HOME » NEWS » Lifestyle » KITCHEN TIPS HOW TO PEEL GINGER QUICKLY STG LG

Kitchen Tips: ಶುಂಠಿಯ ಸಿಪ್ಪೆ ತೆಗೆಯುವ ಸುಲಭ ವಿಧಾನಗಳು ಇಲ್ಲಿವೆ ನೋಡಿ...!

ಶುಂಠಿಯ ಸಿಪ್ಪೆಯನ್ನು ತೆಗೆಯದೆಯೂ ಆಹಾರ ಪದಾರ್ಥವನ್ನಾಗಿ ಬಳಸಬಹುದು. ಯಾವುದೇ ತೊಂದರೆ ಇಲ್ಲ. ರುಚಿಯಲ್ಲೂ ವ್ಯತ್ಯಾಸ ಕಾಣುವುದಿಲ್ಲ.

news18-kannada
Updated:March 31, 2021, 5:52 PM IST
Kitchen Tips: ಶುಂಠಿಯ ಸಿಪ್ಪೆ ತೆಗೆಯುವ ಸುಲಭ ವಿಧಾನಗಳು ಇಲ್ಲಿವೆ ನೋಡಿ...!
ಶುಂಠಿ
  • Share this:
ಶುಂಠಿ ನಮ್ಮ ಅಡುಗೆ ಮನೆಯಲ್ಲಿ ಪ್ರಧಾನ ಸ್ಥಾನ ಪಡೆದ ಪದಾರ್ಥ. ‘ಬೆಳಗ್ಗೆ ಶುಂಠಿ ಕಾಫಿ ಕುಡಿದ್ರೆ ಅಬ್ಬಬ್ಬಾ ದಿನವೇ ಸೂಪರ್’ ಎನ್ನುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಹೀಗೆ ಬೆಳಗ್ಗೆ ಕಾಫಿ, ಟೀ ಯಿಂದ ಶುರುವಾಗುವ ಶುಂಠಿಯ ಕೈಚಳಕ ಅಡುಗೆ ಮುಗಿಯುವವರೆಗೆ ಒಂದಿಲ್ಲೊಂದು ಪದಾರ್ಥಗಳಲ್ಲಿ ಇದರ ಘಮ್ಮತ್ತು ಇದ್ದೇ ಇರುತ್ತದೆ.

ಪ್ರಾಚೀನ ಆಯುರ್ವೇದ ಶಾಸ್ತ್ರದ ಪ್ರಕಾರ ಶುಂಠಿ ಸಾಕಷ್ಟು ಔಷಧಿ ಗುಣಗಳನ್ನು ಸಹ ಮೈಗೂಡಿಸಿಕೊಂಡಿದೆ. ಕೆಮ್ಮು, ಶೀತ, ಜ್ವರ, ಕಫ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಇದೊಂದು ರಾಮಬಾಣ. ಆಂಟಿಮೈಕ್ರೋಬಿಯಲ್ ಗುಣಗಳನ್ನು ಹೊಂದಿರುವ, ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಶುಂಠಿಯ ಮೇಲಿನ ಪದರ ತೆಗೆಯುವುದೇ ತ್ರಾಸದಾಯಕ ಹಾಗೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಹಾಗಾಗಿ ಕೆಲವೊಂದು ಸುಲಭ ವಿಧಾನಗಳ ಮೂಲಕ ಶುಂಠಿ ಮೇಲಿನ ಸಿಪ್ಪೆ ಅಥವಾ ಪದರವನ್ನು ತೆಗೆಯೋದು ಹೇಗೆ ಎಂದು ತಿಳಿದುಕೊಂಡು ತಮ್ಮ ಕೆಲಸವನ್ನು ಮತ್ತಷ್ಟು ಸುಲಭ ಹಾಗೂ ಸ್ಮಾರ್ಟ್ ಮಾಡಿಕೊಳ್ಳಬಹುದು.

1) ಚಮಚ ಬಳಸಿ

ಶುಂಠಿಯ ಮೇಲ್ಪದರ ತುಂಬಾ ಮೃದುವಾಗಿರುತ್ತದೆ. ಆದ ಕಾರಣದಿಂದ ಅದರ ಮೇಲಿನ ಸಿಪ್ಪೆ ತೆಗೆಯಲು ಹರಿತವಾದ ಚಾಕುವಿನ ಅವಶ್ಯಕತೆ ಬೀಳುವುದಿಲ್ಲ. ಹಾಗಾಗಿ ಚಾಕುವಿನ ಬದಲು ಚಮಚ ಬಳಸಿ. ಚಮಚವನ್ನು ಶುಂಠಿಯ ಮೇಲೆ ಇಟ್ಟು ಉಜ್ಜಿದಾಗ ನಿಧಾನವಾಗಿ ಸಿಪ್ಪೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಚಮಚ ಇಲ್ಲದಿದ್ದರೆ ಬಟರ್ ಚಾಕುವನ್ನು ಸಹ ಈ ಕೆಲಸಕ್ಕೆ ಬಳಸಿಕೊಳ್ಳಬಹುದು.

Maski Bypoll: ಮಸ್ಕಿ ಉಪಚುನಾವಣೆಯಲ್ಲಿ ಜಾತಿಯದ್ದೇ ಲೆಕ್ಕಾಚಾರ...!

2) ಶುಂಠಿಯನ್ನು ಸ್ಲೈಸ್‌ ಮಾಡಿನಿಮಗೆ ಸಮಯವಿಲ್ಲ ಎಂದಾದಲ್ಲಿ ಹರಿತವಾದ ಚಾಕು ಬಳಸಿ, ಶುಂಠಿಯನ್ನು ಕೆಲವು ತುಂಡನ್ನಾಗಿ ಮಾಡಿಕೊಳ್ಳಿ. ಇದು ಇನ್ನಷ್ಟು ಸುಲಭ.

3) ಶುಂಠಿ ಕತ್ತರಿಸುವ ಸಾಧನ ಬಳಸಿ

ಶುಂಠಿ ಕತ್ತರಿಸುವ ಸಾಧನಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದು ಶುಂಠಿಯ ಮೇಲ್ಪದರ ತೆಗೆಯಲು ತುಂಬಾ ಸುಲಭವಾಗುತ್ತದೆ. ಇದರಿಂದ ಅನಾವಶ್ಯಕವಾಗಿ ವ್ಯರ್ಥವಾಗುವುದನ್ನು ಸಹ ತಪ್ಪಿಸಬಹುದು. ಕತ್ತರಿಸುವ ಸಾಧನಗಳನ್ನು ಬಳಸಿದ ಮಾತ್ರಕ್ಕೆ ಇದರ ರುಚಿ ಹಾಳಾಗುವುದಿಲ್ಲ.

ಶುಂಠಿಯನ್ನು ತುಂಡು ಮಾಡುವುದು, ಕತ್ತರಿಸುವುದು ಅಥವಾ ತುರಿದುಕೊಳ್ಳಲು ಸುಲಭವಾದ ವಿಧಾನಗಳು

ಶುಂಠಿಯ ಸಿಪ್ಪೆ ತೆಗೆದ ನಂತರ, ಕತ್ತರಿಸುವುದು ಅಥವಾ ತುರಿದುಕೊಳ್ಳುವುದು ಇವೆಲ್ಲವೂ ನೀವು ಯಾವ ರೀತಿಯ ಆಹಾರ ತಯಾರಿಸುತ್ತಿದ್ದೀರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಶುಂಠಿಯನ್ನು ತೆಳುವಾದ ಕಾಯಿನ್ ಆಕಾರದಲ್ಲಿ ತುಂಡುಗಳನ್ನಾಗಿ ಮಾಡಿಕೊಳ್ಳಿ ಇಲ್ಲದಿದ್ದರೆ ನಿಮ್ಮ ಅವಶ್ಯಕತೆಯಿದ್ದರೆ ನೀವು ಅವುಗಳನ್ನು ದಪ್ಪದಾಗಿ ಕತ್ತರಿಸಬಹುದು.

ಶುಂಠಿಯ ಸಿಪ್ಪೆಯನ್ನು ತೆಗೆಯಲೇಬೇಕಾ?

ಈ ರೀತಿಯ ಪ್ರಶ್ನೆ ಏಳುವುದು ಸಹಜ. ಇದರ ಸಿಪ್ಪೆ ತೆಗೆಯಲೇ ಬೇಕು ಎಂದೇನಿಲ್ಲ. ಶುಂಠಿಯ ಸಿಪ್ಪೆಯನ್ನು ತೆಗೆಯದೆಯೂ ಆಹಾರ ಪದಾರ್ಥವನ್ನಾಗಿ ಬಳಸಬಹುದು. ಯಾವುದೇ ತೊಂದರೆ ಇಲ್ಲ. ರುಚಿಯಲ್ಲೂ ವ್ಯತ್ಯಾಸ ಕಾಣುವುದಿಲ್ಲ.
Youtube Video

ಶುಂಠಿ ಬಳಸುವ ಮುನ್ನ

ಶುಂಠಿ ಮಣ್ಣಿನ ಆಳದಲ್ಲಿ ಬೆಳೆಯುವ ಅಡುಗೆ ಪದಾರ್ಥ. ಆದ ಕಾರಣ ಶುಂಠಿಯನ್ನು ಮೊದಲು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಶುಚಿಯಾದ ಬಟ್ಟೆಯಿಂದ ಒರೆಸಿಕೊಂಡು ಮೇಲೆ ಹೇಳಿದ ವಿಧಾನಗಳ ಮೂಲಕ ಶುಂಠಿಯ ಸಿಪ್ಪೆಯನ್ನು ಸುಲಿದು ಅಡುಗೆ ಸುಲಭ ಮಾಡಿಕೊಳ್ಳಬಹುದು.
Published by: Latha CG
First published: March 31, 2021, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories