Krishna Janmashtami 2022: ಕೃಷ್ಣ ಜನ್ಮಾಷ್ಟಮಿ ಹಬ್ಬ ಯಾವಾಗ? ಪೂಜೆ ಮುಹೂರ್ತ, ವಿಧಿ-ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ

Krishna Janmashtami 2022: ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನ್ಮಾಷ್ಟಮಿಗೆ ನಿಗದಿತ ದಿನಾಂಕವಿಲ್ಲ. ಇದನ್ನು ಭಾರತದಲ್ಲಿ ಭಾದ್ರಪದ ಮಾಸದ ಎಂಟನೆಯ ದಿನದಂದು ಆಚರಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಂದೂಗಳಿಗೆ (Hindus), ಕೃಷ್ಣ ಜನ್ಮಾಷ್ಟಮಿ (Krishna Janmashtami) ಬಹಳ ಮುಖ್ಯವಾದ ದಿನವಾಗಿದ್ದು, ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಎಂಟನೇ ಅವತಾರ ಭಗವಾನ್ ಕೃಷ್ಣ (Krishna) ಹುಟ್ಟಿದ ದಿನ (Birthday) ಎಂದು ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ವೃಂದಾವನ-ಮಥುರಾ ಪ್ರದೇಶದಲ್ಲಿ ಜನಿಸಿರುವ ಬಗ್ಗೆ ಹಾಗೂ ಆತನ ಹಲವಾರು ಲೀಲೆಗಳ ಬಗ್ಗೆ ನಾವೆಲ್ಲಾ ಕೇಳಿರುತ್ತೇವೆ. ಹಬ್ಬವನ್ನು ಮುಖ್ಯವಾಗಿ ಈ ಪ್ರದೇಶಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೇ,  ದೇಶದ ಇತರ ಭಾಗಗಳಲ್ಲಿ ವೈಭವದಿಂದ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇದನ್ನು ಆಚರಿಸಲಾಗುತ್ತದೆ. ಇದನ್ನು ಗೋಕುಲಾಷ್ಟಮಿ ಎಂದು ಸಹ ಕರೆಯುತ್ತಾರೆ.  

ಈ ದಿನ ಹಬ್ಬದ ಅಂಗವಾಗಿ ವಿವಿಧ ಆಚರಣೆಗಳನ್ನು ಮಾಡುತ್ತಾರೆ. ವೃಂದಾವನದಲ್ಲಿ ಅನೇಕ ಮಹಿಳೆಯರು, ಕೃಷ್ಣನಿಂದ ತಮ್ಮ ಬೆಣ್ಣೆಯನ್ನು ರಕ್ಷಿಸಿಕೊಳ್ಳಲು, ಬೆಣ್ಣೆ ತುಂಬಿದ ತಮ್ಮ ಮಡಕೆಗಳನ್ನು ಎತ್ತರದಲ್ಲಿ ಕಟ್ಟುತ್ತಿದ್ದರು. ಆದರೆ ಅದನ್ನು ಕದಿಯುವುದು ಕೃಷ್ಣನಿಗೆ ಕಷ್ಟದ ಕೆಲಸವಾಗಿರಲಿಲ್ಲ. ಸ್ನೇಹಿತರ ಸಹಾಯದಿಂದ ಮೇಲೆ ಹತ್ತಿ ಕೃಷ್ಣ ಬೆಣ್ಣೆ ಕದಿಯುತ್ತಿದ್ದ. ಕೃಷ್ಣ ಮತ್ತು ಅವನ ಸ್ನೇಹಿತರು ಅದರ ಎತ್ತರವನ್ನು ತಲುಪಲು ಮತ್ತು ಬೆಣ್ಣೆಯನ್ನು ಕದಿಯಲು ಮಾನವ ಪಿರಮಿಡ್‌ಗಳನ್ನು ರಚಿಸುತ್ತಿದ್ದರು. ಇದೇ ರೀತಿ ಹಬ್ಬದ ಭಾಗವಾಗಿ ಮಡಕೆ ಒಡೆಯುವ ಸಂಪ್ರದಾಯ ಜಾರಿಯಲ್ಲಿದೆ.

 ಕೃಷ್ಣ ಜನ್ಮಾಷ್ಟಮಿ ಪೂಜೆ ಮುಹೂರ್ತ:

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನ್ಮಾಷ್ಟಮಿಗೆ ನಿಗದಿತ ದಿನಾಂಕವಿಲ್ಲ. ಇದನ್ನು ಭಾರತದಲ್ಲಿ ಭಾದ್ರಪದ ಮಾಸದ ಎಂಟನೆಯ ದಿನದಂದು ಆಚರಿಸಲಾಗುತ್ತದೆ. ಗೋಪಾಲನ ಪೂಜೆಯನ್ನು ಅಷ್ಟಮಿ ತಿಥಿಯಲ್ಲಿ ಮಾಡಲಾಗುತ್ತದೆ ಮತ್ತು ಈ ವರ್ಷ ಅಷ್ಟಮಿ ತಿಥಿಯು ಆಗಸ್ಟ್ 18 ರಂದು ರಾತ್ರಿ 09:20 ಕ್ಕೆ ಪ್ರಾರಂಭವಾಗಿ ಆಗಸ್ಟ್ 19, 2022 ರಂದು ರಾತ್ರಿ 10:59 ಕ್ಕೆ ಕೊನೆಗೊಳ್ಳುತ್ತದೆ. ಆಗಸ್ಟ್ 18 ರಂದು ರಾತ್ರಿ 12:02 ರಿಂದ 12:48 ರವರೆಗೆ ಪೂಜೆಯನ್ನು ಮಾಡಬೇಕು. ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ ಕಾರಣ, ಆಗಸ್ಟ್ 18 ರಂದು ಜನ್ಮದಿನವನ್ನು ಆಚರಿಸುವುದು ಸೂಕ್ತ.

ಪವಿತ್ರ ಹಬ್ಬವಾದ ಜನ್ಮಾಷ್ಟಮಿಯನ್ನು ಪ್ರಪಂಚದಾದ್ಯಂತ ಹಿಂದೂಗಳು ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಕೃಷ್ಣನ ಭಕ್ತರು ಭಗವಂತನ ಜನ್ಮವನ್ನು ಆಚರಿಸಲು ಉಪವಾಸಗಳನ್ನು ಮಾಡುತ್ತಾರೆ. ಈ ದಿನ ಕೃಷ್ಣ ದೇವಾಲಯಗಳನ್ನು ಸಿಂಗರಿಸಲಾಗುತ್ತದೆ. ಅನೇಕ ಮನೆಗಳಲ್ಲಿ, ಚಿಕ್ಕ ಮಂಚದ ಮೇಲೆ ಅಥವಾ ತೊಟ್ಟಿಲಿನಲ್ಲಿ ಕೃಷ್ಣನ ಮೂರ್ತಿ ಇರಿಸಿ ಕೃಷ್ಣನ ಜನ್ಮದಿವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಮದುವೆಗೆ ಹೂಂ ಎನ್ನುವ ಮುನ್ನ ಈ ವಿಚಾರಗಳು ನೆನಪಿನಲ್ಲಿರಲಿ

ಕೃಷ್ಣ ಜನ್ಮಾಷ್ಟಮಿ ಆಚರಣೆಯ ವಿಧಾನ

ಮಹಾರಾಷ್ಟ್ರದಲ್ಲಿ, ದಹಿ ಹಂಡಿ ಹಬ್ಬವು ಇದರ ಹಬ್ಬದ ಪ್ರಮುಖ ಭಾಗವಾಗಿದೆ. ವೃಂದಾವನ ಮತ್ತು ಮಥುರಾದಂತಹ ಸ್ಥಳಗಳಲ್ಲಿ ಜನ್ಮಾಷ್ಟಮಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲು ವಿವಿಧ ಆಹಾರ ಪದಾರ್ಥಗಳು ಮತ್ತು ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ಭಕ್ತರು ಮಾಡಿದ ಪ್ರಸಾದವನ್ನು ಸೇವಿಸಲು ಕೃಷ್ಣ ಮಧ್ಯರಾತ್ರಿಯಲ್ಲಿ ಬರುತ್ತಾನೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಪಾರ್ಸಿ ಹೊಸ ವರ್ಷಾಚರಣೆ, ಏನಿದು? ಇದರ ಮಹತ್ವವೇನು?

ಕೃಷ್ಣನ ಅವತಾರದ ಬಗ್ಗೆ ಹಾಗೂ ಲೀಲೆಗಳ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ.  ದುಷ್ಟರನ್ನು ಶಿಕ್ಷಿಸಿ, ದುಷ್ಟರನ್ನು ರಕ್ಷಿಸುವ ಸಲುವಾಗಿ ಧರೆಗಿಳಿದು ಬಂದ ಕೃಷ್ಣ ಹಲವಾರು ರಾಕ್ಷಸರನ್ನು ವಧಿಸಿದ್ದಾನೆ.  ಕೃಷ್ಣನಿಗೆ ಹಲವಾರು ಹೆಸರುಗಳಿದೆ. ವಧಿಸಿದ ರಾಕ್ಷಸರ ಹೆಸರನ್ನು ಬಳಸಿ ಕೃಷ್ಣನಿಗೆ ಕರೆಯಲಾಗುತ್ತದೆ.

ದಹಿ ಹಂಡಿ ಎಂದರೇನು?

ದಹಿ ಹಂಡಿ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಆಚರಣೆ ಮಾಡಲಾಗುತ್ತದೆ. ಇದು ಮಡಕೆ ಒಡೆಯುವ ಸಂಪ್ರದಾಯದ ಇನ್ನೊಂದು ಹೆಸರು.  ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ದಹಿ ಹುಂಡಿಯನ್ನು ಆಚರಿಸಲಾಗುತ್ತದೆ. ಇದೊಂದು ಆಟವಾಗಿದ್ದು, ಇದರಲ್ಲಿ ಮಡಕೆಯನ್ನು ಒಡೆಯಲು ಪುರುಷರು ಮತ್ತು ಮಹಿಳೆಯರ ಮಾನವ ಪಿರಮಿಡ್ ಅನ್ನು ರೂಪಿಸುತ್ತಾರೆ. ಸುತ್ತಲು ಇತರರು ನಿಂತು ಇವರನ್ನು ಹುರಿದುಂಬಿಸುತ್ತಾರೆ. ಮೊಸರು, ಬಾದಾಮಿ, ತುಪ್ಪ ಮತ್ತು ಡ್ರೈ ಫ್ರೂಟ್‌ಗಳಂತಹ ಕೃಷ್ಣನಿಗೆ ಪ್ರಿಯವಾದ ವಸ್ತುಗಳನ್ನು ಮಣ್ಣಿನ ಮಡಕೆಯಲ್ಲಿ ಇಡಲಾಗುತ್ತದೆ.

ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿ ಆಚರಣೆ

ಗುಜರಾತ್ ಮತ್ತು ದ್ವಾರಕಾ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಈ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಮೊದಲೇ ಹೇಳಿದಂತೆ ಅಲ್ಲಿ ಅದ್ಧೂರಿ ಆಚರಣೆ ಇರುತ್ತದೆ. ಹಾಗೆಯೇ ದಕ್ಷಿಣ ಭಾರತದ ರಾಜ್ಯಗಳಲ್ಲಿ  ಸಹ ವಿಭಿನ್ನವಾಗಿ ಆಚರಿಸಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಈ ಹಬ್ಬದ ಸಮಯದಲ್ಲಿ ಉತ್ಸವ ಮಾಡುತ್ತಾರೆ. ಶ್ರೀ ಕೃಷ್ಣ  ಮತ್ತು ಶ್ರೀ ಮಲಯಪ್ಪ ಸ್ವಾಮಿಯ ಮೆರವಣಿಗೆಯನ್ನು ಇಲ್ಲಿ ಮಾಡಲಾಗುತ್ತದೆ.
Published by:Sandhya M
First published: