• Home
  • »
  • News
  • »
  • lifestyle
  • »
  • Deepavali 2022: ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆ

Deepavali 2022: ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆ

ದೀಪಾವಳಿ

ದೀಪಾವಳಿ

Deepavali Festival 2022: ದೀಪಾವಳಿ ಎಂದರೆ ದೀಪಗಳ ಹಬ್ಬ ಹಾಗಾಗಿ ಈ ದಿನದಿಂದ ಕಾರ್ತಿಕ ಮಾಸ ಮುಗಿಯುವವರೆಗೂ ಪ್ರತಿದಿನ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚಲಾಗುತ್ತದೆ. ಇದು ಮನೆಗೆ ಬಹಳ ಶುಭ ತರುತ್ತದೆ.

  • Share this:

ದೀಪಾವಳಿ (Deepavali) ಅತ್ಯಂತ ಮಹತ್ವದ ಮತ್ತು ಪವಿತ್ರ ಹಬ್ಬ (Festival). ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬ ಆರಂಭವಾಗಲಿದೆ. ಈಗಷ್ಟೇ ನವರಾತ್ರಿ (Navratri)  ಸಂಬ್ರಮ ಮುಗಿಸಿದ್ದು, ಜನ ಮತ್ತೊಂದು ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಕತ್ತಲೆಯ ಮೇಲೆ ಬೆಳಕು (Lights), ಅಜ್ಞಾನದ ಮೇಲೆ ಜ್ಞಾನ, ಕೆಡುಕಿನ ಮೇಲೆ ಒಳ್ಳೆಯ ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಈ ಹಬ್ಬ ಸಂಕೇತಿಸುತ್ತದೆ. ಭಗವಾನ್ ಕೃಷ್ಣನಿಂದ ನರಕಾಸುರನಂತಹ ಅನೇಕ ರಾಕ್ಷಸರ ವಧೆ, ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಭಗವಾನ್ ರಾಮನ ಆಗಮನ ಮತ್ತು ಬಲಿಯನ್ನು ವಾಮನ ಸೋಲಿಸಿದ ದಿನ ಹೀಗೆ ಈ ದೀಪಾವಳಿಯಬ್ಬಯ ಹಲವಾರು ಕಾರಣಕ್ಕೆ ಆಚರಿಸಲಾಗುತ್ತದೆ.


ಜನರು ತಮ್ಮ ಮನೆ ಮತ್ತು ಕಚೇರಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಅವರಿಗೆ ಸಮೃದ್ಧಿ, ಸಂತೋಷ, ಶಾಂತಿ ಮತ್ತು ಸಂಪತ್ತನ್ನು ಆಶೀರ್ವದಿಸುವಂತೆ ದೇವಿಯನ್ನು ಕೇಳಿಕೊಳ್ಳುತ್ತಾರೆ. ದೇಶದ ಬಹುತೇಕ ಸ್ಥಳಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಇನ್ನೂ ಕೆಲವು ಕಡೆ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.


know more about Deepavali a auspicious day
ದೀಪಾವಳಿ


ದೀಪಾವಳಿ ಯಾವಾಗ?


ಈ ವರ್ಷ, ದೀಪಾವಳಿಯನ್ನು ಸೋಮವಾರ, ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಲಕ್ಷ್ಮಿ ಪೂಜೆ ಮುಹೂರ್ತವು ಸಂಜೆ 06:53 ಕ್ಕೆ ಪ್ರಾರಂಭವಾಗಿ 08:16 ಕ್ಕೆ ಮುಗಿಯುತ್ತದೆ. ಪ್ರದೋಷ ಕಾಲವು ಸಂಜೆ 05:43 ರಿಂದ ರಾತ್ರಿ 08:16 ರವರೆಗೆ ಇರುತ್ತದೆ ಮತ್ತು ಅಮವಾಸ್ಯೆಯು ಅಕ್ಟೋಬರ್ 24 ರಂದು ಸಂಜೆ 05:27 ರಿಂದ ಅಕ್ಟೋಬರ್ 25 ರ ಸಂಜೆ 04:18 ರವರೆಗೆ ಇರುತ್ತದೆ.


know more about Deepavali a auspicious day
ಸಾಂದರ್ಭಿಕ ಚಿತ್ರ


ದೀಪಾವಳಿ ಹಬ್ಬವೂ ಸಮೃದ್ಧಿ ಹಾಗೂ ಸಂತೋಷದ ಸಂಕೇತ ನಮ್ಮ ಬದುಕಿನಲ್ಲಿ ಸಂತೋಷ ಮೂಡಿಸುವ ಹಬ್ಬ. ಪ್ರಾಚೀನ ಸಂಸ್ಕೃತ ಗ್ರಂಥಗಳಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಹಬ್ಬದ ಉಲ್ಲೇಖವಿದೆ. ದೀಪಾವಳಿಯನ್ನು ಕೇವಲ ಹಿಂದೂಗಳು ಮಾತ್ರವಲ್ಲ, ಜೈನರು, ಬೌದ್ಧರು ಮತ್ತು ಸಿಖ್ಖರೂ ಸಹ ಆಚರಿಸುತ್ತಾರೆ. ಅಂತಹ ವಿಶೇಷ ಹಬ್ಬ ಈ ದೀಪಾವಳಿ.


ಇದನ್ನೂ ಓದಿ: ಈ ಹಣ್ಣು ಹುಳಿ ಇದ್ರೂ ಆರೋಗ್ಯಕ್ಕೆ ಮಾತ್ರ ವರ, ವಾರಕ್ಕೆ ಒಂದಾದ್ರೂ ತಿನ್ನಿ


ದೀಪಾವಳಿ ಆಚರಣೆ ವಿಧ


ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಈ ಹಬ್ಬವನ್ನು 5 ದಿನಗಳ ಕಾಲ ಆಚರಿಸಲಾಗುತ್ತದೆ. ಗೋವತ್ಸ ದ್ವಾದಶಿ- ಅಕ್ಟೋಬರ್ 21, ಧನ್ತೇರಸ್- ಅಕ್ಟೋಬರ್ 22,ಕಾಳಿ ಚೌದಾಸ್-ಅಕ್ಟೋಬರ್ 23, ಛೋಟಿ ದೀಪಾವಳಿ ಮತ್ತು ಬಡಿ ದೀಪಾವಳಿ ಅಂದರೆ ದೊಡ್ಡ ದೀಪಾವಳಿ ಮತ್ತು ಸಣ್ಣ ದೀಪಾವಳಿ- ಅಕ್ಟೋಬರ್ 24,  ಗೋವರ್ಧನ ಪೂಜೆ-ಅಕ್ಟೋಬರ್ 25 ಹೀಗೆ ಒಂದೊಂದು ದಿನ ಒಂದೊಂದು ಆಚರಣೆ ಮಾಡಲಾಗುತ್ತದೆ.


https://kannada.news18.com/web-stories/astrology/Shridhar-Swami-life-history-and-miracle-sagara-varadashrama/index.html


ನಮ್ಮಲ್ಲಿ ಅಂದರೆ ದಕ್ಷಿಣ ಭಾರತದಲ್ಲಿ ನರಕಾಸುರನನ್ನ ಶ್ರೀಕೃಷ್ಣ ವಧಿಸಿದ ವಿಜಯದ ಗೌರವಾರ್ಥವಾಗಿ ದೀಪಾವಳಿಯನ್ನು ಒಂದು ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.




ಇಲ್ಲಿ ಮೊದಲ ದಿನ ನರಕ ಚತುರ್ದಶಿ ಆಚರಿಸಲಾಗುತ್ತದೆ, ನಂತರ ಎರಡನೇ ದಿನ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಕೊನೆಯ ದಿನ ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಈ ದಿನ ಗೋವುಗಳಿಗೆ ಪೂಜೆ ಮಾಡಲಾಗುತ್ತದೆ. ಇನ್ನು ಈ ಸಮಯದಲ್ಲಿ ಹಬ್ಬದ ಹಿಂದಿನ ದಿನ ಅಥವಾ ಹಬ್ಬದ ದಿನ ಮನೆಯಲ್ಲಿರುವ ಬಾವಿಗೆ ಮತ್ತು ನೀರಿನ ಹಂಡೆಗಳಿಗೆ ಸಹ ಪೂಜೆ ಮಾಡಲಾಗುತ್ತದೆ.


ಇದನ್ನೂ ಓದಿ: ಹಬ್ಬಕ್ಕೆ ನಟಿ ರೇಖಾ ರೀತಿ ಚೆಂದವಾಗಿ ನೀವೂ ರೆಡಿ ಆಗ್ಬೋದು, ಇಲ್ಲಿದೆ ಟಿಪ್ಸ್


ದೀಪಾವಳಿ ಎಂದರೆ ದೀಪಗಳ ಹಬ್ಬ ಹಾಗಾಗಿ ಈ ದಿನದಿಂದ ಕಾರ್ತಿಕ ಮಾಸ ಮುಗಿಯುವವರೆಗೂ ಪ್ರತಿದಿನ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚಲಾಗುತ್ತದೆ. ಇದು ಮನೆಗೆ ಬಹಳ ಶುಭ ತರುತ್ತದೆ.

Published by:Sandhya M
First published: