ರೈಲ್ವೆ ಇಲಾಖೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ಈ ಎರಡೂ ಹುದ್ದೆಗಳಿಗೆ ಆಸಕ್ತರು ಅಕ್ಟೋಬರ್ 15 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಎರಡೂ ಹುದ್ದೆಗಳ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.

zahir | news18-kannada
Updated:October 6, 2019, 7:50 AM IST
ರೈಲ್ವೆ ಇಲಾಖೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
JOB
zahir | news18-kannada
Updated: October 6, 2019, 7:50 AM IST
RRB Railway Jobs 2019: ಸರ್ಕಾರಿ ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ರೈಲ್ವೆ ಇಲಾಖೆಯಲ್ಲಿದೆ ಹಲವು ಉದ್ಯೋಗಾವಕಾಶಗಳು. ಇಲಾಖೆಯ ಖಾಲಿ ಹುದ್ದೆಗಳು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಉತ್ತರ ರೈಲ್ವೆ ವಿಭಾಗದ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯ 118 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಹಾಗೆಯೇ ಪಶ್ಚಿಮ ರೈಲ್ವೆ ಇಲಾಖೆಯ ಜೂನಿಯರ್ ಇಂಜಿನಿಯರ್ ಮತ್ತು ಡಿಪೋ ಮೆಟೀರಿಯಲ್ ಅಧೀಕ್ಷಕರ 149 ಖಾಲಿ ಹುದ್ದೆಗಳ ನೇಮಕಾತಿ ಕೂಡ ನಡೆಯಲಿದೆ. ಈ ಎರಡೂ ಹುದ್ದೆಗಳಿಗೆ ಆಸಕ್ತರು ಅಕ್ಟೋಬರ್ 15 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಎರಡೂ ಹುದ್ದೆಗಳ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.

ಮಲ್ಟಿ ಟಾಸ್ಕಿಂಗ್: 118 ಹುದ್ದೆಗಳು

ಉತ್ತರ ರೈಲ್ವೆ 118 ಹುದ್ದೆಗಳನ್ನು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, 10 ನೇ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರನು 18 ರಿಂದ 33 ವರ್ಷದೊಳಗಿರಬೇಕು. ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ನ್ನು ಕ್ಲಿಕ್ ಮಾಡಿ

ಇದನ್ನೂ ಓದಿ: ಶೀಘ್ರದಲ್ಲೇ 2 ಸೀರಿಯಲ್​ಗಳಿಗೆ ಬ್ರೇಕ್..! ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡುವವರ ಪಟ್ಟಿ ಇಲ್ಲಿದೆ..!

ಪಶ್ಚಿಮ ರೈಲ್ವೆ ಇಲಾಖೆಯ 149 ಹುದ್ದೆಗಳು:
Loading...

ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ) ಜೂನಿಯರ್ ಇಂಜಿನಿಯರ್ ಮತ್ತು ಡಿಪೋ ಮೆಟೀರಿಯಲ್ ಅಧೀಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಇಲ್ಲಿ ಒಟ್ಟು 149 ಹುದ್ದೆಗಳಿದ್ದು, 15 ಅಕ್ಟೋಬರ್ 2019 ರೊಳಗೆ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ www.rrc-wr.com ಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ನ್ನು ಕ್ಲಿಕ್ ಮಾಡಿ
First published:October 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...