ದೇವನಹಳ್ಳಿ ಏರ್ಪೋರ್ಟ್ : ವಿಶ್ವದಲ್ಲಿ ಪ್ರೇಮಿಗಳ ದಿನಕ್ಕಾಗಿಯೇ (Valentine's Day) ಕಾತುರದಿಂದ ದೇಶದ ಜನರು ಕಾಯುತ್ತಿರುತ್ತಾರೆ. ವರ್ಷಾನುಗಟ್ಟಲೆ ಕಾತುರದಿಂದ ಕಾಯುತ್ತಿರುತ್ತೇವೆ. ಇನ್ನೂ ಪ್ರಮುಖವಾಗಿ ಪ್ರೇಮಿಗಳ ದಿನಕ್ಕೆ ಬೇಕಾಗಿರುವ ವಸ್ತು ಎಂದರೆ ಅದು ರೆಡ್ ರೋಸ್ (Red Rose). ಈ ಹೂಗಳಿಗೆ (Flowers) ಆ ದಿನದಲ್ಲಿ ಹೆಚ್ಚಿನ ಬೇಡಿಕೆಯಿರುತ್ತದೆ. ಅದರಲ್ಲೂ ಪ್ರಮುಖವಾಗಿ ನಮ್ಮ ದೇಶದ ರೆಡ್ ರೋಸ್ ಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ನಮ್ಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗರಿಷ್ಠ ಪ್ರಮಾಣದಲ್ಲಿ ರಫ್ತು ಮಾಡಿದೆ.
ಭಾರತದಲ್ಲಿ ಅತಿಹೆಚ್ಚು ಗುಲಾಬಿ ರಫ್ತು ಮಾಡುವ ಹೆಗ್ಗಳಿಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಬಾರಿಯ ಪ್ರೇಮಿಗಳ ದಿನದ ಆಚರಣೆಗಾಗಿ ಕೆಐಎಎಲ್ ಪ್ರಪಂಚದ 25 ಸ್ಥಳಗಳಿಗೆ 18 ಏರ್ ಲೈನ್ಸ್ ನಿಂದ 5.15 ಲಕ್ಷ ಕೆಜಿ ಗುಲಾಬಿ ಹೂವು ರಫ್ತು ಮಾಡಲಾಗಿದೆ.
ವಿದೇಶಕ್ಕೆ ಗುಲಾಬಿ ಹೂ ರಫ್ತು
ಬೆಂಗಳೂರು ಸುತ್ತಮುತ್ತ ಪ್ರದೇಶದಲ್ಲಿ ಅತಿ ಹೆಚ್ಚು ಗುಲಾಬಿ ಬೆಳೆಯಲಾಗುತ್ತದೆ, ಅಂತರಾಷ್ಟ್ರೀಯ ಗುಣಮಟ್ಟದ ಗುಲಾಬಿಯನ್ನ ಸ್ಥಳೀಯ ರೈತರು ಬೆಳೆಯುತ್ತಿದ್ದಾರೆ, ರೈತರಿಗೆ ಮಾರುಕಟ್ಟೆ ವಿಸ್ತಾರವನ್ನು ಮಾಡಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವರ್ಷದಿಂದ ವರ್ಷಕ್ಕೆ ಗುಲಾಬಿ ಹೂವು ರಫ್ತು ಪ್ರಮಾಣವನ್ನು ಹೆಚ್ಚು ಮಾಡುತ್ತಲೆ ಬಂದಿದೆ.
ಇದನ್ನೂ ಓದಿ: ಸಾಕು ಪ್ರಾಣಿಗಳ ಜೊತೆ ಟ್ರಿಪ್ ಹೋಗ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಾದ ಸಿಂಗಾಪುರ, ಕೌಲಾಲಂಪುರ್, ಲಂಡನ್, ಆಂಸ್ಟರ್ಡ್ಯಾಮ್, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್ ಮತ್ತು ದುಬೈಗೆ ಗುಲಾಬಿ ರಫ್ತಾಗುತ್ತಿದೆ, ಈ ವರ್ಷ ವಿದೇಶಿ ಮಾರುಕಟ್ಟೆ 2 ಲಕ್ಷ ಕೆಜಿಯ 7.3 ಮಿಲಿಯನ್ ಗುಲಾಬಿ ಹೂವು ಕೆಐಎಎಲ್ ನಿಂದ ರಫ್ತು ಮಾಡಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶಿ ಮಾರುಕಟ್ಟೆ ಸ್ಥಳಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಗುವಾಹಟಿ ಮತ್ತು ಚಂಡೀಗಢ ಗುಲಾಬಿ ಹೂವು ರಫ್ತು ಮಾಡಲಾಗಿದೆ, ಈ ವರ್ಷ 3.15 ಲಕ್ಷ ಕೆಜಿಯ 6.5 ಮಿಲಿಯನ್ ಗುಲಾಬಿ ಹೂವು ದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗಿದೆ.
ಕರ್ನಾಟಕದ ಹೂಗಳಿಗೆ ಭಾರೀ ಬೇಡಿಕೆ
ನಮ್ಮ ಕರ್ನಾಟಕದಲ್ಲಿ ಬೆಳೆಯುವ ರೆಡ್ ರೋಸ್ ಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ವಿದ್ಯಾವಂಥ ರೈತರು ಸ್ಥಳೀಯ ಮಾರುಕಟ್ಟೆಗಿಂತ ಹೆಚ್ವು ಅಂತರಾಷ್ಟ್ರೀಯ ಮಾರುಕಟ್ಟೆಯ ಮುಖ ಮಾಡುತ್ತಾರೆ. ಮುಖ್ಯವಾಗಿ ವಿದೇಶಿ ವಿನಿಮಯದ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಮಾತ್ರ ಈ ರೀತಿಯ ರಫ್ತಿಗೆ ಮುಂದಾಗುತ್ತಾರೆ.
ಇದನ್ನೂ ಓದಿ: ವಿಶೇಷ ದಿನದಂದು ನೀವು ಒಂಟಿಯಾಗಿದ್ರೆ ಇಲ್ಲಿದೆ ಕೆಲ ಟಿಪ್ಸ್
ಇದೇ ರೀತಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದಲ್ಲಿ ಅತೀ ಹೆಚ್ಚು ಗುಲಾಬಿ ಹೂಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಪ್ರಮುಖ ವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ಹತ್ತಿರವಿದೆ ಮತ್ತು ಸರಕು ಸಾಗಣೆ ಮಾಡಲು ಬೇಕಾದ ರಸ್ತೆ ವ್ಯವಸ್ಥೆ ಕೂಡ ತುಂಬಾ ಚೆನ್ನಾಗಿ ಇರುವ ಕಾರಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲು ಮುಂದಾಗುತ್ತಾರೆ.
ವರದಿ: ಮನುಕುಮಾರ ಹೆಚ್ ಕೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ