HOME » NEWS » Lifestyle » KNOW ABOUT YOUR FUTURE PLANS WITH HDFC LIFE INSURANCE POLICY

ನಿಮ್ಮ ಅಗತ್ಯಗಳು ಬದಲಾದಂತೆ, ನಿಮ್ಮ ವಿಮೆ ಕೂಡಾ ಬದಲಾಗಬೇಕು

ವೈಯಕ್ತೀಕರಣದ ಈ ಯುಗದಲ್ಲಿ ವಿಮೆ ಹೇಗೆ ಕೆಲಸ ಮಾಡಬೇಕು ಎಂದು ತಿಳಿದುಕೊಳ್ಳಿ

news18-kannada
Updated:November 24, 2020, 1:34 PM IST
ನಿಮ್ಮ ಅಗತ್ಯಗಳು ಬದಲಾದಂತೆ, ನಿಮ್ಮ ವಿಮೆ ಕೂಡಾ ಬದಲಾಗಬೇಕು
HDFC Life Insurance
  • Share this:
ಮನುಷ್ಯರು ಎನ್ನುವುದು ವಿಕಾಸದ ಉತ್ಪನ್ನಗಳಷ್ಟೇ. ಇಂದು ಇದ್ದಂತೆ ನಾಳೆ ಇರುವುದಿಲ್ಲ, ನಾವು ಬೆಳೆಯುತ್ತೇವೆ, ಹೊಂದಿಕೊಳ್ಳುತ್ತೇವೆ, ಬದಲಾಗುತ್ತೇವೆ. ನಾವು ಬೆಳೆದಂತೆ, ನಮ್ಮ ಜೊತೆಗೆ ನಮ್ಮ ಅಗತ್ಯ ಮತ್ತು ಬೇಡಿಕೆಗಳು ಕೂಡ ಬದಲಾಗುತ್ತವೆ. ಹಿಂದೆ ನಮಗೆ ಯಾವುದು ಒಳ್ಳೆಯದಾಗಿತ್ತೋ ಅದು ಇಂದು ಸಂಪೂರ್ಣವಾಗಿ ಉಪಯೋಗಕ್ಕೆ ಬರದೇ ಇರಬಹುದು. ಯಾವುದು ಉಪಯೋಗಕ್ಕೆ ಬರುವುದಿಲ್ಲವೋ ಅದು ಕಣ್ಮರೆಯಾಗಿ ಹೋಗುತ್ತದೆ. ಅದು ತಂತ್ರಜ್ಞಾನ, ಆಲೋಚನೆಗಳು ಅಥವಾ ಉತ್ಪನ್ನಗಳು ಯಾವುದೇ ಆಗಿರಲಿ, ಸದಾ ಬದಲಾಗುತ್ತಿರುವ ಮನುಷ್ಯನ ಪ್ರವೃತ್ತಿಯ ಮನಸ್ಥಿತಿಗೆ ಯಾವುದು ಹೊಂದಿಕೊಳ್ಳುತ್ತವೆಯೋ ಅವು ಮಾತ್ರ ಉಳಿಯುತ್ತವೆ ಹಾಗೂ ಅವುಗಳನ್ನು ನಮ್ಮದಾಗಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಆದರೆ ಬದುಕುಳಿಯುವುದು ಎಂದರೆ ಅನಿಶ್ಚಿತತೆ ಕೂಡಾ ಅದೊರೊಂದಿಗೆ ಜೀವಂತವಾಗಿರುತ್ತದೆ.ನಾವು ವಿಕಸನಗೊಂಡು ಪ್ರಗತಿ ಹೊಂದುತ್ತಿದ್ದಂತೆ, ನಾವು ಬದುಕಿರುವಾಗ ಅಥವಾ ಮರಣದ ನಂತರವೂ ನಾವು ಮತ್ತು ನಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರಲು ನಾವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗಲೇ ಕೆಲವು ಉತ್ತಮ ವಿಮಾ ಪಾಲಿಸಿಗಳು ನಮ್ಮ ಕಣ್ಮುಂದೆ ಬರುತ್ತವೆ.

ನಾವು ಬಯಸುವ ಪ್ರಕಾರ ನಮಗೆ, ಮನುಷ್ಯರಿಗೆ ಎಲ್ಲವೂ ‘ಚುರುಕಾಗಿ’ ಸಿಗಬೇಕಾಗಿರುವಾಗ, ನಮಗೆ ಅವಿಭಾಜ್ಯವಾದ ಮತ್ತು ಬಹಳ ಪ್ರಮುಖವಾದ ವಿಮಾ ಪಾಲಿಸಿಯು ಕೂಡ ಅದರಂತೆಯೇ ಬೇಕು ಎಂದು ಯಾಕೆ ನಾವು ಬಯಸುವುದಿಲ್ಲ? ನಾವು ಬದಲಾದಂತೆ ಮತ್ತು ಬೆಳೆದಂತೆ ವಿಮಾ ಪಾಲಿಸಿಯು ಕೂಡ ಇನ್ನಷ್ಟು ಸರಳವಾಗಿದೆ, ಇನ್ನಷ್ಟು ಕಸ್ಟಮೈಸ್ ಮಾಡಬಹುದಾಗಿದೆ ಮತ್ತು ನಮಗೆ ಬೇಕಾದಂತೆ ಸಿಗುತ್ತದೆ ಎಂಬುದನ್ನು ನಾವು ಒಪ್ಪಲೇಬೇಕು.

HDFC Life ಕ್ಲಿಕ್ 2 ಪ್ರೊಟೆಕ್ಟ್ ಪ್ಲಸ್ ಪ್ಲಾನ್ ಈ ಎಲ್ಲದರ ಜೊತೆಗೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಕೊಡುಗೆಗೆಗಳು ಅಮೋಘವಾಗಿರುವುದರ ಜೊತೆಗೆ, ನಿಮಗೆ ಬೇಕಾದ ಎಲ್ಲವೂ ನಿಮಗೆ ಸಿಗುವಂತಾಗಲು ಇದನ್ನು ಬಹಳ ಸುಲಭವಾಗಿ ಕಸ್ಟಮೈಸ್ ಮಾಡಬಹುದು, ಇದರಿಂದಾಗಿ ನಿಮ್ಮೊಂದಿಗೆ ಬದಲಾಗಲು ಇದಕ್ಕೆ ಸಾಧ್ಯವಾಗುವಂತೆ ಮಾಡುತ್ತದೆ.

HDFC Life Insurance
HDFC Click 2 Protect


HDFC Life  ಕ್ಲಿಕ್ 2 ಪ್ರೊಟೆಕ್ಟ್ ಪ್ಲಸ್ ಯಾಕೆ ಬೇಕು?

  • ಕೈಗೆಟುಕುವ ಬೆಲೆಯಲ್ಲಿ ದಿನಕ್ಕೆ ಕೇವಲ ರೂ. 17* ರಿಂದ ಆರಂಭವಾಗುವ ಟರ್ಮ್ ಇನ್ಶೂರೆನ್ಸ್ ಯೋಜನೆಗಳು!

  • ಆಯ್ಕೆ ಮಾಡಲು ಲಭ್ಯವಿರುವ ಕವರ್ ಆಯ್ಕೆಗಳ ಸೂಪರ್ ಸಮಗ್ರ ಪೋರ್ಟ್‌ಫೋಲಿಯೋ

  • ನಿಮ್ಮಂತೆಯೇ ಅನನ್ಯವಾಗಿರುವ ಯೋಜನೆಯನ್ನು ಆಯ್ಕೆಮಾಡುವ, ಆರಿಸಿಕೊಳ್ಳುವ ಮತ್ತು ರಚಿಸುವ ಸಾಮರ್ಥ್ಯ

  • ಇದು ಅಕ್ಸೆಸ್ ಮಾಡಲು ತುಂಬಾ ಅನುಕೂಲಕರವಾಗಿದೆ ಮತ್ತು ನಿಮ್ಮ ಎಲ್ಲಾ ರಕ್ಷಣೆಯ ಅಗತ್ಯಗಳನ್ನು ನೋಡಿಕೊಳ್ಳುತ್ತದೆ

  • ಈ ಸಾಮರ್ಥ್ಯವು ರೈಡರ್‌ಗಳನ್ನು ಸೇರಿಸುವ ಮೂಲಕ ರಿಸ್ಕ್ ಕವರ್ ಅನ್ನು ಹೆಚ್ಚಿಸುತ್ತದೆ


ನಿಮ್ಮ ನಿಧನವಾದ ಸಂದರ್ಭದಲ್ಲಿ, ನಿಮ್ಮ ಪಾಲಿಸಿ ಮತ್ತು ನೀವು ಪಾವತಿಸಿದ ಪ್ರೀಮಿಯಂಗಳ ಸಂಖ್ಯೆಯನ್ನು ಆಧರಿಸಿ ನಿಮ್ಮ ಕುಟುಂಬವು ಒಂದು ನಿರ್ದಿಷ್ಟ ಮೊತ್ತವನ್ನು ಪಡೆಯುತ್ತದೆ. ನೀವು ಕ್ಲಿಕ್ 2 ಪ್ರೊಟೆಕ್ಟ್ ಪ್ಲಸ್‌ನಲ್ಲಿ ಹೂಡಿಕೆ ಮಾಡುವಾಗ ಬೇರೆ ಬೇರೆ ಕವರ್ ಆಯ್ಕೆಗಳ ಮೂಲಕ ಕೂಡ ಆರಿಸಿಕೊಳ್ಳಬಹುದು:
ಲೈಫ್ ಆಪ್ಷನ್

ಎಕ್ಸ್‌ಟ್ರಾ ಲೈಫ್ ಆಪ್ಷನ್

ಇನ್‌ಕಮ್ ಆಪ್ಷನ್

ಇನ್‌ಕಮ್ ಪ್ಲಸ್ ಆಪ್ಷನ್

ನಿಮ್ಮ ಅಗತ್ಯತೆಗಳನ್ನು ಪರಿಗಣಿಸುವುದು ಮತ್ತು ಅದಕ್ಕೆ ತಕ್ಕಂತೆ ಖರೀದಿಸುವುದು ಮಹಳ ಮುಖ್ಯ. ನಿಮ್ಮ ಮರಣದ ನಂತರ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಒಂದೇ ಪಾವತಿಯನ್ನು ನೀವು ಹುಡುಕುತ್ತಿದ್ದೀರಾ? ಅಥವಾ ಅವರಿಗೆ ನಿಶ್ಚಿತ ಮಾಸಿಕ ಆದಾಯ ಬರಬೇಕೆಂದು ಬಯಸುತ್ತೀರಾ? ಅವರ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ಎಷ್ಟು ಮೊತ್ತವನ್ನು ಮೀಸಲಿಡಲು ಬಯಸುತ್ತೀರಿ?

ದಿನದಿಂದ ದಿನಕ್ಕೆ ನಿಮ್ಮ ಜೀವನ, ನಿಮ್ಮ ಕೆಲಸ, ನಿಮ್ಮ ಕುಟುಂಬ ಮತ್ತು ನಿಮ್ಮದೇ ಆದ ಎಲ್ಲದರಲ್ಲೂ ಬಹಳ ಸುಲಭವಾಗಿ ಮುಳುಗಿರುತ್ತೀರಿ. ಅದರಲ್ಲೂ ನೀವು ಇನ್ನೂ ಕಿರಿಯ ವಯಸ್ಸಿನವರಾಗಿದ್ದು, ಇನ್ನೂ ಹಲವು ದಶಕಗಳ ಕಾಲ ಜೀವನ ನಡೆಸಬೇಕೆಂದು ಬಯಸಿದವರಾಗಿದ್ದರೆ ನಿಮ್ಮ ವಿಷಯದ್ದಲ್ಲಿ ಇದು ನಿಜವಾಗಿರುತ್ತದೆ! ನಿಮ್ಮ ವಯಸ್ಸು ಬದಲಾದಂತೆ ಮತ್ತು ನಿಮ್ಮ ಆದ್ಯತೆಗಳು ಬದಲಾದಂತೆ ಬಯಕೆಗಳು ಬದಲಾಗುವುದು ಕೂಡ ಸತ್ಯ.

20ನೇ ವಯಸ್ಸಿನಲ್ಲಿ, ನಿಮ್ಮ ವೃತ್ತಿ ಜೀವನದಲ್ಲಿನ ಪ್ರಗತಿ ಅಥವಾ ಮದುವೆಯಾಗುವುದು ನೀವು ಯೋಚಿಸುವ ಜೀವನದ ಪ್ರಮುಖ ಗುರಿಯಾಗಿರುತ್ತದೆ. ವಯಸ್ಸು 40 ದಾಟುತ್ತಿದ್ದಂತೆ, ನಿಮಗೇನಾದರೂ ಸಂಭವಿಸಿದರೆ ಆಗ ನಿಮ್ಮ ಮಕ್ಕಳು ಹೇಗೆ ನಿಮ್ಮಿಂದ ದೂರವಾಗುತ್ತಾರೆ ಎಂಬ ಆಲೋಚನೆಗಳು ಶುರುವಾಗುತ್ತವೆ. ವರ್ಷಗಳು ಕಳೆದಂತೆ ಪ್ರತಿಯೊಬ್ಬರೂ ಬದಲಾಗುತ್ತಾರೆ ಹಾಗೆಯೇ ಅವರೊಂದಿಗೆ ಅವರ ಭರವಸೆ ಮತ್ತು ಭಯಗಳು ಕೂಡಾ ಬದಲಾಗುತ್ತವೆ.

ಆದ್ದರಿಂದಲೇ ಇಲ್ಲಿ ಬಹಳ ಪ್ರಮುಖವಾದ ಸಂಗತಿಯೆಂದರೆ, ನೀವು ಇಲ್ಲದೇ ಇರುವಾಗ HDFC Life ಕ್ಲಿಕ್ 2 ಪ್ರೊಟೆಕ್ಟ್ ಪ್ಲಸ್ ನಿಮ್ಮ ಕುಟುಂಬದ ಸುರಕ್ಷತೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬಹುದು. ಅವಶ್ಯಕತೆಗೆ ತಕ್ಕಂತೆ ಹೊಂದಿಕೊಳ್ಳುವ ಇದರ ಕಾರಣದಿಂದಾಗಿ ನೀವು ಯಾವ ರೀತಿಯ ಪಾಲಿಸಿಯನ್ನು ಬಯಸುತ್ತೀರೋ ಅದನ್ನೇ ನೀವು ಇಲ್ಲಿ ಪಡೆಯಬಹುದು, ಇದರಿಂದಾಗಿ ನಿಮ್ಮ ಮರಣ ನಂತರ ಕೂಡ ನಿಮ್ಮ ಪ್ರೀತಿಪಾತ್ರರು ನಿಶ್ಚಿಂತೆಯಿಂದಿರಲು ಸಾಧ್ಯವಾಗುತ್ತದೆ.

ಆದ್ದರಿಂದ HDFC Lifeಗೆ ಲಾಗ್ ಆನ್ ಮಾಡಿ ಈ ಕೂಡಲೇ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸಿ. ಏಕೆಂದರೆ ಅವರ ಕುರಿತು ಕಾಳಜಿ ವಹಿಸಲಾಗಿದೆ ಎಂಬುದು ಖಾತ್ರಿಯಾದರೆ, ನೀವು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.
Published by: Sharath Sharma Kalagaru
First published: November 19, 2020, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories