Breast Cancer: ಇದೆಂಥಾ ಅವಸ್ಥೆ! ಅಲ್ಟ್ರಾಸೌಂಡ್‌ನಲ್ಲಿ ಪತ್ತೆಯಾಗದ ಕ್ಯಾನ್ಸರ್ 6 ತಿಂಗಳ ಬಳಿಕ 4ನೇ ಹಂತದಲ್ಲಿತ್ತಂತೆ

ಕ್ರಿಸ್ಟಿನ್ ಸ್ಟೋನ್ ಎಂಬ ಮಹಿಳೆ ಎಮ್‌ಬಿಎ ಪದವಿಯನ್ನು ಗಳಿಸಿ ಅಂತೆಯೇ ಸಿಯಾಟಲ್‌ನಲ್ಲಿ ಹಿರಿಯ ವ್ಯಾಪಾರ ವಿಶ್ಲೇಷಕಿ ಹುದ್ದೆಯನ್ನೇರಿದರು. ಆದರೆ ವಿಧಿಯ ಆಟ ಎಂಬಂತೆ ಆಕೆಯ ಬಲಸ್ತನದಲ್ಲಿ ಗೆಡ್ಡೆ ಇರುವ ಅನುಭವ ಉಂಟಾಯಿತು. ಸ್ತನ ಕ್ಯಾನ್ಸರ್‌ನಿಂದ ಆಕೆಯ ಅಜ್ಜಿ ಅದಾಗ ತಾನೇ ಕೀಮೋಥೆರಪಿಗೆ ಒಳಗಾಗಿದ್ದರು ಹಾಗಾಗಿ ಕ್ರಿಸ್ಟಿನ್ ಪರೀಕ್ಷೆ ಮಾಡುವುದೇ ಸೂಕ್ತ ಎಂದು ನಿಶ್ಚಯಿಸಿದರು.

ಕ್ರಿಸ್ಟಿನ್ ಸ್ಟೋನ್

ಕ್ರಿಸ್ಟಿನ್ ಸ್ಟೋನ್

  • Share this:
29 ರ ಹರೆಯದಲ್ಲಿ ಕ್ರಿಸ್ಟಿನ್ ಸ್ಟೋನ್ ಎಮ್‌ಬಿಎ ಪದವಿಯನ್ನು ಗಳಿಸಿದರು ಅಂತೆಯೇ ಸಿಯಾಟಲ್‌ನಲ್ಲಿ ಹಿರಿಯ ವ್ಯಾಪಾರ ವಿಶ್ಲೇಷಕಿ ಹುದ್ದೆಯನ್ನೇರಿದರು. ಆದರೆ ವಿಧಿಯ ಆಟ ಎಂಬಂತೆ ಆಕೆಯ ಬಲಸ್ತನದಲ್ಲಿ ಗೆಡ್ಡೆ ಇರುವ ಅನುಭವ ಉಂಟಾಯಿತು. ಸ್ತನ ಕ್ಯಾನ್ಸರ್‌ನಿಂದ (Cancer) ಆಕೆಯ ಅಜ್ಜಿ ಕೀಮೋಥೆರಪಿಗೆ ಒಳಗಾಗಿದ್ದರು ಹಾಗಾಗಿ ಕ್ರಿಸ್ಟಿನ್ (Kristine) ಪರೀಕ್ಷೆ ಮಾಡುವುದೇ ಸೂಕ್ತ ಎಂದು ನಿಶ್ಚಯಿಸಿದರು. ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ ಕ್ರಿಸ್ಟಿನ್ ಅಲ್ಲಿನ ವೈದ್ಯರು ನಿರ್ದೇಶಿಸಿದಂತೆ ಅಲ್ಟ್ರಾಸೌಂಡ್ (Ultrasound) ಮಾಡಿಸಿಕೊಂಡರು, ಆದರೆ ಈ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಚಿಂತೆಪಡುವ ಅಗತ್ಯವಿಲ್ಲವೆಂದು ವೈದ್ಯರು ಸಮಾಧಾನ ಹೇಳಿದರು ಹಾಗೆಯೇ ಆಕೆ ಎರಡನೇ ಪರೀಕ್ಷೆ ಮ್ಯಾಮೊಗ್ರಾಮ್ (Mammogram) ಮಾಡಬೇಕೆಂದಾಗ ವೈದ್ಯರು ನಿರಾಕರಿಸಿದರು.

ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದ್ರೂ ಪತ್ತೆಯಾಗದ ಕ್ಯಾನ್ಸರ್  
ಹಲವರ ಬಳಿ ಇದೇ ವಿಷಯವನ್ನು ಪ್ರಸ್ತಾಪಿಸಿದಾಗ ಅವರೆಲ್ಲರೂ ಮ್ಯಾಮೊಗ್ರಾಮ್ ಮಾಡುವುದು ಬೇಡವೆಂದೇ ಕ್ರಿಸ್ಟಿನ್‌ಗೆ ತಿಳಿಹೇಳಿದರು. ಅಮೇರಿಕನ್ ಕಾಲೇಜ್ ಆಫ್ ರೇಡಿಯಾಲಿಜಿಯ ಮಾನದಂಡದ ಪ್ರಕಾರ ಅಲ್ಟ್ರಾಸೌಂಡ್ ಪರೀಕ್ಷೆಗಳು ಧನಾತ್ಮಕವಾಗಿದ್ದರೆ 30 ವರ್ಷದೊಳಗಿನ ಮಹಿಳೆಯನ್ನು ಮ್ಯಾಮೊಗ್ರಫಿಗೆ ಒಳಪಡಿಸುವುದು ಸೂಕ್ತವಲ್ಲವೆಂದೇ ತಿಳಿಸಿದೆ.

ಆದರೆ, ದಿನಗಳೆದಂತೆ ಸ್ಟೋನ್ ಕೆಲವೊಂದು ರೋಗಲಕ್ಷಣಗಳನ್ನು ಗುರುತಿಸಿಕೊಂಡರು. ಮೊದಲ ಅಲ್ಟ್ರಾಸೌಂಡ್ ಪರಿಶೀಲನೆ ನಡೆಸಿದ ಆರು ತಿಂಗಳ ನಂತರ ಅವರು ಸ್ತನ ಕ್ಯಾನ್ಸರ್‌ನ 4 ನೇ ಹಂತದಲ್ಲಿದ್ದರು. ಆ ಸಮಯದಲ್ಲಿ ಕ್ಯಾನ್ಸರ್ ಆಕೆಯ ದುಗ್ಧರಸ ಗ್ರಂಥಿಗಳು ಮತ್ತು ಮೂಳೆಗಳಿಗೆ ಹರಡಿತ್ತು. ಅದೇ ರೀತಿ ಗಡ್ಡೆಯ ಉಪಸ್ಥಿತಿ ಅವರಿಗೆ ಹೆಚ್ಚು ಅರಿವಾಗತೊಡಗಿತು.

ಬಲಗೈ ನಿಶ್ಚೇಷ್ಟಿತವಾಗಿತ್ತು ಹಾಗೂ ಕಂಕುಳದಲ್ಲಿ ಅತೀವ ಯಾತನೆ ಉಂಟಾಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಅವರಿಗೆ ಸ್ತನ ಕ್ಯಾನ್ಸರ್ ಇರುವುದನ್ನು ದೃಢಪಡಿಸಿದರು. ಆರು ತಿಂಗಳ ಹಿಂದೆ ಇದೇ ವಿಷಯವನ್ನು ನಾನು ನಿಮ್ಮಲ್ಲಿ ಹೇಳಿದ್ದೆ. ಇದೀಗ ಅದನ್ನು ನನ್ನ ದೇಹದಿಂದ ಹೊರಹಾಕುವುದು ಹೇಗೆ ಎಂದು ಕ್ರಿಸ್ಟಿನ್ ವೈದ್ಯರಲ್ಲಿ ಭಯ ಹಾಗೂ ನೋವಿನಿಂದ ಕೇಳಿದರು.

ಸ್ಟೋನ್ ಇದೀಗ ಪೂರ್ಣ ಪ್ರಮಾಣದ ರೋಗಿ
ಸ್ಟೋನ್ ಸುಮಾರು ಒಂಭತ್ತು ತಿಂಗಳ ಕೀಮೋಥೆರಪಿಗೆ ಒಳಗಾಗ ಬೇಕಾಯಿತು. ಕ್ಯಾನ್ಸರ್ ಮೆದುಳಿಗೆ ಹರಡಿತ್ತು, ವೈದ್ಯರಿಗೆ ಅದನ್ನು ನಿವಾರಿಸಲು ಸಾಧ್ಯವಾಯಿತಾದರೂ ಆಕೆ ಅಲ್ಪಾವಧಿಯ ಸ್ಮರಣ ಶಕ್ತಿಯುಳ್ಳ ರೋಗಿಯಾದರು. ಈ ದಿನಗಳಲ್ಲಿ, ಅವರು ಪ್ರತಿ ಮೂರು ವಾರಗಳಿಗೊಮ್ಮೆ ಇಮ್ಯುನೊಥೆರಪಿ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ, ಅದು ಆಕೆಯನ್ನು ಇನ್ನಷ್ಟು ದಣಿಸುತ್ತದೆ.

ಕ್ಯಾನ್ಸರ್ ಹಾಗೂ ಅದರ ಚಿಕಿತ್ಸೆಯಿಂದ ಸಂಧಿವಾತ ಕೂಡ ಆಕೆಯನ್ನು ಕಾಡುತ್ತಿದೆ. ದೂರ ಪ್ರಯಾಣ ಮಾಡಲು ಕ್ರಿಸ್ಟಿನ್‌ಗೆ ಸಾಧ್ಯವಿಲ್ಲ ಅಂತೆಯೇ ರಜಾದಿನಗಳನ್ನು ಆಕೆ ಆಸ್ವಾದಿಸಲೇ ಇಲ್ಲ.

ಇದನ್ನೂ ಓದಿ:  Cancer Risk: ನೀವು ಸರಿಯಾಗಿ ಹಲ್ಲುಜ್ಜುತ್ತಿಲ್ಲವೇ? ಹಾಗಿದ್ರೆ ಈ ಸಮಸ್ಯೆ ಎದುರಾಗಬಹುದು ಎಚ್ಚರ

ತಮ್ಮ ನೋವಿನಲ್ಲೂ ನಲಿವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಸ್ಟೋನ್ ಕ್ರಿಸ್ಟಿನ್ ಕ್ಯಾನ್ಸರ್ ರೋಗಿಗಳಿಗಾಗಿ ದಿಂಬುಗಳನ್ನು ತಯಾರಿಸುತ್ತಾರೆ ಅಂತೆಯೇ ತೈಲ ವರ್ಣಚಿತ್ರಗಳನ್ನು ಚಿತ್ರಿಸುತ್ತಾರೆ. ತಮ್ಮ ಸ್ತನ ಅಂಗಾಂಶಗಳಲ್ಲಿ ಬದಲಾವಣೆ ಗಮನಿಸುವ ಯುವತಿಯರಲ್ಲಿ ಪರೀಕ್ಷೆಗೆ ಒಳಪಡಲು ಸಲಹೆ ನೀಡುತ್ತಾರೆ.

ಮ್ಯಾಮೊಗ್ರಫಿಗಿಂತಲೂ ಆಲ್ಟ್ರಾಸೌಂಡ್ ಹೆಚ್ಚು ನಿಖರ
50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದ್ದರೂ, ಅಮೇರಿಕಾದಲ್ಲಿ 45 ಕ್ಕಿಂತ ಕಡಿಮೆ ವಯಸ್ಸಿನ 9% ದಷ್ಟು ಮಹಿಳೆಯರಲ್ಲಿ ಈ ಸೋಂಕು ಪತ್ತೆಯಾಗುತ್ತಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ.

ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಸ್ತನ ಅಂಗಾಂಶಗಳು ದಟ್ಟವಾಗಿರುತ್ತವೆ ಹಾಗಾಗಿ ಆಲ್ಟ್ರಾಸೌಂಡ್ ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದೆ. ಯುವ ರೋಗಿಗಳಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆಯು ಹೆಚ್ಚು ಹಾನಕರವಲ್ಲದ ಕಾರಣವನ್ನು ಕಂಡುಹಿಡಿಯಲು ಸಹಕಾರಿಯಾಗಿದೆ ಇದಕ್ಕೆ ಹೆಚ್ಚಿನ ಕೆಲಸದ ಅಗತ್ಯವಿಲ್ಲ ಎಂಬುದು ಮೌಂಟ್ ಸಿನೈ ಹೆಲ್ತ್ ಸಿಸ್ಟಂನ ಬ್ರೆಸ್ಟ್ ಇಮೇಜಿಂಗ್ ಕೇಂದ್ರದ ಮುಖ್ಯಸ್ಥರಾದ ಡಾ. ಲಾರಿ ಮಾರ್ಗೋಲೀಸ್ ಅಭಿಪ್ರಾಯವಾಗಿದೆ.

ಕುಟುಂಬದ ಇತಿಹಾಸ ಅಥವಾ ಆನುವಂಶಿಕ ರೂಪಾಂತರದಂತಹ ಕಾರಣದಿಂದಾಗಿ ಸ್ತನ ಕ್ಯಾನ್ಸರ್‌ನ ಹೆಚ್ಚಿನ ಅಪಾಯವಿರುವ ಯುವತಿಯರಿಗೆ ಮ್ಯಾಮೊಗ್ರಫಿಯನ್ನು ಮೊದಲ ಪರೀಕ್ಷೆಯಾಗಿ ಶಿಫಾರಸು ಮಾಡುವುದಿಲ್ಲ ಎಂದು ಮಾರ್ಗೋಲಿಸ್ ಹೇಳುತ್ತಾರೆ. ಬದಲಿಗೆ, ಅವರಲ್ಲಿ ಹೆಚ್ಚಿನವರು ಸ್ತನ MRI ಪರೀಕ್ಷೆಗೆ ಒಳಪಡಬೇಕು, ಇದು ದಪ್ಪನೆಯ ಸ್ತನಗಳಲ್ಲಿ ಹೆಚ್ಚು ನಿಖರವಾಗಿರುತ್ತದೆ.

ಸ್ತನ ಅಲ್ಟ್ರಾಸೌಂಡ್‌ನಲ್ಲಿ ಪರಿಣತಿ ಹೊಂದಿರುವ ವೈದ್ಯರನ್ನು ಹುಡುಕುವುದು
30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಮೊದಲು ಮ್ಯಾಮೊಗ್ರಾಮ್‌ಗೆ ಒಳಪಡಬೇಕೆಂದು ಬಯಸುತ್ತಿರುವ ಪ್ರಕರಣಗಳಲ್ಲಿ, ಅಲ್ಟ್ರಾಸೌಂಡ್‌ಗಳ ಫಲಿತಾಂಶಗಳೇ ಮ್ಯಾಮೊಗ್ರಾಮ್‌ಗಳಿಗಿಂತ ಹೆಚ್ಚು ನಿಖರವಾಗಿ ಇರುತ್ತವೆ ಎಂದು ಮಾರ್ಗೋಲಿಸ್ ತಿಳಿಸುತ್ತಾರೆ.

ಇದನ್ನೂ ಓದಿ: Stroke: ಫ್ಲೂ ಲಸಿಕೆ ಪಡೆದುಕೊಂಡ್ರೆ ಸ್ಟ್ರೋಕ್‌ ಅಪಾಯ ಕಡಿಮೆಯಂತೆ: ಸಂಶೋಧನೆ

ಅಲ್ಟ್ರಾಸೌಂಡ್ ಪರೀಕ್ಷೆಗಳು ಎಂದಿಗೂ ಸ್ಪಷ್ಟವಾದ ಕ್ಯಾನ್ಸರ್ ಇದೆಯೇ ಇಲ್ಲವೇ ಎಂಬ ಸಂಕೇತಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳುತ್ತಾರೆ. ಸ್ತನ ಅಲ್ಟ್ರಾಸೌಂಡ್ ಅತ್ಯಂತ ಸೂಕ್ಷ್ಮ ವ್ಯತ್ಯಾಸವನ್ನು ಹೊಂದಿದೆ ಹಾಗೆಯೇ ಪರಿಶೀಲನೆಗೆ ಒಳಗಾಗುವಾಗ ನುರಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂಬುದು ಮಾರ್ಗೋಲಿಸ್ ಸಲಹೆಯಾಗಿದೆ.
Published by:Ashwini Prabhu
First published: