Hair Care: ಹೋಳಿ ಬಣ್ಣದಿಂದ ಕೂದಲು ಹಾಳಾಗಿದ್ಯಾ? ಹಾಗಾದ್ರೆ ಕೂಡಲೇ ಈ ಟಿಪ್ಸ್ ಟ್ರೈ ಮಾಡಿ!

ಹೋಳಿ ಹಬ್ಬ

ಹೋಳಿ ಹಬ್ಬ

ಹೋಳಿ ನಂತರ ತ್ವಚೆ ಹಾಗೂ ಕೂದಲಿನ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಏಕೆಂದರೆ ಹೋಳಿಯಲ್ಲಿ ಬಳಸುವ ಬಣ್ಣಗಳಲ್ಲಿ ಕೂದಲಿಗೆ ತುಂಬಾ ಹಾನಿಕಾರಕವಾಗುವಂತಹ ರಾಸಾಯನಿಕಗಳು ಹೆಚ್ಚಾಗಿರುತ್ತದೆ. ಈ ವೇಳೆ ನೀವು ದೀರ್ಘಕಾಲದವರೆಗೆ ನಿಮ್ಮ ಕೂದಲನ್ನು ಸರಿಯಾಗಿ ನೋಡಿಕೊಳ್ಳಬೇಕು.

  • Share this:

Bjp and congress election ticket aspirants held the holi celebration in belagavi
ನಮ್ಮ ಸಂಸ್ಕೃತಿಯ ಸಂಕೇತವಾದ ಬಣ್ಣಗಳ ಹಬ್ಬವೇ ಹೋಳಿ ಹಬ್ಬ. ಈ ಹಬ್ಬದಂದು ಎಲ್ಲರೂ ಖುಷಿಯಿಂದ ಒಬ್ಬರಿಗೊಬ್ಬರು ಬಣ್ಣವನ್ನು ಹಚ್ಚಿ ಸಂಭ್ರಮಿಸುತ್ತಾರೆ. ಯಾವುದೇ ಲಿಂಗಭೇದವಿಲ್ಲದೇ ಎಲ್ಲರೂ ಓಕುಳಿಯಲ್ಲಿ ಮಿಂದೇಳುತ್ತಾರೆ. ರಾಸಾಯನಿಕಯುಕ್ತ ತರಹೇವಾರಿ ಬಣ್ಣಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.


ಆದರೆ ಹೋಳಿ ನಂತರ ತ್ವಚೆ ಹಾಗೂ ಕೂದಲಿನ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಏಕೆಂದರೆ ಹೋಳಿಯಲ್ಲಿ ಬಳಸುವ ಬಣ್ಣಗಳಲ್ಲಿ ಕೂದಲಿಗೆ ತುಂಬಾ ಹಾನಿಕಾರಕವಾಗುವಂತಹ ರಾಸಾಯನಿಕಗಳು ಹೆಚ್ಚಾಗಿರುತ್ತದೆ. ಈ ವೇಳೆ ನೀವು ದೀರ್ಘಕಾಲದವರೆಗೆ ನಿಮ್ಮ ಕೂದಲನ್ನು ಸರಿಯಾಗಿ ನೋಡಿಕೊಳ್ಳಬೇಕು.


ಹರಳೆಣ್ಣೆ/ ತೆಂಗಿನ ಕಾಯಿ ಎಣ್ಣೆ: ಪ್ರತಿಯೊಬ್ಬರಿಗೂ ಕೂದಲಿನ ಮೇಲೆ ವಿಪರೀತ ಪ್ರೀತಿ ಇದ್ದೇ ಇರುತ್ತದೆ. ರಾಸಾಯನಿಕಯುಕ್ತ ಬಣ್ಣ ತಲೆಗೆ ಅಂಟುವುದನ್ನು ತಡೆಗಟ್ಟಲು ಮೊದಲು ನೆತ್ತಿ ಹಾಗೂ ಕೂದಲಿಗೆ ಎಣ್ಣೆ ಹಚ್ಚುವುದು. ಇದರಿಂದ ಯಾವುದೇ ರೀತಿಯ ಬಣ್ಣ ಹಚ್ಚಿದರೂ ಅದು ನೆತ್ತಿಗೆ ಅಂಟುವುದಿಲ್ಲ. ಅಂಟಿದರೂ ಅದನ್ನು ಸುಲಭವಾಗಿ ತೊಳೆಯಲು ಸಾಧ್ಯವಾಗುತ್ತದೆ.


ಅಲೋವೆರಾ ಜೆಲ್: ಕೂದಲ ರಕ್ಷಣೆಗಾಗಿ ಪ್ರತಿದಿನ ಅಲೋವೆರಾ ಬಳಸಿ. ಅಲೋವೆರಾ ಕೂದಲಿನ ಒರಟುತನವನ್ನು ಹೋಗಲಾಡಿಸಲು ತುಂಬಾ ಸಹಕಾರಿ. ಅಷ್ಟೇ ಅಲ್ಲದೇ ಅಲೋವೆರಾ ಕೂದಲ ಬಲವರ್ಧನೆಗೆ ಸಹಕಾರಿಯಾಗಿದೆ.


ಮಾಗಿದ ಬಾಳೆಹಣ್ಣು: ಹಾನಿಗೊಳಗಾದ ಕೂದಲನ್ನು ಸರಿಪಡಿಸುವಲ್ಲಿ ಮಾಗಿದ ಬಾಳೆಹಣ್ಣು ಉಪಯುಕ್ತವಾಗಿದೆ. ದುರ್ಬಲವಾದ ಕೂದಲನ್ನು ಬಲಪಡಿಸುವಲ್ಲಿ ಮಾಗಿದ ಬಾಳೆಹಣ್ಣು ಬಹಳ ಸಹಾಯಕವಾಗಿದೆ. ಈ ಅಂಶವು ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ.


ಹುಳಿ ಮೊಸರು: ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಹುಳಿ ಮೊಸರು ತುಂಬಾ ಪ್ರಯೋಜನಕಾರಿ. ಈ ಅಂಶವು ಕೂದಲಿನ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಆಲಿವ್ ಎಣ್ಣೆ: ನೀವು ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಮತ್ತು ನಿಮ್ಮ ಕೂದಲಿಗೆ ಹಚ್ಚಬಹುದು. ಇದು ಕೂದಲನ್ನು ಮೃದುವಾಗಿಸುತ್ತದೆ. ಹೋಳಿ ಹಬ್ಬದ ನಂತರ ಕೂದಲು ಹಾನಿಯಾಗದಂತೆ ತಡೆಯಲು ಆಲಿವ್ ಎಣ್ಣೆಯು ಅತ್ಯಂತ ಸಹಾಯಕವಾಗಿದೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು