• Home
  • »
  • News
  • »
  • lifestyle
  • »
  • Kiwi Fruit: ಕಿವಿ ಹಣ್ಣು ಕಾಸ್ಟ್ಲಿ ಅಂತ ತಿನ್ನದೇ ಇರುತ್ತೀರಾ? ಹಾಗಿದ್ರೆ ಈ ಆರೋಗ್ಯ ಪ್ರಯೋಜನಗಳು ಮಿಸ್ ಆಗುತ್ತೆ!

Kiwi Fruit: ಕಿವಿ ಹಣ್ಣು ಕಾಸ್ಟ್ಲಿ ಅಂತ ತಿನ್ನದೇ ಇರುತ್ತೀರಾ? ಹಾಗಿದ್ರೆ ಈ ಆರೋಗ್ಯ ಪ್ರಯೋಜನಗಳು ಮಿಸ್ ಆಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಿವಿ ಹಣ್ಣು ನಿಯಮಿತ ಸೇವನೆಯು ಹೆಚ್ಚಿನ ಪ್ರಯೋಜನ ನೀಡುತ್ತದೆ. ಸಂಶೋಧನಾ ವರದಿಯೊಂದರ ಪ್ರಕಾರ ಕಿವಿ ಹಣ್ಣು ಪೋಷಕಾಂಶಗಳಿಂದ ಕೂಡಿದೆ. ಎಲ್ಲಾ ಸಂಶೋಧನೆಗಳು ಕಿವಿ ಹಣ್ಣು ನಿಯಮಿತ ಸೇವನೆ ಆರೋಗ್ಯಕ್ಕೆ ಲಾಭಕಾರಿ ಎಂದು ಹೇಳಿವೆ. ಇದು ಪೌಷ್ಟಿಕಾಂಶದ ಸ್ಥಿತಿ ಸುಧಾರಿಸುತ್ತದೆ.

  • Share this:

    ಚಳಿಗಾಲವು (Winter) ಸಾಕಷ್ಟು ತರಕಾರಿಗಳು ಮತ್ತು ಹಣ್ಣುಗಳ ಸೀಸನ್ (Vegetables And Fruits Season) ಆಗಿರುತ್ತದೆ. ಸಾಕಷ್ಟು ತರಕಾರಿ ಮತ್ತು ವೆರೈಟಿ ಹಣ್ಣುಗಳು ಮಾರುಕಟ್ಟೆಗೆ (Market) ಲಗ್ಗೆ ಇಡುತ್ತವೆ. ವಿವಿಧ ಹಣ್ಣುಗಳು ವಿವಿಧ ಆರೋಗ್ಯ ಪ್ರಯೋಜನ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ಇವು ರುಚಿಯಿಂದ ಕೂಡಿದ್ದು ಆರೋಗ್ಯಕ್ಕೂ ಒಳ್ಳೆಯದು. ಅವುಗಳಲ್ಲಿ ಕಿವಿ ಹಣ್ಣು ಕೂಡ ಒಂದಾಗಿದೆ. ವರ್ಷವಿಡೀ ಸೂಪರ್ ಮಾರ್ಕೆಟ್ ನಲ್ಲಿ ಕಿವಿ ಹಣ್ಣುಗಳು ಲಭ್ಯ ಇವೆ. ಆದರೆ ಚಳಿಗಾಲದಲ್ಲಿ ಫ್ರೆಶ್ ಕಿವಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಕಿವಿ ಹಣ್ಣು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನಕಾರಿ. ಜೊತೆಗೆ ಕಿವಿ ಹಣ್ಣು ದೇಹದ ಇತರ ವ್ಯವಸ್ಥೆಗಳಿಗೆ ತುಂಬಾ ಉಪಯುಕ್ತ.


    ಕಿವಿ ಹಣ್ಣು ಆರೋಗ್ಯ ಪ್ರಯೋಜನಗಳು


    ಕಿವಿ ಹಣ್ಣು ನಿಯಮಿತ ಸೇವನೆಯು ಹೆಚ್ಚಿನ ಪ್ರಯೋಜನ ನೀಡುತ್ತದೆ. ಸಂಶೋಧನಾ ವರದಿಯೊಂದರ ಪ್ರಕಾರ, ಕಿವಿ ಹಣ್ಣು ಪೋಷಕಾಂಶಗಳಿಂದ ಕೂಡಿದೆ. ಎಲ್ಲಾ ಸಂಶೋಧನೆಗಳು ಕಿವಿ ಹಣ್ಣು ನಿಯಮಿತ ಸೇವನೆ ಆರೋಗ್ಯಕ್ಕೆ ಲಾಭಕಾರಿ ಎಂದು ಹೇಳಿವೆ. ಇದು ಪೌಷ್ಟಿಕಾಂಶದ ಸ್ಥಿತಿ ಸುಧಾರಿಸುತ್ತದೆ. ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ ಮತ್ತು ಚಯಾಪಚಯ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.


    ಕಿವಿಯು ಪೋಷಕಾಂಶಗಳ ನಿಧಿ


    ಕಿವಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹಲವು ಪೋಷಕಾಂಶ ಹೊಂದಿದೆ. ವಿಶೇಷವಾಗಿ ಆಹಾರದ ಫೈಬರ್, ಪೊಟ್ಯಾಸಿಯಮ್ ಮತ್ತು ಫೋಲೇಟ್. ಇದು ವ್ಯಾಪಕ ಶ್ರೇಣಿಯ ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವ ಹೊಂದಿದೆ.




    ಇದು ಚಯಾಪಚಯ ಕ್ರಿಯೆ ಸಕ್ರಿಯಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಬದಲಾಗುತ್ತಿರುವ ಋತುವಿನಲ್ಲಿ ಸಂಭವಿಸುವ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.


    ಪ್ರತಿದಿನ ಕಿವಿ ಹಣ್ಣು ಸೇವಿಸಿದರೆ ಸಿಗುವ ಆರೋಗ್ಯ ಪ್ರಯೋಜನಗಳು


    ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ


    ಇದು ಜೀರ್ಣಾಂಗ ವ್ಯವಸ್ಥೆಗೆ ವಿಶೇಷವಾಗಿ ಪ್ರಯೋಜನಕಾರಿ. ಫೈಬರ್ ಅಂಶ ಮತ್ತು ನೈಸರ್ಗಿಕ ಪ್ರೋಟಿಯೋಲೈಟಿಕ್ ಕಿಣ್ವ ಆಕ್ಟಿನಿಡಿನ್ ಇದನ್ನು ವಿಶೇಷವಾಗಿಸುತ್ತದೆ. ಈ ಕಿಣ್ವವು ಪ್ರೋಟೀನ್‌ಗಳನ್ನು ಒಡೆಯುತ್ತದೆ. ಕಿವಿ ಗ್ಯಾಸ್ಟ್ರಿಕ್ ಮತ್ತು ಇಲಿಯಲ್ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.


    ಇದು ಹೊಟ್ಟೆ ಮತ್ತು ಸಣ್ಣ ಕರುಳಿನ ಇತರ ಭಾಗಗಳಿಂದ ಬರುವ ಆಹಾರವನ್ನು ಮತ್ತಷ್ಟು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆಹಾರದಿಂದ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು, ಪ್ರೋಟೀನ್‌ಗಳು ಮತ್ತು ನೀರನ್ನು ಹೀರಿಕೊಳ್ಳುತ್ತದೆ.


    ಹೃದಯದ ಆರೋಗ್ಯ ಕಾಪಾಡುತ್ತದೆ


    ಹೃದಯವನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿರಿಸುತ್ತದೆ. ಆಹಾರದಲ್ಲಿ 1 ಕಿವಿ ಹಣ್ಣು ಸೇರಿಸಿದರೆ ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಅಧಿಕ ರಕ್ತದೊತ್ತಡದ ಅಪಾಯಕಾರಿ ಅಂಶ ಕಡಿಮೆ ಮಾಡುತ್ತದೆ. ಕಿವಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.


    ಕಿವಿ ಹಣ್ಣು ಮೂಳೆ ಆರೋಗ್ಯಕ್ಕೆ ಪ್ರಯೋಜನಕಾರಿ


    ಕಿವಿ ಹಣ್ಣಿನಲ್ಲಿರುವ ವಿಟಮಿನ್ ಕೆ ಆಸ್ಟಿಯೋಟ್ರೋಪಿಕ್ ಚಟುವಟಿಕೆಗೆ ಸಹಾಯ ಮಾಡುತ್ತದೆ. ವಿಟಮಿನ್ ಕೆ ಹೊಸ ಮೂಳೆ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ಮೂಳೆಯ ದ್ರವ್ಯರಾಶಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕಿವಿಯಲ್ಲಿರುವ ಪೋಷಕಾಂಶಗಳು ಮೂಳೆಗಳನ್ನು ನಿರ್ಮಿಸುತ್ತವೆ.


    ಇದನ್ನೂ ಓದಿ: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ


    ಕಿವಿ ಹಣ್ಣು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ


    ಕಿವಿಯಲ್ಲಿ ವಿಟಮಿನ್ ಸಿ ಇದೆ. ಆ್ಯಂಟಿ ಆಕ್ಸಿಡೆಂಟ್ ದೇಹದ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ವಿಟಮಿನ್ ಸಿ, ಇ ಮತ್ತು ಕೆ ಕೂಡ ಕಿವಿ ಹಣ್ಣು ಚರ್ಮ ಮತ್ತು ಕೂದಲಿಗೆ ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಹೇಳಲಾಗಿದೆ.

    Published by:renukadariyannavar
    First published: