Prawns Ghee Roast: ಕುಂದಾಪುರ ಸ್ಟೈಲ್ ಸಿಗಡಿ ಘೀ ರೋಸ್ಟ್ ಮಾಡೋಕೆ ಬರುತ್ತಾ? ಇಲ್ಲವಾದ್ರೆ ಈ ವಿಡಿಯೋ ನೋಡಿ

ಕುಂದಾಪುರ ಸ್ಟೈಲಿನಲ್ಲಿ ಸಿಗಡಿ ಘೀ ರೋಸ್ಟ್​ ಮಾಡುವ ಬಗ್ಗೆ ತಿಳಿಸಿಕೊಡುತ್ತೇವೆ. ಅಂದಹಾಗೆಯೇ, ಒಂದು ಬಾರಿ ಈ ರೆಸಿಪಿ ಟ್ರೈ ಮಾಡಿದ್ರೆ ಮತ್ತೆ ಮತ್ತೆ ನೆಪಿಸುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನಿಮ್ಮ ಬಾಯಲ್ಲಿ ಎಂಥಾ ರೇಸ್ಟ್​ ಮಾರ್ರೆ ಎಂಬ ಉದ್ಗಾರವಂತೂ ಖಂಡಿತಾ ಬರುತ್ತೆ.

 ಸಿಗಡಿ ಘೀ ರೋಸ್ಟ್

ಸಿಗಡಿ ಘೀ ರೋಸ್ಟ್

  • Share this:
    ಕುಂದಾಪುರ ಹೆಸರು ಕೇಳಿದಾಗಲೇ ಅಲ್ಲಿನ ಸಮುದ್ರ ತೀರ ನೆನಪಿಗೆ ಬರುತ್ತದೆ. ಸಮುದ್ರ ಅಂದಾಗ ಬೋಟ್​, ಬೆಸ್ತರು, ಮೀನುಗಳು ನೆನಪಿಗೆ ಬರುವುದು ಸಾಮಾನ್ಯ. ಇನ್ನು ಮೀನು ಅಂದಾಗ ಮೀನು ಪದಾರ್ಥ ಬಗ್ಗೆ ತಿಳಿಸದೇ ಇದ್ದರೆ ಹೇಗೆ?. ಕುಂದಾಪುರವರು ನೀವಾಗಿದ್ದರೆ ಅಥವಾ ಕುಂದಾಪುರಕ್ಕೆ (Kundapura) ಭೇಟಿ ನೀಡಿದಾಗ ಮೀನು (Fish) ಊಟ ಮಾಡುವುದನ್ನು ಮರೆಯದಿರಿ. ಯಾಕಂದ್ರೆ ಆ ಊರಿನ ಅಡುಗೆ ರುಚಿಯನ್ನು ಆ ಊರಿನಲ್ಲಿ ಸವಿದರೆ ಚೆನ್ನಾಗಿರುತ್ತದೆ. ಆದರೆ ಕುಂದಾಪುರದ ಕಡೆಗೆ ಸದ್ಯ ಹೋಗೋಕೆ ಆಗಲ್ಲಾ ಅನ್ನುವವರಿಗೆ ಇದ್ದ ಜಾಗದಲ್ಲಿಯೇ ಕುಂದಾಪುರ ಸ್ಟೈಲಿನಲ್ಲಿ ಸಿಗಡಿ ಘೀ ರೋಸ್ಟ್ (Prawns Ghee Roast)​ ಮಾಡುವ ಬಗ್ಗೆ ತಿಳಿಸಿಕೊಡುತ್ತೇವೆ. ಅಂದಹಾಗೆಯೇ, ಒಂದು ಬಾರಿ ಈ ರೆಸಿಪಿ (Recipe) ಟ್ರೈ ಮಾಡಿದ್ರೆ ಮತ್ತೆ ಮತ್ತೆ ನೆಪಿಸುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನಿಮ್ಮ ಬಾಯಲ್ಲಿ ಎಂಥಾ ರೇಸ್ಟ್​ (Taste) ಮಾರ್ರೆ ಎಂಬ ಉದ್ಗಾರವಂತೂ ಖಂಡಿತಾ ಬರುತ್ತೆ.

    ಬೇಕಾಗುವ ಸಾಮಗ್ರಿಗಳು

    ಕೊತಂಬರಿ ,ಜೀರಿಗೆ,ಮೆಂತ್ಯೆ, ಕಾಳುಮೆಣಸು,ಸಾಸಿವೆ,ಗಸೆಗಸೆ , ಬ್ಯಾಡಗಿ ಮೆಣಸು,ಗೋಡಂಬಿ, ಬೆಲ್ಲ, ಬೆಳ್ಳುಳ್ಳಿ,ಹುಣಸೆ ಹಣ್ಣು ಪೇಸ್ಟ್,ಉಪ್ಪು, 500 ಗ್ರಾಂ ಸೀಗಡಿ , ಅರಶಿಣ ಪುಡಿ,ದನಿಯ ಪುಡಿ,ಲಿಂಬೆ ರಸ,ಕರಿಬೇವಿನ ಎಲೆ.

    ಮಾಡುವ ವಿಧಾನ

    ಒಂದು ಪ್ಯಾನ್ ಗೆ ಕೊತಂಬರಿ ,ಜೀರಿಗೆ,ಮೆಂತ್ಯೆ, ಕಾಳುಮೆಣಸು,ಸಾಸಿವೆ,ಗಸೆಗಸೆ ಹಾಕಿ ಮಸಾಲೆ ಚೆನ್ನಾಗಿ ಘಮ ಬರುವಲ್ಲಿ ವರೆಗೆ ಹುರಿಯಿರಿ. ನಂತರ ಮಸಾಲೆ ತಣ್ಣಗಾಗಲು ಬಿಡಿ. ಒಂದು ಬೌಲ್ ಗೆ ಬ್ಯಾಡಗಿ ಮೆಣಸು ತೆಗೆದುಕೊಳ್ಳಿ , ಮೆಣಸನ್ನು ಕತ್ತರಿಸಿ ಬೀಜ ತೆಗೆದು , ಮೆಣಸಿನ ಸಿಪ್ಪೆ ಹಾಗೂ 4 ಗೋಡಂಬಿ ಗೆ ಸ್ವಲ್ಪ ಬಿಸಿ ನೀರು ಸೇರಿಸಿ 30 ನಿಮಿಷಗಳ ಕಾಲ ನೆನೆಯಲು ಬಿಡಿ.

    ನಂತರ ಮಿಕ್ಸಿ ಜಾರಿಗೆ ನೆನೆಸಿ ಇಟ್ಟ ಮೆಣಸು ,ಗೋಡಂಬಿ, ಹುರಿದ ಮಸಾಲೆ,1 ಚಮಚ ಬೆಲ್ಲ,8-10 ಬೆಳ್ಳುಳ್ಳಿ ಎಸಳು,2 ಚಮಚ ಹುಣಸೆ ಹಣ್ಣು ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

    ನಂತರ ಒಂದು ಬೌಲ್ ಗೆ ಸೀಗಡಿ , ಸ್ವಲ್ಪ ಉಪ್ಪು, 1/2 ಚಮಚ ಅರಶಿಣ,2 ಚಮಚ, ಲಿಂಬೆರಸ ಹಾಕಿ ನೆನೆಯಲು ಬಿಡಿ.

    ಒಂದು ಪ್ಯಾನ್ ಗೆ 3 ಚಮಚ ತುಪ್ಪ ಹಾಕಿ,ರುಬ್ಬಿದ ಮಿಶ್ರಣವನ್ನು ಹಾಕಿ ಮಸಾಲೆ ಕಡು ಬಣ್ಣ ಬರುವಲ್ಲಿ ವರೆಗೆ ಚೆನ್ನಾಗಿ ಕಡಿಮೆ ಉರಿಯಲ್ಲಿ ಹುರಿಯಿರಿ. ಇನ್ನೊಂದು ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ , ನೆನೆಸಿಟ್ಟ ಸೀಗಡಿ ಹಾಕಿ 3-4 ನಿಮಿಷಗಳ ಕಾಲ ಫ್ರೈ ಮಾಡಿ.

    ಇದನ್ನೂ ಓದಿ: Mushrooms: ಅಣಬೆ ತಿಂದ್ರೆ ಮಧುಮೇಹ ನಿಯಂತ್ರಣವಾಗುತ್ತಾ? ಉತ್ತರ ಇಲ್ಲಿದೆ

    ನಂತರ ಫ್ರೈ ಮಾಡಿದ ಸಿಗಡಿಯನ್ನು ಮಸಾಲೆ ಜೊತೆಗೆ ಚೆನ್ನಾಗಿ ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಿ .
    ನಂತರ ಕರಿಬೇವಿನ ಎಲೆ, ಚಿಟಿಕೆಯಷ್ಟು ದನಿಯ ಪುಡಿ,1 ಚಮಚ ಲಿಂಬೆ ರಸ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
    ರುಚಿ ನೋಡಿ,ಉಪ್ಪು ಬೇಕಾದಲ್ಲಿ ಸೇರಿಸಿಕೊಳ್ಳಿ.



    ಕಡಲ ಕಿನಾರೆಯಲ್ಲಿ ಬದುಕುವವರಿಗೆ ಆ ಊರಿನ ಪದಾರ್ಥಗಳ ಟೇಸ್ಟ್​ ಚೆನ್ನಾಗಿ ಗೊತ್ತಿರುತ್ತದೆ. ಅದರಲ್ಲೂ ಚಿಕನ್​, ಮಟನ್​ ಪದಾರ್ಥಗಳಿಗಿಂತ ಸಮುದ್ರದ ಮೀನುಗಳ ಆಹಾರ ಬಲು ರುಚಿ ಮತ್ತು ಆರೋಗ್ಯಕ್ಕೂ ಉತ್ತಮ. ಹಾಗಾಗಿ ಬೇರೆ ಊರಿನವರು ಕರಾವಳಿ ಭಾಗಕ್ಕೆ ಭೆಟಿ ನೀಡಿದಾಗ ಮೀನು ಪದಾರ್ಥವನ್ನು ಹೆಚ್ಚಾಗಿ ಸವಿದು ನೋಡುತ್ತಾರೆ. ಅಂದಹಾಗೆಯೇ ಕೆಲವೊಂದು ಮೀನುಗಳಿಗೆ ಭಾರೀ ಬೇಡಿಕೆ ಇದ್ದು, ಅದರ ಬೆಲೆ ಕೇಳಿದ್ರೆ ಖರೀದಿಸುವವರೂ ಕೂಡ ಎಂದು ಬಾರಿ ತಲೆ ಕೆರೆದುಕೊಳ್ಳುತ್ತಾರೆ.

    ಇದನ್ನೂ ಓದಿ: Turmeric Water: ಅರಿಶಿನ ನೀರಿನ 6 ಆರೋಗ್ಯಕರ ಪ್ರಯೋಜನಗಳಿವು

    ಸಿಗಡಿಯಿಂದ ಕೂಡ ರುಚಿಯಾದ  ಆಹಾರ ಪದಾರ್ಥವನ್ನು ಸವಿಯಬಹುದು. ಕೆಲವೆಡೆ ಫ್ರೈಡ್​ ರೈಸ್​​ ಮಾಡುವಾಗ ಸಿಗಡಿಯನ್ನು ಬಳಸಿ ಮಾಡುತ್ತಾರೆ. ಇದು ಕೂಡ ಚೆನ್ನಾಗಿರುತ್ತದೆ. ಆದರೆ ಸಿಗಡಿ ಪದಾರ್ಥಕ್ಕೆ ತುಪ್ಪ ಸೇರಿಸಿ ಮಾಡಿದಾಗ ಅದರ ಟೇಸ್ಟ್​ ಹೇಳತೀರದು.
    Published by:Harshith AS
    First published: