• Home
  • »
  • News
  • »
  • lifestyle
  • »
  • Food Combinations: ಪ್ರೊಟೀನ್ ಯುಕ್ತ ಆಹಾರಕ್ಕೆ ಈ ಕಾಂಬಿನೇಷನ್‌ಗಳೇ ಬೆಸ್ಟ್, ನೀವು ಒಮ್ಮೆ ಟ್ರೈ ಮಾಡಿ

Food Combinations: ಪ್ರೊಟೀನ್ ಯುಕ್ತ ಆಹಾರಕ್ಕೆ ಈ ಕಾಂಬಿನೇಷನ್‌ಗಳೇ ಬೆಸ್ಟ್, ನೀವು ಒಮ್ಮೆ ಟ್ರೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೊಸರು, ಪಾಲಕ್‌ ಸೇರಿದಂತೆ ವಿವಿಧ ಸೊಪ್ಪು, ಅಣಬೆಗಳು ಹೀಗೆ ಹೆಚ್ಚಿನ ಪ್ರೋಟೀನ್‌ ಯುಕ್ತ ಆಹಾರಗಳು ಶರೀರಕ್ಕೆ ತುಂಬಾನೇ ಒಳ್ಳೆಯದು. ಆದರೆ, ಕೆಲವು ಆಹಾರಗಳನ್ನು ಒಂದರ ಜೊತೆಗೆ ಸೇರಿಸಿ ತಿನ್ನೋದ್ರಿಂದ ನಿಮ್ಮ ದೇಹವು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಉತ್ತಮ ರೀತಿಯಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

ಆರೋಗ್ಯಕ್ಕೆ ಪೌಷ್ಠಿಕ ಆಹಾರ (Nutritious food) ಬೇಕೇ ಬೇಕು. ಉತ್ತಮ ಆಹಾರ ಆರೋಗ್ಯ ಕಾಪಾಡುವುದು ಹಾಗೂ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಉತ್ತಮ ಪ್ರಮಾಣದಲ್ಲಿ ಪಡೆಯಲು ಸಹಾಯ ಮಾಡುತ್ತೆ. ಈ ಕಾರಣದಿಂದಾಗಿಯೇ ನಮ್ಮಲ್ಲಿ ಅನೇಕರು ನಮ್ಮ ಆಹಾರದಲ್ಲಿ ವಿವಿಧ ಪದಾರ್ಥಗಳನ್ನು ಸೇರಿಸಲು ಪ್ರಾರಂಭಿಸಿದ್ದಾರೆ. ಮೊಸರು, ಪಾಲಕ್‌ ಸೇರಿದಂತೆ ವಿವಿಧ ಸೊಪ್ಪು, ಅಣಬೆಗಳು (Mushroom) ಹೀಗೆ ಹೆಚ್ಚಿನ ಪ್ರೋಟೀನ್‌ (Protein) ಯುಕ್ತ ಆಹಾರಗಳು ಶರೀರಕ್ಕೆ ತುಂಬಾನೇ ಒಳ್ಳೆಯದು. ಆದರೆ, ಕೆಲವು ಆಹಾರಗಳನ್ನು ಒಂದರ ಜೊತೆಗೆ ಸೇರಿಸಿ ತಿನ್ನೋದ್ರಿಂದ ನಿಮ್ಮ ದೇಹವು ಜೀವಸತ್ವಗಳು (Vitamins) ಮತ್ತು ಉತ್ಕರ್ಷಣ ನಿರೋಧಕಗಳನ್ನು ಉತ್ತಮ ರೀತಿಯಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.


ಪ್ರಸಿದ್ಧ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು, ಪೋಷಕಾಂಶಗಳ ಉತ್ತಮ ಹೀರಿಕೊಳ್ಳುವಿಕೆಗೆ ಸಹಾಯ ಮಾಡುವ ಕೆಲವು ಆಹಾರ ಸಂಯೋಜನೆಗಳಿವೆ ಎಂದಿದ್ದು ಈ ಬಗ್ಗೆ ವಿವರಣೆ ನೀಡಿದ್ದಾರೆ. ಹಾಗಿದ್ರೆ ಆ ಫುಡ್‌ ಕಾಂಬಿನೇಷನ್‌ ಯಾವ್ದು ಅನ್ನೋದನ್ನು ನೀವೂ ತಿಳಿದುಕೊಳ್ಳಿ.


1. ಬಾಳೆಹಣ್ಣು ಮತ್ತು ಯೋಗರ್ಟ್‌
ಪ್ರಿಬಯಾಟಿಕ್‌ಗಳು ಮತ್ತು ಪ್ರೋಬಯಾಟಿಕ್‌ಗಳಿಗೆ ಬಾಳೆಹಣ್ಣು ಮತ್ತು ಮೊಸರು ಉತ್ತಮ ಕಾಂಬಿನೇಷನ್.‌ ಈ ಕಾಂಬಿನೇಷನ್‌ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಮ್‌ ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವ ಗುಣ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೊಸರು ಹಾಗೂ ಬಾಳೆಹಣ್ಣಿನ ಕಾಂಬಿನೇಷನ್‌ ನಲ್ಲಿ ನೀವು ಸ್ಮೂತಿಯನ್ನು ಮಾಡಿ ಕುಡಿಯಬಹುದು.


ಇದನ್ನೂ ಓದಿ: Healthy Food: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


2. ಮಶ್ರೂಮ್‌ ಹಾಗೂ ಎಳ್ಳು
ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂಗಾಗಿ ಅಣಬೆಗಳು ಮತ್ತು ಎಳ್ಳನ್ನು ಸೇವಿಸಬಹುದಾಗಿದೆ. ವಿಟಮಿನ್ ಮತ್ತು ಖನಿಜ ಹೇರಳವಾಗಿರುವ ಈ ಕಾಂಬಿನೇಷನ್‌ ಮೂಳೆಗಳನ್ನು ಬಲವಾಗಿಸುತ್ತದೆ. ನಿಮ್ಮ ದೇಹಕ್ಕೆ ವಿಟಮಿನ್‌ ಡಿ ದೊರೆತಾಗ ನಿಮ್ಮ ಆಹಾರಗಳಲ್ಲಿದ್ದ ಕ್ಯಾಲ್ಶಿಯಂ ಹೆಚ್ಚಿನ ಪ್ರಮಾಣದಲ್ಲಿ ಹೀರಲ್ಪಡುತ್ತದೆ. ಈ ಆಹಾರ ಸಂಯೋಜನೆ ಕ್ಯಾಲ್ಶಿಯಂ ಅನ್ನು ಹೀರಿಕೊಳ್ಳುವ ಗುಣವನ್ನು ಹೆಚ್ಚು ಮಾಡುತ್ತದೆ. ನೀವು ಅಣಬೆ ಹಾಗೂ ಎಳ್ಳನ್ನು ಬಳಸಿ ಸಾಕಷ್ಟು ವೆರೈಟಿ ಡಿಶ್‌ ಗಳನ್ನು ತಯಾರಿಸಬಹುದಾಗಿದೆ.


3. ಲಿಂಬು ಮತ್ತು ಸೊಪ್ಪು
ಇನ್ನು ವಿಟಾಮಿನ್‌ ಸಿ ಇರುವಂಥ ಲಿಂಬು ಹಾಗೂ ಸಸ್ಯ ಆಧಾರಿತ ಕಬ್ಬಿಣ ಅಥವಾ ಐರನ್‌ ಹೊಂದಿರುವಂತ ಹಸಿರು ಸೊಪ್ಪುಗಳು ಶರೀರಕ್ಕೆ ಒಳ್ಳೆಯದು. ದೇಹವು ಕಬ್ಬಿಣದ ಅಂಶವನ್ನು ಸುಲಭವಾಗಿ ಹೀರಿಕೊಳ್ಳಲು ವಿಟಮಿನ್‌ ಸಿ ಅಂಶವು ಸಹಾಯ ಮಾಡುತ್ತದೆ. ಹೀಗಾಗಿ ನೀವು ಹಸಿರು ಸೊಪ್ಪು ಹಾಗೂ ಲಿಂಬೆಯನ್ನು ಒಟ್ಟಿಗೆ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಲಾಭವನ್ನು ಪಡೆಯಬಹುದು.


4. ಆಲಿವ್‌ ಮತ್ತು ಪಾಲಕ್‌
ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್ ಎ ಪಡೆಯಲು ಆಲಿವ್ ಮತ್ತು ಪಾಲಕ್ ಸೇವಿಸೋದು ಉತ್ತಮ. ಪಾಲಕ್‌ ಸೊಪ್ಪನ್ನು ಬೇಯಿಸಿ ಅದನ್ನು ಸ್ವಲ್ಪ ಆಲಿವ್‌ ಎಣ್ಣೆಯೊಂದಿಗೆ ಸೇವಿಸೋದ್ರಿಂದ ದ್ಯುತಿರಾಸಾಯನಿಕ ಅಥವಾ ಪೊಟೋಕೆಮಿಕಲ್‌ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತೆ. ಪಾಲಕ್‌ ಹಾಗೂ ಆಲಿವ್‌ ಎಣ್ಣೆಯೊಂದಿಗೆ ನೀವು ಹಲವಾರು ವಿಧದ ಅಡುಗೆಯನ್ನು ಮಾಡಿಕೊಳ್ಳಬಹುದು.


5. ಬಾದಾಮಿ ಹಾಗೂ ಕಿತ್ತಳೆ
ವಿಟಮಿನ್ ಇ ಹೊಂದಿರುವ ಬಾದಾಮಿ ಮತ್ತು ವಿಟಮಿನ್‌ ಸಿ ಹೊಂದಿರುವ ಕಿತ್ತಳೆ ಇವೆರಡೂ ಜೀವಸತ್ವಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಅವಶ್ಯಕ. ಈ ಫುಡ್‌ ಕಾಂಬಿನೇಷನ್‌ ನಿಮ್ಮ ಚರ್ಮಕ್ಕೂ ಒಳ್ಳೆಯದು. ಅಲ್ಲದೇ ವಿಟಮಿನ್ ಇ ಕೆಂಪು ರಕ್ತ ಕಣಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತೆ.


ಇದನ್ನೂ ಓದಿ:  Hair Care Tips: ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು ಹೇಗೆ ಕೂದಲ ಆರೋಗ್ಯಕ್ಕೆ ಪ್ರಯೋಜನಕಾರಿ?


ಇವಿಷ್ಟು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಸೂಚಿಸುವ ಆಹಾರ ಕಾಂಬಿನೇಷನ್.‌ ಇವುಗಳನ್ನು ಸೇವಿಸಿದಲ್ಲಿ ನಿಮ್ಮ ಶರೀರಕ್ಕೂ ಸಾಕಷ್ಟು ಪ್ರೋಟೀನ್‌ ಜೊತೆಗೆ ಹಲವು ವಿಟಮಿನ್‌ ಗಳು ದೊರೆಯುತ್ತವೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ.

Published by:Ashwini Prabhu
First published: