Krishna Janmashtami 2022: ಮನೆಯಲ್ಲಿ ಬಾಲ ಗೋಪಾಲನ ವಿಗ್ರಹವಿದ್ದರೆ ತಪ್ಪದೇ ಈ ಕೆಲಸ ಮಾಡಿ

Krishna Janmashtami 2022: ಅದರಲ್ಲೂ ಈ ವಿಶೇಷ ದಿನದಂದೂ ಕೆಲ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ, ಸಂಪತ್ತು ಅಭಿವೃದ್ದಿಯಾಗುತ್ತದೆ. ಹಾಗಾದ್ರೆ ಬಾಲ ಗೋಪಾಲ ವಿಗ್ರಹ ಇದ್ದರೆ ಏನು ಮಾಡಬೇಕು ಎಂಬುದು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದ ವಿವಿಧ ಭಾಗಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ (Krishna Janmashtami) ಸಡಗರ ಆರಂಭವಾಗಿದೆ. ಎಲ್ಲರ ಮನೆಗಳಲ್ಲಿ ಸಿದ್ದತೆ ನಡೆಯುತ್ತಿದ್ದು, ಕೆಲವರು ಇಂದು ಆಚರಿಸಿದರೆ, ಇನ್ನೂ ಕೆಲವರು ನಾಳೆ ಆಚರಿಸಲಿದ್ದಾರೆ. ಈ ಸಾಮಾನ್ಯವಾಗಿ ಎಲ್ಲರೂ ಬಾಲ ಗೋಪಾಲನ ವಿಗ್ರಹವನ್ನು (Bal Gopal Idol) ಅಥವಾ ಲಡ್ಡು ಗೋಪಾಲನ ವಿಗ್ರಹವನ್ನು ಪೂಜೆ ಮಾಡುತ್ತಾರೆ. ಆದರೆ ಬಾಲ ಗೋಪಾಲ ವಿಗ್ರಹ ಇರುವ ಮನೆಯಲ್ಲಿ ಹೆಚ್ಚು ವಿಶೇಷವಾಗಿ ಪೂಜೆ (Pooja) ಮಾಡಲಾಗುತ್ತದೆ. ಕೇವಲ ಕೃಷ್ಣ ಜನ್ಮಾಷ್ಟಮಿಯ ದಿನ ಮಾತ್ರ ಅಲ್ಲ ಪ್ರತಿದಿನ ಸಹ ಈ ಬಾಲ ಗೋಪಾಲನಿಗೆ ಸರಿಯಾದ ಪೂಜೆ ಮಾಡಿದರೆ ಯಶಸ್ಸು ಲಭಿಸುತ್ತದೆ. ಅದರಲ್ಲೂ ಈ ವಿಶೇಷ ದಿನದಂದೂ ಕೆಲ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ, ಸಂಪತ್ತು ಅಭಿವೃದ್ದಿಯಾಗುತ್ತದೆ. ಹಾಗಾದ್ರೆ ಬಾಲ ಗೋಪಾಲ ವಿಗ್ರಹ ಇದ್ದರೆ ಏನು ಮಾಡಬೇಕು ಎಂಬುದು ಇಲ್ಲಿದೆ.

ತಪ್ಪದೇ ಸ್ನಾನ ಮಾಡಿಸಿ

ಮನೆಯಲ್ಲಿ ಬಾಲಗೋಪಾಲನ ವಿಗ್ರಹವಿದ್ದರೆ ಅದಕ್ಕೆ ಪ್ರತಿದಿನ ಸ್ನಾನ ಮಾಡಿಸುವುದು ಕಡ್ಡಾಯ. ಕೆಲವೊಂದು ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದರೆ ಈ ಕೃಷ್ಣ ಜನ್ಮಾಷ್ಟಮಿಯಂದು ನೀವು ಸಣ್ಣ ಶಂಖವನ್ನು ತೆಗೆದುಕೊಂಡು ಅದಕ್ಕೆ ಮಡಿ ನೀರನ್ನು ಅಂದರೆ ಶುದ್ಧವಾದ ನೀರನ್ನು ತುಂಬಿಸಿ. ನಂತರ ಒಂದು ತಟ್ಟೆಯಲ್ಲಿ ಈ ಬಾಲ ಗೋಪಾಲನ ವಿಗ್ರಹವನ್ನು ಇಟ್ಟು ಸ್ನಾನ ಮಾಡಿಸಿ. ನೀವು ಕೃಷ್ಣ ಜನ್ಮಾಷ್ಟಮಿಯಂದು ಹಾಲಿನಿಂದ ಸಹ ಬಾಲ ಗೋಪಾಲನ ಸ್ನಾನ ಮಾಡಿಸಬಹುದು.

ಹೊಸ ಬಟ್ಟೆಯನ್ನು ಹಾಕಿ

ಸ್ನಾನದ ನಂತರ ಹೇಗೆ ನಾವು ಬಟ್ಟೆಯನ್ನು ಹಾಕುತ್ತೇವೆಯೋ ಹಾಗೆಯೇ ಬಾಲ ಗೋಪಾಲನಿಗೆ ಸಹ ಹೊಸ ಬಟ್ಟೆಯನ್ನು ಹಾಕಬೇಕು. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಕೃಷ್ಣನಿಗೆ ಯಾವಾಗಲೂ ಶುದ್ಧವಾದ ಬಟ್ಟೆಯನ್ನು ಹಾಕಬೇಕು. ಯಾವುದೇ ಕಾರಣಕ್ಕೂ ಬಟ್ಟೆ ಒಗೆಯದೇ ಅದನ್ನು ಮತ್ತೆ ಮರೆತು ಸಹ ಹಾಕಬೇಡಿ.

ಇದನ್ನೂ ಓದಿ: ಕೃಷ್ಣನಿಗೆ ಬೆಣ್ಣೆ ಅಂದ್ರೆ ಯಾಕ್ ಅಷ್ಟು ಇಷ್ಟ? ಅದಕ್ಕೂ ಒಂದು ಮಹತ್ವವಿದೆಯಂತೆ

ಅಲಂಕಾರವಿಲ್ಲದೇ ಕೃಷ್ಣನ ಪೂಜೆ ಅಪೂರ್ಣ

ನೀವು ಕೃಷ್ಣನನ್ನ ಗಮನಿಸಿದ್ದೀರಾ? ಯಾವಾಗಲೂ ಸುಂದರವಾಗಿ ಕಾಣುತ್ತಾನೆ. ಹಾಗೆಯೇ ಬಾಲ ಗೋಪಾಲನನ್ನ ನಾವು ಸಿಂಗರಿಸಬೇಕು. ವಿಗ್ರಹಕ್ಕೆ ಶ್ರೀಗಂಧ ಹಚ್ಚಿ, ಆಭರಣಗಳನ್ನು ಹಾಕಿ ಅಲಂಕಾರ ಮಾಡಬೇಕು. ಅಲ್ಲದೇ, ಶ್ರೀ ಕೃಷ್ಣನ ಆರಾಧನೆಯು ಮೇಕಪ್​ ಇಲ್ಲದೇ ಪೂರ್ಣವಾಗುವುದಿಲ್ಲ, ಹಾಗಾಗಿ ಶ್ರೀಕೃಷ್ಣನಿಗೆ ಕುಂಕುಮ, ನವಿಲುಗರಿಯನ್ನು ಸಹ ಹಾಕಿ ಅಲಂಕಾರ ಮಾಡಿ ಪೂಜೆ ಮಾಡಬೇಕು.

ಬೆಣ್ಣೆಯ ನೈವೇದ್ಯ ಬಹಳ ಉತ್ತಮ

ಯಾವುದೇ ಹಬ್ಬ ಅಥವಾ ಪೂಜೆಯಾಗಲಿ ನೈವೇದ್ಯ ಇಲ್ಲದೇ ಆಗುವುದಿಲ್ಲ. ಅದರಲ್ಲೂ ಕೃಷ್ಣನಿಗೆ ವಿಶೇಷವಾಗಿ ನೈವೇದ್ಯ ಮಾಡಬೇಕು. ಬೆಣ್ಣೆ, ಮೊಸರು, ಪಾಯಸ, ಬರ್ಫಿ, ಲಡ್ಡು ಹೀಗೆ ವಿಶೇಷ ಸ್ವೀಟ್​ಗಳನ್ನು ನೈವೇದ್ಯ ಮಾಡಬೇಕು. ಮುಖ್ಯವಾಗಿ ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಸಾಧ್ಯವಾದಷ್ಟು ಬೆಣ್ಣೆಯಿಂದ ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಅವಲಕ್ಕಿಯ ಪದಾರ್ಥಗಳನ್ನು ನೀಡಬೇಕು.

ಇದನ್ನೂ ಓದಿ: ಬೆಂಗಳೂರಲ್ಲಿ ನಿಮ್ಮ ಮನೆ ಬಳಿಯೇ ಇರೋ ಈ ಅಂಗಡಿಗಳಲ್ಲಿ ಸಖತ್ ಸ್ವೀಟ್ಸ್ ಸಿಗುತ್ತಂತೆ ನೋಡಿ

ಆರತಿ ಮಾಡಿ ಅಥವಾ ದೀಪ ಬೆಳಗಿಸಿ

ಹಬ್ಬದ ದಿನ ಸಾಮಾನ್ಯವಾಗಿ ಆರತಿ ಮಾಡುತ್ತೇವೆ. ಆದರೆ ಬಾಲ ಗೋಪಾಲ ಮನೆಯಲ್ಲಿ ಇದ್ದರೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಆರತಿ ಮಾಡುವುದು ಉತ್ತಮ. ಆರತಿ ಸಾಧ್ಯವಾಗುವುದಿಲ್ಲ ಎಂದರೆ ದೀಪ ಬೆಳಗುವುದನ್ನ ತಪ್ಪಿಸಬೇಡಿ. ಅಲ್ಲದೇ, ಕೃಷ್ಣನ ವಿಗ್ರಹದ ಜೊತೆ ರಾಧೆಯ ಫೋಟೋ ಇಟ್ಟರೆ ಇನ್ನೂ ಒಳ್ಳೆಯ ಫಲಗಳು ಲಭಿಸುತ್ತದೆ.
Published by:Sandhya M
First published: