಣುವುದು, ಚಲಿಸುವ ದೃಷ್ಟಿ ಅಥವಾ ಮಂಜುಮಂಜಾದ ದೃಷ್ಟಿ, ಅಂದರೆ ಮುಸುಕಿನ ಮೂಲಕ ಜಗತ್ತನ್ನು ನೋಡುವಂತೆ ಭಾಸವಾಗುವುದು4.

  ಕಣ್ಣಿನ ಪೊರೆ ಸಮಸ್ಯೆಯು ಕಣ್ಣಿನ ಮಸೂರದ ಮೇಲೆ ಪರಿಣಾಮ ಬೀರುತ್ತದೆ, ಮಸೂರದ ಮೇಲೆ ಗುಚ್ಚದ ಪದರವನ್ನು ಸೃಷ್ಟಿಸುತ್ತದೆ. ಮಧುಮೇಹ ಹೊಂದಿರುವ ಜನರು ಕಣ್ಣಿನ ಪೊರೆ ಸಮಸ್ಯೆ ಎಂದು ಕರೆಯಲ್ಪಡುವ ಈ ಮಬ್ಬಾದ ಮಸೂರದ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಹೆಚ್ಚು. ಮಧುಮೇಹ ಇರುವ ವ್ಯಕ್ತಿಗಳಲ್ಲಿ ಮಧುಮೇಹ ಇಲ್ಲದವರಿಗಿಂತ ಮುಂಚಿನ ವಯಸ್ಸಿನಲ್ಲಿಯೇ ಕಣ್ಣಿನ ಪೊರೆ ಬೆಳೆಯಬಹುದು. ಹೆಚ್ಚಿನ ಗ್ಲೂಕೋಸ್ ಮಟ್ಟಗಳು ಮಸೂರಗಳಲ್ಲಿ ಗುಚ್ಚಗಳು ನಿರ್ಮಾಣವಾಗಲು ಕಾರಣವಾಗುತ್ತವೆ ಎಂದು ಸಂಶೋಧಕರು ಭಾವಿಸುತ್ತಾರೆ5.

  ಕಣ್ಣಿನಲ್ಲಿ ಒತ್ತಡದ ಭಾವನೆ

  ಕಣ್ಣು ಊದಿಕೊಂಡಿರುವ ಸಮಸ್ಯೆಯ ದೂರುಗಳನ್ನು ನೋಡಿ - ಆಗಾಗ್ಗೆ, ಹಿಗ್ಗುವಿಕೆಯು ಕಾಣಿಸಿಕೊಳ್ಳುವುದಕ್ಕಿಂತ ಮೊದಲೇ ಊತವನ್ನು ಅನುಭವಿಸುತ್ತಾರೆ. ಹಲವಾರು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಅಸ್ವಸ್ಥತೆಗಳು ಊತವನ್ನು ಉಂಟುಮಾಡಬಹುದು, ಮಧುಮೇಹ ಹೊಂದಿರುವ ಜನರು ಯಾವಾಗಲೂ ಗ್ಲುಕೋಮಾದ ಬಗ್ಗೆ ಗಮನಹರಿಸಬೇಕು6.

  ಮಧುಮೇಹವು ಗ್ಲುಕೋಮಾ ಉಂಟಾಗುವ ಸಾಧ್ಯತೆಯನ್ನು ಎರಡು ಪಟ್ಟು ಹೆಚ್ಚಿಸುತ್ತದೆ3,6, ಮೊದಲೇ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ದೃಷ್ಟಿ ನಷ್ಟ ಮತ್ತು ಕುರುಡುತನಕ್ಕೆ ಕಾರಣವಾಗಬಹುದು. ವಯಸ್ಸಾದಂತೆ ಅಪಾಯವೂ ಕೂಡ ಹೆಚ್ಚಾಗುತ್ತದೆ6.

  ಕಣ್ಣಿನಲ್ಲಿ ಒತ್ತಡ ಹೆಚ್ಚಾದಾಗ ಗ್ಲುಕೋಮಾ ಉಂಟಾಗುತ್ತದೆ. ಒತ್ತಡವು ರೆಟಿನಾ ಮತ್ತು ಆಪ್ಟಿಕ್ ನರಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಪಿಂಚ್ ಮಾಡುತ್ತದೆ. ರೆಟಿನಾ ಮತ್ತು ನರಗಳಿಗೆ ಹಾನಿಯಾಗುವುದರಿಂದ ಕ್ರಮೇಣ ದೃಷ್ಟಿ ಮಂದವಾಗುತ್ತಾ ಹೋಗುತ್ತದೆ6.

  ಗಾಢ ಬಣ್ಣದಲ್ಲಿರುವ ಫ್ಲೋಟರ್‌ಗಳು

  ನಾವೆಲ್ಲರೂ ನಮ್ಮ ಕಣ್ಣಿನಲ್ಲಿ ಕಾಲಕಾಲಕ್ಕೆ ಫ್ಲೋಟರ್‌ಗಳನ್ನು ನೋಡುತ್ತೇವೆ - ನೀವು ಗಾಢ ಬಣ್ಣದ ಗೋಡೆಯನ್ನು ಅಥವಾ ಆಕಾಶವನ್ನು ನೋಡಿದಾಗ ಮಾತ್ರ ಈ ಆಸಕ್ತಿದಾಯಕ, ಪಾರದರ್ಶಕ ಸಣ್ಣ ಲೂಪ್‌ಗಳನ್ನು ಗಮನಿಸಬಹುದು. ಅವು ಸಂಪೂರ್ಣವಾಗಿ ಸಾಮಾನ್ಯ ಲಕ್ಷಣವಾಗಿದೆ. ಆದರೂ ಕೂಡ, ದಪ್ಪ ಫ್ಲೋಟರ್‌ಗಳು ಅಥವಾ ಫ್ಲೋಟರ್‌ಗಳು ಗಾಢ ಬಣ್ಣದಲ್ಲಿ ಕಾಣುವ ಬಗ್ಗೆ ನೀವು ದೂರುಗಳನ್ನು ಕೇಳಿದರೆ, ಅದರ ಕುರಿತು ನೀವು ತುಂಬಾ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ7.

  ಆಗಾಗ್ಗೆ, ಈ ರೋಗಲಕ್ಷಣವು ತುಂಬಾ ಕ್ಷಣಿಕವಾಗಿದ್ದು, ನೀವು ಫ್ಲೋಟರ್‌ಗಳ ಬಗ್ಗೆ ಎಂದೂ ಕೂಡ ಕೇಳಿರುವುದೇ ಇಲ್ಲ. ಆದ್ದರಿಂದ, ಅದರ ಬಗ್ಗೆ ಕೇಳಿ. ವಿಶೇಷವಾಗಿ ಓದುವಾಗ ಅಥವಾ ಡ್ರೈವಿಂಗ್ ಮಾಡುವಾಗ ಅಥವಾ ಮುಖಗಳನ್ನು ಗುರುತಿಸುವಾಗ ತೊಂದರೆಗಳನ್ನು ಎದುರಿಸುವ ಬಗ್ಗೆ ನೀವು ದೂರುಗಳನ್ನು ಕೇಳುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ವಿಚಾರಿಸಿ. ಡಯಾಬಿಟಿಕ್ ರೆಟಿನೋಪತಿಯ ನಂತರದ ಹಂತಗಳಲ್ಲಿ, ರಕ್ತನಾಳಗಳು ಕಣ್ಣಿನಲ್ಲಿರುವ ವಿಟ್ರಿಯೋಸ್ ದ್ರವಕ್ಕೆ ಸೋರಿಕೆಯಾಗಿ ಈ ತರದ ಫ್ಲೋಟರ್‌ಗಳು ಮತ್ತು ಡಾರ್ಕ್ ಪ್ಯಾಚ್‌ಗಳನ್ನು ಉಂಟುಮಾಡುತ್ತವೆ8. ಆದರೆ ತೊಂದರೆ ಎಂದರೆ ಅವು ತಾವಾಗಿಯೇ ಪರಿಹಾರವಾಗುತ್ತವೆ8 ಮತ್ತು ಮುಂದೆ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಒಬ್ಬ ಆರೈಕೆ ನೀಡುವರಾಗಿ, ಅವರು ನಿಮಗೆ ಇದರ ಕುರಿತು ತೊಂದರೆ ನೀಡುವ ಸಾಧ್ಯತೆಗಳು ಸಣ್ಣದಾಗಿದೆ. ಇದನ್ನು ಆ ವ್ಯಕ್ತಿಯ ಗಮನಕ್ಕೆ ತರುವುದು ಉತ್ತಮ, ಇದರಿಂದಾಗಿ ಅವರು ನಿಮಗೆ ಆ ಸಮಸ್ಯೆಯ ಕುರಿತು ಹೇಳಬೇಕು ಎಂದು ಅವರಿಗೆ ತಿಳಿದಿರುತ್ತದೆ!

  ಮಧುಮೇಹ ಹೊಂದಿರುವ ಜನರಲ್ಲಿ ಕಂಡುಬರಬಹುದಾದ ಎಲ್ಲಾ ಕಣ್ಣಿನ ಕಾಯಿಲೆಗಳಲ್ಲಿ, ಡಯಾಬಿಟಿಕ್ ರೆಟಿನೋಪತಿಯು ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ1. ಹೆಚ್ಚಿನ ದೇಶಗಳಲ್ಲಿ, ಸಂಭಾವ್ಯವಾಗಿ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದರೂ ಸಹ, ಡಯಾಬಿಟಿಕ್ ರೆಟಿನೋಪತಿಯು ದುಡಿಯುವ ವಯಸ್ಸಿನ ಜನರಲ್ಲಿ ಕುರುಡುತನ ಕಂಡುಬರುವಲ್ಲಿ ವಿನಾಶಕಾರಿಯಾದ ವೈಯಕ್ತಿಕ ಮತ್ತು ಸಾಮಾಜಿಕ ಆರ್ಥಿಕ ಪರಿಣಾಮಗಳನ್ನು ಬೀರುವ ಒಂದು ಪ್ರಮುಖ ಕಾರಣವಾಗಿದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಡಯಾಬಿಟಿಕ್ ರೆಟಿನೋಪತಿಯು ದುಡಿಯುವ ವಯಸ್ಸಿನ ಜನರಲ್ಲಿ ಕುರುಡುತನ ಕಂಡುಬರುವಲ್ಲಿ ಒಂದು ಪ್ರಮುಖ ಕಾರಣ ಎಂಬುದನ್ನು ಒಪ್ಪಿಕೊಳ್ಳಲಾಗಿದ್ದು, ಇದು ವಿನಾಶಕಾರಿಯಾದ ವೈಯಕ್ತಿಕ ಮತ್ತು ಸಾಮಾಜಿಕ ಆರ್ಥಿಕ ಪರಿಣಾಮಗಳನ್ನು ಬೀರುವುದನ್ನು ಅಲ್ಲಗಳೆಯುವಂತಿಲ್ಲ1.

  ಏನೇ ಇದ್ದರೂ, ಡಯಾಬಿಟಿಕ್ ರೆಟಿನೋಪತಿಯನ್ನು ತಡೆಗಟ್ಟಬಹುದು ಎಂಬ ಸಂಗತಿಯು ಸ್ವಲ್ಪ ಸಮಾದಾನವನ್ನು ನೀಡುತ್ತದೆ! ಯುಕೆಯಂತಹ ದೇಶಗಳಲ್ಲಿ, ಕಣ್ಣಿನ ತಪಾಸಣೆಯ ನೀತಿಯನ್ನು ಪರಿಚಯಿಸಲಾಗಿದ್ದು, ಇದರಿಂದ ದುಡಿಯುವ ಜನರಲ್ಲಿ ಡಯಾಬಿಟಿಕ್ ರೆಟಿನೋಪತಿಯು ಕುರುಡುತನಕ್ಕೆ ಪ್ರಮುಖ ಕಾರಣವಾಗುವುದನ್ನು ನಿಯಂತ್ರಣವಾಯಿತು. ವಾಸ್ತವವಾಗಿ, ವೇಲ್ಸ್‌ನಲ್ಲಿ, ಹೊಸ ದೃಷ್ಟಿಹೀನತೆ ಮತ್ತು ಕುರುಡುತನ ಪ್ರಮಾಣೀಕರಣಗಳಲ್ಲಿ 40-50% ಇಳಿಕೆಯು ಕಂಡು ಬಂದಿದೆ – ಅದೂ ಕೇವಲ 8 ವರ್ಷಗಳಲ್ಲಿ1.

  ಇದು ಏನು ಸಾಬೀತುಪಡಿಸುತ್ತದೆ? ನಿಮ್ಮ ಕಣ್ಣಿನ ವೈದ್ಯರಲ್ಲಿ (ಕನ್ನಡಕ ಅಂಗಡಿಯಲ್ಲಿ ಅಲ್ಲ!) ನಡೆಸಲಾಗುವ ಸರಳ, ವಾಡಿಕೆಯ ಮತ್ತು ನೋವುರಹಿತ ಕಣ್ಣಿನ ಪರೀಕ್ಷೆಯು ಡಯಾಬಿಟಿಕ್ ರೆಟಿನೋಪತಿಯನ್ನು ಮೊದಲೇ ಕಂಡುಹಿಡಿದು ಅದನ್ನು ನಿಲ್ಲಿಸಬಹುದು. ಇದು ಆರಂಭಿಕ ಹಂತಗಳಲ್ಲಿ ಲಕ್ಷಣರಹಿತವಾದ ರೋಗವಾಗಿರುವುದರಿಂದ, ಆ ಹಂತದಲ್ಲಿ ಅದನ್ನು ಕಂಡುಹಿಡಿಯುವುದರಿಂದ ಯಾವುದೇ ದೃಷ್ಟಿ ತೊಂದರೆ ಸಂಭವಿಸಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು ಮತ್ತು ರೋಗಿಗಳು ತಮ್ಮ ವೈದ್ಯರ ಶಿಫಾರಸುಗಳನ್ನು ಅನುಸರಿಸಿ ರೋಗವನ್ನು ಉಲ್ಬಣಿಸದಂತೆ ತಡೆಯಬಹುದು.

  ಅದಕ್ಕಾಗಿಯೇ Network18 Novartis ಜೊತೆಗೂಡಿ 'Netra Suraksha' – ಮಧುಮೇಹವನ್ನು ತಡೆಯುವತ್ತ ಭಾರತ ಉಪಕ್ರಮವನ್ನು ಲಾಂಚ್ ಮಾಡಿದ್ದು, ಡಯಾಬಿಟಿಕ್ ರೆಟಿನೋಪತಿಯಿಂದ ಹೆಚ್ಚು ಬಾಧಿತರಾಗಿರುವ ಜನರಿಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಇದು ಹೊಂದಿದೆ. ಈ ಉಪಕ್ರಮವು ಭಾರತಕ್ಕಾಗಿ ಕೆಲಸ ಮಾಡುವಂತಹ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದಕ್ಕಾಗಿ ಸಮಾನ ಮನಸ್ಕ ಚಿಂತಕರ ಚಾವಡಿಗಳೊಂದಿಗೆ ವೈದ್ಯಕೀಯ ಮತ್ತು ನೀತಿ ರೂಪಕರನ್ನು ಒಟ್ಟುಗೂಡಿಸುತ್ತದೆ. ಡಯಾಬಿಟಿಕ್ ರೆಟಿನೋಪತಿಯ ಕುರಿತು ಈ ಉಪಕ್ರಮವು ರೌಂಡ್ ಟೇಬಲ್ ಚರ್ಚೆಗಳು, ವಿವರಣಾತ್ಮಕ ವಿಡಿಯೋಗಳು ಮತ್ತು ಲೇಖನಗಳ ಮೂಲಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದು, ಇವುಗಳನ್ನು ನೀವು News18.com ನಲ್ಲಿ  Netra Suraksha ಉಪಕ್ರಮ ಪುಟದಲ್ಲಿ ಕಾಣಬಹುದು.

  ನಾವೇ ಸಂಭಾವ್ಯ ಆರೈಕೆ ನೀಡುವವರಾಗಿರುವಾಗ, ನಮ್ಮ ಸ್ವಂತ ಆರೋಗ್ಯದ ಕಡೆಗೆ ಗಮನಹರಿಸುವುದೂ ಕೂಡ ಮುಖ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಅಪಾಯವನ್ನು ನಿರ್ಣಯಿಸಲು ನಮ್ಮ ಆನ್‌ಲೈನ್ ಡಯಾಬಿಟಿಕ್ ರೆಟಿನೋಪತಿ ಸ್ವಯಂ ತಪಾಸಣೆಯನ್ನು ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ. ಹಾಗೆಯೇ, ವಾರ್ಷಿಕ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ವಾಡಿಕೆಯ ಅಭ್ಯಾಸವನ್ನಾಗಿ ಮಾಡಿಕೊಳ್ಳಲೂ ಕೂಡ ನಾವು ಶಿಫಾರಸು ಮಾಡುತ್ತೇವೆ. ವಾರ್ಷಿಕ ರಕ್ತ ಪರೀಕ್ಷೆಗಳು ಮತ್ತು ಇತರ ಪೂರ್ವಭಾವಿ ಸ್ಕ್ರೀನಿಂಗ್‌ಗಳಂತಹ ಬೇರೆ ಬೇರೆ ವೆಲ್‌ನೆಸ್ ಕ್ರಮಗಳ ಜೊತೆಗೆ ಈ ಪರೀಕ್ಷೆಯನ್ನು ಸೇರಿಸಿಕೊಳ್ಳಿ. ಎಷ್ಟೇ ಆದರೂ, ಯಾವುದೇ ಒಂದು ಕಾಯಿಲೆಯು ಬೇಗ ತಿಳಿಯುವ ಬದಲು ತಡವಾಗಿ ತಿಳಿಯಲಿ ನೀವು ಬಯಸುತ್ತೀರಾ?

  ಹಾಗಾದರೆ ಕಾಯಬೇಡಿ.

  References: 

  1. IDF Atlas, International Diabetes Federation, 9th edition, 2019

  2. https://socaleye.com/understanding-the-eye/ 18 Dec, 2021

  3. https://www.niddk.nih.gov/health-information/diabetes/overview/preventing-problems/diabetic-eye-disease 18 Dec, 2021

  4. https://www.mayoclinic.org/diseases-conditions/cataracts/symptoms-causes/syc-20353790 18 Dec 2021

  5. https://www.ncbi.nlm.nih.gov/pmc/articles/PMC3589218/ 18 Dec, 2021

  6. https://my.clevelandclinic.org/health/diseases/4212-glaucoma 19 Dec, 2021

  7. https://www.medicalnewstoday.com/articles/325781#causes 29 Dec, 2021


  https://www.mayoclinic.org/diseases-conditions/diabetic-retinopathy/symptoms-causes/syc-20371611 18 Dec, 2021
  Published by:Soumya KN
  First published: