Netra Suraksha: ನೀವು ಡಯಾಬಿಟೀಸ್‌ನೊಂದಿಗೆ ಜೀವಿಸುತ್ತಿದ್ದರೆ, ನೀವು ತಿಳಿದಿರಲೇಬೇಕಾದ ಕಣ್ಣಿನ ಸಮಸ್ಯೆಗಳು ಇಲ್ಲಿವೆ

ಇದೊಂದು ಸಾಮಾನ್ಯ ಮತ್ತು ನೋವುರಹಿತ ಕಣ್ಣು ಪರೀಕ್ಷೆ ಆಗಿರುತ್ತದೆ ಹಾಗೂ ಅದು ಡಯಾಬಿಟಿಕ್ ರೆಟಿನೋಪಥಿ ಮತ್ತು ದೃಷ್ಟಿಹೀನತೆಯಿಂದ ದೂರವಿರಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನೀವು ಡಯಾಬಿಟೀಸ್ ಹೊಂದಿರುವಾಗ, ನಿಮ್ಮ ಮಾನಸಿಕ ಚೆಕ್‌ಲಿಸ್ಟ್ ಬಹುದೊಡ್ಡದೇ ಆಗಿರುತ್ತದೆ: ರಕ್ತದ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುವ ಸಮಯ, ಪ್ರತಿ ಊಟಕ್ಕೂ ಕಾರ್ಬೋಹೈಡ್ರೇಟ್‌ಗಳ ಲೆಕ್ಕ ಮಾಡುವುದು, ಔಷಧ ತೆಗೆದುಕೊಳ್ಳುವುದು, ಗ್ಲುಕೋಸ್ ನಿಯಂತ್ರಕದ ಸ್ಟ್ರಿಪ್‌ಗಳನ್ನು ತರುವುದು, ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು….ಈ ಪಟ್ಟಿ ಹೀಗೆ ಮುಂದುವರಿಯುತ್ತದೆ. ಇಷ್ಟೆಲ್ಲಾ ಇರುವಾಗ, ಕಣ್ಣಿನ ಸಮಸ್ಯೆಗಳಿಗೆ ಮತ್ತು ದೃಷ್ಟಿಹೀನತೆಗೆ ಕಾರಣವಾಗುವ ಡಯಾಬಿಟೀಸ್‌ನ ತೊಡಕುಗಳಂತಹ ಸಂಗತಿಗಳಿಗೆ ಹೆಚ್ಚಿನ ಗಮನ ಕೊಡದೇ ನಿರ್ಲಕ್ಷಿಸುವುದು ಸುಲಭವಾಗುತ್ತದೆ. ಅಥವಾ, ಆ ವಿಚಾರಕ್ಕೆ, ಯಾವುದೇ ಡಯಾಬಿಟೀಸ್ ಸಮಸ್ಯೆಗಳು ಸ್ವಾಭಾವಿಕವಾಗಿ ಕ್ರಮೇಣ ಕಂಡುಬರುತ್ತವೆ. ಅವು ನಿಮ್ಮ ಮೇಲೆ ಸವಾರಿ ಮಾಡುತ್ತವೆ ಹಾಗೂ ಅವುಗಳನ್ನು ಇನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಮಾತ್ರ ನೀವು ಅದನ್ನು ಗಮನಿಸುತ್ತೀರಿ…..ಅಷ್ಟೊತ್ತಿಗಾಗಲೇ ಆಗಬಾರದ ಹಾನಿ ಆಗಿಹೋಗಿರುತ್ತದೆ.

  ನಿಮಗೆ ಮಾನಸಿಕವಾಗಿ ಭೀತಿಪಡಿಸಲು ನಾವು ಬಯಸುವುದಿಲ್ಲ. ಆದರೆ, ನಿಮಗೆ ಮಾಹಿತಿ ನೀಡಲು ಬಯಸುತ್ತೇವೆ. ಹಾಗಾಗಿ, ನಿಮ್ಮ ಮನಸನ್ನು ಹಗುರವಾಗಿಸಿಕೊಳ್ಳಿ. ನೀವು ಈ ಲೇಖನವನ್ನು ಓದಿದ ನಂತರ ಮಾಡಬೇಕಿರುವುದು ಒಂದೇ ಸಂಗತಿ – ನಿಮ್ಮ ಫೋನ್‌ ಕ್ಯಾಲೆಂಡರ್‌ನಲ್ಲಿರುವ ಕ್ಯಾಲೆಂಡರ್ ಅನ್ನು ನಿಮ್ಮ ವಾರ್ಷಿಕ ಕಣ್ಣಿನ ಪರೀಕ್ಷೆಗೆ (ನೇತ್ರ ವೈದ್ಯರ ಬಳಿ, ಕನ್ನಡಕದ ಅಂಗಡಿಗಳಲ್ಲಿ ಅಲ್ಲ!) ಗುರುತು ಮಾಡಿಕೊಳ್ಳಿ ಮತ್ತು ಅದನ್ನು ಅನುಸರಿಸಿ. ಸೂಚನೆಗಳ ಯಾವುದೇ ಸಮಸ್ಯಾತ್ಮಕ ಪಟ್ಟಿ ಇರುವುದಿಲ್ಲ, ವೈದ್ಯರೊಂದಿಗೆ ನೀವು ಮುಚ್ಚಿಡುವ ಅಗತ್ಯವಿಲ್ಲ ಹಾಗೂ ಲಕ್ಷಣಗಳ ಸುತ್ತ ಯಾವುದೇ ಅತಿಯಾದ ಎಚ್ಚರಿಕೆಗಳು ಇರುವುದಿಲ್ಲ.

  ಕೆಳಗಿರುವ ಪಟ್ಟಿಯು ಭಯಪಡಿಸುವಂತೆ ಕಾಣಬಹುದು, ಆದರೆ ಭಯಪಡುವ ಅಗತ್ಯವಿಲ್ಲ. ಡಯಾಬಿಟೀಸ್ ರೋಗವು ಕಣ್ಣಿನಲ್ಲಿ ಉಂಟುಮಾಡುವ ಸಮಸ್ಯೆಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು, ಮತ್ತು ಶೀಘ್ರದಲ್ಲೇ ಪತ್ತೆಹಚ್ಚಿದರೆ ಸುಲಭವಾಗಿ ಗುಣಪಡಿಸಬಹುದು. ಬಹುತೇಕ ಸಮಸ್ಯೆಗಳನ್ನು ತಡೆಗಟ್ಟಬಹುದು ಆದರೆ ಡಯಾಬಿಟೀಸ್ ಇರುವ ಸಾಕಷ್ಟು ಜನರು ಇದನ್ನು ಅರಿತಿಲ್ಲ. ಈ ಅರಿವಿನ ಕೊರತೆಯನ್ನು ನಾವು ನೀಗಿಸುತ್ತೇವೆ. 

  ವಿಶ್ವದಾದ್ಯಂತದ ಕಾರ್ಯನಿರ್ವಹಣೆಯ ವಯಸ್ಸಿನ ಜನರ ಕುರುಡುತನಕ್ಕೆ ಅತ್ಯಂತ ಪ್ರಮುಖ ಕಾರಣವಾಗಿರುವ, ಡಯಾಬಿಟೀಸ್‌ನ ಒಂದು ಪರಿಚಿತ ಸಮಸ್ಯೆ ಆಗಿರುವ ಡಯಾಬಿಟಿಕ್ ರೆಟಿನೋಪಥಿಯ ಸಮಸ್ಯೆಯನ್ನು ಪರಿಹರಿಸಲು ವೈದ್ಯಕೀಯ ಕ್ಷೇತ್ರ, ನೀತಿ ನಿರೂಪಕರು ಮತ್ತು ಥಿಂಕ್ ಟ್ಯಾಂಕ್‌ಗಳ ಪರಿಣತರನ್ನು ಒಂದೆಡೆ ತರುವುದಕ್ಕಾಗಿ Novartis ಸಹಯೋಗದೊಂದಿಗೆ Network18, 'Netra Suraksha' - India Against Diabetes ಉಪಕ್ರಮವನ್ನು ಆರಂಭಿಸಿದೆ. ಸ್ವತಃ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯ ಮತ್ತು ದೃಷ್ಟಿಯ ಕಾಳಜಿಯನ್ನು ನೀವು ಮಾಡುವಂತೆ, ನಿಮ್ಮನ್ನು ಸಮರ್ಥರನ್ನಾಗಿಸುವ ಧ್ಯೇಯದೊಂದಿಗೆ ಈ ಉಪಕ್ರಮವು ದುಂಡು ಮೇಜಿನ ಸಂವಾದಗಳು, ವಿವರಣಾತ್ಮಕ ವೀಡಿಯೊಗಳು ಮತ್ತು ಮಾಹಿತಿಪೂರ್ಣ ಲೇಖನಗಳನ್ನು ಪ್ರಸಾರ ಮಾಡುವ ಮೂಲಕ ಮಾಹಿತಿಯನ್ನು ಒದಗಿಸುತ್ತಿದೆ.

  ಅಂತಿಮವಾಗಿ, ಕಣ್ಣುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಮೊದಲು ತಿಳಿಯೋಣ.

  ಕಣ್ಣು ಎಂಬುದು ಒಂದು ಪ್ರಬಲ ಹೊರ ಪದರದಿಂದ ಆವೃತ್ತವಾಗಿದೆ. ಕಣ್ಣಿನ ಮುಂಭಾಗದಲ್ಲಿರುವ ಸ್ಪಷ್ಟವಾದ, ಬಾಗಿದ ಹೊದಿಕೆಯನ್ನು ಕಾರ್ನಿಯಾ (ಅಕ್ಷಿಪಟಲ) ಎನ್ನುವರು. ಬೆಳಕನ್ನು ಕೇಂದ್ರೀಕರಿಸುವುದರ ಜೊತೆ ಕಣ್ಣನ್ನು ರಕ್ಷಿಸುವುದೂ ಸಹ ಇದರ ಮುಖ್ಯ ಕಾರ್ಯವಾಗಿದೆ1.

  ಬೆಳಕು ಕಾರ್ನಿಯಾದ ಮೂಲಕ ಹಾದುಹೋದ ನಂತರ, ಅದು ಆಂತರಿಕ ಚೇಂಬರ್ ಎಂದು ಕರೆಯಲಾಗುವ ಸ್ಥಳದ (ಅದು ಸುರಕ್ಷಿತ ದ್ರವ ಎಂದು ಕರೆಯುವ ಜಲೀಯ ದ್ರವ) ಮೂಲಕ ಹೋಗುತ್ತದೆ, ನಂತರ ಪಾಪೆಯ (ಕಣ್ಣುಗುಡ್ಡೆಯಲ್ಲಿರುವ ಒಂದು ರಂಧ್ರ, ಬಣ್ಣವಿರುವ, ಕಣ್ಣಿನ ಒಂದು ಭಾಗ) ಮೂಲಕ, ಆಮೇಲೆ, ಮಸೂರದ ಮೂಲಕ ಹಾದುಹೋಗುತ್ತದೆ, ಅದು ಇನ್ನಷ್ಟು ಕೇಂದ್ರೀಕರಿಸುತ್ತದೆ. ಅಂತಿಮವಾಗಿ, ಕಣ್ಣಿನ ಮಧ್ಯದಲ್ಲಿರುವ ಇನ್ನೊಂದು ದ್ರವಪೂರಿತ ಚೇಂಬರ್ ಮೂಲಕ ಬೆಳಕು ಚಲಿಸುತ್ತದೆ (ವಿಟ್ರೆಯಸ್) ಮತ್ತು ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾಕ್ಕೆ ಬಡಿಯುತ್ತದೆ1.

  ರೆಟಿನಾವು ಅದರ ಮೇಲೆ ಕೇಂದ್ರೀಕೃತವಾದ ಚಿತ್ರಗಳನ್ನು ದಾಖಲಿಸುತ್ತದೆ ಮತ್ತು ಆ ಚಿತ್ರಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವರ್ತಿಸುತ್ತದೆ, ಅದನ್ನು ಮೆದುಳು ಸ್ವೀಕರಿಸುತ್ತದೆ ಮತ್ತು ಡಿಕೋಡ್ ಮಾಡುತ್ತದೆ. ರೆಟಿನಾದ ಒಂದು ಭಾಗವು ವಿವರವನ್ನು ನೋಡುವ ವಿಶೇಷತೆ ಹೊಂದಿದೆ. ಅತಿ-ತೀಕ್ಷ್ಣ ದೃಷ್ಟಿಯ ಈ ಸಣ್ಣ ಜಾಗವನ್ನು ಮ್ಯಾಕ್ಯುಲಾ ಎಂದು ಕರೆಯುವರು. ರೆಟಿನಾದ ಒಳಗೆ ಮತ್ತು ಹಿಂಭಾಗದಲ್ಲಿನ ರಕ್ತನಾಳಗಳು ಮ್ಯಾಕ್ಯುಲಾವನ್ನು ಪೋಷಿಸುತ್ತವೆ1.

  ಡಯಾಬಿಟೀಸ್ ಯಾವ್ಯಾವ ರೀತಿಯಲ್ಲಿ ಕಣ್ಣಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ಈಗ ನೋಡೋಣ.

  ಗ್ಲಾಕೋಮಾ

  ಗ್ಲಾಕೋಮಾ ಎಂಬುದು ಕಣ್ಣಿನ ರೋಗಗಳ ಒಂದು ಗುಂಪು ಆಗಿದ್ದು, ಕಣ್ಣನ್ನು ಮೆದುಳಿಗೆ ಸಂಪರ್ಕಿಸುವ ನರವ್ಯೂಹವಾಗಿರುವ ಕಣ್ಣಿನ ನರವನ್ನು ಅದು ಹಾನಿಪಡಿಸಬಹುದು. ಗ್ಲಾಕೋಮಾವನ್ನು ಹೊಂದುವ ಸಾಧ್ಯತೆಗಳನ್ನು ಡಯಾಬಿಟೀಸ್ ಎರಡು ಪಟ್ಟು ಹೆಚ್ಚಿಸುತ್ತದೆ, ಅದಕ್ಕೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡದಿದ್ದರೆ ಅದು ದೃಷ್ಟಿಹೀನತೆ ಮತ್ತು ಕುರುಡುತನ ಉಂಟುಮಾಡಬಹುದು2

  ಕಣ್ಣಿನಲ್ಲಿ ಒತ್ತಡ ನಿರ್ಮಾಣವಾದಾಗ ಗ್ಲಾಕೋಮಾ ಉಂಟಾಗುತ್ತದೆ. ಈ ಒತ್ತಡವು ರೆಟಿನಾ ಮತ್ತು ಕಣ್ಣಿನ ನರಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಚುಚ್ಚಬಹುದು. ರೆಟಿನಾ ಮತ್ತು ನರವು ಹಾನಿಯಾಗುವುದರಿಂದ ಕ್ರಮೇಣ ದೃಷ್ಟಿ ನಷ್ಟವಾಗುತ್ತಾ ಹೋಗುತ್ತದೆ3.

  ಕ್ಯಾಟರಾಕ್ಟ್ (ಕಣ್ಣಿನ ಪೊರೆ)

  ನಮ್ಮ ಕಣ್ಣಿನಲ್ಲಿರುವ ಮಸೂರಗಳು ಸ್ಪಷ್ಟವಾದ ರಚನೆಗಳಾಗಿದ್ದು ಅವು ತೀಕ್ಷ್ಣ ದೃಷ್ಟಿಯನ್ನು ಒದಗಿಸುತ್ತವೆ – ಆದರೆ ನಮಗೆ ವಯಸ್ಸಾದಂತೆ ಅವು ಮಸುಕಾಗಲು ಪ್ರಾರಂಭಿಸುತ್ತವೆ. ಕ್ಯಾಟರಾಕ್ಟ್‌ಗಳು ಎಂದು ಕರೆಯಲಾಗುವ ಮಸುಕಾದ ಮಸೂರಗಳ ಬೆಳಣಿಗೆಯು ಡಯಾಬಿಟೀಸ್ ಹೊಂದಿರುವವರಲ್ಲಿ 2-5 ಪಟ್ಟು ಹೆಚ್ಚಿರುತ್ತದೆ. ಡಯಾಬಿಟೀಸ್ ಇರುವವರು ಡಯಾಬಿಟೀಸ್ ಇಲ್ಲದಿರುವವರಿಗಿಂತ ಕಡಿಮೆ ವಯಸ್ಸಿನಲ್ಲಿಯೇ ಕ್ಯಾಟರಾಕ್ಟ್‌ಗಳ ಬೆಳವಣಿಗೆಯನ್ನು ಹೊಂದಬಹುದು – ವಾಸ್ತವವಾಗಿ, ಡಯಾಬಿಟೀಸ್ ಇಲ್ಲದಿರುವವರಿಗಿಂತ 15-25 ಪಟ್ಟು ಹೆಚ್ಚಿನ ಅಪಾಯ ಉಂಟಾಗುತ್ತದೆ4. ಹೆಚ್ಚಿನ ಗ್ಲುಕೋಸ್ ಮಟ್ಟವು ನಮ್ಮ ಕಣ್ಣುಗಳ ಮಸೂರಗಳಲ್ಲಿ ಶೇಖರಣೆಯನ್ನು ಉಂಟುಮಾಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಡಯಾಬಿಟೀಸ್ ಇರುವವರು ಕಡಿಮೆ ವಯಸ್ಸಿನಲ್ಲಿ ಕಡಿಮೆ ವಯಸ್ಸಿನಲ್ಲಿ ಕ್ಯಾಟರಾಕ್ಟ್‌ಗೆ ಈಡಾಗುವ ಸಾಧ್ಯತೆ ಹೆಚ್ಚಿದೆ ಹಾಗೂ ನಂತರ ಅದು ವೇಗವಾಗಿ ಬೆಳವಣಿಗೆ ಆಗುತ್ತದೆ5

  ರೆಟಿನೋಪಥಿ


  ಡಯಾಬಿಟೀಸ್‌ನಿಂದ ಉಂಟಾಗುವ ರೆಟಿನಾದ ಎಲ್ಲಾ ಸಮಸ್ಯೆಗಳಿಗೆ ಇರುವ ಒಂದು ಸಾಮಾನ್ಯ ಪದ ಎಂದರೆ ಅದು ಡಯಾಬಿಟಿಕ್ ರೆಟಿನೋಪಥಿ. ರೆಟಿನೋಪಥಿಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ: ಪ್ರಸರಣವಲ್ಲದ್ದು (nonproliferative) ಮತ್ತು ಪ್ರಸರಿಸುವಂತದ್ದು (proliferative). ಪ್ರಸರಣವಲ್ಲದ ರೆಟಿನೋಪಥಿಯು ರೆಟಿನೋಪಥಿಯ ಅತ್ಯಂತ ಸಾಮಾನ್ಯ ರೂಪವಾಗಿದ್ದು, ಕಣ್ಣಿನ ಪುಗ್ಗದ ಹಿಂಭಾಗದಲ್ಲಿ ಲೋಮನಾಳಗಳಿರುತ್ತವೆ ಮತ್ತು ಅವು ಚೀಲಗಳನ್ನು ರೂಪಿಸುತ್ತವೆ. ಪ್ರಸರಣವಲ್ಲದ ರೆಟಿನೋಪಥಿಯು ಹೆಚ್ಚುಹೆಚ್ಚು ರಕ್ತನಾಳಗಳು ಬ್ಲಾಕ್ ಆದಂತೆ ಮೂರು ಹಂತಗಳಲ್ಲಿ ( ಸೌಮ್ಯ, ಮಧ್ಯಮ ಮತ್ತು ತೀವ್ರ) ಬೆಳವಣಿಗೆಯಾಗುತ್ತದೆ. ಪ್ರಸರಿಸುವ ರೆಟಿನೋಪಥಿಯಲ್ಲಿ, ರಕ್ತನಾಳಗಳು ತೀವ್ರವಾಗಿ ಹಾನಿಗೀಡಾಗಿರುತ್ತವೆ. ಅದಕ್ಕೆ ಪ್ರತಿಯಾಗಿ, ರೆಟಿನಾದಲ್ಲಿ ಹೊಸ ರಕ್ತನಾಳಗಳು ಬೆಳೆಯಲು ಆರಂಭಿಸುತ್ತವೆ. ಈ ಹೊಸ ರಕ್ತನಾಳಗಳು ದುರ್ಬಲವಾಗಿರುತ್ತವೆ ಮತ್ತು ಅವು ರಕ್ತ ಸೋರಿಕೆ ಮಾಡಬಹುದು, ದೃಷ್ಟಿಯನ್ನು ತಡೆಯಬಹುದು. ಹೀಗೆ ದುರ್ಬಲವಾದ ಅಂಗಾಂಶವು ಕುಗ್ಗಿದ ನಂತರ ಅದು ರೆಟಿನಾವನ್ನು ಹಾನಿ ಮಾಡಬಹುದು ಅಥವಾ ಅದನ್ನು ಅದರ ಸ್ಥಳದಿಂದ ಸರಿಸಬಹುದು, ಈ ಸ್ಥಿತಿಯನ್ನು ರೆಟಿನಲ್ ಡಿಟ್ಯಾಚ್‌ಮೆಂಟ್ ಎನ್ನುವರು6.

  ಮ್ಯಾಕ್ಯುಲಾರ್ ಎಡಿಮಾ ಎಂಬುದು ಇನ್ನೊಂದು ಅಸ್ವಸ್ಥತೆಯಾಗಿದ್ದು, ಅದನ್ನು ಡಯಾಬಿಟಿಕ್ ರೆಟಿನೋಪಥಿ ಕ್ಲಸ್ಟರ್‌ನ ಒಂದು ಭಾಗ ಎಂದು ಪರಿಗಣಿಸಲಾಗಿದೆ. ರೆಟಿನಾದ ಒಂದು ಭಾಗವು ನೀವು ಓದಲು, ಡ್ರೈವ್ ಮಾಡಲು ಮತ್ತು ಮುಖಗಳನ್ನು ನೋಡಲು ಅಗತ್ಯವಿದ್ದು ಅದನ್ನು ಮ್ಯಾಕ್ಯುಲಾ ಎನ್ನುವರು ಎಂಬುದನ್ನು ನಾವೀಗ ತಿಳಿದಿದ್ದೇವೆ. ಮ್ಯಾಕ್ಯುಲಾದ ಊತಕ್ಕೆ ಡಯಾಬಿಟೀಸ್ ಉಂಟುಮಾಡುತ್ತದೆ, ಅದನ್ನು ಡಯಾಬಿಟಿಕ್ ಮ್ಯಾಕ್ಯುಲಾರ್ ಎಡಿಮಾ ಎನ್ನುವರು. ಸಮಯ ಕಳೆದಂತೆ, ಈ ರೋಗವು ಕಣ್ಣಿನ ಈ ಭಾಗದಲ್ಲಿರುವ ತೀಕ್ಷ್ಣ ದೃಷ್ಟಿಯನ್ನು ನಾಶಪಡಿಸಬಹುದು, ಆ ಮೂಲಕ ಭಾಗಶಃ ದೃಷ್ಟಿಹೀನತೆ ಅಥವಾ ಕುರುಡುತನ ಉಂಟುಮಾಡಬಹುದು. ಡಯಾಬಿಟಿಕ್ ರೆಟಿನೋಪಥಿಯ ಇತರ ಲಕ್ಷಣಗಳನ್ನು ಈಗಾಗಲೇ ಹೊಂದಿರುವವರಲ್ಲಿ ಮ್ಯಾಕ್ಯುಲಾರ್ ಎಡಿಮಾ ಕಂಡುಬರುತ್ತದೆ2

  ರೆಟಿನೋಪಥಿಯ ಬೆಳವಣಿಗೆಯ ಸಾಧ್ಯತೆಗಳು ಮತ್ತು ತೀವ್ರ ಸ್ವರೂಪವನ್ನು ಹೊಂದುವುದು ಯಾವಾಗ ಎಂದರೆ6:

  • ನೀವು ಸುದೀರ್ಘ ಸಮಯದವರೆಗೆ ಡಯಾಬಿಟೀಸ್ ಹೊಂದಿದ್ದರೆ.

  • ನಿಮ್ಮ ರಕ್ತದ ಸಕ್ಕರೆ (ಗ್ಲುಕೋಸ್) ಪ್ರಮಾಣವನ್ನು ಕಳಪೆಯಾಗಿ ನಿಯಂತ್ರಿಸಿದ್ದರೆ.

  • ನೀವು ಧೂಮಪಾನ ಸಹ ಮಾಡುತ್ತೀರಿ ಅಥವಾ ನೀವು ಹೆಚ್ಚಿನ ತಕ್ತದೊತ್ತಡ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿದ್ದರೆ.


  ಆದರೆ, ಈಗಾಗಲೇ ಮಾತುಕೊಟ್ಟಂತೆ, ಇದೆಲ್ಲವೂ ನಿಮ್ಮಿಂದ ಕೇಳುವುದು ನಿಮ್ಮ ಕಣ್ಣಿನ ವೈದ್ಯರೊಂದಿಗೆ ಒಂದು ವಾರ್ಷಿಕ ಕನ್ಣು ತಪಾಸಣೆ ಅಷ್ಟೇ – ಇದೊಂದು ಸಾಮಾನ್ಯ ಮತ್ತು ನೋವುರಹಿತ ಕಣ್ಣು ಪರೀಕ್ಷೆ ಆಗಿರುತ್ತದೆ ಹಾಗೂ ಅದು ಡಯಾಬಿಟಿಕ್ ರೆಟಿನೋಪಥಿ ಮತ್ತು ದೃಷ್ಟಿಹೀನತೆಯಿಂದ ದೂರವಿರಲು ಸಹಾಯ ಮಾಡುತ್ತದೆ. ನೀವು ಹೇಗೆ ಆರಂಬಿಸಬಹುದು ಎಂಬುದು ಇಲ್ಲಿದೆ – ನಿಮ್ಮ ಅಪಾಯವನ್ನು ನಿರ್ಣಯಿಸಲು ನಮ್ಮ ಆನ್‌ಲೈನ್ Diabetic Retinopathy ಸ್ವಯಂ ತಪಾಸಣೆ ಮಾಡಿಕೊಳ್ಳಿ. ನಂತರ, News18.com ನಲ್ಲಿ Netra Suraksha ಉಪಕ್ರಮ ಪುಟವನ್ನು ಓದಿ, ಅದರಲ್ಲಿ ಎಲ್ಲಾ ಸಾಮಗ್ರಿಗಳು (ದುಂಡು ಮೇಜಿನ ಸಂವಾದಗಳು, ವಿವರಣಾತ್ಮಕ ವೀಡಿಯೊಗಳು ಮತ್ತು ಲೇಖನಗಳು) ದೊರೆಯುತ್ತವೆ. 

  ನಿಮ್ಮ ಆರೋಗ್ಯಕ್ಕಾಗಿ ಸಕ್ರಿಯ ಪಾತ್ರ ವಹಿಸಿ. ಡಯಾಬಿಟೀಸ್‌ನ ಚಿಕಿತ್ಸೆಯಂತೆಯೇ ಇದರಲ್ಲಿಯೂ ಸಣ್ಣ ಕ್ರಮಗಳು ಸೇರಿಕೊಳ್ಳುತ್ತವೆ ಅಷ್ಟೇ. ಹಾಗಾಗಿ ಹಿಂಜರಿಯಬೇಡಿ. ಡಯಾಬಿಟಿಕ್ ರೆಟಿನೋಪಥಿಯನ್ನು ತಡೆಯುವಲ್ಲಿ ಮತ್ತು ನಿಮ್ಮ ದೃಷ್ಟಿಯನ್ನು ರಕ್ಷಿಸಿಕೊಳ್ಳುವಲ್ಲಿ ಇಂದೇ ನಿಮ್ಮ ಮೊದಲ ಹೆಜ್ಜೆ ಇಡಿ.

  ಉಲ್ಲೇಖಗಳು:

  1. https://socaleye.com/understanding-the-eye/ 18 Dec, 2021

  2. https://www.niddk.nih.gov/health-information/diabetes/overview/preventing-problems/diabetic-eye-disease 18 Dec, 2021

  3. https://www.mayoclinic.org/diseases-conditions/glaucoma/symptoms-causes/syc-20372839 18 Dec, 2021

  4. https://www.ncbi.nlm.nih.gov/pmc/articles/PMC3589218/ 18 Dec, 2021

  5. https://www.ceenta.com/news-blog/can-diabetes-cause-cataracts 18 Dec, 2021


  https://www.mayoclinic.org/diseases-conditions/diabetic-retinopathy/symptoms-causes/syc-20371611 18 Dec, 2021
  Published by:Soumya KN
  First published: