Krishna Janmashtami 2022: ಕೃಷ್ಣನಿಗೆ ಬೆಣ್ಣೆ ಅಂದ್ರೆ ಯಾಕ್ ಅಷ್ಟು ಇಷ್ಟ? ಅದಕ್ಕೂ ಒಂದು ಮಹತ್ವವಿದೆಯಂತೆ

Krishna Janmashtami 2022: ಕೃಷ್ಣ ಬಾಲ್ಯದಿಂದಲೂ ತುಂಟತನಕ್ಕೆ ಹೆಸರಾದವನು. ಬೆಣ್ಣೆ ಕಳ್ಳ ಎಂದು ಹೆಸರು ಪಡೆದ ಕೃಷ್ಣ, ಗೋಪಿಕೆಯರಿಗೆ ಬಹಳ ಕಾಡಿಸಿರುವ ಕಥೆಯನ್ನು ನಾವು ಕೇಳಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಂದೂ ಧರ್ಮದಲ್ಲಿ (Hindu Religion)  ಪ್ರತಿಯೊಂದು ಹಬ್ಬಕ್ಕೂ ವಿಶೇಷ ಸ್ಥಾನವಿದೆ. ಒಂದೊಂದು ಹಬ್ಬವನ್ನು ಒಂದೊಂದು ರೀತಿಯಲ್ಲಿ ಆಚರಣೆ (Celebration) ಮಾಡಲಾಗುತ್ತದೆ. ಸದ್ಯ ಭಾದ್ರಪದ ಮಾಸ ಆರಂಭವಾಗಿದೆ ಈ ಸಮಯದಲ್ಲಿ ಸಾಲು ಸಾಲು ಹಬ್ಬಗಳು (Festival) ಬರುತ್ತವೆ. ಇನ್ನೆರಡು ದಿನದಲ್ಲಿ ಕೃಷ್ಣ ಜನ್ಮಾಷ್ಟಮಿ (Krishna Janmashtami) ಹಬ್ಬವಿದೆ. ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 18ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಹಲವಾರು ಸ್ವೀಟ್​ ಹಾಗೂ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾಡಲಾಗುತ್ತದೆ. ಹೆಚ್ಚಾಗಿ ಈ ದಿನ ಬೆಣ್ಣೆಯ ಪದಾರ್ಥಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ಕೃಷ್ಣ ಎಂದರೆ ನೆನಪಾಗುವುದು ಬೆಣ್ಣೆ. ಬೆಣ್ಣೆ ಮುದ್ದೆ, ಬೆಣ್ಣೆ ಕೃಷ್ಣ ಎಂದು ಕರೆಯುತ್ತಾರೆ. ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಹಾಗಾದ್ರೆ ಯಾವ ಕಾರಣಕ್ಕೆ ಕೃಷ್ಣನಿಗೆ ಬೆಣ್ಣೆ ಎಂದರೆ ಇಷ್ಟ ಎಂಬುದು ಇಲ್ಲಿದೆ.  

ಕೃಷ್ಣನಿಗೆ ಬೆಣ್ಣೆ ಎಂದರೆ ಯಾಕೆ ಇಷ್ಟ? 

ಕೃಷ್ಣ ಬಾಲ್ಯದಿಂದಲೂ ತುಂಟತನಕ್ಕೆ ಹೆಸರಾದವನು. ಬೆಣ್ಣೆ ಕಳ್ಳ ಎಂದು ಹೆಸರು ಪಡೆದ ಕೃಷ್ಣ, ಗೋಪಿಕೆಯರಿಗೆ ಬಹಳ ಕಾಡಿಸಿರುವ ಕಥೆಯನ್ನು ನಾವು ಕೇಳಿದ್ದೇವೆ. ಗೋಪಿಕೆಯರು ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಕದ್ದು ಕುಡಿಯುವುದು, ಬೆಣ್ಣೆಯನ್ನ ಕದಿಯಲು ಮಾಡುತ್ತಿದ್ದ ತರಲೆಗಳು ಹೀಗೆ ಹಲವಾರು ವಿಚಾರಗಳು ನಮಗೆ ಗೊತ್ತಿದೆ. ಅಲ್ಲದೇ, ಕೃಷ್ಣನಿಂದ ತಮ್ಮ ಬೆಣ್ಣೆಯನ್ನು ಕಾಪಾಡಿಕೊಳ್ಳಲು ಗೋಪಿಕೆಯರು ಮಡಿಕೆಯಲ್ಲಿ ಇಟ್ಟು ಎತ್ತರದಲ್ಲಿ ಕಟ್ಟಿ ಇಟ್ಟರೂ ಸಹ ಸ್ನೇಹಿತರ ಮೂಲಕ ಪಿರಮಿಡ್ ರಚಿಸಿ ಬೆಣ್ಣೆ ಕದಿಯುತ್ತಿದ್ದ.  ಈ ಕಾರಣದಿಂದ ಈಗಲೂ ಹಬ್ಬದ ದಿನ ಮಡಕೆ ಒಡೆಯುವ ಸಂಪ್ರದಾಯವಿದೆ.

ಕೃಷ್ಣ ಗೋಕುಲದಲ್ಲಿ ಬೆಳೆದಿದ್ದು, ಅಲ್ಲಿ ಹಾಲು, ಮೊಸರು, ಬೆಣ್ಣೆಗೆ ಯಾವುದೇ ರೀತಿ ಕಡಿಮೆ ಇಲ್ಲ. ಎಷ್ಟು ಬೇಕೋ ಅಷ್ಟು ಅಲ್ಲಿ ಲಭ್ಯವಿರುತ್ತಿತ್ತು. ಹಾಗಾಗಿ ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಅಲ್ಲದೇ, ಈ ಬೆಣ್ಣೆಗೆ ಆಧ್ಯಾತ್ಮಿಕ ಮಹತ್ವ ಸಹ ಇದೆ.  ಬೆಣ್ಣೆಯು ಹಗುರವಾಗಿರುತ್ತದೆ, ಇದು ನಮ್ಮ ಮನದ ಭಾವನೆಯನ್ನು ಪ್ರತಿನಿಧಿಸುತ್ತದೆ. ನಮ್ಮಲ್ಲಿ ಒಳ್ಳೆಯ ಭಾವನೆ ಇದ್ದರೆ ಯಾವುದೇ ಹಮ್ಮು ಬಿಮ್ಮು ಇರುವುದಿಲ್ಲ. ಹಗುರವಾಗಿರುತ್ತೇವೆ ಎಂದರ್ಥ. ಮೊಸರನ್ನು ಕಡೆದು ಹೇಗೆ ಬೆಣ್ಣೆಯನ್ನು ನಾನು ಪಡೆಯುತ್ತೇವೆಯೋ ಹಾಗೆಯೇ ಕೆಟ್ಟ ಅಂಶಗಳನ್ನು ಕಡೆದು, ಒಳ್ಳೆಯ ಅಂಶಗಳನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಬೆಣ್ಣೆಯಂತೆಯೇ ನಮ್ಮ ಹೃದಯವೂ ಮೃದುವಾಗಿರಬೇಕು.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಹಬ್ಬ ಯಾವಾಗ? ಪೂಜೆ ಮುಹೂರ್ತ, ವಿಧಿ-ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ

ಹಬ್ಬದ ದಿನ ಈ ವಸ್ತುಗಳನ್ನು ಮನೆಗೆ ತನ್ನಿ

ಕೃಷ್ಣ ಅದೆಷ್ಟೇ ತುಂಟಾಟ ಮಾಡಿದರೂ ಸಹ ಗೋಪಿಕೆಯರು ಹುಸಿ ಮುನಿಸು ತೋರಿಸುತ್ತಿದ್ದರು ಬಿಟ್ಟರೆ, ಎಂದಿಗೂ ಸಿಟ್ಟು ಮಾಡಿಕೊಂಡಿಲ್ಲ. ಕೃಷ್ಣನ ತುಂಟಾಟಗಳೇ ಅವರಿಗೆ ಇಷ್ಟವಾಗುತ್ತಿದ್ದವು. ಅದನ್ನು ಅವರು ಪ್ರೀತಿಸುತ್ತಿದ್ದರು.  ಈಗ ಕೃಷ್ಣ ಜನ್ಮಾಷ್ಟಮಿ ಬಂದಿದೆ, ಈ ದಿನ ಕೆಲ ವಸ್ತುಗಳನ್ನು ಮನೆಗೆ ತಂದರೆ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಯಾವುವು ಆ ವಸ್ತುಗಳು ಎಂಬುದು ಇಲ್ಲಿದೆ.

ನವಿಲು ಗರಿ: ನೀವು ಸಾಮಾನ್ಯವಾಗಿ ಗಮನಿಸಿ ನೋಡಿ ಕೃಷ್ಣನ ಕೂದಲಿನಲ್ಲಿ ಒಂದು ನವಿಲು ಗರಿ ಇರುತ್ತದೆ. ಕೃಷ್ಣನಿಗೆ ನವಿಲು ಗರಿ ಬಹಳ ಪ್ರಿಯ. ಹಾಗಾಗಿ ಈ ದಿನ ನೀವು ಮನೆಗೆ ಒಂದು ನವಿಲು ಗರಿ ತಂದರೆ ಬಹಳ ಒಳ್ಳೆಯದು.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದ್ರೆ ಎಷ್ಟೆಲ್ಲಾ ಲಾಭ ಇದೆ ನೋಡಿ

ಬೆಣ್ಣೆ: ಮೇಲೆ ಹೇಳಿದಂತೆ ಬೆಣ್ಣೆ ಎಂದರೆ ಕೃಷ್ಣನಿಗೆ ಪಂಚಪ್ರಾಣ. ಹಾಗಾಗಿ ಈ ದಿನ ಮನೆಗೆ ಬೆಣ್ಣೆ ತರುವುದು ಅಥವಾ ಅದರಿಂದ ಮಾಡಿದ ಸ್ವೀಟ್ ನೈವೇದ್ಯ ಮಾಡುವುದು ಬಹಳ ಶ್ರೇಷ್ಠ.
Published by:Sandhya M
First published: