Breast Cancer: ಗಮನಿಸಿ... ಸ್ತನದ ಕ್ಯಾನ್ಸರ್​ನ ನಿಜವಾದ ಲಕ್ಷಣಗಳು ಇವು !

Watch out for symptoms of Breast Cancer: ಸ್ತನ ಕ್ಯಾನ್ಸರ್ ಪ್ರಾರಂಭದ ಮೊದಲನೇ ಹಂತದಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಸದ್ದಿಲ್ಲದಂತೆ ಒಳಗೇ ಬೆಳೆದುಕೊಳ್ಳುತ್ತದೆ. ಎರಡನೇ ಹಂತದಲ್ಲಿ ಸಣ್ಣ ಮೊಡವೆ ರೀತಿಯಲ್ಲಿ ಸ್ತನ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲೂ ಯಾವುದೇ ರೀತಿಯ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಮೂರನೇ ಹಂತ ತಲುಪಿದ ಬಳಿಕ ಕೆಲವರಲ್ಲಿ ನೋವು ಕಾಣಿಸಿಕೊಳ್ಳಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Be Alert on Breast Cancer: ಸ್ತನಕ್ಯಾನ್ಸರ್, ಪ್ರತಿ ಮಹಿಳೆಯರಲ್ಲೂ ಈ ಬಗ್ಗೆ ಆತಂಕ ಸಹಜವಾಗಿಯೇ ಇರುತ್ತೆ. ಸ್ತನದ ಮೇಲೆ ಸಣ್ಣ ಮೊಡವೆಯಾದರೂ (Small Blister), ಕ್ಯಾನ್ಸರ್‌ನ ಲಕ್ಷಣವೇ ಎಂಬ ಗಾಬರಿ ಮೂಡುತ್ತದೆ. ಕಳೆದ 5 ವರ್ಷದಲ್ಲಿ 7.5 ಮಿಲಿಯನ್ ಮಹಿಳೆಯರು ಸ್ತನಕ್ಯಾನ್ಸರ್‌ಗೆ (Breast Cancer) ತುತ್ತಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಪ್ರತಿ ವರ್ಷ ಈ ಕ್ಯಾನ್ಸರ್‌ಗೆ ಒಳಗಾಗುವವರ ಸಂಖ್ಯೆ ಕೂಡ ಬೆಳಯುತ್ತಾ ಹೋಗುತ್ತಿದೆ. ಅದರಲ್ಲೂ 50 ವರ್ಷ ಮೀರಿದ ಮಹಿಳೆಯರ (Women above 50 years) ಸಂಖ್ಯೆ ಯಾವ ದೇಶದಲ್ಲಿ ಅಧಿಕವಿದೆಯೋ ಆ ದೇಶದಲ್ಲಿ ಸ್ತನಕ್ಯಾನ್ಸರ್ ಪ್ರಮಾಣವೂ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ. ಅಕ್ಟೋಬರ್ ತಿಂಗಳನ್ನು ವಿಶ್ವ ಸ್ತನ ಕ್ಯಾನ್ಸರ್‌ ತಿಂಗಳಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆನ್ಕಾಲಜಿ ವಿಭಾಗದ ನಿರ್ದೇಶಕ ಡಾ ಸಂದೀಪ್ ನಾಯಕ್.

ಈ ವಯಸ್ಸಿನವರಿಗೆ ಸ್ತನ ಕ್ಯಾನ್ಸರ್ ಹೆಚ್ಚು

45 ರಿಂದ 50 ವರ್ಷ ಮೀರಿದ ಮಹಿಳೆಯರಿಗೆ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂಬುದು ವೈದ್ಯಕೀಯವಾಗಿ ದೃಢವಾಗಿದೆ. ವಯಸ್ಸಾದ  ಬಳಿಕ ದೇಹವು ನಿಶ್ಶಕ್ತವಾಗುತ್ತಾ ಹೋದಂತೆ ಡಿಎನ್‌ಎ ಜೆನಿಟಿಕ್ ಡ್ಯಾಮೇಜ್ ಆಗುತ್ತಾ, ಆರೋಗ್ಯ ಸಮಸ್ಯೆಗಳು ಉಲ್ಭಣಗೊಳ್ಳುತ್ತದೆ. ಆಗ ಬರುವ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಸಹ ಒಂದು. 40 ವರ್ಷ ತುಂಬಿದ ಬಳಿಕ ಪ್ರತಿ 6 ತಿಂಗಳಿಗೊಮ್ಮೆ ಸ್ತನ ಕ್ಯಾನ್ಸರ್ ತಪಾಸಣೆಗೆ ಒಳಗಾಗುವ ಮೂಲಕ ಕ್ಯಾನ್ಸರ್ ಬರುವ ಮುನ್ನವೇ ತಡೆಗಟ್ಟಬಹುದು.

ಸ್ತನಕ್ಯಾನ್ಸರ್‌ಗೆ ಕಾರಣವೇನು? 

ಸ್ತನಕ್ಯಾನ್ಸರ್‌ಗೆ ಇಂಥದ್ದೇ ನಿಖರವಾದ ಕಾರಣವಿಲ್ಲ. ಬೊಜ್ಜು, ಎಣ್ಣೆಯುಕ್ತ ಆಹಾರ ಸೇವನೆ, ದೈಹಿಕ ವ್ಯಾಯಮ ಮಾಡದೇ ಇರುವುದು, ಅನುವಂಶಿಕವಾಗಿ ಬರುವುದು, ಮದ್ಯಪಾನ ಸೇವನೆ, ಋತುಚಕ್ರ ನಿಲ್ಲುವ ಸಮಯದಲ್ಲಿ ಆಗುವ ಬದಲಾವಣೆಗಳು, ಮಕ್ಕಳಿಗೆ ಹಾಲುಣಿಸದೇ ಇದ್ದಲ್ಲಿ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಅನುವಂಶಿಕವಾಗಿ ಶೇ.10 ರಷ್ಟು ಜನರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: Breast Cancer: ಪುರುಷರಲ್ಲೂ ಕಾಣಿಸಿಕೊಳ್ತಿದೆ ಸ್ತನ ಕ್ಯಾನ್ಸರ್...!; ಅದರ ಲಕ್ಷಣಗಳು, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ..

ಸ್ತನಕ್ಯಾನ್ಸರ್‌ನ ಲಕ್ಷಣಗಳು

ಸ್ತನ ಕ್ಯಾನ್ಸರ್ ಪ್ರಾರಂಭದ ಮೊದಲನೇ ಹಂತದಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಸದ್ದಿಲ್ಲದಂತೆ ಒಳಗೇ ಬೆಳೆದುಕೊಳ್ಳುತ್ತದೆ. ಎರಡನೇ ಹಂತದಲ್ಲಿ ಸಣ್ಣ ಮೊಡವೆ ರೀತಿಯಲ್ಲಿ ಸ್ತನ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲೂ ಯಾವುದೇ ರೀತಿಯ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಮೂರನೇ ಹಂತ ತಲುಪಿದ ಬಳಿಕ ಕೆಲವರಲ್ಲಿ ನೋವು ಕಾಣಿಸಿಕೊಳ್ಳಬಹುದು.

* ಸ್ತನದಲ್ಲಿ ಗಂಟು ಅಥವಾ ಗಡ್ಡೆ

* ಎದೆ ಗಾತ್ರದಲ್ಲಿ ಬದಲಾವಣೆ

* ಮೊಲೆಗಳಲ್ಲಿ ನೋವು ಕಾಣಿಸಿಕೊಳ್ಳುವುದು

* ಸ್ತನ ಅಥವಾ ಮೊಲೆತೊಟ್ಟುಗಳ ಬಣ್ಣ ಅಥವಾ ಆಕಾರ ಬದಲಾಗುವುದು

* ಮೊಲೆತೊಟ್ಟಿನ ಸುತ್ತ ಸಿಪ್ಪೆ ಸುಲಿಯುವುದು

ಈ ಲಕ್ಷಣಗಳು ಕಂಡು ಬಂದರೆ ತಡ ಮಾಡದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಚಿಕಿತ್ಸೆ ಏನು?

ಸ್ತನ ಕ್ಯಾನ್ಸರ್ ಬಗ್ಗೆ ಸಣ್ಣ ಲಕ್ಷಣ ಕಾಣಿಸಿಕೊಂಡರೂ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಸ್ತನ ಕ್ಯಾನ್ಸರ್ ಕಂಡು ಹಿಡಿಯಲು ಮೂರು ಹಂತಗಳಲ್ಲಿ ಪರೀಕ್ಷೆ ಮಾಡಲಾಗುವುದು. ಮೊದಲನೇ ಹಂತದಲ್ಲಿ ವೈದ್ಯರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯುವುದು. ಎರಡನೆಯದಾಗಿ, ಸ್ಯಾನಿಂಗ್ ಅಥವಾ ಅಲ್ಟ್ರಾ ಸೌಂಡ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಬಳಿಕ ಬಯೋಪ್ಸಿ ಪರೀಕ್ಷೆ ಮೂಲಕ ಕ್ಯಾನ್ಸರ್‌ನನ್ನು ಖಚಿತ ಪಡಿಸಲಾಗುತ್ತದೆ.

ಇದನ್ನೂ ಓದಿ: Breast Cancer: 5 ಹಂತಗಳಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್​

ನಾಲ್ಕನೇ ಹಂತ ಡೇಂಜರ್

ಸ್ತನ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿದ ನಂತರ ಇದಕ್ಕೆ ಯಾವುದೇ  ಚಿಕಿತ್ಸೆ ಇರುವುದಿಲ್ಲ. ಹೀಗಾಗಿ ಸ್ತನ ಕ್ಯಾನ್ಸರ್ ಬಗ್ಗೆ ಸಣ್ಣ ಅನುಮಾನ ಮೂಡಿದರೂ ವೈದ್ಯರನ್ನು ಭೇಟಿ ಮಾಡಿ, ಸ್ಕ್ಯಾನ್ ಮಾಡಿಸಿಕೊಳ್ಳುವುದು ಉತ್ತಮ. ಜೊತೆಗೆ, ಈಗಾಗಲೇ  ತಂದೆ  ತಾಯಿ ಯಾರಲ್ಲಾದರೂ ಈ ಕ್ಯಾನ್ಸರ್ ಬಂದಿದ್ದರೆ 35 ವರ್ಷಗಳ ಬಳಿಕ ಆಗಾಗ್ಗೇ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯ.

ಭಯ ಬೇಡ, ಜಾಗೃತಿ ಇರಲಿ

ಸ್ತನ ಕ್ಯಾನ್ಸರ್ ಬಗ್ಗೆ ಬರುವ ಊಹಾಪೋಹಗಳಿಗೆ ಹೆಚ್ಚು ಚಿಂತಿರಾಗಬೇಡಿ, ಲಕ್ಷಣದ ಬಗ್ಗೆ ಸಂಪೂರ್ಣ ಅರಿವು ಪಡೆದುಕೊಳ್ಳಿ, ನಿಮಗೆ ಸಂದೇಹವಿದ್ದರೆ ವೈದ್ಯರನ್ನು ಭೇಟಿ ಮಾಡಿ ಖಚಿತ ಪಡಿಸಿಕೊಳ್ಳಿ. ಇದು ಗುಣಪಡಿಸುವ ಕ್ಯಾನ್ಸರ್ ಆಗಿರುವುದರಿಂದ ಹೆಚ್ಚಾಗಿ ಆತಂಕ ಪಡುವ ಅಗತ್ಯವಿಲ್ಲ.
Published by:Soumya KN
First published: