Kitchen Hacks: ಅಡುಗೆಯಲ್ಲಿ ಖಾರ ಜಾಸ್ತಿ ಆಗಿದ್ರೆ ಹೀಗೆ ಮಾಡಿ ಸಾಕು, ಕೂಡಲೇ ಕಡಿಮೆಯಾಗುತ್ತೆ!

ಅಡುಗೆ ಹೆಚ್ಚು ಖಾರವಾಗಿದ್ದರೆ ಅದಕ್ಕೆ ಹಾಲಿನ ಉತ್ಪನ್ನಗಳನ್ನು ಸೇರಿಸಿ. ಹಾಲು, ಮೊಸರು, ಕೆನೆ ಬಳಸಿದರೆ ಅಡುಗೆಯಲ್ಲಿನ ಖಾರದ ಪ್ರಮಾಣ ಕಡಿಮೆ ಆಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ಮಾಡುವಂತಹ ಯಾವುದೇ ಅಡುಗೆ (Food) ರುಚಿಯಾಗಿದ್ದರೆ ತಿಂದವರ ಹೊಟ್ಟೆಯೂ ಮಾಡಿದವರಿಗೂ ಒಳಿತು. ಮನೆಯಲ್ಲಿ ಮಾಡುವ ಅಡುಗೆಗೆ ಸ್ವಲ್ಪ ಉಪ್ಪು, ಹುಳಿ, ಖಾರ (Mirchi) ಹೆಚ್ಚಾಯಿತು ಅಂದ್ರೆ ಮನೆಯವರು ಯಾರೂ ಸಹಿಸಿಕೊಳ್ಳಲ್ಲ. ಅಡುಗೆ ಮಾಡಿದವರಿಗೆ ಬೈಗುಳ, ಮಾಡಿದ ಅಡುಗೆ ವೇಸ್ಟ್ ಆಗಿ ಹೋಗುತ್ತದೆ. ಕೆಲವೊಮ್ಮೆ ಹೊಸದನ್ನು ಟ್ರೈ ಮಾಡುವಾಗ ಈ ರೀತಿಯಾಗುವುದು ಸಹಜ. ಅಡುಗೆಗೆ ಉಪ್ಪು, ಖಾರ ಹದವಾಗಿದ್ದರೆ ಚೆನ್ನ. ನಾವು ಸೇವಿಸಲು ಚೆನ್ನಾಗಿರುತ್ತದೆ. ಉಪ್ಪು, ಖಾರ ಕಡಿಮೆ ಆದರೆ ಅದನ್ನು ಮತ್ತೆ ಹಾಕಿಕೊಂಡು ಅಡ್ಜಸ್ಟ್ ಮಾಡಿಕೊಳ್ಳಬಹುದು. ಆದರೆ ನಾವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಖಾರ ಹೆಚ್ಚಾದರೆ ಅದನ್ನು ತೆಗೆಯುವುದು ಗೊತ್ತಿಲ್ಲದೆ ಸಾಕಷ್ಟು ಬಾರಿ ಒದ್ದಾಡುವುದು ಇದೆ. ಈ ಒಂದು ಸಮಸ್ಯೆಗೆ (Problem) ಹಲವಾರು ರೀತಿಯಾದಂತಹ ಪರಿಹಾರಗಳು ಇದೆ. ಅಡುಗೆಗೆ ಖಾರ ಹೆಚ್ಚಾದರೆ ಅದನ್ನು ಕಡಿಮೆ ಮಾಡುವ ವಿಧಾನ (Method)  ಹೀಗಿದೆ.  

    ಹೆಚ್ಚಿನ ಖಾರ ಕಡಿಮೆ ಮಾಡಲು ಆಲೂಗಡ್ಡೆ ಬಳಸಿ:  ಸಾಂಬಾರ್ ನಲ್ಲಿ ಉಪ್ಪು ಅಥವಾ ಖಾರ ಹೆಚ್ಚಾಗಿದ್ರೆ ಅದನ್ನು ತೆಗೆಯಲು ನೀವು ಆಲೂಗೆಡ್ಡೆಯನ್ನು ಬಳಕೆ ಮಾಡಿ. ಎರಡು ಹಸಿ ಆಲೂಗಡ್ಡೆಯನ್ನು ನೀರಿನಲ್ಲಿ ಮೊದಲು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಸಾಂಬಾರಿಗೆ ಹಾಕಿ ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಿ. ಇದರಿಂದ ಖಾರದ ಅಂಶ ಕಡಿಮೆಯಾಗುತ್ತದೆ.

    ಹೆಚ್ಚಿನ ಖಾರ ಕಡಿಮೆ ಮಾಡಲು ಟೊಮೆಟೋ ಬಳಸಿ: ಟೊಮೆಟೋ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಸಾಂಬಾರ್ ನಲ್ಲಿ ಹಾಕಿ ಕುದಿಸಿರಿ. ಇದರಿಂದ ಖಾರ ಕಡಿಮೆಯಾಗುತ್ತದೆ.

    ಇದನ್ನೂ ಓದಿ: ಕೂತು ಕೆಲಸ ಮಾಡಿ ಬೆನ್ನು,ಕುತ್ತಿಗೆ ನೋವು ಬಂದ್ರೆ ಈ Exerciseಗಳನ್ನು ಮಾಡಿ ನೋಡಿ

    ಹೆಚ್ಚಿನ ಖಾರ ಕಡಿಮೆ ಮಾಡಲು ಅರ್ಧ ಬಟ್ಟಲು ತೆಂಗಿನತುರಿ ಬಳಸಿ: ಅರ್ಧ ಬಟ್ಟಲು ತೆಂಗಿನ ತುರಿಯನ್ನು ನುಣ್ಣಗೆ ಗ್ರೈಂಡ್ ಮಾಡಿಕೊಂಡು ಅದರ ಹಾಲನ್ನು ತೆಗೆದು,   ಕಾಯಿಯ ಮಿಶ್ರಣವನ್ನು ಸಾಂಬರ್ ಗೆ ಹಾಕಿ ಕುದಿಸಬೇಕು ಇದರಿಂದ ಹೆಚ್ಚಾಗಿದ್ದ ಖಾರದ ಅಂಶ ಕಡಿಮೆಯಾಗುತ್ತದೆ.ಇನ್ನು ಸೆಲೆಬ್ರಿಟಿ ಬಾಣಸಿಗ ಪಂಕಜ್ ಬದೌರಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚಿನ ಖಾರ ಮತ್ತು ಮಸಾಲೆಯುಕ್ತ ಆಹಾರವನ್ನು ಸರಿಪಡಿಸಲು ಕೆಲ ಸಲಹೆ ನೀಡಿದ್ದಾರೆ. ತಮ್ಮ  ಇನ್‌ಸ್ಟಾಗ್ರಾಮ್  ಖಾತೆಯಲ್ಲಿ ಕೆಲವು ಟಿಪ್ಸ್ ಹಂಚಿಕೊಂಡಿದ್ದಾರೆ. ಸಣ್ಣ ವೀಡಿಯೊ ಕ್ಲಿಪ್‌ ಒಂದನ್ನು ಪೋಸ್ಟ್ ಮಾಡಿದ್ದಾರೆ.

    ಹೆಚ್ಚಿನ ಖಾರ ಕಡಿಮೆ ಮಾಡಲು ಹಾಲಿನ ಉತ್ಪನ್ನ ಸೇರಿಸಿ: ಅಡುಗೆ ಹೆಚ್ಚು ಖಾರವಾಗಿದ್ದರೆ ಅದಕ್ಕೆ ಹಾಲಿನ ಉತ್ಪನ್ನ ಸೇರಿಸಿ. ಹಾಲು, ಮೊಸರು, ಕೆನೆ ಬಳಸಿದರೆ ಅದು ಅಡುಗೆಯ ಖಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

    ಹೆಚ್ಚಿನ ಖಾರ ಕಡಿಮೆ ಮಾಡಲು ಕ್ಯಾರೆಟ್ ಮತ್ತು ಬೀನ್ಸ್‌

    ನೀವು ಮಾಡಿದ ಅಡುಗೆ, ಸಾಂಬಾರ್ ಅಥವಾ ದಾಲ್ ಮಸಾಲೆಯುಕ್ತವಾಗಿದ್ದರೆ, ಅದಕ್ಕೆ ಕ್ಯಾರೆಟ್ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಸೇರಿಸಿ. ಇದರಿಂದ ಖಾರದ ಅಂಶ ಕಡಿಮೆ ಆಗುತ್ತದೆ.

    ಹೆಚ್ಚಿನ ಖಾರ ಕಡಿಮೆ ಮಾಡಲು ವಿನೆಗರ್ ಅಥವಾ ನಿಂಬೆ ರಸ 

    ನೀವು ಮಾಡಿದ ಅಡುಗೆ, ಸಾಂಬಾರ್ ಖಾರದ ಅಂಶ ಹೆಚ್ಚಿಗೆ ಆಗಿದ್ದರೆ ವಿನೆಗರ್ ಅಥವಾ ನಿಂಬೆ ರಸವನ್ನು ಸೇರಿಸಿ ಇದು ಹೆಚ್ಚುವರಿ ಖಾರದ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಹೆಚ್ಚಿನ ಖಾರ ಕಡಿಮೆ ಮಾಡಲು ಸಕ್ಕರೆ ಅಥವಾ ಸಿಹಿ ಪದಾರ್ಥ ಬಳಸಿ

    ಹೆಚ್ಚಿನ ಖಾರ ಹಾಗೂ ಮಸಾಲೆಯನ್ನು ಸಮತೋಲನಗೊಳಿಸಲು ನೀವು ಸಕ್ಕರೆ ಅಥವಾ ಅಂತಹ ಯಾವುದೇ ಸಿಹಿ ಪದಾರ್ಥಗಳನ್ನು ಕೂಡ ಸೇರಿಸಬಹುದು. ಯಾವಾಗಲೂ ಮಸಾಲೆಯುಕ್ತ ಆಹಾರವನ್ನು ಅಕ್ಕಿಯಂತಹ ಬ್ಲಾಂಡ್ ಮತ್ತು ಪಿಷ್ಟದ ಭಕ್ಷ್ಯದೊಂದಿಗೆ ಬಡಿಸಿ. ಇದು ರುಚಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
    Published by:renukadariyannavar
    First published: