KPSC Recruitment 2020 : ಆಯುಷ್ ಇಲಾಖೆಯಲ್ಲಿ ಗ್ರೂಪ್ ಎ, ಬಿ, ಮತ್ತು ಸಿ ವೃಂದದ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

KPSC Recruitment 2020 : ಕರ್ನಾಟಕ ಲೋಕಸೇವಾ ಆಯೋಗವು  ಆಯುಷ್‌ ನಿರ್ದೇಶನಾಲಯದಲ್ಲಿನ ಉಳಿಕೆ ಮೂಲ ವೃಂದ ಮತ್ತು ಹೈಕ ವೃಂದದಲ್ಲಿ ಖಾಲಿ ಇರುವ 276 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್​ 14ರವರೆಗೆ ಅರ್ಜಿಸಲ್ಲಿಸಲು ಸಮಯವಕಾಶವನ್ನು ನೀಡಿದೆ.

news18-kannada
Updated:September 9, 2020, 9:08 PM IST
KPSC Recruitment 2020 : ಆಯುಷ್ ಇಲಾಖೆಯಲ್ಲಿ ಗ್ರೂಪ್ ಎ, ಬಿ, ಮತ್ತು ಸಿ ವೃಂದದ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗ
  • Share this:
KPSC Recruitment 2020 : ಕರ್ನಾಟಕ ಲೋಕಸೇವಾ ಆಯೋಗವು ಆಯುಷ್‌ ನಿರ್ದೇಶನಾಲಯದಲ್ಲಿನ ಉಳಿಕೆ ಮೂಲ ವೃಂದ ಮತ್ತು ಹೈ ಕ ವೃಂದದಲ್ಲಿ ಖಾಲಿ ಇರುವ 276 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್​ 14ರವರೆಗೆ ಅರ್ಜಿಸಲ್ಲಿಸಲು ಸಮಯವಕಾಶವನ್ನು ನೀಡಿದೆ.

ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಆಯುರ್ವೇದ / ಹೋಮಿಯೋಪತಿ ವಿಷಯಗಳಲ್ಲಿ ಪ್ರಾಧ್ಯಾಪಕರು / ಸಹ ಪ್ರಾಧ್ಯಾಪಕರು / ಸಹಾಯಕ ಪ್ರಾಧ್ಯಾಪಕರು / ಶುಶ್ರೂಷಕರ ಗ್ರೂಪ್‌ ಎ, ಬಿ ಮತ್ತು ಸಿ ವೃಂದದ ತಾಂತ್ರಿಕ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನೆಡೆಸಲಿದೆ.

ವಿದ್ಯಾರ್ಹತೆ:

ವಿದ್ಯಾರ್ಹತೆ: ಗ್ರೂಪ್ -ಎ, ಬಿ ಮತ್ತು ಸಿ ಹುದ್ದೆಗಳಿಗೆ ಪಿಯುಸಿ/ಡಿಪ್ಲೋಮಾ; ಪದವಿ/ಸ್ನಾತಕೋತ್ತರ ಪದವಿ, ಬಿಎಎಂಎಸ್/ಬಿಹೆಚ್ಎಂಎಸ್/ಬಿಯುಎಂಎಸ್/ಬಿಎನ್ ವೈಎಸ್ ವಿದ್ಯಾರ್ಹತೆಯನ್ನು ಕಾನೂನಿನಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. ಹಿಂದುಳಿದ ವರ್ಗಗಳಿಗೆ ಗರಿಷ್ಟ 38 ವರ್ಷ ಮತ್ತು ಪ.ಜಾ/ಪ.ಪಂ/ಪ್ರವರ್ಗ-1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಲಾಗುವುದು.

ವೇತನದ ವಿವರ:

ಕೆಪಿಎಸ್ಸಿ ಗ್ರೂಪ್ -ಎ, ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,600/-ರಿಂದ 97,100/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ http://www.kpsc.kar.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸೆಪ್ಟೆಂಬರ್ 14,2020ರೊಳಗೆ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-09-2020
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 15-09-2020
Published by: G Hareeshkumar
First published: September 9, 2020, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading