ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕೆ ಏರುತ್ತದೆ? ಇದಕ್ಕೇನು ಕಾರಣ?

ಮಧುಮೇಹ ರೋಗಿಗಳಿಗೆ ಬೆಳಿಗ್ಗೆ ಉಪಹಾರ ಬಹಳ ಮುಖ್ಯ. ಅದೇ ಸಮಯದಲ್ಲಿ, ನೀವು ತಡರಾತ್ರಿಯಲ್ಲಿ ಊಟ ಮಾಡಿದ್ದರೆ, ಇದು ಸಕ್ಕರೆ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಪ್ರತಿ ವಯಸ್ಸಿನ ಜನರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ. ಏಕೆಂದರೆ ಇದು ನಿಧಾನವಾಗಿ ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಧುಮೇಹದಲ್ಲಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಅನಿಯಂತ್ರಿತವಾದಾಗ, ಅದು ರೋಗಿಗೆ ಮಾರಕವಾಗಬಹುದು. ಕೆಲವು ಜನರ ಸಕ್ಕರೆ ಮಟ್ಟವು ಬೆಳಿಗಿನ ಸಮಯ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದಕ್ಕೆ ಕಾರಣವೇನು? ಹೇಗೆ ನಿಯಂತ್ರಿಸುವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

  ರಕ್ತದಲ್ಲಿ ಸಕ್ಕರೆ ಹೆಚ್ಚಾಗಲು ಕಾರಣ:
  ಮಧುಮೇಹವು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಕೆಲವು ಕಾರಣಗಳಿಂದ ಆರೋಗ್ಯವಂತ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಬೆಳಿಗ್ಗೆ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಇದಕ್ಕೆ ಮುಖ್ಯ ಕಾರಣ ಹಾರ್ಮೋನುಗಳನ್ನು ನಿಯಂತ್ರಿಸಲು ರಾತ್ರಿಯಲ್ಲಿಉತ್ಪತಿಯಾಗುವ ಇನ್ಸುಲಿನ್ ಪ್ರಮಾಣ. ಇದೇ ಕಾರಣದಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಮಲಗುವ ಸಮಯದಲ್ಲಿ ವ್ಯಕ್ತಿಯ ದೇಹದಲ್ಲಿ ಗ್ಲುಕಗನ್, ಕಾರ್ಟಿಸೋಲ್ ಮತ್ತು ಎಪಿನ್ಫ್ರಿನ್ ಎಂಬ ಹಾರ್ಮೋನುಗಳು ರೂಪುಗೊಳ್ಳುತ್ತವೆ. ಈ ಕಾರಣದಿಂದ ಬೆಳಗಿನ ವೇಳೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.

  ಮಧುಮೇಹಿ ರೋಗಿಗಳಲ್ಲಿ ಬೆಳಿಗ್ಗೆ ಸಕ್ಕರೆ ಹೆಚ್ಚಳಕ್ಕೆ ಕಾರಣಗಳು:
  ಮಧುಮೇಹ ರೋಗಿಗಳು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಬೇಕು. ರಾತ್ರಿಯಲ್ಲಿ ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದಿದ್ದರೆ, ಅವುಗಳಲ್ಲಿ ಸಕ್ಕರೆ ಮಟ್ಟವೂ ಹೆಚ್ಚಾಗುತ್ತದೆ. ರೋಗಿಯು ಔಷಧಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದರೆ, ಕೆಲವೊಮ್ಮೆ ಅವನು ಹೆಚ್ಚು ಔಷಧಿಗಳನ್ನು ತೆಗೆದುಕೊಂಡಿದ್ದರೆ ಅಥವಾ ಕಡಿಮೆ ತೆಗೆದುಕೊಂಡಿದ್ದರೂ ಸಹ ಅದು ಬೆಳಿಗ್ಗೆ ಸಕ್ಕರೆ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು. ವ್ಯಕ್ತಿಯು ರಾತ್ರಿಯಲ್ಲಿ ಏನು ಸೇವಿಸಿದ್ದಾನೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಇವೆಲ್ಲದರ ಹೊರತಾಗಿ, ಮಧುಮೇಹ ರೋಗಿಯು ರಾತ್ರಿಯಲ್ಲಿ ಸಕ್ಕರೆ ಹೊಂದಿರುವ ಯಾವುದೇ ಆಹಾರವನ್ನು ಸೇವಿಸಿದರೆ, ಅದು ಬೆಳಿಗ್ಗೆ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ.

  ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದು ಹೇಗೆ:
  ಮಧುಮೇಹ ರೋಗಿಗಳಿಗೆ ಬೆಳಿಗ್ಗೆ ಉಪಹಾರ ಬಹಳ ಮುಖ್ಯ. ಅದೇ ಸಮಯದಲ್ಲಿ, ನೀವು ತಡರಾತ್ರಿಯಲ್ಲಿ ಊಟ ಮಾಡಿದ್ದರೆ, ಇದು ಸಕ್ಕರೆ ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ ಊಟವಾದ ಕೂಡಲೇ ನಿದ್ರೆ ಮಾಡಬೇಡಿ. ಸ್ವಲ್ಪ ಹೊತ್ತು ನಡೆಯಿರಿ. ಇದರೊಂದಿಗೆ, ಊಟಕ್ಕೂ ಸಮಯ ನಿಗದಿಪಡಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

  ಹೆಚ್ಚು ಹೊತ್ತು ಹಸಿವಿನಿಂದ ಇರುವುದು ದೇಹದಲ್ಲಿ ಹಠಾತ್ ದೌರ್ಬಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ತಿನ್ನುವುದು ಬಹಳ ಮುಖ್ಯ. ಇದಲ್ಲದೆ, ಹೆಚ್ಚು ದಿನ ಹಸಿವಿನಿಂದ ಇರಬೇಡಿ. ಬೆಳಿಗ್ಗೆ ಉಪಾಹಾರ ಮಾಡಿ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ. ಸರಿಯಾದ ಔಷಧಿಗಳನ್ನು ತಿಳಿದುಕೊಳ್ಳಿ, ಹಾಗೆಯೇ ಎಷ್ಟು ಮತ್ತು ಯಾವಾಗ ಔಷಧಿ ತೆಗೆದುಕೊಳ್ಳಬೇಕೆಂದರ ಬಗ್ಗೆ ಕಾಳಜಿ ಇರಲಿ. ಹಾಗೆಯೇ ಬೆಳಗಿನ ಜಾವ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.
  Published by:zahir
  First published: