Dinner Best Time: ತಡರಾತ್ರಿ ಆಹಾರ ಸೇವನೆ ಯಾಕೆ ಮಾಡಬಾರದು? ರಾತ್ರಿ ಊಟದ ಸಮಯ ಯಾವುದು?

ಅನೇಕರು ತಡರಾತ್ರಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ತಡರಾತ್ರಿ ಆಹಾರ ಸೇವನೆ ಮಾಡುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ ತಡರಾತ್ರಿ ಆಹಾರ ಸೇವನೆ ಮಾಡುವುದು ನಿಮ್ಮ ತೂಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ದಿನಮಾನಗಳಲ್ಲಿ (Now a Days) ತೂಕ ಹೆಚ್ಚಾಗುವುದು (Weight Gaining) ಸಾಮಾನ್ಯ ವಿಷಯವಾಗಿದೆ (Thing). ಆದರೆ ತೂಕ ಇಳಿಸುವುದು ಹರಸಾಹಸದ ಕೆಲಸವಾಗಿದೆ (Work). ಆದರೂ ಸಹ ಹೆಚ್ಚುತ್ತಿರುವ ತೂಕವನ್ನು ಇಳಿಸುವುದು ತುಂಬಾ ಮುಖ್ಯವಾಗಿದೆ. ಆರೋಗ್ಯಕರ ತೂಕವು ನಿಮ್ಮನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ದೇಹವು ಸದೃಢವಾಗಿರಲು ತೂಕವೂ ಸಮತೋಲನದಲ್ಲಿ ಇರಬೇಕು. ತೂಕ ನಷ್ಟಕ್ಕೆ ಜನರು ಮೊದಲು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ ಉತ್ತಮ ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಇದರ ಜೊತೆಗೆ ಊಟವನ್ನು ಸಮಯಕ್ಕೆ ಸರಿಯಾಗಿ ಮಾಡುವುದು ತುಂಬಾ ಮುಖ್ಯ.

  ತಡರಾತ್ರಿ ಆಹಾರ ಸೇವನೆಯಿಂದ ತೂಕ ಹೆಚ್ಚಳ

  ವಾಸ್ತವದಲ್ಲಿ ಅನೇಕ ಜನರು ತಡರಾತ್ರಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ತಡರಾತ್ರಿ ಆಹಾರ ಸೇವನೆ ಮಾಡುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ ತಡರಾತ್ರಿ ಆಹಾರ ಸೇವನೆ ಮಾಡುವುದು ನಿಮ್ಮ ತೂಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ತೂಕ ಹೆಚ್ಚಳ ಮತ್ತು ನಷ್ಟಕ್ಕೆ ನೀವು ಎಷ್ಟು ಕ್ಯಾಲೊರಿ ಸೇವನೆ ಮಾಡುತ್ತೀರಿ ಎಂಬುದು ತುಂಬಾ ಮುಖ್ಯ.

  ಯಾವ ಸಮಯದಲ್ಲಿ ಎಷ್ಟು ಕ್ಯಾಲೋರಿ ಸೇವನೆ ಮಾಡುತ್ತೀರಿ?

  ಜೊತೆಗೆ ನೀವು ಯಾವ ಸಮಯದಲ್ಲಿ ಎಷ್ಟು ಕ್ಯಾಲೊರಿ ಆಹಾರ ಸೇವನೆ ಮಾಡುತ್ತೀರಿ ಎಂಬುದು ಸಹ ತುಂಬಾ ಮುಖ್ಯವಾದ ವಿಷಯ. ತಡರಾತ್ರಿ ಆಹಾರ ತಿನ್ನುವುದು ಚಯಾಪಚಯ ಪ್ರಕ್ರಿಯೆಯನ್ನು ತುಂಬಾ ನಿಧಾನಗೊಳಿಸುತ್ತದೆ. ಇದು ನಿಮ್ಮ ಕ್ಯಾಲೊರಿಗಳನ್ನು ಬರ್ನ್ ಮಾಡುವುದಿಲ್ಲ. ಮತ್ತು ಇದರ ಪರಿಣಾಮ ತೂಕ ಅಥವಾ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

  ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

  ರಾತ್ರಿ ಊಟ ಮಾಡುವ ಸರಿಯಾದ ಸಮಯ ಯಾವುದು?

  ಇದಲ್ಲದೇ ತೂಕ ನಿಯಂತ್ರಣ ಮಾಡುವವರು ರಾತ್ರಿಯ ಊಟವನ್ನು ತುಂಬಾ ಬೇಗ ಮಾಡುತ್ತಾರೆ. ಇಲ್ಲವೇ ರಾತ್ರಿ ಬರೀ ಹಾಲನ್ನು ಅಥವಾ ಲಘುವಾಗಿ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇಲ್ಲಿ ನಿಮಗಾಗಿ ಡಯಟ್ ಗುರು ಹಾಗೂ ಲೇಖಕ ಡಾ.ಮೈಕಲ್ ಮೊಸ್ಲಿ ರಾತ್ರಿ ಊಟ ಮಾಡಲು ಸೂಕ್ತ ಸಮಯ ಯಾವುದು ಎಂದು ಹೇಳಿದ್ದಾರೆ.

  ರಾತ್ರಿ 8 ಗಂಟೆಗೆ ಊಟ ಮಾಡುವುದು

  ಡಾ. ಮೊಸ್ಲಿ ಅವರ ಪ್ರಕಾರ, ತೂಕ ಇಳಿಸಲು ಪ್ರಯತ್ನಿಸುತ್ತಿರುವ ಜನರು ರಾತ್ರಿ 8 ಗಂಟೆಗೆ ಆಹಾರ ಸೇವನೆ ಮಾಡುವುದು ಸರಿಯಾದ ಸಮಯವಾಗಿದೆ. ಮತ್ತು ಈ ವೇಳೆ ಹೆಚ್ಚು ಕ್ಯಾಲೊರಿ ಸೇವಿಸುವುದನ್ನು ತಪ್ಪಿಸಬೇಕು. ಮಲಗುವ ಮೊದಲು ಯಾವುದೇ ಕ್ಯಾಲೊರಿ ಸೇವನೆಯನ್ನು ತಪ್ಪಿಸುವುದು ಮುಖ್ಯ. ಅದು ನಿಮ್ಮ ಸಿಸ್ಟಂನಲ್ಲಿ ದೀರ್ಘ ಕಾಲ ಉಳಿಯುತ್ತದೆ.

  ಹಾಗಾಗಿ ರಾತ್ರಿ ಸಮಯದಲ್ಲಿ ಜನರು ನೂಡಲ್ಸ್, ಪಿಜ್ಜಾ, ಚಿಪ್ಸ್ ಅಥವಾ ಬಿಸ್ಕತ್‌ಗಳಂತಹ ತ್ವರಿತ ಆಹಾರ ಉತ್ಪನ್ನಗಳ ಸೇವನೆಗೆ ಹಂಬಲಿಸುವುದು ಸಾಮಾನ್ಯ ವಿಷಯವಾಗಿದೆ. ಇದು ಕ್ಯಾಲೊರಿ ಸೇವನೆಯು ರಾತ್ರಿಯಲ್ಲಿ ಹೆಚ್ಚಾಗುತ್ತದೆ, ಇದು ತೂಕ ಹೆಚ್ಚಾಗಲು ಮುಖ್ಯ ಕಾರಣ ಆಗಿದೆ.

  ಕೊಬ್ಬು ಮತ್ತು ಸಕ್ಕರೆ ಪದಾರ್ಥ ಸೇವನೆಯಿಂದ ಜೀರ್ಣಕ್ರಿಯೆಗೆ ಹಾನಿ

  ತಡರಾತ್ರಿ ಕೊಬ್ಬು ಮತ್ತು ಸಕ್ಕರೆ ಪದಾರ್ಥ ಸೇವನೆ ಮಾಡುವುದು ದೀರ್ಘ ಕಾಲದವರೆಗೆ ಹೊಟ್ಟೆಯಲ್ಲಿ ಉಳಿಯುತ್ತದೆ. ನಿರ್ದಿಷ್ಟ ಸಮಯದ ನಂತರ ಜೀರ್ಣಕ್ರಿಯೆಯ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಇದು ನೈಸರ್ಗಿಕ ದೇಹದ ಗಡಿಯಾರಕ್ಕೆ ಅಡ್ಡಿ ಮಾಡುತ್ತದೆ.

  ಸಿರ್ಕಾಡಿಯಮ್ ರಿದಮ್ 24-ಗಂಟೆಗಳ ಚಕ್ರವನ್ನು ಪ್ರತಿನಿಧಿಸುತ್ತದೆ. ಇದು ದೇಹವು ಯಾವಾಗ ಮಲಗಬೇಕು ಮತ್ತು ನಿಮ್ಮ ಪ್ರತಿರಕ್ಷಣಾ ಕೋಶಗಳು ಹೆಚ್ಚು ಸಕ್ರಿಯವಾಗಿರುವಾಗ ಹೇಳುತ್ತದೆ. ಇದಕ್ಕೆ ಧಕ್ಕೆಯಾದರೆ ಅದು ಆರೋಗ್ಯದಲ್ಲಿ ಏರುಪೇರಾಗಲು ಕಾರಣವಾಗುತ್ತದೆ.

  ರಾತ್ರಿ ಬೇಗ ತಿನ್ನುವುದು ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ?

  2017 ರ ಅಧ್ಯಯನದ ಪ್ರಕಾರ, ಅಧಿಕ ತೂಕ ಹೊಂದಿರುವವರು ಮಲಗುವ ಸ್ವಲ್ಪ ಸಮಯ ಮೊದಲು ಆಹಾರ ಸೇವಿಸುವುದು ಮೆಲಟೋನಿನ್ ಮಟ್ಟ ಹೆಚ್ಚಿಸುತ್ತದೆ. ಮೆಲಟೋನಿನ್ ಹಾರ್ಮೋನ್ ಆಗಿದ್ದು, ಸಂಜೆ ನಿದ್ರೆಗೆ ಕಾರಣವಾಗುತ್ತದೆ.

  ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

  ಬೆಳಗ್ಗೆ ತಿನ್ನುವುದು

  ತಜ್ಞರ ಪ್ರಕಾರ, ಮಲಗುವ 4 ಗಂಟೆ ಮೊದಲು ರಾತ್ರಿ ಊಟ ಸೇವನೆ ಹೆಚ್ಚುವರಿ ಹೊಟ್ಟೆಯ ಕೊಬ್ಬನ್ನು ಹೊರಹಾಕಲು ಉತ್ತಮ ಮಾರ್ಗವಾಗಿದೆ. ಹಾಗಾಗಿ ಬೆಳಗ್ಗೆ ಆಹಾರ ಸೇವನೆ ಉತ್ತಮ ಮಾರ್ಗವಾಗಿದೆ.
  Published by:renukadariyannavar
  First published: