news18-kannada Updated:February 20, 2021, 5:47 AM IST
ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರೂ ಸಲಹೆ ನೀಡುತ್ತಿರುತ್ತಾರೆ. ಆದರೆ ಎಲ್ಲವೂ ಮಿತಿಯಲ್ಲಿದ್ದರೆ ಮಾತ್ರ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗೆಯೇ ಒಣ ದ್ರಾಕ್ಷಿಯ ಸೇವನೆ ಕೂಡ ಆರೋಗ್ಯಕ್ಕೆ ಒಳ್ಳೆದು. ಏಕೆಂದರೆ 100 ಗ್ರಾಂ ಒಣದ್ರಾಕ್ಷಿ ಪ್ರಮಾಣದಲ್ಲಿ 249 ಕ್ಯಾಲೊರಿಗಳಿರುತ್ತವೆ. ಇದು ದೇಹದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಅಲ್ಲದೆ, ಮಲಬದ್ಧತೆ, ಕೊಲಿಕ್, ಗ್ಯಾಸ್, ಆಮ್ಲೀಯತೆ ಮತ್ತು ರಕ್ತಹೀನತೆಯನ್ನು ನಿವಾರಿಸುತ್ತದೆ. ಹಾಗೆಯೇ ಒಣ ದ್ರಾಕ್ಷಿಯಲ್ಲಿ ವಿಟಮಿನ್ ಬಿ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್ಗಳ ಸಮೃದ್ಧವಾಗಿರುತ್ತದೆ. ಆದರೆ ಇದನ್ನೂ ಕೂಡ ಮಿತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಅತಿಯಾದ ಒಣ ದ್ರಾಕ್ಷಿ ಸೇವನೆಯಿಂದ ಕೆಲ ಅಡ್ಡ ಪರಿಣಾಮಗಳು ಉಂಟಾಗುತ್ತದೆ.
ಅತಿಯಾದ ಒಣ ದ್ರಾಕ್ಷಿ ಸೇವನೆಯ ಅಡ್ಡ ಪರಿಣಾಮಗಳು:ಹೆಚ್ಚು ಒಣ ದ್ರಾಕ್ಷಿ ತಿನ್ನುವುದರಿಂದ ಕೆಲವರಿಗೆ ಅಲರ್ಜಿಯ ತೊಂದರೆ ಉಂಟಾಗುತ್ತದೆ. ಒಣ ದ್ರಾಕ್ಷಿ ಸೇವನೆಯಿಂದ ಚರ್ಮದ ದದ್ದು, ಚರ್ಮದಲ್ಲಿ ತುರಿಕೆ ಕಾಣಿಸಿಕೊಂಡರೆ ಇದರ ಸೇವನೆಯಿಂದ ದೂರ ಇರುವುದು ಉತ್ತಮ.
- ಹೆಚ್ಚು ಒಣ ದ್ರಾಕ್ಷಿ ತಿನ್ನುವುದರಿಂದ ಉಸಿರಾಟದ ತೊಂದರೆಯೂ ಉಂಟಾಗುತ್ತದೆ.
- ಅತಿಯಾದ ಒಣ ದ್ರಾಕ್ಷಿ ಸೇವನೆಯಿಂದ ಅತಿಸಾರ, ವಾಂತಿ, ಜ್ವರ ಕೂಡ ಕಾಣಿಸಿಕೊಳ್ಳುತ್ತದೆ.
- ಹೆಚ್ಚು ಒಣದ್ರಾಕ್ಷಿ ಸೇವಿಸುವುದರಿಂದ ಹೊಟ್ಟೆ ಗ್ಯಾಸ್ ಸಮಸ್ಯೆ ಕಾಡುತ್ತದೆ.
- ಅಧಿಕ ತೂಕ ಹೊಂದಿರುವವರು ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಒಣದ್ರಾಕ್ಷಿ ತಿನ್ನಬಾರದು. ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.- ಒಣ ದ್ರಾಕ್ಷಿ ಟ್ರೈಗ್ಲಿಸರೈಡ್ಗಳನ್ನು ಹೊಂದಿದ್ದು, ಇದು ಹೃದ್ರೋಗ, ಕೊಬ್ಬಿನ ಪಿತ್ತಜನಕಾಂಗ, ಪಿತ್ತಜನಕಾಂಗದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
-ಒಣದ್ರಾಕ್ಷಿ ಇತರ ಒಣ ಹಣ್ಣುಗಳಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಇದು ಮಧುಮೇಹಿಗಳಿಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಆದರೆ ನೀವು ಒಣದ್ರಾಕ್ಷಿಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಮಾತ್ರ ಇದು ಸಂಭವಿಸುತ್ತದೆ.
-ನೀವು ಸಂಪೂರ್ಣವಾಗಿ ಆರೋಗ್ಯವಾಗಿದ್ದರೆ ಮತ್ತು ಯಾವುದೇ ರೋಗವಿಲ್ಲದಿದ್ದರೆ, ನೀವು ಪ್ರತಿದಿನ 50 ರಿಂದ 100 ಗ್ರಾಂ ಒಣದ್ರಾಕ್ಷಿಗಳನ್ನು ಸೇವಿಸಬಹುದು.
Published by:
zahir
First published:
February 20, 2021, 5:47 AM IST