Kumkum Bhindi: ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಸೂಪರ್ ಫುಡ್ ಈ ಕುಂಕುಮ್ ಭಿಂಡಿ!

ನಮ್ಮ ಹಿರಿಯರು ಹೇಳುವಂತೆ ಬೆಂಡೆಕಾಯಿ ಸೇವನೆಯು ನಮ್ಮ ಮೆದುಳನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಇದು ವಿಟಮಿನ್ ಎ, ಕೆ, ಸಿ ಮತ್ತು ಬಿ 6 ನ ಉತ್ತಮ ಮೂಲವಾಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಈ ತರಕಾರಿಯ ಮತ್ತೊಂದು ಪ್ರಭೇದವು ಎಲ್ಲರ ಗಮನವನ್ನು ಸೆಳೆದಿದೆ. ಅದೇ ಕೆಂಪು ಬೆಂಡೆಕಾಯಿ.

ಕುಂಕುಮ್ ಭಿಂಡಿ

ಕುಂಕುಮ್ ಭಿಂಡಿ

  • Share this:

ನಾವೆಲ್ಲಾ ಸಾಮಾನ್ಯವಾಗಿ ಮನೆಯಲ್ಲಿ ತಿನ್ನುವ ಬೆಂಡೆಕಾಯಿ (ladies finger) ಹಸಿರು ಬಣ್ಣದಾಗಿರುತ್ತದೆ, ಆದರೆ ಎಂದಾದರೂ ನೀವು ಕೆಂಪು ಬಣ್ಣದ ‘ಕುಂಕುಮ್ ಭಿಂಡಿ’ ಯನ್ನು (Kumkum Bhindi) ನೋಡಿದ್ದೀರಾ ಅಥವಾ ಅದರ ಬಗ್ಗೆ ಕೇಳಿದ್ದೀರಾ? ನಿಮ್ಮ ಉತ್ತರ ಬಹುತೇಕವಾಗಿ ‘ಇಲ್ಲ’ ಅಂತಾನೆ ಆಗಿರುತ್ತದೆ. ನಮ್ಮ ಹಿರಿಯರು ಹೇಳುವಂತೆ ಬೆಂಡೆಕಾಯಿ ಸೇವನೆಯು ನಮ್ಮ ಮೆದುಳನ್ನು (Brain) ತೀಕ್ಷ್ಣಗೊಳಿಸುತ್ತದೆ ಮತ್ತು ಇದು ವಿಟಮಿನ್ ಎ, ಕೆ, ಸಿ ಮತ್ತು ಬಿ 6 ನ ಉತ್ತಮ ಮೂಲವಾಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಈ ತರಕಾರಿಯ (Vegetable) ಮತ್ತೊಂದು ಪ್ರಭೇದವು ಎಲ್ಲರ ಗಮನವನ್ನು ಸೆಳೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ಕೆಂಪು ಬೆಂಡೆಕಾಯಿ, ಇದನ್ನು ‘ಕುಂಕುಮ್ ಭಿಂಡಿ’ ಅಂತ ಕರೆಯುತ್ತಾರೆ.


ಕೆಂಪು ಬೆಂಡೆಕಾಯಿಯಲ್ಲಿರುವ ಅರೋಗ್ಯ ಪ್ರಯೋಜನಗಳೇನು  
ಈ ಕೆಂಪು ಬೆಂಡೆಕಾಯಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರೊಂದಿಗೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು, ರಕ್ತಹೀನತೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಾರೆ.


"ಕುಂಕುಮ್ ಭಿಂಡಿ’ ಯಲ್ಲಿ 94% ದಷ್ಟು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬು ಇದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಅದರ 66% ದಷ್ಟು ಸೋಡಿಯಂ ಅಂಶವಿದ್ದು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದರೆ 21% ಕಬ್ಬಿಣದ ಅಂಶವು ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು 5 % ದಷ್ಟು ಪ್ರೋಟೀನ್ ದೇಹದ ಚಯಾಪಚಯ ವ್ಯವಸ್ಥೆಯನ್ನು ಕ್ರಮಬದ್ಧವಾಗಿರಿಸುತ್ತದೆ.

ಇದನ್ನು ಅಭಿವೃದ್ಧಿಪಡಿಸಿದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೆಜಿಟೇಬಲ್ ರಿಸರ್ಚ್
ಕಾಶಿ ಲಾಲಿಮಾ ಎಂದು ಕರೆಯಲಾಗುವ ಈ ಹೊಸ ತಳಿಯನ್ನು 23 ವರ್ಷಗಳ ಕಠಿಣ ಪರಿಶ್ರಮದ ನಂತರ 2019 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೆಜಿಟೇಬಲ್ ರಿಸರ್ಚ್ (ಐಐವಿಆರ್) ಅಭಿವೃದ್ಧಿಪಡಿಸಿದೆ. ಈ ಕೆಂಪು ಬೆಂಡೆಯು ಉತ್ಕರ್ಷಣ ನಿರೋಧಕಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿವೆ.


ಇದನ್ನೂ ಓದಿ: Kiwi Fruits: ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಿವಿ ಹಣ್ಣು ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ

ಕೃಷಿಕರಿಗೆ ಉತ್ತಮ ಲಾಭವನ್ನು ಕೊಡುವ ತರಕಾರಿ
ಐಐವಿಆರ್ ನ ಮಾಜಿ ನಿರ್ದೇಶಕ ಡಾ.ಬಿಜೇಂದ್ರ ಅವರು 1995-96 ರಲ್ಲಿ ಕೆಂಪು ಬೆಂಡೆಕಾಯಿಯನ್ನು ಅಭಿವೃದ್ದಿಪಡಿಸಲು ಪ್ರಾರಂಭಿಸಿದರು. ಬೆಂಡೆಕಾಯಿಯ ಈ ರೂಪಾಂತರವು ನೇರಳೆ-ಕೆಂಪು ಬಣ್ಣದಲ್ಲಿದೆ ಮತ್ತು ಇದರ ಬೆಲೆ ಪ್ರತಿ ಕಿಲೋ ಗ್ರಾಂ ಗೆ 100 ರಿಂದ 500 ರೂಪಾಯಿ ಇದೆ. 2019 ರವರೆಗೆ, ಈ ತಳಿಯನ್ನು ಪಾಶ್ಚಿಮಾತ್ಯ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಈಗ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ರೈತರು ಸಹ ಇದನ್ನು ಬೆಳೆಯುತ್ತಿದ್ದಾರೆ.


ಕೆಂಪು ಬೆಂಡೆಕಾಯಿಯ ಬೆಲೆ ಹೇಗಿದೆ?
ಭೋಪಾಲ್ ಮೂಲದ ರೈತ ಮಿಸ್ರಿಲಾಲ್ ರಜಪೂತ್ ಅವರು ಸುದ್ದಿ ಸಂಸ್ಥೆಗೆ ಈ ತಳಿಯು ಹಸಿರು ಬೆಂಡೆಕಾಯಿಗಿಂತ 5 ರಿಂದ 7 ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ ಎಂದು ತಿಳಿಸಿದರು. "ಕೆಲವು ಮಾಲ್‌ಗಳಲ್ಲಿ ಕೆಂಪು ಬೆಂಡೆಕಾಯಿಯನ್ನು 250 ಗ್ರಾಂ ಗೆ 75 ರಿಂದ 80 ರೂಪಾಯಿ ಮತ್ತು 500 ಗ್ರಾಂ ಗೆ 300 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದೆ" ಎಂದು ಅವರು ತಿಳಿಸಿದರು.


ಇದನ್ನೂ ಓದಿ:  Weight Loss Tips: ಊಟ ಮಾಡುವಾಗ ಮಾಡುವ ಈ ತಪ್ಪೇ ನಿಮ್ಮ ತೂಕ ಹೆಚ್ಚಾಗೋಕೆ ಕಾರಣ

ಅವರು ಬೆಳೆದ ಬೆಂಡೆಕಾಯಿ 40 ದಿನಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸಿದ್ದು ಮತ್ತು ಒಂದು ಎಕರೆ ಭೂಮಿಯಲ್ಲಿ 40 ರಿಂದ 80 ಕ್ವಿಂಟಾಲ್ ವರೆಗೆ ಬೆಳೆಯಬಹುದು ಎಂದು ಮಿಸ್ರಿಲಾಲ್ ಹೇಳುತ್ತಾರೆ. ಬೇಸಾಯದ ಸಮಯದಲ್ಲಿ ಯಾವುದೇ ಕೀಟನಾಶಕಗಳನ್ನು ಬಳಸಲಾಗಿಲ್ಲ ಎಂದು ಸಹ ಅವರು ಹೇಳಿದರು.


ಬೆಂಡೆಕಾಯಿ ಕೃಷಿ ಮಾಡಲು ಉತ್ತಮ ಸಮಯ ಯಾವುದು
ಈ ಕೆಂಪು ಬೆಂಡೆಕಾಯಿಯನ್ನು ಫೆಬ್ರವರಿ ಮತ್ತು ಏಪ್ರಿಲ್ ಎರಡನೇ ವಾರದ ನಡುವೆ ಬಿತ್ತನೆ ಮಾಡಬಹುದು. ಇದನ್ನು ನವೆಂಬರ್ ನಲ್ಲಿ ಸಹ ಬಿತ್ತನೆ ಮಾಡಬಹುದು. ಐಐವಿಆರ್ ಈ ಬೆಳೆ ವಸಂತ ಬೇಸಿಗೆ ಮತ್ತು ಮಳೆಗಾಲಗಳೆರಡಕ್ಕೂ ಸೂಕ್ತವಾಗಿದೆ ಎಂದು ಹೇಳುತ್ತದೆ. ಒಂದು ಹೆಕ್ಟೇರ್ ನಲ್ಲಿ 14 ರಿಂದ 15 ಟನ್ ಬೆಳೆಯಬಹುದು ಎಂಬುದು ಈ ಬೆಳೆಗಿರುವ ಧನಾತ್ಮಕ ಅಂಶವಾಗಿದೆ.

Published by:Ashwini Prabhu
First published: