ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು (Women) ಹೆಚ್ಚಾಗಿ ಬಾಧಿಸುತ್ತಿರುವ ಕ್ಯಾನ್ಸರ್ ಎಂದರೆ ಗರ್ಭಕಂಠ ಕ್ಯಾನ್ಸರ್ (Cervical Cancer) ವಯಸ್ಕ ಹಾಗೂ ವಯಸ್ಸಾದ ಹೆಂಗಸರಲ್ಲಿಯೂ (Women) ಈ ಕ್ಯಾನ್ಸರ್ ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತಿದೆ. ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆಯನ್ನೇ ಗರ್ಭಕಂಠ ಕ್ಯಾನ್ಸರ್ ಎಂದು ಕರೆಯಲಾಗುವುದು. ಇದು ಯೋನಿಯ ಸ್ರಾವದಲ್ಲಿ ಕಂಡು ಬಂದರೂ ರೋಗಲಕ್ಷಣಗಳು (Symptoms) ಮಾತ್ರ ಕ್ಯಾನ್ಸರ್ನ ಮುಂದುವರೆದ ಹಂತಗಳಲ್ಲಿ ಮಾತ್ರ ಕಂಡು ಬರಬಹುದಾಗಿದೆ. ಗರ್ಭಕಂಠ ಕ್ಯಾನ್ಸರ್ನಲ್ಲಿ ಭಾರತವು ನಾಲ್ಕನೇ ದೇಶವಾಗಿದ್ದು, ಅತಿಹೆಚ್ಚಿನ ಸಾವು ಸಂಭವಿಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದಲ್ಲಿ ಪ್ರತಿ 53 ಮಹಿಳೆಯರಲ್ಲಿ ಒಬ್ಬರು ಈ ಗರ್ಭಕಂಠದ ಕ್ಯಾನ್ಸರ್ ಹೊಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಗರ್ಭಗಂಠದ ಕ್ಯಾನ್ಸರ್ನಲ್ಲಿ ಪ್ರಾರಂಭದಲ್ಲಿಯೇ ಹೇಗೆ ಪತ್ತೆ ಹಚ್ಚಬಹುದು ಹಾಗೂ ಇದಕ್ಕಿರುವ ಚಿಕಿತ್ಸೆಗಳ ಕುರಿತು ಫೊರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ ಹಿರಿಯ ನಿರ್ದೇಶಕಿ ಡಾ ನಿತಿ ರೈಜಾಡಾ ಅವರು ವಿವರಿಸಿದ್ದಾರೆ,
ಗರ್ಭಕಂಠದ ಕ್ಯಾನ್ಸರ್ಗೆ ಕಾರಣಗಳು:
30 ರಿಂದ 45 ವರ್ಷ ದ ಮಹಿಳೆಯರಲ್ಲಿ ಹೆಚ್ಚಾಗಿ ಈ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಸ್ವಚ್ಛತೆ ಇಲ್ಲದ ಟಾಯಿಲೆಟ್ ಬಳಕೆ, ಯೋನಿಯ ಸ್ವಚ್ಛತೆಯ ನಿರ್ಲಕ್ಷ್ಯ, ಅಸುರಕ್ಷಿತ ಲೈಂಗಿಕ ಕ್ರಿಯೆ, ಹೆಚ್ಚು ಜನರೊಂದಿಗೆ ಲೈಂಗಿಕ ಕ್ರಿಯೆಯಿಂದ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇದಷ್ಟೇ ಅಲ್ಲದೆ, ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಹೆಚ್ಚುಕಾಲ ಇರುವುದರಿಂದಲೂ ಗರ್ಭಕಂಠದ ಕ್ಯಾನ್ಸರ್ ಉಂಟಾಗಲು ಪ್ರಮುಖ ಕಾರಣವಾಗಬಹುದು.
ಈ ಎಚ್ಪಿವಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹರಡುವ ಸೋಂಕು ಆಗಿದೆ. ಹೀಗಾಗಿ ಲೈಂಗಿಕ ಕ್ರಿಯೆ ಮುನ್ನ ಹಾಗೂ ನಂತರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು ಒಳಿತು. ಜೊತೆಗೆ ಪ್ರತಿ ಬಾರಿ ಮೂತ್ರ ವಿಸರ್ಜನೆ ನಂತರ ಯೋನಿಯನ್ನು ನೀರಿನಿಂದ ಸ್ವಚಛಗೊಳಿಸುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರತಿ ದಿನ ಅಂಡರ್ವೇರ್ ಬದಲಾವಣೆ ಮಾಡುವುದು, ಕನಿಷ್ಠು ೩-೪ ತಿಂಗಳಿಗೊಮ್ಮೆ ಅಂಡರ್ವೇರ್ ಬದಲಾವಣೆ ಮಾಡುವುದನ್ನು ಅಭ್ಯಾಸಿಸಿಕೊಳ್ಳಿ.
*ಗರ್ಭಕಂಠ ಕ್ಯಾನ್ಸರ್ನ ಲಕ್ಷಣಗಳು😘
ಗರ್ಭಕಂಠ ಕ್ಯಾನ್ಸರ್ ಬಗ್ಗೆ ಮಹಿಳೆಯರು ನಿರ್ಲಕ್ಷ್ಯ ವಹಿಸಿದರೆ ಮುಂದೆ ಈ ಕ್ಯಾನ್ಸರ್ನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಇದರ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳುವುದು ಒಳಿತು.
* ಅಸಹಜ ಯೋನಿ ರಕ್ತಸ್ರಾವ
* ಲೈಂಗಿಕ ಕ್ರಿಯೆ ಸಮಯದಲ್ಲಿ ನೋವು
* ಒಂದಕ್ಕಿಂತ ಹೆಚ್ಚು ಲೈಂಗಿಕತೆ ಹೊಂದಿರುವವರಲ್ಲಿ ಅಪಾಯ
* ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು
ಇದನ್ನೂ ಓದಿ: ಕರುಳಿನ ಆರೋಗ್ಯ ಕಾಪಾಡಲು ಈ 5 ಯೋಗಾಸನ ಮಾಡಿ ಸಾಕು
ಗರ್ಭಕಂಠ ಕ್ಯಾನ್ಸರ್ನ ಚಿಕಿತ್ಸೆಗಳಿವು:
ಗರ್ಭಕಂಠ ಕ್ಯಾನ್ಸರ್ನಲ್ಲಿ ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವ ಸಾಕಷ್ಟು ಟೆಕ್ನಾಲಜಿಗಳು ವೈದ್ಯಲೋಕದಲ್ಲಿ ಲಭ್ಯವಿದೆ. ಗರ್ಭಕಂಠ ಕ್ಯಾನ್ಸರ್ನ ಲಕ್ಷಣಗಳು ಕಂಡು ಬಂದ ಕೂಡಲೇ PAP ಸ್ಮೀಯರ್ (Smears) ಸ್ಕ್ರೀನಿಂಗ್ ಎಂದು ಕರೆಯಲ್ಪಡುವ ಗರ್ಭಕಂಠದ ಸ್ಮೀಯರ್ಸ್ ಪರೀಕ್ಷೆಯು ಸುಮಾರು ಶೇ.94ರಷ್ಟು ಭಾಗ ಕ್ಯಾನ್ಸರ್ ಇರುವುದನ್ನು ನಿಖರವಾಗಿ ಪತ್ತೆಹಚ್ಚಲಿದೆ. ಇದಲ್ಲದೆ ಕಾಲ್ಪಸ್ಕೊಪಿ (Colposcopy) ಮೂಲಕ ವಿಷುಯಲ್ ತಪಾಸಣೆಯನ್ನೂ ಮಾಡಬಹುದು. ಈ ಮೂಲಕ ಗರ್ಭಕಂಠದಲ್ಲಿ ಗೆಡ್ಡಿ ಇದೆಯೇ ಇಲ್ಲವೇ ಎಂಬುದನ್ನು ವೀಕ್ಷಿಸಬಹುದು. PET CT ಸ್ಕ್ಯಾನ್ ಮೂಲಕವೂ ಪತ್ತೆಹಚ್ಚುವುದು ಸುಲಭ.
ಇನ್ನು ಚಿಕಿತ್ಸೆ ವಿಷಯಕ್ಕೆ ಬಂದರೆ, ಕ್ಯಾನ್ಸರ್ನನ್ನು ಬಾಹ್ಯ ಕಿರಣದ ರೇಡಿಯೊಥೆರಪಿ (RT) ಮೂಲಕ ಟ್ರೀಟ್ ಮಾಡಲಾಗುವುದು. ಆರ್ಟಿ ರೇಡಿಯೋಥೆರಪಿ ಬಳಿಕ ಬ್ರಾಕಿಥೆರಪಿ ಮಾಡಬೇಕಿರುತ್ತದೆ. ಪ್ರಸ್ತುತ ಆರ್ಟಿ ಥೆರಪಿಗಳು ಅತ್ಯಾಧುನಿಕವಾಗಿದ್ದು, ರೋಗಿಗಳು ಕಡಿಮೆ ನೋವಿನಲ್ಲಿ ಥೆರಪಿ ಮಾಡಿಸಿಕೊಳ್ಳಬಹುದು. ಆರ್ಟಿ ರೇಡಿಯೋ ಥೆರಪಿ ಮೂಲಕ ಕ್ಯಾನ್ಸರ್ ಪೀಡಿತ ಜಾಗದಲ್ಲಿ ವಿಕಿರಣಗಳನ್ನು ನೀಡಿ, ಗಡ್ಡೆಯನ್ನು ಕರಗಿಸಲು ಸಹಕರಿಸಲಿದೆ. ಈ ಆರ್ಟಿ ಪ್ರಕ್ರಿಯೆಯು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹಾಗೂ ಕ್ಯಾನ್ಸರ್ ಇತರೆ ಭಾಗಗಳಿಗೆ ಹರಡದಂತೆ ನೋಡಿಕೊಳ್ಳಲು ರೇಡಿಯೊಸೆನ್ಸಿಟೈಸರ್ (radiosensitizers) ಚುಚ್ಚುಮದ್ದು ನೀಡಲಾಗುವುದು.
ಇದನ್ನೂ ಓದಿ: ಮೊಟ್ಟೆಯನ್ನು ಚಳಿಗಾಲದಲ್ಲಿ ಈ ರೀತಿ ತಿಂದ್ರೆ ತೂಕನೂ ಇಳಿಯುತ್ತೆ, ಆರೋಗ್ಯನೂ ಚೆನ್ನಾಗಿರುತ್ತೆ
ವ್ಯಾಕ್ಸಿನ್ ತೆಗೆದುಕೊಳ್ಳಿ:
ಗರ್ಭಕಂಠ ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಇದಕ್ಕಾಗಿ ಲಸಿಕೆಯೂ ಲಭ್ಯವಿದೆ. ಹ್ಯೂಮನ್ ಪಪಿಲೋಮಾ ವೈರಸ್ (HPV) ಎಂಬ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣುಮಕ್ಕಳು ತೆಗೆದುಕೊಳ್ಳಲು ಯೋಗ್ಯವಾಗಿರುತ್ತಾರೆ. ಈಗಾಗಲೇ WHO ಈ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ