Calcium Deficiency: ಕ್ಯಾಲ್ಸಿಯಂ ಕೊರತೆಯಿಂದ ಕೂದಲ ಮೇಲೆ ಪರಿಣಾಮ! ಇದು ನಿಮ್ಮ ದೇಹಕ್ಕೆ ಅಗತ್ಯ

ನಿಮ್ಮ ಕೂದಲ ರಕ್ಷಣೆ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೀರಿ, ಎಷ್ಟೇ ಕಾಳಜಿ ವಹಿಸಿದರೂ, ದುಬಾರಿ ವಸ್ತುಗಳ ಬಳಕೆ ಮಾಡಿದರೂ ಕೂದಲು ಉದುರುವಿಕೆ ನಿಲ್ಲುತ್ತಿಲ್ಲ. ಸಾಕಷ್ಟು ಕೂದಲು ಉದುರುವಿಕೆ ಸಮಸ್ಯೆ ನಿಮ್ಮನ್ನು ತುಂಬಾ ಕಾಡುತ್ತಿದ್ದರೆ ಕ್ಯಾಲ್ಸಿಯಂ ಕೊರತೆ ಇರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹಕ್ಕೆ (Body) ಅಗತ್ಯವಾದ ಪೋಷಕಾಂಶಗಳಲ್ಲಿ (Nutrition) ಕ್ಯಾಲ್ಸಿಯಂ ತುಂಬಾ ಮುಖ್ಯವಾದ ಅಂಶವಾಗಿದೆ. ಕ್ಯಾಲ್ಸಿಯಂ (Calcium) ದೇಹದ ಬೆಳವಣಿಗೆಯಲ್ಲಿ (Development) ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ. ಬಲಿಷ್ಠ ಮೂಳೆಗಳು (Strong Bones) ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ ಪೋಷಕಾಂಶ ಆಗಿದೆ. ಕ್ಯಾಲ್ಸಿಯಂ ದೇಹದ ಮೂಳೆಗಳ ಆರೋಗ್ಯಕ್ಕೆ ಮಾತ್ರವಲ್ಲದೇ ಕೂದಲು ಮತ್ತು ಉಗುರುಗಳ ಪೋಷಣೆಗೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಪ್ರತಿಯೊಬ್ಬರಿಗೂ ಒಂದು ದಿನದಲ್ಲಿ ನಿರ್ದಿಷ್ಟ ಪ್ರಮಾಣದ ಕ್ಯಾಲ್ಸಿಯಂ ಪೋಷಕಾಂಶದ ಅಗತ್ಯವಿದೆ. ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ 1000 ರಿಂದ 1200 ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ ಎಂದು ಅಧ್ಯಯನಗಳು ಮತ್ತು ತಜ್ಞರು ಹೇಳುತ್ತಾರೆ.

    ಕೂದಲು ಮತ್ತು ಉಗುರು ರಕ್ಷಣೆಗೆ ಕ್ಯಾಲ್ಸಿಯಂ ಅಗತ್ಯತೆ

    ಗರ್ಭಿಣಿ ಮಹಿಳೆಯರಿಗೆ ದಿನವಿಡೀ 1200 ರಿಂದ 1300 ಮಿಲಿಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕ್ಯಾಲ್ಸಿಯಂ ಕೊರತೆ ವಯಸ್ಸಾದವರಲ್ಲಿ ಮಾತ್ರವಲ್ಲದೆ, ವಯಸ್ಕರರು ಮತ್ತು ಮಕ್ಕಳಲ್ಲಿಯೂ ಕಂಡು ಬರುತ್ತದೆ.

    ನಿಮ್ಮ ಕೂದಲ ರಕ್ಷಣೆ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೀರಿ, ಎಷ್ಟೇ ಕಾಳಜಿ ವಹಿಸಿದರೂ, ದುಬಾರಿ ವಸ್ತುಗಳ ಬಳಕೆ ಮಾಡಿದರೂ ಕೂದಲು ಉದುರುವಿಕೆ ನಿಲ್ಲುತ್ತಿಲ್ಲ. ಸಾಕಷ್ಟು ಕೂದಲು ಉದುರುವಿಕೆ ಸಮಸ್ಯೆ ನಿಮ್ಮನ್ನು ತುಂಬಾ ಕಾಡುತ್ತಿದ್ದರೆ ಕ್ಯಾಲ್ಸಿಯಂ ಕೊರತೆ ಇರಬಹುದು.

    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

    ಕ್ಯಾಲ್ಸಿಯಂ ಭರಿತ ಆಹಾರ ಸೇವಿಸುತ್ತಿದ್ದೀರಾ?

    ಪ್ರತಿ ಉತ್ತಮ ಉತ್ಪನ್ನದ ಬಳಕೆ ನಂತರವೂ ನಿಮ್ಮ ಕೂದಲು ಉದುರುವ ಸಮಸ್ಯೆ ನಿಲ್ಲುತ್ತಿಲ್ಲ. ನಿಮ್ಮ ಕೂದಲು ತುಂಬಾ ತೆಳುವಾಗಿದೆ. ಕೂದಲು ವೇಗವಾಗಿ ಉದುರುತ್ತಿದೆ ಎಂದಾದರೆ ನೀವು ನಿಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇರಿಸಿದ್ದೀರಾ ಎಂಬುದನ್ನು ಸರಿಯಾಗಿ ನೋಡಿಕೊಳ್ಳಿ.

    ಕ್ಯಾಲ್ಸಿಯಂ ಕೊರತೆ ಕೂದಲು ಉದುರುವಿಕೆ, ಕೂದಲು ವೇಗವಾಗಿ ತೆಳ್ಳಗಾಗುವುದು ಹೆಚ್ಚಾಗುತ್ತದೆ. ಕೂದಲಿನ ಈ ರೋಗ ಲಕ್ಷಣದ ಆಧಾರದ ಮೇಲೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದೆಯೋ, ಇಲ್ಲವೋ ಎಂದು ನೀವೇ ಸ್ವತಃ ನಿರ್ಧರಿಸಲು ಸಾಧ್ಯವಿಲ್ಲ.

    ಏಕೆಂದರೆ ಈ ರೋಗ ಲಕ್ಷಣಗಳು ಬೇರೆ ಯಾವುದಾದರೂ ಸಮಸ್ಯೆಯ ಕಾರಣದಿಂದಲೂ ಉಂಟಾಗುತ್ತಿರಬಹುದು. ನಿಮ್ಮ ಉಗುರುಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಏಕೆಂದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಗುರುಗಳು ತೆಳುವಾಗಲು ಕಾರಣವಾಗುತ್ತದೆ. ಮತ್ತು ಬೇಗನೆ ಒಡೆಯುತ್ತವೆ.

    ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿ

    - ಕೂದಲನ್ನು ದಟ್ಟವಾಗಿ, ಬಲವಾಗಿ ಮತ್ತು ಹೊಳೆಯುವಂತೆ ಮಾಡಲು ನಿಮ್ಮ ದೈನಂದಿನ ಆಹಾರದಲ್ಲಿ ಬೇಳೆ ಕಾಳು, ಹಾಲು, ಮೊಸರು ಮತ್ತು ಪನೀರ್ ಸೇರಿಸಿ ತಿನ್ನಿ. ಏಕೆಂದರೆ ಇವೆಲ್ಲವೂ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ಹೋಗಲಾಡಿಸುತ್ತವೆ.

    - ದೇಹದಲ್ಲಿ ವಿಟಮಿನ್-ಡಿ ಕೊರತೆಯಿದ್ದರೆ ಕ್ಯಾಲ್ಸಿಯಂ ಆಹಾರದ ಪ್ರಯೋಜನ ದೇಹಕ್ಕೆ ಸಿಗುವುದಿಲ್ಲ. ಏಕೆಂದರೆ ವಿಟಮಿನ್-ಡಿ ಕೊರತೆ ಇದ್ದಾಗ ದೇಹದಲ್ಲಿ ಕ್ಯಾಲ್ಸಿಯಂ ಜೀರ್ಣ ಆಗುವುದಿಲ್ಲ.

    - ಕ್ಯಾಲ್ಸಿಯಂ ಬಲಿಷ್ಠ ಮೂಳೆಗಳ ರಚನೆಗೆ ಸಹಕಾರಿ ಆಗಿದೆ. ಮತ್ತು ಕ್ಯಾಲ್ಸಿಯಂ ಕೊರತೆಯು ಮೂಳೆಗಳ ಮೇಲೆ ಅದರ ಮೊದಲ ರೋಗ ಲಕ್ಷಣಗಳನ್ನು ತೋರಿಸುತ್ತದೆ. ಕ್ಯಾಲ್ಸಿಯಂ ಕೊರತೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಮೂಳೆ  ಮುರಿತದ ಸಾಧ್ಯತೆ ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಕೊರತೆ ವಯಸ್ಸಾದಂತೆ ಆಸ್ಟಿಯೊಪೊರೋಸಿಸ್ ಅಪಾಯಕ್ಕೆ ಕಾರಣ ಆಗುತ್ತದೆ.

    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

    ಮಂಡಿರಜ್ಜು ಸ್ಟ್ರೈನ್

    ಕ್ಯಾಲ್ಸಿಯಂ ಕೊರತೆ ಸೂಚಿಸುವ ಲಕ್ಷಣಗಳು ಸ್ನಾಯುಗಳ ರಚನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯ ನೇರ ಪರಿಣಾಮವು ಸ್ನಾಯುಗಳ ಮೇಲೆ ಬೀಳುತ್ತದೆ. ಕೊರತೆಯು ಅಸಹನೀಯ ನೋವು ಉಂಟು ಮಾಡುತ್ತದೆ.
    Published by:renukadariyannavar
    First published: