ಅಡುಗೆ ಮನೆಯಲ್ಲಿ ಸದಾ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು

ಸೇವಿಸುವ ಆಹಾರ ಸ್ವಾದಿಷ್ಟವಾಗಿದ್ದರೆ, ಸಾಲದು ಅದು ಆರೋಗ್ಯಕರವಾಗಿರಬೇಕು. ಅದಕ್ಕೆ ಸದಾ ಅಡುಗೆ ಕೋಣೆಯನ್ನು ಸ್ವಚ್ಛವಾಗಿಡಬೇಕು. ಅಡುಕೋಣೆಯ ಸ್ವಚ್ಛತೆಯ ಕುರಿತಾಗಿ ಇಲ್ಲಿದೆ ಒಂದಿಷ್ಟು ಮಾಹಿತಿ.

news18
Updated:August 6, 2019, 2:48 PM IST
ಅಡುಗೆ ಮನೆಯಲ್ಲಿ ಸದಾ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು
ಸ್ವಚ್ಛವಾದ ಅಡುಗೆ ಕೋಣೆ
  • News18
  • Last Updated: August 6, 2019, 2:48 PM IST
  • Share this:
ಉಳಿವಿಗಾಗಿ ಅಡುಗೆ ಅತ್ಯಂತ ಮುಖ್ಯ. ಆದರೆ ಅಡುಗೆಯನ್ನು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೇ ಮಾಡಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅಡಿಗೆಮನೆಯಲ್ಲಿ ಅನುಸರಿಸಬೇಕಾದ ಹಾಗೂ ಮಾಡಬಾರದ ಕೆಲವು ಅಂಶಗಳ ಪಟ್ಟಿ ಇಲ್ಲಿದೆ.

ಚಾಕು ಹರಿತಗೊಳಿಸುವುದು
ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಮೊಂಡಾದ ಅಥವಾ ಒರಟಾದ ಚಾಕು ಸದಾ ಹಾನಿಕಾರಕ. ಅದರಿಂದ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುತ್ತದೆ. ನೀವು ಅವುಗಳನ್ನು ಬಳಸುವಾಗ ಸುರಕ್ಷಿತವಾಗಿರಬೇಕಿದ್ದರೆ ಚಾಕುಗಳನ್ನು ಹರಿತವಾಗಿಡಿ.

ಹರಿತವಾದ ಚಾಕು


ಸುಡದಂತೆ ತಡೆಯಿರಿ
ನೀವು ಪ್ಯಾನ್ ಅಥವಾ ಪಾಟ್​ನಲ್ಲಿ ಹಿಡಿಕೆ ಮತ್ತು ಸೌಟುಗಳನ್ನು ಬಳಸುವಾಗ ಒಳಮುಖವಾಗಿಯೇ ಬಳಸಿ. ಇದರಿಂದ ಯಾವುದೇ ಅಪಾಯ ಆಗುವುದಿಲ್ಲ. ಓವೆನ್ ಮಿಟ್ಸ್ ಅಥವಾ ಪಾಟ್ ಹೋಲ್ಡರ್ ಬಳಿಯಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಿ

ನಿಮ್ಮ ಕೈಗಳನ್ನು ತೊಳೆಯಿರಿ
ಅಡುಗೆ ಮಾಡುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಬೆಚ್ಚಗಿನ ನೀರಿನಿಂದ ಸೋಪ್ ಹಾಕಿ ತೊಳೆಯುವುದು ಮುಖ್ಯ. ನಿಮ್ಮ ಕೈಗಳನ್ನು ತೊಳೆಯಲು ಪೇಪರ್ ಟವೆಲ್ ಬಳಸುವುದು ಉತ್ತಮ.ಗಾಜಿನ ಪಾತ್ರೆಗಳು

ಗಾಜಿನ ಪಾತ್ರೆಗಳನ್ನು ಚಳಿ ಅಥವಾ ತೇವವಿರುವ ಮೇಲ್ಮೈನಲ್ಲಿ ಇಡಬೇಡಿ. ಗಾಜು ಶಾಖದಿಂದ ಹಿಗ್ಗುತ್ತದೆ ಮತ್ತು ಚಳಿಗೆ ಕುಗ್ಗುತ್ತದೆ. ನೀವು ಯಾವುದೇ ಗಾಜಿನ ಸಾಧನವನ್ನು ತಂಪಾದ ಮೇಲ್ಮೈನಲ್ಲಿಟ್ಟರೆ ಗಾಜಿನ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಾಗದಂತೆ ಯಾವಾಗಲೂ ಗಾಜಿನ ಮುಚ್ಚಳವನ್ನು ಯಾವುದೇ ಚಾಪಿಂಗ್ ಬೋರ್ಡ್ ಅಥವಾ ಪಾಟ್ ಹೋಲ್ಡರ್ ಮೇಲಿಡಿ.
First published: August 6, 2019, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading