Fitness Tips: ಐವತ್ತರ ಹರೆಯದಲ್ಲೂ ಸಖತ್ ಫಿಟ್ ಆಗಿ ಕಾಣುವ ನಟ ಸೈಫ್ ಅಲಿ ಖಾನ್ ಅವರ ಫಿಟ್ನೆಸ್ ರಹಸ್ಯ ಇದು

ಇಲ್ಲೊಬ್ಬ ಬಾಲಿವುಡ್ ನಟನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮಕ್ಕಳು ಇದ್ದರೂ ಸಹ ತುಂಬಾನೇ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಾರಪ್ಪಾ ಆ ನಟ ಅಂತ ನಿಮಗೆ ತಿಳಿದುಕೊಳ್ಳಲು ಕುತೂಹಲವಿರಬೇಕಲ್ಲವೇ? ನಟ ಸೈಫ್ ಅಲಿ ಖಾನ್ ಅವರು ತಮ್ಮ 51ನೇ ವಯಸ್ಸಿನಲ್ಲಿಯೂ ಹೇಗೆ ಫಿಟ್ ಆಗಿ ಇದ್ದಾರೆ ನೋಡೋಣ. ಇವರ ದಿನಚರಿ ಹೇಗಿರುತ್ತದೆ ಮತ್ತು ಇವರ ಜೀವನಶೈಲಿ ಹೇಗಿದೆ ಅಂತ ತಿಳಿದುಕೊಳ್ಳೋಣ.

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್

  • Share this:
ಸಾಮಾನ್ಯವಾಗಿ ಈ ಬಾಲಿವುಡ್ ನ ನಟ (Bollywood Actor) ಮತ್ತು ನಟಿಯರು ಪ್ರತಿದಿನ ಯೋಗ ಮಾಡುವುದರ ಮೂಲಕ ಮತ್ತು ಜಿಮ್ ಗಳಿಗೆ (Gym) ಹೋಗಿ ಅಲ್ಲಿ ಕಠಿಣವಾದ ತಾಲೀಮು ಮಾಡಿ ಮತ್ತು ಒಳ್ಳೆಯ ಆಹಾರವನ್ನು (Food) ಸೇವಿಸುವ ಮೂಲಕ ತಮ್ಮನ್ನು ತಾವು ತುಂಬಾನೇ ಫಿಟ್ ಆಗಿ ಇಟ್ಟು ಕೊಂಡಿರುತ್ತಾರೆ. ಕೆಲವು ನಟ ಮತ್ತು ನಟಿಯರ ಆರೋಗ್ಯಕರವಾದ ಜೀವನಶೈಲಿ (Healthy Lifestyle) ನಿಜಕ್ಕೂ ಇವರ ಅಭಿಮಾನಿಗಳಿಗೆ ಒಂದು ಸ್ಪೂರ್ತಿ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಕೆಲವರು ಬೆಳಿಗ್ಗೆ ಎದ್ದು ಯೋಗ (Yoga) ಮಾಡಿದರೆ, ಇನ್ನೂ ಕೆಲವರು ಜಿಮ್ ಗೆ ಹೋಗಿ ಕಠಿಣವಾದ ತಾಲೀಮು ಮಾಡಿ ಬರುತ್ತಾರೆ. ಇದೆಲ್ಲದರ ಜೊತೆಗೆ ಒಳ್ಳೆಯ ಆಹಾರವನ್ನು (Food) ಸೇವಿಸುತ್ತಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕೆಲವು ನಟ ಮತ್ತು ನಟಿಯರು 50 ವರ್ಷ ವಯಸ್ಸಿನವರಾದರೂ ಸಹ ತುಂಬಾನೇ ಯಂಗ್ ಆಗಿ ಕಾಣಿಸುತ್ತಾರೆ. ಅವರನ್ನು ಪರದೆಯ ಮೇಲೆ ನೋಡಿದರೆ, ಇನ್ನೂ ಯಂಗ್ ಆಗಿ ಕಾಣುತ್ತಾರೆ. ಇಲ್ಲೊಬ್ಬ ಬಾಲಿವುಡ್ ನಟನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮಕ್ಕಳು ಇದ್ದರೂ ಸಹ ತುಂಬಾನೇ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಾರಪ್ಪಾ ಆ ನಟ ಅಂತ ನಿಮಗೆ ತಿಳಿದುಕೊಳ್ಳಲು ಕುತೂಹಲವಿರಬೇಕಲ್ಲವೇ? ನಟ ಸೈಫ್ ಅಲಿ ಖಾನ್ ಅವರು ತಮ್ಮ 51ನೇ ವಯಸ್ಸಿನಲ್ಲಿಯೂ ಹೇಗೆ ಫಿಟ್ ಆಗಿ ಇದ್ದಾರೆ ನೋಡೋಣ. ಇವರ ದಿನಚರಿ ಹೇಗಿರುತ್ತದೆ ಮತ್ತು ಇವರ ಜೀವನಶೈಲಿ ಹೇಗಿದೆ ಅಂತ ತಿಳಿದುಕೊಳ್ಳೋಣ.

1. ಸಕ್ಕರೆ ಮತ್ತು ಕಾರ್ಬ್ಸ್ ಗೆ ಗುಡ್ ಬೈ ಹೇಳಿದ ನಟ
ನಟ ಸೈಫ್ ಅಲಿ ಖಾನ್ ಅವರು ತುಂಬಾ ವರ್ಷಗಳ ಹಿಂದೆಯೇ ಈ ಸಕ್ಕರೆ ಮತ್ತು ಸಿಹಿ ತಿಂಡಿಗಳನ್ನು ಸೇವಿಸುವುದನ್ನು ಪೂರ್ತಿಯಾಗಿ ಬಿಟ್ಟಿದ್ದಾರಂತೆ ಮತ್ತು ಇಷ್ಟೇ ಅಲ್ಲದೆ ಕಾರ್ಬೊಹೈಡ್ರೇಟ್ಸ್ ಅಂಶವಿರುವ ಆಹಾರ ಪದಾರ್ಥಗಳನ್ನು ಸಹ ತುಂಬಾ ವರ್ಷಗಳ ಹಿಂದೆಯೇ ತ್ಯಜಿಸಿದ್ದಾರಂತೆ ಎಂದು ಹೇಳಲಾಗುತ್ತಿದೆ.

2. ಸೈಫ್ ಮನೆಯ ಊಟವನ್ನೇ ಇಷ್ಟಪಡುತ್ತಾರೆ
ಈಗಂತೂ ಬಹುತೇಕರು ತಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಮನೆಯಲ್ಲಿ ಮಾಡಿದ ಊಟದ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ ಎಂದು ಹೇಳಬಹುದು. ನಟ ಸೈಫ್ ಸಹ ಹೊರಗಿನ ಯಾವ ತಿಂಡಿಯನ್ನು ಸಹ ತಿನ್ನುವುದಿಲ್ವಂತೆ, ಬರೀ ಮನೆಯಲ್ಲಿ ಮಾಡಿದ ಊಟ ಅಷ್ಟೇ ಮಾಡೋದಂತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Keto Diet Plan: ಕೀಟೊ ಡಯಟ್ ಪ್ಲಾನ್ ಫಾಲೋ ಮಾಡಿ ತೂಕ ಇಳಿಸಿದ ಸೆಲೆಬ್ರಿಟಿಗಳು ಮತ್ತು ಆರೋಗ್ಯ

3. ನಿಧಾನವಾಗಿ ತಿನ್ನುವುದನ್ನು ರೂಢಿಸಿಕೊಂಡ ಸೈಫ್
ನಟ ಸೈಫ್ ಅವರು ಆಹಾರವನ್ನು ಹೇಗೆ ತಿನ್ನಬೇಕು ಮತ್ತು ಹೇಗೆ ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಅಂತ ತಿಳಿದುಕೊಂಡಿದ್ದಾರೆ. ಆವರು ರುಜುತಾ ದಿವೇಕರ್ ಅವರ ಬಳಿ ಮಾಹಿತಿ ಪಡೆದು, ಆಹಾರವನ್ನು ನಿಧಾನವಾಗಿ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ.

4. ಡಯಟ್ ಮಾಡುತ್ತಾರೆ ಸೈಫ್
ನಟ ಸೈಫ್ ಮನೆಯ ಊಟದ ಜೊತೆಗೆ ಹಣ್ಣುಗಳನ್ನು ಮತ್ತು ಡ್ರೈ ಫ್ರೂಟ್ಸ್ ಗಳನ್ನು ಚೆನ್ನಾಗಿ ತಿನ್ನುತ್ತಾರೆ.

5. ಸೈಫ್ ಉಪಾಹಾರ ಓಟ್ಸ್ ಮೀಲ್
ನಟ ಸೈಫ್ ಬೆಳಿಗ್ಗೆ ಉಪಾಹಾರಕ್ಕೆ ಅಂತ ಓಟ್ಸ್ ಮೀಲ್ ಅನ್ನು ಹಾಲಿನಲ್ಲಿ ಕಲಿಸಿಕೊಂಡು ಮತ್ತು ಅದರ ಮೇಲೆ ತಾಜಾ ಹಣ್ಣುಗಳನ್ನು ಹಾಕಿಕೊಂಡು ಸೇವಿಸುತ್ತಾರೆ.

6. ಮಧ್ಯಾಹ್ನದ ಊಟ ಸಲಾಡ್
ನಟ ಸೈಫ್ ಅಲಿ ಖಾನ್ ಅವರು ಬೆಳಿಗ್ಗೆ ಉಪಾಹಾರಕ್ಕೆ ಓಟ್ಸ್ ಮೀಲ್ ಸೇವಿಸಿದ ನಂತರ ಮಧ್ಯಾಹ್ನದ ಹೊತ್ತಿನಲ್ಲಿ ಕೇವಲ ಸಲಾಡ್ ಅನ್ನು ಮಾತ್ರವೇ ಸೇವಿಸುತ್ತಾರೆ.

7. ರಾತ್ರಿ ಊಟ ಸಹ ತುಂಬಾನೇ ಕಡಿಮೆ
ಸೈಫ್ ಅವರು ರಾತ್ರಿ ಹೊತ್ತು ಫಿಲ್ಲೆಟ್ ಸ್ಟೀಕ್ ಅನ್ನು ತಿಂದು ಊಟ ಮುಗಿಸುತ್ತಾರೆ. ಅದನ್ನು ಹೊರತುಪಡಿಸಿ ಮತ್ತೇನು ಇವರು ಸೇವಿಸುವುದಿಲ್ಲ.

ಇದನ್ನೂ ಓದಿ: Weight Loss: ತೂಕ ಇಳಿಸಲು ವಾಲ್ ನಟ್ಸ್ ಪವರ್​ಫುಲ್​ ಫುಡ್; ಹೀಗೆ ತಿಂದು ಬೊಜ್ಜು ಕರಗಿಸಿ

8. ಆಗಾಗ ಸೈಫ್ ಊಟದ ಜೊತೆಗೆ ಪಾಪಡ್ ತಿನ್ನುತ್ತಾರೆ
ಆಗಾಗ್ಗೆ ಊಟದ ಜೊತೆಗೆ ನಟ ಪಾಪಡ್ ಗಳನ್ನು ತಿನ್ನುತ್ತಾರೆ.

9. ಮದ್ಯಪಾನ, ಸಿಗರೇಟ್ ಸೇದಲ್ವಂತೆ ಸೈಫ್
 ನಟ ಫಿಟ್ ಆಗಿರಲು ಮದ್ಯಪಾನ ಮಾಡುವುದಿಲ್ಲ ಮತ್ತು ಸಿಗರೇಟ್ ಸಹ ಸೇದುವುದಿಲ್ಲ.
Published by:Ashwini Prabhu
First published: