Krishna Janmashtami 2021 :ಇಲ್ಲಿದೆ ಕೃಷ್ಣ ಜನ್ಮಾಷ್ಟಮಿಯ ಮಹತ್ವ ಹಾಗೂ ಆಚರಣೆ ಮಾಡುವ ವಿಧಾನ

Janmashtami: ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲೂ ಸಹ ವಿಶೇಷವಾಗಿ ಜನರು ಆಚರಿಸುತ್ತಾರೆ. ಈ ದಿನ, ಶ್ರೀಕೃಷ್ಣನ ಭಕ್ತರು 'ಜಂಕೀಸ್' ಹಾಕಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Festival: ಇದು ಶ್ರಾವಣ ಮಾಸ. ಈ ಮಾಸ ಬಂತೆಂದರೆ  ಒಂದರ ಮೇಲೊಂದು ಹಬ್ಬಗಳು ಬರುತ್ತಲೇ ಇರುತ್ತದೆ. ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನದ ನಂತರ ಬರುವ ಮುಖ್ಯವಾದ ಹಬ್ಬ ಎಂದರೆ ಅದು ಕೃಷ್ಣ ಜನ್ಮಾಷ್ಟಮಿ.  ಇನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ವಿಷ್ಣುವಿನ  ಅವತಾರವಾದ ಶ್ರೀ ಕೃಷ್ಣನಿಗೆ ಪವಿತ್ರವಾದ ಸ್ಥಾನವಿದೆ,  ಆತನನ್ನ ಜನರು ಪರಮಾತ್ಮನೆಂದು ಆರಾಧಿಸುತ್ತಾರೆ.  ಕೃಷ್ಣನ ಜನ್ಮದಿನವನ್ನು ಪ್ರತಿವರ್ಷ ಜನ್ಮಾಷ್ಟಮಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲೂ ಸಹ ವಿಶೇಷವಾಗಿ ಜನರು ಆಚರಿಸುತ್ತಾರೆ. ಈ ದಿನ, ಶ್ರೀಕೃಷ್ಣನ ಭಕ್ತರು 'ಜಂಕೀಸ್' ಹಾಕಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಶ್ರೀಕೃಷ್ಣನ ಜನ್ಮದಿನವನ್ನು ಪ್ರತಿವರ್ಷ ಭಾದ್ರಪದ ತಿಂಗಳಿನ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ, ಇದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಬರುತ್ತದೆ. ಈ ವರ್ಷ, ಹಬ್ಬವನ್ನು ಸೋಮವಾರ, ಆಗಸ್ಟ್ 30 ರಂದು ಆಚರಣೆ ಮಾಡಲಾಗುತ್ತಿದೆ. 

ದೇಶದಾದ್ಯಂತ ಈ ಹಬ್ಬವನ್ನು   ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಭಕ್ತರು ಭಗವಂತನ ಜನ್ಮ ವಾರ್ಷಿಕೋತ್ಸವವನ್ನು ಸಂತೋಷದಿಂದ ಆಚರಣೆ ಮಾಡಿ, ಆನಂದಪಡುತ್ತಾರೆ.

ಈ ಸಂದರ್ಭದಲ್ಲಿ, ಭಕ್ತರು ಉಪವಾಸ ಆಚರಣೆ ಮಾಡುತ್ತಾರೆ.  ರಾತ್ರಿ ಪೂಜೆಯನ್ನು ಮಾಡುವ  ಜನರು ಭಗವಾನ್ ಕೃಷ್ಣನಿಗೆ 'ಭೋಗ್' ತಿನ್ನಿಸಿದ ನಂತರ ಉಪವಾಸವನ್ನು ಬಿಡುತ್ತಾರೆ. ಹಿಂದೂ ಶಾಸ್ತ್ರದಲ್ಲಿ, ಜನ್ಮಾಷ್ಟಮಿಯಂದು ಮಾಡುವ ಉಪವಾಸಕ್ಕೆ 'ವ್ರತರಾಜ್' ಸ್ಥಾನಮಾನ ನೀಡಲಾಗಿದೆ. ಈ ಉಪವಾಸವನ್ನು ಆಚರಿಸುವುದರಿಂದ ವರ್ಷವಿಡೀ ಅನೇಕ ಉಪವಾಸಗಳನ್ನು ಮಾಡುವುದಕ್ಕಿಂತ ಹೆಚ್ಚಿನ ಫಲ ಲಭಿಸುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಬಾಳೆಹಣ್ಣಿನ ಟೀ ಸೇವಿಸಿ, ದೇಹದಲ್ಲಿ ಕಂಡುಬರುವ ಈ ಸಮಸ್ಯೆಯನ್ನು ಹೋಗಲಾಡಿಸಿ

ಆದರೆ ಪ್ರತಿ ವರ್ಷ ಜನ್ಮಾಷ್ಟಮಿ ವ್ರತವನ್ನು 2 ದಿನಗಳವರೆಗೆ ಆಚರಿಸಲಾಗುತ್ತದೆ. ಮೊದಲ ದಿನ ಸ್ಮಾರ್ತ ಸಮುದಾಯದ ಜನರು ವ್ರತವನ್ನು ಆಚರಿಸುತ್ತಾರೆ ಮತ್ತು ಎರಡನೇ ದಿನ ವೈಷ್ಣವ ಸಮುದಾಯದ ಜನರು ವ್ರತವನ್ನು ಆಚರಿಸುತ್ತಾರೆ. ಆದರೆ ಈ ಬಾರಿ  ಪ್ರತಿಯೊಬ್ಬರು ಒಂದೇ ದಿನ ಅಂದರೆ ಆಗಸ್ಟ್ 30 ರಂದು ಜನ್ಮಾಷ್ಟಮಿ ವ್ರತವನ್ನು ಆಚರಿಸಲಿದ್ದಾರೆ.

ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಶುಭ ಮುಹೂರ್ತಗಳು ಹೀಗಿದೆ.

ಅಷ್ಟಮಿ ತಿಥಿ ಆಗಸ್ಟ್‌ 29 ರ ಭಾನುವಾರ ರಾತ್ರಿ 11:25 ರಿಂದ ಆರಂಭವಾಗಲಿದೆ ನಂತರ ಆಗಸ್ಟ್‌ 30 ರ ಸೋಮವಾರ ಮಧ್ಯರಾತ್ರಿ 2:1ಕ್ಕೆ ತಿಥಿ ಪೂರ್ಣವಾಗಲಿದೆ. ಇನ್ನು 2021 ಆಗಸ್ಟ್‌ 30, ಸೋಮವಾರ ರಾತ್ರಿ 11:59 ರಿಂದ ಮುಂಜಾನೆ 12:44 ರವರೆಗೆ ನಿಶಿತ ಕಾಲವಿರಲಿದೆ.

ಪೂಜೆ ಮಾಡುವುದು ಹೇಗೆ?

ಈ ದಿನ, ಬೇಗನೆ ಎದ್ದು ಸ್ನಾನ ಮಾಡಿದ ನಂತರ, ಮನೆಯನ್ನು ಸ್ವಚ್ಛಗೊಳಿಸಿ. ಸ್ವಚ್ಛವಾದ ಮಣೆಯನ್ನು ತೆಗೆದುಕೊಂಡು ಅದರ ಮೇಲೆ ಹಳದಿ ಬಣ್ಣದ ಬಟ್ಟೆಯನ್ನು ಹರಡುತ್ತಾರೆ. ಬಟ್ಟೆ ಹಾಸಿದ ಮಣೆಯ ಮೇಲೆ ಬಾಲ ಗೋಪಾಲನ ವಿಗ್ರಹವನ್ನು ಸ್ಥಾಪನೆ ಮಾಡಲಾಗುತ್ತದೆ. ಇದಕ್ಕೂ ಮೊದಲು, ದೇವರ ಕೋಣೆಯಲ್ಲಿನ ಎಲ್ಲಾ ದೇವತೆಗಳ ಜಲಾಭಿಷೇಕವನ್ನು ಮಾಡಲಾಗುತ್ತದೆ.  ಕೆಲವರು ಇನ್ನು ವಿಭಿನ್ನವಾಗಿ ಮಾಡುವ ಯೋಚನೆಯಲ್ಲಿದ್ದರೆ, ಬಾಲ ಕೃಷ್ಣನನ್ನ ತೊಟ್ಟಿಲಿನಲ್ಲಿ ಹಾಕಿ ಪೂಜೆ ಮಾಡುತ್ತಾರೆ. ಇನ್ನು ಈ ದಿನ , ಲಡ್ಡೂ, ಬೆಣ್ಣೆ ಸೇರಿದಂತೆ ಪರಮಾತ್ಮನ ಇಷ್ಟದ ಆಹಾರ ಪದಾರ್ಥಗಳನ್ನು ಸಮರ್ಪಣೆ ಮಾಡಲಾಗುತ್ತದೆ.



ಕೃಷ್ಣ ಜನ್ಮಾಷ್ಟಮಿಯಂದು, ಶ್ರೀಕೃಷ್ಣನು ಈ ಸಮಯದಲ್ಲಿ ಜನಿಸಿದ ಕಾರಣ ರಾತ್ರಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ, ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಿ. ಶ್ರೀಕೃಷ್ಣನಿಗೆ ಸಕ್ಕರೆ ಕ್ಯಾಂಡಿ, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ.
Published by:Sandhya M
First published: