• Home
  • »
  • News
  • »
  • lifestyle
  • »
  • Children Health: ಮಕ್ಕಳಿಗೆ ಓಟ್ಸ್‌ ತಿನ್ನಿಸುವ ಮೊದಲು ಈ ವಿಷಯಗಳ ಬಗ್ಗೆ ಎಂದಿಗೂ ಮರೆಯದಿರಿ

Children Health: ಮಕ್ಕಳಿಗೆ ಓಟ್ಸ್‌ ತಿನ್ನಿಸುವ ಮೊದಲು ಈ ವಿಷಯಗಳ ಬಗ್ಗೆ ಎಂದಿಗೂ ಮರೆಯದಿರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಓಟ್ಸ್‌ ಚೆನ್ನಾಗಿ ಮಾರಾಟವಾಗುವ ಆಹಾರವಾಗಿದ್ದರೂ ಇದು ಸಾಕಷ್ಟು ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು.ಓಟ್ಸ್‌ ಧಾನ್ಯವನ್ನ ಕನಿಷ್ಠ ಸಂಸ್ಕರಣೆಗೆ ಒಳಪಡಿಸಲಾಗಿರುತ್ತೆ ಹಾಗೂ ಅದು ಗೋಧಿ ಮುಕ್ತವಾಗಿರುತ್ತದೆ. ಹಾಗಾಗಿ ಇದನ್ನು ಅನೇಕರು ಡಯೆಟ್‌ ನಲ್ಲಿ ಬಳಸುತ್ತಿರುತ್ತಾರೆ. ಆದರೆ ಶಿಶುಗಳಿಗೆ ಓಟ್ಸ್‌ನಿಂದ ಕೆಲವು ಅಡ್ಡಪರಿಣಾಮಗಳಿವೆ ಅನ್ನೋದನ್ನು ಶಿಶುಗಳಿಗೆ ಓಟ್‌ ಮೀಲ್‌ ಪರಿಚಯಿಸುವ ಮೊದಲು ಅರಿತಿರಬೇಕು.

ಮುಂದೆ ಓದಿ ...
  • Share this:

ಓಟ್ಸ್ ಅನ್ನೋದು ಅತ್ಯತ್ತಮ ಪ್ರೋಟೀನ್‌ ಯುಕ್ತ ಆಹಾರ (Protein Rich Food) ಅಂತ ಹೇಳಲಾಗುತ್ತೆ. ಹೆಚ್ಚಿನ ಫೈಬರ್, ಕಡಿಮೆ ಕೊಬ್ಬು ಮತ್ತು ಸಸ್ಯ ಆಧಾರಿತ ಪ್ರೋಟೀನ್ ಸೇರಿದಂತೆ ಅಮೂಲ್ಯವಾದ ಪೋಷಣೆಯ ಸಸ್ಯ ಆಧಾರಿತ ಮೂಲವಾಗಿದೆ ಎಂದು ನಮಗೆಲ್ಲರಿಗೂ ಗೊತ್ತು. ಹಾಗಾಗಿ ಬಹುತೇಕರು ಮಕ್ಕಳಿಗೆ (Children) ಅದರಲ್ಲೂ ಶಿಶುಗಳಿಗೆ ಓಟ್ಸ್‌ ಒಂದು ಮೌಲ್ಯಯುತ ಆಹಾರ ಅಂತ ಪರಿಗಣಿಸೋದ್ರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅದು ತಪ್ಪು ಅನ್ನೋದು ನಿಮಗೆ ಗೊತ್ತಿರಲಿ. ಓಟ್ಸ್‌ ಚೆನ್ನಾಗಿ ಮಾರಾಟವಾಗುವ ಆಹಾರವಾಗಿದ್ದರೂ (Food) ಇದು ಸಾಕಷ್ಟು ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು.


ಓಟ್ಸ್‌ ಧಾನ್ಯವನ್ನ ಕನಿಷ್ಠ ಸಂಸ್ಕರಣೆಗೆ ಒಳಪಡಿಸಲಾಗಿರುತ್ತೆ ಹಾಗೂ ಅದು ಗೋಧಿ ಮುಕ್ತವಾಗಿರುತ್ತದೆ. ಹಾಗಾಗಿ ಇದನ್ನು ಅನೇಕರು ಡಯೆಟ್‌ ನಲ್ಲಿ ಬಳಸುತ್ತಿರುತ್ತಾರೆ. ಆದರೆ ಶಿಶುಗಳಿಗೆ ಓಟ್ಸ್‌ನಿಂದ ಕೆಲವು ಅಡ್ಡಪರಿಣಾಮಗಳಿವೆ ಅನ್ನೋದನ್ನು ಶಿಶುಗಳಿಗೆ ಓಟ್‌ ಮೀಲ್‌ ಪರಿಚಯಿಸುವ ಮೊದಲು ಅರಿತಿರಬೇಕು.


ತಜ್ಞರ ಪ್ರಕಾರ ಇದು “ಮಾರ್ಕೆಟಿಂಗ್‌ ಗಿಮಿಕ್”‌ !
ಈ ಬಗ್ಗೆ Diet2Nurish ನ ಸಹ-ಸಂಸ್ಥಾಪಕಿ ಮತ್ತು ಮುಖ್ಯ ಆಹಾರ ತಜ್ಞರಾದ ಡಾ.ಪ್ರಿಯಾಂಕಾ ಜೈಸ್ವಾಲ್ ಅಂಬೆಗಾಲಿಡುವ ಶಿಶುಗಳ ಆಹಾರದಲ್ಲಿ ಓಟ್ಸ್‌ನ ಅನಾನುಕೂಲಗಳ ಬಗ್ಗೆ ಮಾತನಾಡುತ್ತಾ, ಅದನ್ನು "ಮಾರ್ಕೆಟಿಂಗ್ ಗಿಮಿಕ್" ಎನ್ನುತ್ತಾರೆ.


ಸಾಮಾನ್ಯವಾಗಿ ಶಿಶುಗಳ ಬೆಳವಣಿಗೆ ಅತ್ಯಂತ ವೇಗವಾಗಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡರೆ ಶಿಶುಗಳಿಗೆ ನೀಡುವ ಆಹಾರವು ಪೌಷ್ಟಿಕ ಆಹಾರಗಳಿಂದ ತುಂಬಿರಬೇಕು. ಅವರಿಗೆ ಉತ್ತಮ ಪ್ರಮಾಣದ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುವ ಆಹಾರದ ಅಗತ್ಯವಿದೆಯೇ ಹೊರತು ಓಟ್ಸ್‌ ನಲ್ಲಿರುವ ಫೈಬರ್‌ ಹಾಗೂ ಆಂಟಿಆಕ್ಸಿಡೆಂಟ್‌ಗಳಲ್ಲ ಎನ್ನುತ್ತಾರೆ ಡಾ. ಜೈಸ್ವಾಲ್.


ಓಟ್ಸ್‌ ಜೀರ್ಣಿಸಿಕೊಳ್ಳಲು ಮಗುವಿಗೆ ಕಷ್ಟವಾಗಬಹುದು
ಇನ್ನು, ಡಾ. ಜೈಸ್ವಾಲ್ ಪ್ರತಿಯೊಂದು ಆಹಾರವನ್ನು ಮಗುವಿನ ಅಗತ್ಯತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಲಾಗಿದೆ. ಅಂತೆಯೇ, ವಾಸ್ತವವಾಗಿ ಅಗತ್ಯವಿರುವ ಮಗುವಿನ ಆಹಾರದಲ್ಲಿ ಓಟ್ಸ್ ಅನ್ನು ಸೇರಿಸಲಾಗುತ್ತದೆ. ಅದರ ಮೂಲದಲ್ಲಿ, ಓಟ್ಸ್ ಮಗುವಿನ ನೈಸರ್ಗಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: Birth Weight: ನವಜಾತ ಶಿಶುಗಳ ತೂಕದಲ್ಲಿ ಈ ವ್ಯತ್ಯಾಸ ಆದ್ರೆ ಅಪಾಯ ಗ್ಯಾರಂಟಿಯಂತೆ


ಆದರೆ ಇತರ ಅಗತ್ಯ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಓಟ್ಸ್‌ನಲ್ಲಿ ಕಡಿಮೆ ಪ್ರೋಟೀನ್ ಇದೆ. ಇದಲ್ಲದೆ, ಓಟ್ಸ್ ಜೀರ್ಣಾಂಗ ವ್ಯವಸ್ಥೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅಂದರೆ ನೀವು ನಿಮ್ಮ ಮಗುವಿಗೆ ಓಟ್ಸ್ ಅನ್ನು ತಿನ್ನಿಸುತ್ತಿದ್ದರೆ, ಮಗು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದಾಗಿ, ಮಗುವಿಗೆ ಅಷ್ಟು ಬೇಗನೆ ಹಸಿವು ಉಂಟಾಗುವುದಿಲ್ಲ ಮತ್ತು ಮುಂದಿನ ಊಟವನ್ನು ಅದು ಬಿಟ್ಟುಬಿಡುತ್ತದೆ ಎನ್ನುತ್ತಾರೆ.


ಸಣ್ಣ ಮಕ್ಕಳಿಗಾಗಿ ಕೆಲವು ಪರ್ಯಾಯ ಆಯ್ಕೆಗಳನ್ನು ಸೂಚಿಸುತ್ತಾರೆ ಡಾ. ಜೈಸ್ವಾಲ್. ಉದಾಹರಣೆಗೆ ಸಾಬಕ್ಕಿ, ಹಸಿರು ತರಕಾರಿಗಳು ಮತ್ತು ಹಣ್ಣುಗಳು ವಾಸ್ತವವಾಗಿ ಉತ್ತಮ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ಮಗುವಿಗೆ ಅಗತ್ಯವಿರುವ ಇತರ ಪೌಷ್ಟಿಕಾಂಶದ ಅಂಶಗಳನ್ನು ಒಳಗೊಂಡಿರುತ್ತವೆ. ಈ ಮಾರ್ಕೆಟಿಂಗ್ ಸ್ಟಂಟ್‌ಗಳಿಗೆ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗುವುದಕ್ಕಿಂತ, ನಾವು ನಮ್ಮ ಪ್ರಾಚೀನ ಬೇರುಗಳಿಗೆ ಹಿಂತಿರುಗಬೇಕಾಗಿದೆ. ಬೆಳೆಯುತ್ತಿರುವ ಮಗುವಿಗೆ ಭಾರತೀಯ ಆಹಾರ ಪದ್ಧತಿ ಶಕ್ತಿಯುತ ಮತ್ತು ಅತ್ಯಂತ ಪೌಷ್ಟಿಕವಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.


ಬದಲಾದ ಆಹಾರ ಪದ್ಧತಿ 
ಇಂದು ಎಲ್ಲರೂ ಎಲ್ಲದಕ್ಕೂ ವಿದೇಶಿಯರನ್ನು ಅನುಸರಿಸೋದು ಕಾಮನ್‌ ಆಗಿಬಿಟ್ಟಿದೆ. ನಮ್ಮ ಶ್ರೇಷ್ಠವಾದ ಪರಂಪರೆಯನ್ನು ಬಿಟ್ಟು ಪಾಶ್ಚಿಮಾತ್ಯರತ್ತ ವಾಲುವುದು ಸಾಮಾನ್ಯವಾಗಿದೆ. ಇದರಲ್ಲಿ ವೇಷಭೂಷಣ, ನಡವಳಿಕೆ, ಜೀವನಶೈಲಿಯ ಜೊತೆ ಆಹಾರವೂ ಸೇರಿದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ನಮ್ಮ ಮೂಲವನ್ನು ಮರೆಯಬಾರದು ಅನ್ನೋದನ್ನು ನೆನಪುಟ್ಟುಕೊಳ್ಳಬೇಕು.


ಇದನ್ನೂ ಓದಿ:  Child Care: 1 ವರ್ಷ ಆಗೋಕೆ ಮೊದ್ಲೆ ಮಕ್ಕಳಿಗೆ ಈ ಆಹಾರಗಳನ್ನು ಕೊಡಲೇಬೇಡಿ


ನಮ್ಮಲ್ಲಿರುವ ಪದ್ಧತಿಗಳೇ ಅತ್ಯಂತ ಶ್ರೇಷ್ಠವಾದದ್ದು ಅನ್ನೋದನ್ನು ಜಗತ್ತೇ ಒಪ್ಪಿಕೊಳ್ಳುವ ಹೊತ್ತಿನಲ್ಲಿ ನಾವು ನಮ್ಮತನವನ್ನು ಬಿಡಬಾರದು. ಆಹಾರದ ವಿಷಯದಲ್ಲೂ ಅಷ್ಟೇ, ಮಾರ್ಕೆಟಿಂಗ್‌ ಗಿಮಿಕ್‌ ಗಳಿಗೆ ಮಾರುಹೋಗಿ ಎಲ್ಲೆಲ್ಲಿಯದೋ ಆಹಾರವನ್ನು ಸೇವಿಸೋದಕ್ಕಿಂತ ನಮ್ಮ ಸುತ್ತಲಿನ, ನಮ್ಮ ಪ್ರದೇಶದ ಆಹಾರಗಳನ್ನು ಸೇವಿಸುವುದು ಅತ್ಯಂತ ಒಳ್ಳೆಯದೆಂಬುದು ತಜ್ಞರ ಅಭಿಪ್ರಾಯ.

Published by:Ashwini Prabhu
First published: