Health Tips: ಬಿಳಿ ಉಪ್ಪು ಬಿಟ್ಟುಬಿಡಿ, ಕಪ್ಪು ಉಪ್ಪು ಬಳಸಿ ನೋಡಿ, ಅಡುಗೆಗೂ ಅರೋಗ್ಯಕ್ಕೂ ಬ್ಲ್ಯಾಕ್ ಸಾಲ್ಟೇ ಬೆಸ್ಟು!

ಕಬ್ಬಿಣ ಮತ್ತು ಇತರ ಅಗತ್ಯ ಖನಿಜಗಳ ಉಪಸ್ಥಿತಿಯಿಂದಾಗಿ ಈ ಉಪ್ಪು ಗುಲಾಬಿ ಬೂದು ಬಣ್ಣದಲ್ಲಿದೆ. ಸಾಮಾನ್ಯ ಉಪ್ಪಿಗಿಂತ ಸ್ವಲ್ಪ ಬಲವಾದ, ಕಪ್ಪು ವೈವಿಧ್ಯವು ಭಕ್ಷ್ಯಗಳಿಗೆ ವಿಶಿಷ್ಟ ಪರಿಮಳವನ್ನು ನೀಡುತ್ತದೆ

 black salt

black salt

  • Share this:
ನಾವು ಮಾಡುವ ಪ್ರತಿ ಅಡುಗೆಯಲ್ಲೂ(Dish) ಉಪ್ಪು ಎನ್ನುವ ಪದಾರ್ಥ ಇರದೇ ಇದ್ದರೆ ಆ ಅಡುಗೆಗೆ (Cooking) ರುಚಿಯೇ (Taste Good) ಇರುವುದಿಲ್ಲ, ಎಲ್ಲವೂ ಸಪ್ಪೆ ಸಪ್ಪೆಯಾಗಿರುತ್ತದೆ. ಉಪ್ಪು ನಮಗೆಲ್ಲಾ ಎಷ್ಟು ಅನಿವಾರ್ಯ(Essential) ಎಂಬುದು ನಮಗೆ ತಿಳಿದ ವಿಷಯವೇ ಆಗಿದೆ. ಆದರೆ ಬಿಳಿ ಉಪ್ಪನ್ನು ಪಕ್ಕಕ್ಕೆ ಇರಿಸಿ ನಾವು ಇವತ್ತು ಕಪ್ಪು ಉಪ್ಪಿನ (Black Salt) ಅಂದರೆ ಬ್ಲ್ಯಾಕ್‌ ಸಾಲ್ಟ್‌ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಆಯುರ್ವೇದ ಔಷಧ
ಬಹುತೇಕರಿಗೆ ತಿಳಿಯದ ವಿಷಯ ಏನೆಂದರೆ ಕಪ್ಪು ಉಪ್ಪು ಸಹ ಭಾರತೀಯ ಮನೆಗಳಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ. ಸಾಮಾನ್ಯವಾಗಿ ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಕಪ್ಪು ಉಪ್ಪು ಅಥವಾ ಕಾಲಾ ನಮಕ್ ಶತಮಾನಗಳಿಂದ ಆಯುರ್ವೇದ ಔಷಧಗಳು ಮತ್ತು ಚಿಕಿತ್ಸೆಗಳ ಒಂದು ಭಾಗವಾಗಿದೆ ಎಂದು ಹೇಳಲಾಗುತ್ತದೆ.

ಕಬ್ಬಿಣ ಮತ್ತು ಇತರ ಅಗತ್ಯ ಖನಿಜಗಳ ಉಪಸ್ಥಿತಿಯಿಂದಾಗಿ ಈ ಉಪ್ಪು ಗುಲಾಬಿ ಬೂದು ಬಣ್ಣದಲ್ಲಿದೆ. ಸಾಮಾನ್ಯ ಉಪ್ಪಿಗಿಂತ ಸ್ವಲ್ಪ ಬಲವಾದ, ಕಪ್ಪು ವೈವಿಧ್ಯವು ಭಕ್ಷ್ಯಗಳಿಗೆ ವಿಶಿಷ್ಟ ಪರಿಮಳವನ್ನು ನೀಡುತ್ತದೆ ಮತ್ತು ಆರೋಗ್ಯಕರ ಪರ್ಯಾಯವೆಂದು ಪರಿಗಣಿಸಲಾಗಿದೆ. ನಮ್ಮ ಸಾಮಾನ್ಯ ಟೇಬಲ್ ಉಪ್ಪು ಹೆಚ್ಚಿನ ಸೋಡಿಯಂ ಮಟ್ಟವನ್ನು ಹೊಂದಿರುತ್ತದೆ ಮತ್ತು ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಮತ್ತೊಂದೆಡೆ, ಈ ಕಪ್ಪು ಉಪ್ಪು ಕಡಿಮೆ ಅಯೋಡೈಸ್ ಆಗಿದೆ ಮತ್ತು ಸಾಮಾನ್ಯವಾಗಿ ಅಂಗಡಿಗಳಲ್ಲಿ ಕಂಡು ಬರುವ ಉಪ್ಪಿಗಿಂತಲೂ ಹೆಚ್ಚು ನೈಸರ್ಗಿಕ ರೂಪವಾಗಿದೆ.

ಇದನ್ನೂ ಓದಿ: Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್​ ಹೇಳುತ್ತೆ ಸಂಶೋಧನೆ?

ನಿಮ್ಮ ದೈನಂದಿನ ಆಹಾರಕ್ಕೆ ನೀವು ಒಂದು ಚಿಟಿಕೆ ಕಪ್ಪು ಉಪ್ಪನ್ನು ಏಕೆ ಸೇರಿಸಬೇಕು:

1. ಇದು ನಿಮಗಿರುವ ಅಸಿಡಿಟಿ ಸಮಸ್ಯೆಯನ್ನು ದೂರ ಮಾಡುತ್ತದೆ

ಈ ಕಪ್ಪು ಉಪ್ಪು ಆಲ್ಕಲೈನ್ ಗುಣಗಳನ್ನು ಹೊಂದಿರುತ್ತದೆ ಮತ್ತು ಇದು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಅದರ ಹೆಚ್ಚಿನ ಖನಿಜ ಅಂಶವು ಆಮ್ಲ ರಿಫ್ಲಕ್ಸ್‌ನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.

2. ಕಪ್ಪು ಉಪ್ಪು ಜೀರ್ಣಕ್ರಿಯೆ ಸುಧಾರಿಸುತ್ತದೆ

ಈ ಕಪ್ಪು ಉಪ್ಪು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನಲ್ಲಿ ಜಮೆಯಾಗುವ ಗ್ಯಾಸ್ ಅನ್ನು ಸಹ ನಿವಾರಿಸುತ್ತದೆ. ಮಲಬದ್ಧತೆಗೆ ಇದು ಪರಿಣಾಮಕಾರಿ ಪರಿಹಾರ ಎಂದು ಅನೇಕ ಜನರು ಪರಿಗಣಿಸುತ್ತಾರೆ. ನೀವು ಮಾಡಬೇಕಾಗಿರುವುದು ಇಷ್ಟೇ, ಬ್ಲ್ಯಾಕ್‌ ಸಾಲ್ಟ್‌ಗೆ ನಿಂಬೆ ರಸ ಮತ್ತು ಶುಂಠಿಯ ಮಿಶ್ರಣ ಮಾಡಿ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಇದನ್ನು ಬೆಳಗ್ಗೆ ಹೊತ್ತು ಕುಡಿಯಿರಿ.

3. ನಿಮ್ಮ ಕೂದಲ ಆರೋಗ್ಯಕ್ಕೆ ಒಳ್ಳೆಯದು

ಈ ಕಪ್ಪು ಉಪ್ಪಿನಲ್ಲಿ ನಯವಾದ ಖನಿಜಗಳು ದುರ್ಬಲ ಕೂದಲನ್ನು ಬಲಪಡಿಸುವ ಮೂಲಕ ಮತ್ತು ಸೀಳು ತುದಿಗಳನ್ನು ತಡೆಯುವ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ. ನಿಮ್ಮ ಆಹಾರದಲ್ಲಿ ಕಪ್ಪು ಉಪ್ಪನ್ನು ಸೇರಿಸಿಕೊಳ್ಳಿ ಮತ್ತು ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಇಷ್ಟೇ ಅಲ್ಲದೆ ಇದು ನಿಮ್ಮ ತಲೆ ಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ನಿಮ್ಮ ದೇಹದಲ್ಲಿ ಸಂಗ್ರಹವಾಗುವ ನೀರನ್ನು ಕಡಿಮೆ ಮಾಡುತ್ತದೆ

ನಿಮ್ಮ ದೇಹದಲ್ಲಿ ದ್ರವಗಳು ಸಂಗ್ರಹವಾದಾಗ ನೀರು ಹಿಡಿದಿಟ್ಟುಕೊಳ್ಳುವುದು. ಒಬ್ಬ ವ್ಯಕ್ತಿ ಸೋಡಿಯಂ ಅನ್ನು ಅತಿಯಾಗಿ ಸೇವನೆ ಮಾಡಿದಾಗ ಇದು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಹೆಚ್ಚಿನ ಸೋಡಿಯಂ ಸೇವನೆಯನ್ನು ತ್ಯಜಿಸಬೇಕು ಮತ್ತು ಕಡಿಮೆ ಸೋಡಿಯಂ ಹೊಂದಿರುವ ಕಪ್ಪು ಉಪ್ಪನ್ನು ಹೆಚ್ಚಾಗಿ ಬಳಸಬೇಕು.

ಇದನ್ನೂ ಓದಿ: Food Tips: ಮನೆಯಲ್ಲಿಯೇ ಸುಲಭವಾಗಿ ಮೊಳಕೆಕಾಳು ಹೀಗೂ ಮಾಡ್ಬೋದು

5. ಚರ್ಮದ ಆರೋಗ್ಯವನ್ನು ಕಾಪಾಡುತ್ತೆ ಈ ಕಪ್ಪು ಉಪ್ಪು

ಉಪ್ಪಿನ ಉರಿಯೂತ ವಿರೋಧಿ ಗುಣಲಕ್ಷಣಗಳು ಮತ್ತು ಒರಟಾದ ವಿನ್ಯಾಸವು ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಹೊಳೆಯುವ ಚರ್ಮವನ್ನು ಒದಗಿಸುವ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.
Published by:vanithasanjevani vanithasanjevani
First published: