ಬಳುಕುವ ಬಳ್ಳಿಯಂತಿದ್ದ ಬಾಲಿವುಡ್ ನಟಿ ಕೃತಿ ಸನೋನ್ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡ ವಿಷಯ ಗೊತ್ತೇ ಇದೆ. ಹೌದು, ಮಿಮೀ ಸಿನಿಮಾಗಾಗಿ ಕೃತಿ ಸನೋನ್ ಬರೋಬ್ಬರಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಲಕ್ಷ್ಮಣ್ ಉಟೇಕರ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ 'ಮಿಮೀ'ಯಲ್ಲಿ ಕೃತಿ ಬಾಡಿಗೆ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಗಾಗಿ ನಟ-ನಟಿಯರು ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ಸಾಮಾನ್ಯ. ಈ ಹಿಂದೆ ಭೂಮಿ ಪೆಡ್ನೆಕರ್ ಅವರು ತಮ್ಮ ಚೊಚ್ಚಲ ಸಿನಿಮಾ ದಮ್ ಲಗಾಕೆ ಹೈಶಾ ಸಿನಿಮಾಗಾಗಿ ಸಿಕ್ಕಾಪಟ್ಟೆ ದಪ್ಪಗಾಗಿದ್ದರು. ಬಾಲಿವುಡ್ ಫರ್ಪೆಕ್ಷನಿಸ್ಟ್ ಆಮಿರ್ ಖಾನ್ ಅವರೂ ಸಹ ಈ ಹಿಂದೆ ದಂಗಲ್ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇನ್ನು ಹೀಗೆ ಹೆಚ್ಚಿಸಿಕೊಂಡ ತೂಕವನ್ನು ಇಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ತೂಕ ಹೆಚ್ಚಿಸಿಕೊಳ್ಳುವಾಗ ಇರುವ ಆಸಕ್ತಿ ಇಳಿಸಿಕೊಳ್ಳುವಾಗ ತುಂಬಾ ಸಲ ಇರುವುದಿಲ್ಲ. ಅದಕ್ಕೆ ಇಂತಹ ಸಾಹಸಕ್ಕೆ ಎಲ್ಲರೂ ಕೈ ಹಾಕುವುದಿಲ್ಲ.
ಮಿಮೀ ಸಿನಿಮಾದಲ್ಲಿ ಕೃತಿ ಸನೋನ್ ಬಾಡಿಗೆ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಪಾತ್ರಕ್ಕಾಗಿ ಕೃತಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಸಿನಿಮಾದಲ್ಲಿ ಕೃತಿ ನಿಜವಾಗಿಯೂ ಗರ್ಭಿಣಿಯಂತೆ ಕಾಣಬೇಕೆಂದು ಅವರಿಗೆ ತೂಕ ಹೆಚ್ಚಿಸಿಕೊಳ್ಳುವಂತೆ ಹೇಳಲಾಗಿತ್ತು.
ತೂಕ ಹೆಚ್ಚಿಸಿಕೊಳ್ಳಲು ಕೃತಿ ಸನೋನ್ ಏನೆಲ್ಲ ಮಾಡಿದ್ದಾರೆ ಗೊತ್ತಾ. ಸಿನಿಮಾ ಚಿತ್ರೀಕರಣ ಆರಂಭವಾದ ನಂತರ ಕೃತಿ ಬರ್ಗರ್, ಚಾಕೊಲೇಟ್, ಚಿಪ್ಸ್, ರಸಗುಲ್ಲಾ ಹೀಗೆ ಎಲ್ಲ ರೀತಿಯ ಕುರುಕುಲು ತಿನಿಸುಗಳನ್ನು ತಿನ್ನುತ್ತಿದ್ದರಂತೆ. ಅದರಲ್ಲೂ ಶೂಟಿಂಗ್ ಸೆಟ್ನಲ್ಲಿ ಕೃತಿ ಅವರಿಗೆ ಇಡೀ ಚಿತ್ರತಂಡ ಈ ಎಲ್ಲ ತಿನಿಸುಗಳನ್ನು ತಿನ್ನಿಸುತ್ತಿದ್ದರಂತೆ.
ಹೌದು, ಕೃತಿ ಏನೆಲ್ಲ ರುಚಿಕರವಾದ ತಿನಿಸುಗಳನ್ನು ತಿಂದರು ಅಂತ ತೋರಿಸುವ ಒಂದು ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಕೃತಿ ಸನೋನ್ ತೆರೆ ಮೇಲೆ ನಿಜವಾಗಿಯೂ ಗರ್ಭಿಣಿಂತೆ ಕಾಣಬೇಕೆಂಬ ಉದ್ದೇಶದಿಂದ ಅವರಿಗೆ ದಪ್ಪಗಾಗಲು ಹೇಳಲಾಗಿತ್ತು ಎಂದು ನಿರ್ದೇಶಕರೇ ಹೇಳಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: Allu Arha: ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ಮಗಳು ಸ್ಟೈಲಿಶ್ ಪ್ರಿನ್ಸೆಸ್ ಅಲ್ಲು ಅರ್ಹಾ
ಕೃತಿ ಆಗ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದು ಲಾಕ್ಡೌನ್ನಲ್ಲೂ ಏನೆಲ್ಲ ಸವಿಯುತ್ತಿದ್ದರು ಅಂತ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆದರೆ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆಯೇ ತೂಕ ಇಳಿಸೋಕೆ ಆರಂಭಿಸಿದರು. ಈಗ ಕೃತಿ ಮತ್ತೆ ಮೊದಲಿನಂತೆಯೇ ಬಳುಕುವ ಬಳ್ಳಿಯಂತಾಗಿದ್ದಾರೆ.
View this post on Instagram
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ