Jewellery Collection: ನಿಮ್ಮ ಸೀರೆಗೆ ಮ್ಯಾಚ್​ ಆಗೋ ಆಭರಣ ಸೆಲೆಕ್ಟ್​ ಮಾಡೋಕೆ ಕಷ್ಟಪಡ್ಬೇಡಿ, ಇಲ್ಲಿದೆ ನೋಡಿ ಐಡಿಯಾ

ಸೀರೆಯು ಸಾಂಪ್ರದಾಯಿಕ ಧಿರಿಸುಗಳಲ್ಲಿ ಸುಂದರವಾಗಿ ಕಾಣುವ ಶಕ್ತಿಯನ್ನು ಹೊಂದಿರುವ ಒಂದು ವಿಶಿಷ್ಟ ಉಡುಪಾಗಿದೆ. ಸೀರೆಯೊಂದಿಗೆ ಪರ್ಫೆಕ್ಟ್ ಆಭರಣಗಳನ್ನು ಧರಿಸಿದರೆ ನೀವು ನೋಡಲು ಮತ್ತಷ್ಟು ಸುಂದರವಾಗಿ ಕಾಣುತ್ತಿರಿ. ಆದ್ದರಿಂದ ಈ ವಿಷಯಕ್ಕೆ ಬಂದಾಗ ನೀವು ಸ್ವಲ್ಪ ಕಾಳಜಿ ವಹಿಸುವ ಅಗತ್ಯವಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸೀರೆಯು (Saree) ಸಾಂಪ್ರದಾಯಿಕ ಧಿರಿಸುಗಳಲ್ಲಿ ಸುಂದರವಾಗಿ ಕಾಣುವ ಶಕ್ತಿಯನ್ನು ಹೊಂದಿರುವ ಒಂದು ವಿಶಿಷ್ಟ ಉಡುಪಾಗಿದೆ. ಸೀರೆಯೊಂದಿಗೆ ಪರ್ಫೆಕ್ಟ್ ಆಭರಣಗಳನ್ನು (Jewelry) ಧರಿಸಿದರೆ ನೀವು ನೋಡಲು ಮತ್ತಷ್ಟು ಸುಂದರವಾಗಿ ಕಾಣುತ್ತಿರಿ. ಆದ್ದರಿಂದ ಈ ವಿಷಯಕ್ಕೆ ಬಂದಾಗ ನೀವು ಸ್ವಲ್ಪ ಕಾಳಜಿ ವಹಿಸುವ ಅಗತ್ಯವಿದೆ. ಭಾರತೀಯ ಮಹಿಳೆಯರು (Indian Women) ಆಭರಣಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದು ಹೇಳುವುದೇ ಬೇಕಿಲ್ಲ. ಅವರು ತಮ್ಮ ಉಳಿತಾಯದ ಹೆಚ್ಚಿನ ಭಾಗವನ್ನು ಚಿನ್ನದ ಆಭರಣವನ್ನು ಖರೀದಿಸಲು ಖರ್ಚು ಮಾಡುತ್ತಾರೆ. ಹಿರಿಯರು ಯಾವಾಗಲೂ ಒಂದು ಗಾದೆ ಮಾತನ್ನು ಹೇಳುತ್ತಿರುತ್ತಾರೆ ಅದೇನೆಂದರೆ ʼಮಹಿಳೆಯನ್ನು ಸಂತೋಷಪಡಿಸಲು, ಅವರಿಗೆ ಆಭರಣವನ್ನು ಉಡುಗೊರೆಯಾಗಿ (Gift) ನೀಡಿʼ ಆಗ ನೋಡಿ ಅವರ ಸಂತೋಷ ನೂರಪಟ್ಟು ಆಗುತ್ತದೆ.

ಡಿಸೈನರ್ ಸೀರೆಗಳಿಗೆ ನಿಮ್ಮ ಆಭರಣಗಳು ಹೇಗಿರಬೇಕು ?
ನಾವು ನಮ್ಮ ಡ್ರೆಸ್‌ಗೆ ಹೆಚ್ಚು ಗಮನ ನೀಡುತ್ತಿರುವಾಗ ಡಿಸೈನರ್ ಸೀರೆಯೊಂದಿಗೆ ಯಾವುದನ್ನು ಧರಿಸಬೇಕು ಅಥವಾ ಸೀರೆಯೊಂದಿಗೆ ಆಭರಣಗಳನ್ನು ಹೇಗೆ ಧರಿಸಬೇಕು ಎಂಬುದನ್ನು ಆಯ್ಕೆ ಮಾಡುವ ಕಡೆಗೆ ನಾವು ಸ್ವಲ್ಪ ಹೆಚ್ಚು ಗಮನ ನೀಡಬೇಕಾಗುತ್ತದೆ.

ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು, ಮಾಂಗ್ ಟಿಕ್ಕಾ ಮತ್ತು ಇನ್ನೂ ಹಲವು ಆಯ್ಕೆಗಳಿವೆ ಆದರೆ ಯಾವ ಆಭರಣಗಳನ್ನು ಯಾವಾಗ ಮತ್ತು ಹೇಗೆ ಧರಿಸುತ್ತೆವೆ ಎಂಬುದು ಇಲ್ಲಿ ಪ್ರಮುಖ ವಿಷಯವಾಗಿದೆ. ನೀವು ಮದುವೆ, ಸಂಗೀತ, ಮೆಹೆಂದಿ, ಅಥವಾ ಪಾರ್ಟಿ ಅಥವಾ ಯಾವುದೇ ಕೆಲಸದ ಸ್ಥಳಕ್ಕಾಗಿ ಆಯ್ಕೆ ಮಾಡುವುದಿದ್ದರೆ ಆ ಕಾರ್ಯಕ್ರಮಕ್ಕೆ ಸರಿ ಹೊಂದುವ ಆಭರಣಗಳನ್ನು ಧರಿಸಿ.

ನೀವು ಆಭರಣಗಳನ್ನು ಖರೀದಿಸಲು ಯೋಜಿಸುತ್ತಿರುವಾಗ ನೀವು ಯಾವ ಸೀರೆಯನ್ನು ಆರಿಸುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ. ನಂತರ ಸರಿಯಾದ ಆಭರಣವನ್ನು ಆರಿಸುವಾಗ ನೀವು ಈ ಕೆಲವು ಅಂಶಗಳನ್ನು ನೆನಪಿನಲ್ಲಿಡಿ.

ಚೋಲಿ ಡ್ರೆಸ್‌ ಹೈ ನೆಕ್ ಇದ್ದರೆ ಈ ಆಭರಣ ಧರಿಸಿ
ನಿಮ್ಮ ಚೋಲಿ ಡ್ರೆಸ್‌ ಹೈ ನೆಕ್ ಆಗಿದ್ದರೆ ಅಥವಾ ಹಾಲ್ಟರ್ ನೆಕ್ ಆಗಿದ್ದರೆ, ಉದ್ದ ಮತ್ತು ಅಗಲವಾದ ನೆಕ್ಲೇಸ್‌ ಅನ್ನು ನೀವು ಧರಿಸಬೇಡಿ. ಅದಕ್ಕೆ ಸೂಕ್ಷ್ಮವಾದ ನೆಕ್‌ ಪೀಸ್ ಅಥವಾ ಸಿಂಪಲ್‌ ಚೈನ್‌ ಧರಿಸಿ, ಇದರಿಂದ ನಿಮ್ಮ ಚೋಲಿ ಡ್ರೆಸ್‌ ಮತ್ತು ನಿಮ್ಮ ಅಂದ ಮತ್ತಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: Garlic in haircare: ಕೂದಲ ಸಮಸ್ಯೆಗೆ ಬೆಳ್ಳುಳ್ಳಿ ಎಣ್ಣೆ ಬಳಸಿ, ಮಳೆಗಾಲದಲ್ಲಿ ಕೂದಲ ಆರೈಕೆಗೆ ಇದು ಬೆಸ್ಟ್​!

ಭಾರತೀಯ ವಿವಾಹಗಳಲ್ಲಿ ಸೀರೆ ಧರಿಸುವಾಗ ಈ ಅಂಶ ನೆನಪಿನಲ್ಲಿಡಿ
ಸಾಂಪ್ರದಾಯಿಕವಾಗಿ ವಧುಗಳು ಭಾರತೀಯ ವಿವಾಹಗಳಲ್ಲಿ ಸೀರೆಯನ್ನು ಮುಖ್ಯ ಉಡುಪಾಗಿ ಧರಿಸುತ್ತಾರೆ . ಈ ಗ್ರ್ಯಾಂಡ್‌ ಸೀರೆಗಳಿಗೆ ದೊಡ್ಡ ನೆಕ್ಲೇಸ್ ಅಥವಾ ಚೋಕರ್ ತುಂಬಾ ಸುಂದರವಾಗಿ ಕಾಣುತ್ತದೆ. ಆಭರಣದ ಬಣ್ಣ, ಲುಕ್ ಸ್ಟೈಲ್ ಇತ್ಯಾದಿಗಳ ಕಡೆಗೆ ನೀವು ಗಮನ ಕೊಡಬೇಕು. ನೀವು ನೆಕ್‌ಪೀಸ್ ಅನ್ನು ಆಯ್ಕೆಮಾಡುವಾಗ ಅದರ ಗಾತ್ರ ಮತ್ತು ಇದನ್ನು ಯಾವ ಸಂದರ್ಭಕ್ಕೆ ಧರಿಸುತ್ತಿದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಇನ್ನೊಂದು ವಿಷಯ.

ನೀವು ವಧುವಾಗಿದ್ದರೆ ಮತ್ತು ಇದು 16 ನೇ ಶತಮಾನದ ರಜಪೂತ್ ಮತ್ತು ಮೊಘಲ್ ಸಂಪ್ರದಾಯದ ನಿಮ್ಮ ಮದುವೆಯ ಥೀಮ್ ಆಗಿದ್ದರೆ ದೊಡ್ಡ ಅಗಲವಾದ ನೆಕ್‌ಪೀಸ್‌ಗಳು ಉತ್ತಮವಾಗಿವೆ. ಜೋಧಾ ಅಕ್ಬರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯಾ ರೈ ಅವರಂತಹ ನೆಕ್‌ಪೀಸ್‌ಗಳನ್ನು ಹೈಲೈಟ್ ಮಾಡಲು ಬ್ರಾಡ್ ನೆಕ್ ಬ್ಲೌಸ್ ಪ್ಯಾಟರ್ನ್‌ಗಳನ್ನು ಆರಿಸಿ. ನಿಮ್ಮ ಅಂದ ಹೆಚ್ಚಿಸಿ.

ಸೀರೆಯನ್ನು ಕೊಂಡುಕೊಳ್ಳುವಾಗ ಸರಿಹೊಂದುವ ಆಭರಣಗಳ ಬಗ್ಗೆಯೂ ಗಮನಹರಿಸಿ  
ಇನ್ನು ಈ ಸೀರೆಗಳಿಗೆ ತಕ್ಕ ಬಳೆಗಳು, ಕಿವಿಯೋಲೆ, ಕಾಲ್ಗೆಜ್ಜೆ ಮುಂತಾದ ಆಭರಣಗಳನ್ನು ನಿಮ್ಮ ಉಡುಪನ್ನು ಖರೀದಿಸಿದ ನಂತರ ಆ ಸೀರೆಯ ಬಣ್ಣಕ್ಕೆ ಮತ್ತು ನಮಗೂ ಸರಿಯಾಗಿ ಹೊಂದುತ್ತದೆಯೇ ಎಂಬುದು ಒಂದಲ್ಲ ಎರಡು ಸಲ ಚೆಕ್‌ ಮಾಡಿ . ನಿಮ್ಮ ಆಭರಣಗಳನ್ನು ಕೊಂಡುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸಮಯ, ದುಡ್ಡು ಮತ್ತು ಸುಂದರತೆಯು ಹಾಳಾಗಬಹುದು.

ಇದನ್ನೂ ಓದಿ:  Skin care Tips: ವಯಸ್ಸು 25-30, ಕಾಡುತ್ತಿರೋ ಮುಖದ ಸುಕ್ಕು ಹೋಗೋಕೆ ಇಲ್ಲಿದೆ ಟಿಪ್ಸ್​

ಆದ್ದರಿಂದ ನಿಮ್ಮ ಸೀರೆಯನ್ನು ಕೊಂಡುಕೊಳ್ಳುವಾಗ ಅದು ಯಾವ ಕಾರ್ಯಕ್ರಮಕ್ಕೆ ಮತ್ತು ಯಾವ ಡಿಸೈನ್‌ ಹೊಂದಿದೆ ಎಂಬ ಆಧಾರದ ಮೇಲೆ ನೀವು ಆಭರಣಗಳನ್ನು ಆರಿಸಿಕೊಳ್ಳುವುದು ಉತ್ತಮ. ಈಗ ಆಭರಣಗಳಲ್ಲಿ ವಿವಿಧ ಸ್ಟೈಲ್‌ ಇರುವ ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವುದು ಉತ್ತಮ ಎಂದು ನೀವು ತಿಳಿದು ತೆಗೆದುಕೊಳ್ಳಬಹುದು
Published by:Ashwini Prabhu
First published: