Exercise Benefits: ವ್ಯಾಯಾಮ ಮಾಡಿದ್ರೆ ಸಿಕ್ಕೇ ಸಿಗುತ್ತೆ ಈ 6 ಪ್ರಯೋಜನ!

Self Care: ನಿಮ್ಮ ದೇಹಕ್ಕೆ ಹೇಗೆ ವ್ಯಾಯಾಮ ಬೇಕೋ ಅದೇ ರೀತಿಯಾಗಿ ನಿಮ್ಮ ಮನಸ್ಸಿಗೂ ಸಹ ವ್ಯಾಯಾಮದ ಅವಶ್ಯಕತೆ ಇರುತ್ತದೆ. ಸೆಲ್ಪ್​ಕೇರ್​​ಗೆ ಅತ್ಯುತ್ತಮವಾದ ಉಪಾಯ ತಿಳಿಯಲು ಇದನ್ನು ಓದಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಸೆಲ್ಪ್ ಕೇರ್ (Self Care) ವಿಷಯ ಬಂದರೆ ನಾವು ಬೆಳಿಗ್ಗೆ ಎದ್ದು ಬಿಸಿ ಬಿಸಿ ಚಹಾ ಕುಡಿಯುವುದು, ಆಹಾರ ಸೇವಿಸುವುದು, ಬಿಸಿ ನೀರಿನಿಂದ ಸ್ನಾನ ಮಾಡುವುದು, ದಿನದಲ್ಲಿ ನಮಗೆ ಅಂತ ಸ್ವಲ್ಪ ಸಮಯವನ್ನು ಕಂಡು ಕೊಳ್ಳುವುದು ಎಂದು ನಾವು ಅಂದು ಕೊಂಡಿರುತ್ತೇವೆ.  ಸೆಲ್ಪ್ ಕೇರ್ ಎಂದರೆ ಬರೀ ವಿಶ್ರಾಂತಿ ಪಡೆಯಲು ಸಿಗುವ ಸಮಯ ಅಂತ ನೀವು ತಿಳಿದುಕೊಳ್ಳಬೇಡಿ. ಎಂತಹದೇ ಶ್ರಮದಾಯಕ ದೈಹಿಕ (Physical) ಚಟುವಟಿಕೆಯನ್ನು ಮಾಡುವಾಗಲೂ ನಮ್ಮ ಬಗ್ಗೆ ಯೋಚಿಸುವುದು ಮತ್ತು ನಮ್ಮ ಮನಸ್ಸನ್ನು(Mind) ತಿಳಿಯಾಗಿರಿಸಿಕೊಳ್ಳುವುದು ಎಂದರ್ಥ. ನಿಮ್ಮ ದೇಹಕ್ಕೆ ಹೇಗೆ ವ್ಯಾಯಾಮ (Exercise)  ಬೇಕೋ ಅದೇ ರೀತಿಯಾಗಿ ನಿಮ್ಮ ಮನಸ್ಸಿಗೂ ಸಹ ವ್ಯಾಯಾಮದ ಅವಶ್ಯಕತೆ ಇರುತ್ತದೆ.

ವ್ಯಾಯಾಮದ ಕೆಲವು ಪ್ರಯೋಜನಗಳು
ಯಾವುದೇ ದೈಹಿಕ ಚಟುವಟಿಕೆಯು ಮೆದುಳಿನ ಅವ್ಯವಸ್ಥೆಯನ್ನು ನಿವಾರಿಸಲು ಸಹಾಯ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಎಂಪವರ್ಮೆಂಟ್ ತರಬೇತುದಾರರಾದ ಜಾಗೃತಿ ಕಜಾರಿಯಾ ಅವರು ಜಿಮ್​ಗೆ ಹೋಗುವುದು ಅಥವಾ ಸಾಮಾನ್ಯವಾಗಿ ವರ್ಕೌಟ್ ಸೆಷನ್​ಗೆ ಹೋಗುವುದು ಸೆಲ್ಪ್​ಕೇರ್​​ಗೆ ಅತ್ಯುತ್ತಮವಾದ ಉಪಾಯ ಎಂದು ಹೇಳುತ್ತಾರೆ. ಹೀಗೆ ಮಾಡುವುದರಿಂದ ಏನಾಗುತ್ತದೆ ಎಂದು ತಿಳಿಯಲು ಮುಂದೆ ಓದಿ.

ಏಕಾಗ್ರತೆಯನ್ನು ಹೆಚ್ಚುತ್ತದೆ
ನೀವು ಜಿಮ್​ಗೆ ಹೋದಾಗ ಅಲ್ಲಿ ತಾಲೀಮು ಮಾಡುವ ಪ್ರತಿಯೊಬ್ಬರೂ ತಮ್ಮ ಆರಾಮ ವಲಯದಿಂದ ಹೊರ ಬಂದು ಹೇಗೆ ಹೆಚ್ಚೆಚ್ಚು ತಾಲೀಮು ಮಾಡಬೇಕು ಎಂಬ ಅಂಶದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಇದು ದಿನವಿಡೀ ದೇಹದಲ್ಲಿ ನಿರ್ಮಾಣವಾಗುವ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.  ಆಗ ಸ್ನಾಯುಗಳ ವಿಶ್ರಾಂತಿ, ಸಂತೋಷ ಮತ್ತು ಶಾಂತಿಯ ಭಾವನೆಗಳು ನಮ್ಮ ಅನುಭವಕ್ಕೆ ಬರುತ್ತದೆ.

ಇದನ್ನೂ ಓದಿ : ಕಡಿಮೆ ಅವಧಿಯಲ್ಲಿ ತೂಕ ಇಳಿಕೆಗೆ ಈ ಸುಲಭ ಸಲಹೆ ಪಾಲಿಸಿ!

 ಇತರರಿಂದ ಪ್ರೆರೇಪಣೆ
ಜಿಮ್​​ನಲ್ಲಿ ನಾವು ಇತರರಿಂದ ಪ್ರೇರೇಪಿತರಾಗಿ ಅವರು ದಿನಕ್ಕೆ ಎಷ್ಟು ಹೊತ್ತು ವ್ಯಾಯಾಮ ಮಾಡುತ್ತಾರೆ ಎಂಬುದನ್ನು ಗಮನಹರಿಸಿ ಅವರಿಂದ ಪ್ರೇರೇಪಿತರಾಗುತ್ತೇವೆ. ಇತರರು ನಮಗೆ ಸ್ಪೂರ್ತಿಯಾಗಬಹುದು.  ಅಂತಹ ಕ್ಷಣಗಳು ಎಂಡಾರ್ಫಿನ್ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅದು ನಮಗೇ ನಮ್ಮ ಬಗ್ಗೆ ಸಕಾರಾತ್ಮಕ ಮತ್ತು ಉತ್ತಮ ಭಾವನೆಯನ್ನು ಮೂಡಿಸುತ್ತದೆ. ಪರೋಕ್ಷವಾಗಿ ನಮ್ಮ ಮಿತಿಗಳನ್ನು ವಿಸ್ತರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ವ್ಯಾಯಾಮ ಮಾಡ್ದೇ ತೂಕ ಇಳಿಸೋದು ಹೇಗೆ ಗೊತ್ತಾ? ಇಲ್ನೋಡಿ ಹೀಗ್ ಮಾಡಿ

ನೀವು ಚೆನ್ನಾಗಿ ಆಹಾರ ಸೇವಿಸುವುದು
ನಾವು ಉತ್ತಮವಾಗಿ ವ್ಯಾಯಾಮದ ಮೂಲಕ ದೇಹ ದಣಿಸಿದಾಗ  ನಮಗೆ ಬಲಶಾಲಿ ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ, ನೀವು ಆಗ ಜಂಕ್ ಫುಡ್ ಗಳನ್ನು ತಿನ್ನುವ ಬದಲು ನಿಮ್ಮನ್ನು ಪೋಷಿಸುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಎಂಡಾರ್ಫಿನ್ ಗಳು, ಸೆರೊಟೋನಿನ್, ಡೋಪಮೈನ್ ಮತ್ತು ಆಕ್ಸಿಟೋಸಿನ್ ಇವೆಲ್ಲವೂ ಸಾಮಾನ್ಯವಾಗಿ ತಿಳಿದಿರುವ ಹಾರ್ಮೋನ್ ಗಳಾಗಿವೆ. ಆದ್ದರಿಂದ ಸ್ವಾಭಾವಿಕವಾಗಿ ಜಿಮ್​​ಗೆ ಹೊಗುವುದು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಸಕಾರಾತ್ಮಕ ಭಾವನೆಯು ನಿಮ್ಮ ದೇಹಕ್ಕೆ ನೀವು ನೀಡುವ ಆಹಾರದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಚುರುಕುತನ ಬರುತ್ತದೆ
ಈ ತರಬೇತಿಯು ದೇಹ, ಹೃದಯ ಮತ್ತು ಮಾನಸಿಕ ಮಟ್ಟಗಳಲ್ಲಿ ನಡೆಯುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಚುರುಕಾಗಿಡುವ ಮೂಲಕ ಹೆಚ್ಚಿನದನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸಮಯ ಮತ್ತು ಶಕ್ತಿ ಎರಡನ್ನೂ ಉದ್ದೇಶಪೂರ್ವಕವಾಗಿ ಆಪ್ಟಿಮೈಜೇಶನ್ ಮಾಡುವ ಈ ಅಭ್ಯಾಸವು ಖಂಡಿತವಾಗಿಯೂ ದೀರ್ಘಕಾಲೀನವಾಗಿರುವ ಆರೋಗ್ಯಕರ ಅಭ್ಯಾಸಗಳನ್ನು ರಚಿಸಲು ಸಹಾಯ ಮಾಡುತ್ತದೆ.

ನೆಗೆಟಿವ್ ಯೋಚನೆ ಕ್ಷೀಣಿಸುತ್ತದೆ
ವ್ಯಾಯಾಮ ಮಾಡುವುದರಿಂದಾಗಿ ನೆಗಟಿವ್ ಯೋಚನೆಗಳಿಂದ ನೀವು ಮುಕ್ತರಾಗಬಹುದು. ನಿಮ್ಮ ಜೀವನದಲ್ಲಿ ಧನಾತ್ಮಕ ಅಂಶಗಳೇ ಹೆಚ್ಚು ಒತ್ತು ಪಡೆಯುತ್ತದೆ.

ಮನಸ್ಸನ್ನು ಶಾಂತವಾಗಿರಿಸುತ್ತದೆ
ವ್ಯಾಯಾಮದ ಪ್ರಯೋಜನಗಳು ನಿಮ್ಮ ಮನಸ್ಸನ್ನು ಹೆಚ್ಚು ಶಾಂತ ಮತ್ತು ವಿಶ್ರಾಂತಿ ಸ್ಥಿತಿಗೆ ತರಲು ನಿಧಾನವಾಗಿ ಸಹಾಯ ಮಾಡುತ್ತದೆ. ಅಂತಹ ಶಾಂತ ಮನಸ್ಸು ದೇಹದ ದೃಢತೆಗೆ ಸಹಾಯ ಮಾಡುತ್ತದೆ.
First published: