Krishna Janmashtami 2022: ಕೃಷ್ಣ ಜನ್ಮಾಷ್ಟಮಿಯಂದು ಈ ಸ್ಪೆಷಲ್​ ರೆಸಿಪಿಗಳನ್ನು ಟ್ರೈ ಮಾಡಿ

Krishna Janmashtami 2022 Sweet Recipe: ನೀವು ಈ ವರ್ಷ ಕೃಷ್ಣನಿಗೆ ವಿಶೇಷ ಸ್ವೀಟ್​ಗಳನ್ನು ಅಥವಾ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಲು ಯೋಚನೆ ಮಾಡುತ್ತಿದ್ದರೆ, ಕೆಲ ಸಿಹಿ ತಿಂಡಿ ಹಾಗೂ ಪದಾರ್ಥವನ್ನು ನಾವಿಲ್ಲಿ ನೀಡಿದ್ದೇವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜನ್ಮಾಷ್ಟಮಿಯು (Krishna Janmashtami 2022) ಅತ್ಯಂತ ಹಳೆಯ ಹಾಗೂ ವಿಶೇಷ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ಜನ್ಮದಿನವನ್ನು ಸಂಭ್ರಮ ಸಡಗರದಿಂದ ಆಚರಿಸುವ ದಿನ ಇದು. ಈ ವರ್ಷ, ಜನ್ಮಾಷ್ಟಮಿ ಆಗಸ್ಟ್ 18, 19 ರಂದು ಬರುತ್ತದೆ. ಈ ಸಂದರ್ಭದಲ್ಲಿ, ಭಕ್ತರು ತಮ್ಮ ಪ್ರೀತಿಯ ದೇವರಿಗೆ ವಿವಿಧ ರೀತಿಯ ನೈವೇದ್ಯಗಳನ್ನು ತಯಾರಿಸುತ್ತಾರೆ. ಶ್ರೀಕೃಷ್ಣನಿಗೆ (Krishna) 56 ಬಗೆಯ ಪ್ರಸಾದಗಳನ್ನು ತಯಾರಿಸುವ ಚಪ್ಪನ್ ಭೋಗ್ ಬಗ್ಗೆ ನೀವು ಕೇಳಿರಬಹುದು. ನೀವು ಈ ವರ್ಷ ಕೃಷ್ಣನಿಗೆ ವಿಶೇಷ ಸ್ವೀಟ್​ಗಳನ್ನು (Sweets)  ಅಥವಾ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಲು ಯೋಚನೆ ಮಾಡುತ್ತಿದ್ದರೆ, ಕೆಲ ಸಿಹಿ ತಿಂಡಿ ಹಾಗೂ ಪದಾರ್ಥವನ್ನು ನಾವಿಲ್ಲಿ ನೀಡಿದ್ದೇವೆ. ನೀವೂ ಮನೆಯಲ್ಲಿ ಟ್ರೈ ಮಾಡಿ.

ಮಾಖಾನ್ ಮಿಸ್ರಿ

ಪುಟ್ಟ ಕೃಷ್ಣನಿಗೆ  ಬೆಣ್ಣೆಯೆಂದರೆ ತುಂಬಾ ಇಷ್ಟ ಎಂದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ, ಜನ್ಮಾಷ್ಟಮಿಯಂದು, ಅನೇಕ ಮನೆಗಳಲ್ಲಿ ಮಾಖಾನ್ ಮಿಶ್ರಿಯ ಸರಳ ಪ್ರಸಾದವನ್ನು ತಯಾರಿಸಲಾಗುತ್ತದೆ. ಈ ದಿನ ನೀವು ಕೃಷ್ಣನಿಗೆ ಬೆಣ್ಣೆಯಿಂದ ಯಾವುದೇ ಪದಾರ್ಥ ಮಾಡಿ ನೈವೇದ್ಯ ಮಾಡಿದರೆ ಪ್ರಸನ್ನನಾಗುತ್ತಾನೆ .

ಮಾಖಾನ್ ಮಿಸ್ರಿ ಮಾಡಲು ಬೇಕಾಗುವ ಸಾಮಾಗ್ರಿಗಳು

1/2 ಕಪ್ ತುಪ್ಪ

6 ಐಸ್ ಕ್ಯೂಬ್

​4 ಟೇಬಲ್​ ಸ್ಪೂನ್​ ಸಕ್ಕರೆ

2  ಪುದೀನ ಎಲೆಗಳು

 ಮಾಖಾನ್ ಮಿಸ್ರಿ ಮಾಡುವ ವಿಧಾನ

ಒಂದು ಬೌಲ್‌ಗೆ ಐಸ್ ಕ್ಯೂಬ್‌ಗಳನ್ನು ಹಾಕಿ. ಈಗ ಬಟ್ಟಲಿಗೆ ತುಪ್ಪ ಸೇರಿಸಿ ಅದನ್ನು ರುಬ್ಬಿಕೊಳ್ಳಿ, ಅಥವಾ ವಿಸ್ಕರ್ ಮೂಲಕ ಮಿಶ್ರಣ ಮಾಡಿ. ಒಂದು ನಿಮಿಷದಲ್ಲಿ ಬೆಣ್ಣೆ ಬರುತ್ತದೆ. ನಂತರ ಅದರಲ್ಲಿ ಉಳಿದಿರುವ ಐಸ್​ ಕ್ಯೂಬ್​​​ ತೆಗೆದು, ಅದಕ್ಕೆ ಸಕ್ಕರೆ ಹಾಕಿ ಮಿಶ್ರಣ ಮಾಡಿದರೆ ಮಾಖಾನ್ ಮಿಸ್ರಿ ರೆಡಿ.  

ಗೋಪಾಲ್ಕಲಾಕೃಷ್ಣ ಜನ್ಮಾಷ್ಟಮಿಗೆ

ಅವಲಕ್ಕಿಯಿಂದ ವಿಶೇಷ ಸ್ವೀಟ್ ಹಾಗೂ ಬೇರೆ ಅಡುಗೆ ಪದಾರ್ಥವನ್ನು​ ಮಾಡಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಗೋಪಾಲ್ಕಲಾ ಸಹ ಒಂದು. ಇದನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ತಯಾರಿಸಲಾಗುವುದು. ತಿನ್ನಲು ತುಂಬಾ ರುಚಿಕರವಾಗಿರುವ ಈ ವಿಶೇಷ ಅಡುಗೆಯನ್ನು ಹತ್ತೇ ನಿಮಿಷದಲ್ಲಿ ಮಾಡಬಹುದಾಗಿದೆ.

ಬೇಕಾಗುವ ಸಾಮಾಗ್ರಿಗಳು  

ತೆಂಗಿನ ಕಾಯಿ ತುರಿ 2 ಕಪ್

ಅವಲಕ್ಕಿ 1 ಕಪ್

ಸಕ್ಕರೆ 3 ಚಮಚ

ಮೊಸರು 1 ಕಪ್

ಸೌತೆಕಾಯಿ 1

1 ಇಂಚು ಶುಂಠಿ

ಹಸಿಮೆಣಸಿನ ಕಾಯಿ 4

ಜೀರಿಗೆ 1 ಚಮಚ

ತುಪ್ಪ 1 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಹೀಗೆ ಕ್ಲೀನ್ ಮಾಡಿದ್ರೆ ಅಡುಗೆ ಮನೆ ಕಪಾಟು ಪಳ ಪಳ ಅಂತ ಹೊಳೆಯುತ್ತೆ

ಗೋಪಾಲ್ಕಲಾ ಮಾಡುವ ವಿಧಾನ

ಮೊದಲು ಅವಕ್ಕಿಯನ್ನು ತೊಳೆದು ನೀರಿನಲ್ಲಿ ಸುಮಾರು 2 ನಿಮಿಷಗಳ ಕಾಲ ನೆನಸಿಡಿ. ನಂತರ ಅದನ್ನು ತೆಗೆದು, ನೀರು ಸೋಸಿ ಪಾತ್ರೆಯಲ್ಲಿ ಹಾಕಿ ಇಟ್ಟುಕೊಳ್ಳಿ. ಅದಕ್ಕೆ ಸಕ್ಕರೆ, ತೆಂಗಿನಕಾಯಿ ತುರಿ, ಮೊಸರು, ಕತ್ತರಿಸಿದ ಸೌತೆಕಾಯಿ ತುಂಡು, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಮತ್ತೊಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಕಾಯಿಸಿ. ಜೀರಿಗೆ ಹಾಕಿ, ಶುಂಠಿ ಮತ್ತು ಹಸಿಮೆಣಸಿನ ಕಾಯಿ ಹಾಕಿ 2 ನಿಮಿಷ ಫ್ರೈ ಮಾಡಬೇಕು.  ನಂತರ ಇದನ್ನು ಅವಲಕ್ಕಿ ಮೇಲೆ ಸುರಿದು ಮಿಶ್ರಣ ಮಾಡಿದರೆ ತಿನ್ನಲು ರುಚಿಕರವಾದ ಗೋಪಾಲ್ಕಲಾ ರೆಡಿ.  

ರಸಗುಲ್ಲಾ

ರಸಗುಲ್ಲಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುತ್ತದೆ. ಹಬ್ಬದ ದಿನ ಇದನ್ನು ಮಾಡಿದರೆ ಇನ್ನೂ ಸ್ಪೆಷಲ್ ಆಗುತ್ತದೆ.

ರಸಗುಲ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು

ಒಂದು ಲೀಟರ್ ಹಾಲು

2 ಚಮಚ ನಿಂಬೆಹಣ್ಣಿನ ರಸ

ಅರ್ಧ ಚಮಚ ಸಣ್ಣ ರವೆ

ಅರ್ಧ ಕೆ.ಜಿ ಸಕ್ಕರೆ 

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಹಬ್ಬ ಯಾವಾಗ? ಪೂಜೆ ಮುಹೂರ್ತ, ವಿಧಿ-ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ

ರಸಗುಲ್ಲಾ ಮಾಡುವ ವಿಧಾನ

ಮೊದಲು ಹಾಲನ್ನು ಕಾಯಿಸಿಕೊಳ್ಳಿ, ಅದಕ್ಕೆ ನಿಂಬೆರಸ ಹಿಂಡಿ ಅರ್ಧ ನಿಮಿಷ ಕುದಿಸಿ ಕೆಳಗಿಳಿಸಬೇಕು. ಇದನ್ನು ಒಡೆದ ಹಾಲಿನಿಂದ ತಯಾರಿಸಬೇಕು. ಈಗ ಒಡೆದ ಹಾಲನ್ನು ಬಟ್ಟೆಯಲ್ಲಿ ಹಾಕಿ ಸೋಸಿಕೊಳ್ಳಿ. ನಂತರ ಅದನ್ನು ಹಾಗೆಯೇ ಸುತ್ತಿ 2 ಗಂಟೆ ನಂತರ ಗಂಟು ಬಿಚ್ಚಿ ಒಂದು ತಟ್ಟೆಯಲ್ಲಿ ಹಾಕಿ ಚೆನ್ನಾಗಿ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಿ. ಅದಕ್ಕೆ ರವೆ ಹಾಕಿದರೆ ನಿಮಗೆ ಉಂಡೆ ಮಾಡಲು ಸಹಾಯವಾಗುತ್ತದೆ. ಸಣ್ಣ ಸಣ್ಣ ಉಂಡೆ ಮಾಡಿ ಇಟ್ಟುಕೊಳ್ಳಿ. ಈಗ ಸಕ್ಕರೆ ನೀರನ್ನು ಒಲೆಯ ಮೇಲಿಟ್ಟು ಕುದಿಸಿ, ಅದಕ್ಕೆ ಈ ಉಂಡೆಗಳನ್ನು ಹಾಕಿ 2 ನಿಮಿಷ ಕಾಯಿಸಿ, ನಂತರ ಹೀರಿಕೊಳ್ಳಲು ಬಿಡಿ.
Published by:Sandhya M
First published: