Lancet Study: ತಂಬಾಕು, ಧೂಮಪಾನ, ಮದ್ಯಪಾನ ಪ್ರಿಯರಿಗೆ ಶಾಕ್​ ಕೊಟ್ಟ ವರದಿ!

ಕ್ಯಾನ್ಸರ್, ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ಪ್ರತಿ ವರ್ಷ ಸುಮಾರು ಒಂದು ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದರೆ, ಭಾರತದಲ್ಲಿ ಕ್ಯಾನ್ಸರ್ ನಿಂದಾಗಿ ವರ್ಷಕ್ಕೆ ಸುಮಾರು ಐದು ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಮಾರಕವಾಗಿ ಪರಿಣಮಿಸುತ್ತಿರುವ ಈ ಕಾಯಿಲೆಗೆ ಮುಖ್ಯವಾಗಿ ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ಕೆಟ್ಟ ಆಹಾರ ಪದ್ಧತಿಗಳು ಕಾರಣ ಎನ್ನುತ್ತಿದೆ ಇತ್ತೀಚಿನ ಲ್ಯಾನ್ಸೆಟ್ ಅಧ್ಯಯನ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕ್ಯಾನ್ಸರ್ (Cancer), ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ಪ್ರತಿ ವರ್ಷ ಸುಮಾರು ಒಂದು ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದರೆ, ಭಾರತದಲ್ಲಿ ಕ್ಯಾನ್ಸರ್ ನಿಂದಾಗಿ ವರ್ಷಕ್ಕೆ ಸುಮಾರು ಐದು ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ (Deaths). ಮಾರಕವಾಗಿ ಪರಿಣಮಿಸುತ್ತಿರುವ ಈ ಕಾಯಿಲೆಗೆ ಮುಖ್ಯವಾಗಿ ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ಕೆಟ್ಟ ಆಹಾರ ಪದ್ಧತಿಗಳು ಕಾರಣ ಎನ್ನುತ್ತಿದೆ ಇತ್ತೀಚಿನ ಲ್ಯಾನ್ಸೆಟ್ ಅಧ್ಯಯನ (Lancet study). ಲಾಭಗಳನ್ನು ಗಳಿಸುವುದರ ಜೊತೆ ತಂಬಾಕು ಉದ್ಯಮ ಹೆಚ್ಚಿನ ಪ್ರಮಾಣದ ಕ್ಯಾನ್ಸರ್‌ಗಳಿಗೆ ಪ್ರಚೋದಿಸುತ್ತಿದೆ ಎಂಬುದನ್ನು ವರದಿ ನಿರೂಪಿಸಿದೆ. ಈ ವರದಿಯು ಕ್ಯಾನ್ಸರ್ ಕುರಿತು ಧೂಮಪಾನಿಗಳಿಗೆ (Smoker) ಎಚ್ಚರಿಕೆ ಗಂಟೆಯ ಸೂಚನೆ ಸಹ ನೀಡಿದೆ.

UN ರೆಸಲ್ಯೂಶನ್ 2011 ಮುಖ್ಯವಾಗಿ ತಂಬಾಕು, ಮದ್ಯ ಮತ್ತು ಸ್ಥೂಲಕಾಯತೆಯ ನಿಯಂತ್ರಣದ ಮೂಲಕ ಹೆಚ್ಚುತ್ತಿರುವ ಕ್ಯಾನ್ಸರ್ ಹೊರೆಯನ್ನು ನಿಗ್ರಹಿಸಲು ನಾಲ್ಕು ಪ್ರಮುಖ ಕಾರ್ಯತಂತ್ರಗಳನ್ನು ಘೋಷಿಸಿತು. ಇದು ಭಾರತ ಸರ್ಕಾರವು ಅನಾವರಣಗೊಳಿಸಿರುವ ರಾಷ್ಟ್ರೀಯ ಆರೋಗ್ಯ ನೀತಿಯೊಂದಿಗೆ ಅಡಕವಾಗಿದೆ. ಆದರೂ ಈ ನಿಯಮಗಳನ್ನು ಗಾಳಿಗೆ ತೂರಿದ ತಂಬಾಕು ಕಂಪನಿಗಳು ಮತ್ತು ಜನರು ರೋಗಕ್ಕೆ ಆಹ್ವಾನ ನೀಡುತ್ತಿದ್ದಾರೆ.

28 ಕೋಟಿ ತಂಬಾಕು ಬಳಕೆದಾರರು
ಭಾರತದಲ್ಲಿ ಸುಮಾರು 28 ಕೋಟಿ ತಂಬಾಕು ಬಳಕೆದಾರರಿದ್ದು, ಮತ್ತು ಅವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಕ್ಯಾನ್ಸರ್, ಹೃದ್ರೋಗಗಳು ಮತ್ತು ಮುಂತಾದ ಗಂಭೀರ ಕಾಯಿಲೆಗಳಿಂದ ಅಕಾಲಿಕ ಮರಣ ಹೊಂದುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಐದು ಸಾವುಗಳಲ್ಲಿ ಸುಮಾರು ಎರಡು ಸಾವುಗಳು ಹೊಗೆರಹಿತ ತಂಬಾಕಿನಿಂದ ಉಂಟಾಗುತ್ತಿವೆ. ಅಂದರೆ, ತಂಬಾಕುಯುಕ್ತ ಪದಾರ್ಥಗಳನ್ನು, ಪಾನ್-ಬೀಡಾ ಗಳನ್ನು ಸೇವಿಸುವುದರಿಂದ ಬರುತ್ತಿದೆ. ಸುಮಾರು 22 ಕೋಟಿ ಭಾರತೀಯರು ಹೊಗೆರಹಿತ ತಂಬಾಕು ಬಳಸುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಯುವಕರು. ಇದು ಬಾಯಿಯ ಕ್ಯಾನ್ಸರ್‌ನ ಸಾಂಕ್ರಾಮಿಕ ಪ್ರಮಾಣಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Symptoms of PCOS: ದೇಹದಲ್ಲಾಗೋ ಈ ಬದಲಾವಣೆಯನ್ನ ಕಡೆಗಣಿಸ್ಬೇಡಿ, ಪಿಸಿಓಎಸ್​ ಸಮಸ್ಯೆಯ ಆರಂಭಿಕ ಲಕ್ಷಣವಿದು!

ನಿಷೇಧವಿದ್ದರೂ ಎಗ್ಗಿಲ್ಲದೇ ಸಿಗುತ್ತಿದೆ ಗುಟ್ಕಾ
ಗುಟ್ಕಾವನ್ನು ನಿಷೇಧಿಸಲಾಗಿದ್ದರೂ, ಕಡಿಮೆ ನಿರ್ಬಂಧದೊಂದಿಗೆ ಅದನ್ನು ಎಲ್ಲಿ ಬೇಕಾದರೂ ಪಡೆಯುವ ಸ್ಥಿತಿ ಸದ್ಯ ಭಾರತದಲ್ಲಿದೆ. ಭಾರತವು ಪಾನ್ ಮಸಾಲಾ ಬಳಕೆಯನ್ನು ಹೊಂದಿದ್ದು, ಇದು ಬಾಯಿ ಕ್ಯಾನ್ಸರ್‌ಗೆ ಮೂಲ ಕಾರಣವಾಗಿದೆ. ಇಷ್ಟೇಲ್ಲಾ ಸಮಸ್ಯೆಗಳಿರುವಂತಹ ಪಾನ್ ಮಸಾಲ ಬಳಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಏಕೆ ವಿಫಲವಾಗುತ್ತಿದೆ ಎಂಬುವುದೇ ಸದ್ಯದ ದೊಡ್ಡ ಪ್ರಶ್ನೆ.

ಧೂಮಪಾನ, ತಂಬಾಕು ಸೇವನೆಯ ಜೊತೆಗೆ ಆಲ್ಕೋಹಾಲ್ ಕೂಡ ವಿವಿಧ ಕ್ಯಾನ್ಸರ್‌ಗಳಿಗೆ ಸಾಂದರ್ಭಿಕವಾಗಿ ಸಂಬಂಧಿಸಿದೆ. ಮದ್ಯ ಸೇವನೆಯ ನಿಯಂತ್ರಣ ಕಾನೂನುಗಳು ಕೇವಲ ನಾಟಕೀಯವಾಗಿರುವಂತೆ ಕಾಣುತ್ತಿದೆ. ಮದ್ಯಪಾನ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ ರೂಪಿಸುವಲ್ಲಿ ಸರಕಾರ ವಿಫಲವಾಗಿದೆ.

ಕ್ಯಾನ್ಸರ್ ಪ್ರಮಾಣ ಹೆಚ್ಚಾಗಲು ಮತ್ತೊಂದು ಮೂಲ ಕಾರಣ
ಸ್ಥೂಲಕಾಯತೆಗೆ ಕಾರಣವಾದ ಕ್ಯಾನ್ಸರ್ ಪ್ರಮಾಣವು ವ್ಯಾಪಕವಾಗಿ ಬದಲಾಗಿದೆ. ಫಾಸ್ಟ್ ಫುಡ್ ಉದ್ಯಮವು ಭಾರತದಾದ್ಯಂತ ಅಣಬೆಗಳಂತೆ ಹುಟ್ಟಿಕೊಂಡಿದೆ ಮತ್ತು ಅದರ ಪ್ರಬಲ ಜಾಹೀರಾತು ಹೆಚ್ಚಿನ ನಗರ ಮಕ್ಕಳ ಆಹಾರ ಪದ್ಧತಿಯ ಮೇಲೆ ಪ್ರಭಾವ ಬೀರಿದೆ. ಬರ್ಗರ್, ಪಿಜ್ಜಾ, ಚಾಕೊಲೇಟ್‌ಗಳು, ತಂಪು ಪಾನೀಯಗಳು, ನೂಡಲ್ಸ್ ಮತ್ತು ಬಿಸ್ಕತ್ತುಗಳ ಜಾಹೀರಾತು ದುರ್ಬಲ ಯುವಕರನ್ನು ಸುರಕ್ಷಿತ ಆಹಾರವೆಂದು ಸ್ವೀಕರಿಸಲು ದಾರಿ ತಪ್ಪಿಸಿದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಇಂತಹ ಅನಾರೋಗ್ಯಕರ ಆಹಾರದ ವೈಭವೀಕರಣವನ್ನು ನಿಯಂತ್ರಿಸುವ ಅವಶ್ಯಕತೆ ಖಂಡಿತ ಇದೆ.

ಇದನ್ನೂ ಓದಿ: Cancer: ಮಕ್ಕಳ ಕಣ್ಣುಗಳು ಕೆಂಪಾಗಿದ್ದರೆ ನಿರ್ಲಕ್ಷಿಸಬೇಡಿ; ಇದು ಕಣ್ಣಿನ ಕ್ಯಾನ್ಸರ್ ಆಗಿರಬಹುದು ಎಚ್ಚರ!

ಭಾರತದಂತಹ ಬೃಹತ್‌ ದೇಶಗಳಲ್ಲಿ ಪೌಷ್ಠಿಕಾಂಶದ ಸ್ಥಿತಿಯನ್ನು ಸುಧಾರಿಸುವುದು ಬಹಳ ಮುಖ್ಯ. ಆದಾಗ್ಯೂ, ತಂಬಾಕು, ಅಡಿಕೆ, ಮದ್ಯ ಮತ್ತು ಜಂಕ್ ಫುಡ್‌ಗಳ ಮೇಲಿನ ನಿಯಂತ್ರಣವು ನಮ್ಮನ್ನಾಳುವ ನೀತಿ ನಿರೂಪಕರ ವ್ಯಾಪ್ತಿಯೊಳಗೆ ಬರುತ್ತವೆಯಾದರೂ, ಅವರು ಸಹ ಲಾಭ ನೋಡಿಕೊಂಡು ಜಾಣ ಕುರುಡರಂತಿದ್ದಾರೆ. ಆದರೆ ನಿಜವಾದ ಪರಿಣಾಮ ಬೀರುವುದು ಮಾತ್ರ ಸಾಮಾನ್ಯರ ಮೇಲೆ. ಈ ಮೆಲಿನ ಎಲ್ಲಾ ಅಂಕಿ-ಅಂಶಗಳು, ಪರಿಣಾಮಗಳನ್ನು ಎತ್ತಿ ತೋರಿಸುತ್ತಿರುವ ಅಧ್ಯಯನದ ವರದಿ ದುಶ್ಚಟ ವ್ಯಸನಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.
Published by:Ashwini Prabhu
First published: