Cooking Oil: ನೀವು ಬಳಸುವ ಅಡುಗೆ ಎಣ್ಣೆ‌ ಎಷ್ಟು ಶುದ್ಧವಾಗಿದೆ? ಮನೆಯಲ್ಲೇ ಪರೀಕ್ಷಿಸಬಹುದು, ಹೀಗೆ ಮಾಡಿ

ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆ ಕಲಬೆರಕೆಯಾಗಿದೆಯೇ ಎಂದು ಪರೀಕ್ಷಿಸಲು ಇಚ್ಛಿಸಿದರೆ, ಎಫ್ಎಸ್ಎಸ್ಎಐ ಸೂಚಿಸಿದ ಈ ಸರಳ ವಿಧಾನವನ್ನು ಒಮ್ಮೆ ಮಾಡಿ ನೋಡಿ.

ಅಡುಗೆ ಎಣ್ಣೆ

ಅಡುಗೆ ಎಣ್ಣೆ

  • Share this:
ದಿನನಿತ್ಯ ನಾವು ಮನೆಯಲ್ಲಿ ತಯಾರಿಸುವಂತಹ ಆಹಾರ ಪದಾರ್ಥಗಳಲ್ಲಿ ಎಣ್ಣೆಯ(Edible oil) ಪಾತ್ರ ಮಹತ್ವದ್ದಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಅಡುಗೆ ಎಣ್ಣೆಯ ಬೆಲೆ ಮತ್ತು ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ನಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆಯಲ್ಲಿ ಏನೇನು ಕಲಬೆರಕೆ ಮಾಡುತ್ತಾರೆಯೋ ಮತ್ತು ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎನ್ನುವ ಭಯ ಮನೆ ಮಾಡಿರುವುದಂತೂ ನಿಜವಾದ ಸಂಗತಿ. ನಾವು ಯಾವುದೇ ಆಹಾರ ಪದಾರ್ಥ ಮಾಡಬೇಕಾದರೂ ಎಣ್ಣೆಯನ್ನು ಬಳಸುತ್ತೇವೆ. ಆದರೆ, ನಾವು ಬಳಸುತ್ತಿರುವ ಎಣ್ಣೆ ಶುದ್ಧ(Cooking Oil) ಮತ್ತು ಸೇವನೆಗೆ ಯೋಗ್ಯವಾಗಿದೆಯೇ ಎಂದು ನಮಗೆ ತಿಳಿದಿರುವುದಿಲ್ಲ. ಇದು ನಮ್ಮ ಆರೋಗ್ಯ(Health)ದ ಮೇಲೆ ಪರಿಣಾಮ ಬೀರಬಹುದು.

ಮನೆಯಲ್ಲಿಯೇ ಕುಳಿತು ನಿಮ್ಮ ಅಡುಗೆಗೆ ಬಳಸುವಂತಹ ಎಣ್ಣೆಯ ಶುದ್ಧತೆ ಪರೀಕ್ಷಿಸಲು ಸಹಾಯ ಮಾಡುವ ಸುಲಭವಾದ ವಿಧಾನವನ್ನು ಇಲ್ಲಿ ಹೇಳಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India -FSSAI-ಎಫ್‌ಎಸ್‌ಎಸ್‌ಎಐ) ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ(Instagram Account) ನಿಮ್ಮ ಅಡುಗೆ ಎಣ್ಣೆಯ ಶುದ್ಧತೆಯನ್ನು ಹೇಗೆ ಪರಿಶೀಲಿಸುವುದು ಎಂದು ವಿವರಿಸುವ ಒಂದು ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಾವುದು ಒಳ್ಳೆಯ ಎಣ್ಣೆ ಮತ್ತು ಯಾವುದು ಕಲಬೆರಕೆ ಎಣ್ಣೆ ಎಂದು ಸುಲಭವಾಗಿ ಪರೀಕ್ಷಿಸಬಹುದು ಎಂದು ತೋರಿಸಲಾಗಿದೆ.

ಇದನ್ನೂ ಓದಿ:Explainer: ಖಾದ್ಯ ತೈಲಗಳ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವೇನು..? ಇಲ್ಲಿದೆ ವಿವರ!

ನಾವು ಅಡುಗೆಗೆ ಬಳಸುವಂತಹ ಎಣ್ಣೆಯಲ್ಲಿ ಹೆಚ್ಚಾಗಿ ಟ್ರೈ-ಆರ್ಥೋ-ಕ್ರೆಸಿಲ್-ಫಾಸ್ಫೇಟ್ ಎಂಬ ರಾಸಾಯನಿಕವನ್ನು ಕಲಬೆರಕೆ ಮಾಡಲಾಗಿರುತ್ತದೆ. ಈ ರಾಸಾಯನಿಕವನ್ನು ಈ ಹಿಂದೆ ಕೀಟನಾಶಕವಾಗಿ ಬಳಸಲಾಗಿದೆ ಎಂದು ಹೇಳುತ್ತಾರೆ.

ಜೆಎಎಂಎ ನ್ಯೂರಾಲಜಿಯ ಜರ್ನಲ್ ಪ್ರಕಾರ "ಟ್ರೈಆರ್ಥೋಕ್ರೆಸಿಲ್ ಫಾಸ್ಫೇಟ್‌ನೊಂದಿಗೆ ಆಹಾರದ ಕಲಬೆರಕೆಯಿಂದ ಪಾರ್ಶ್ವವಾಯುವಿನ ಹಲವಾರು ಘಟನೆಗಳು ಸಂಭವಿಸಿವೆ. ಈ ರಾಸಾಯನಿಕದಿಂದ ಮನುಷ್ಯನ ನರವ್ಯೂಹದಲ್ಲಿ ಆದಂತಹ ಅನೇಕ ಪರಿಣಾಮಗಳನ್ನು ಹಲವಾರು ವರದಿಗಳು ಒಪ್ಪಿಕೊಂಡಿವೆ" ಎಂದು ಹೇಳಿದೆ.

ಅಡುಗೆ ಎಣ್ಣೆಯ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ:

ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆ ಕಲಬೆರಕೆಯಾಗಿದೆಯೇ ಎಂದು ಪರೀಕ್ಷಿಸಲು ಇಚ್ಛಿಸಿದರೆ, ಎಫ್ಎಸ್ಎಸ್ಎಐ ಸೂಚಿಸಿದ ಈ ಸರಳ ವಿಧಾನವನ್ನು ಒಮ್ಮೆ ಮಾಡಿ ನೋಡಿ.

ನೀವು ಒಂದು ಬೌಲ್‌ನಲ್ಲಿ 2 ಮಿಲೀ ಲೀಟರ್ ಎಣ್ಣೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಳದಿ ಬೆಣ್ಣೆಯನ್ನು ಸೇರಿಸಿಕೊಳ್ಳಿರಿ. ಸ್ವಲ್ಪ ಸಮಯದ ನಂತರ ಎಣ್ಣೆಯ ಬಣ್ಣ ಬದಲಾಗದಿದ್ದರೆ, ಅದು ಶುದ್ಧವಾದ ಮತ್ತು ಬಳಕೆಗೆ ಸುರಕ್ಷಿತವಾದ ಎಣ್ಣೆ ಎಂದರ್ಥ. ಒಂದು ವೇಳೆ ಎಣ್ಣೆಯ ಬಣ್ಣವು ಕೆಂಪು ಬಣ್ಣಕ್ಕೆ ಬದಲಾದರೆ, ಆಗ ಆ ಎಣ್ಣೆಯು ಅಶುದ್ಧವಾಗಿದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅರ್ಥ ಮಾಡಿಕೊಳ್ಳಬಹುದು.

ಇದನ್ನೂ ಓದಿ:Online Gambling: ಜೂಜು-ಬೆಟ್ಟಿಂಗ್ ಆಡಿದ್ರೆ ಇನ್ಮೇಲೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ

ಈ ಸುಲಭವಾದ ವಿಧಾನ ಅನುಸರಿಸಿ ನಿಮ್ಮ ಮನೆಯಲ್ಲಿ ಅಡುಗೆಗೆ ಬಳಸುವಂತಹ ಎಣ್ಣೆಯ ಶುದ್ಧತೆ ಪರಿಶೀಲಿಸಿಕೊಂಡು ಉತ್ತಮ ಎಣ್ಣೆ ಆಯ್ಕೆ ಮಾಡಿಕೊಂಡರೆ, ನಿಮ್ಮ ಆರೋಗ್ಯಕ್ಕೆ ಸೂಕ್ತವೆಂದು ಹೇಳಬಹುದಾಗಿದೆ.

ಇತ್ತೀಚೆಗೆ ಆಮದು ಸುಂಕವನ್ನು ಕಡಿತಗೊಳಿಸಿದರೂ, ಖಾದ್ಯ ತೈಲಗಳು/ಎಣ್ಣೆಬೀಜಗಳ ಬೆಲೆಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಇದು ಸ್ಟಾಕ್ ಹೋಲ್ಡರ್‌ಗಳ ಅಕ್ರಮ ಸಂಗ್ರಹಣೆಯಿಂದಾಗಿರಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ. ಅದರಂತೆ ವ್ಯಾಪಾರಿಗಳು, ಗಿರಣಿಯವರು, ಸ್ಟಾಕ್‌ ಮಾಡುವವರು ಸೇರಿ ಇತ್ಯಾದಿ ಜನರು ಹೊಂದಿರುವ ಸ್ಟಾಕ್‌ಗಳನ್ನು ಘೋಷಿಸಲು ಸರ್ಕಾರ ಕೇಳಿದೆ, ಅದನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತದೆ. ಅಲ್ಲದೆ ವಾರಕ್ಕೊಮ್ಮೆ ಖಾದ್ಯ ತೈಲ ಮತ್ತು ಎಣ್ಣೆಬೀಜಗಳ ಬೆಲೆಯನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
Published by:Latha CG
First published: