Kitchen Hacks: ನಿಮ್ಮ ಅಡಿಗೆಮನೆ ಸ್ವಚ್ಛಗೊಳಿಸುವ ಶೀಘ್ರ ವಿಧಾನ

ಪ್ಲೇಟ್ ಮತ್ತು ಇತರ ಪಾತ್ರೆಗಳಿಂದ ಒಣಗಿದ ಆಹಾರದ ಪದಾರ್ಥಗಳನ್ನು ಉಜ್ಜುವುದು ಸುಲಭವಲ್ಲ. ಆದ್ದರಿಂದ ನೀವು ಸ್ವಚ್ಛಗೊಳಿಸುವ ಮೊದಲು ಪಾತ್ರೆಗಳನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿ ಶೀಘ್ರವೇ ತೊಳೆಯಿರಿ.

news18
Updated:August 6, 2019, 3:16 PM IST
Kitchen Hacks: ನಿಮ್ಮ ಅಡಿಗೆಮನೆ ಸ್ವಚ್ಛಗೊಳಿಸುವ ಶೀಘ್ರ ವಿಧಾನ
ಫೈಲ್​ ಫೋಟೊ: ಅಡುಗೆಮನೆ
news18
Updated: August 6, 2019, 3:16 PM IST
ಅಡಿಗೆಮನೆಯನ್ನು ಮನೆಯ ಹೃದಯ ಎಂದೂ ಕರೆಯಲಾಗುತ್ತದೆ. ಎಲ್ಲಾ ಸಮಯದಲ್ಲೂ ಅದನ್ನು ಸ್ವಚ್ಛವಾಗಿಡುವುದರಿಂದ ನೀವು ಯಾವುದೇ ಕ್ರಿಮಿ ಅಥವಾ ಇತರ ಸಮಸ್ಯೆಗಳಿಲ್ಲದಂತೆ ಆರಾಮವಾಗಿರಬಹುದು. ಇಲ್ಲಿ ಅಡಿಗೆಮನೆಯನ್ನು ಶೀಘ್ರವಾಗಿ ಸ್ವಚ್ಛಗೊಳಿಸಬಹುದಾದ ಕೆಲವು ಸರಳವಾದ ಅಡಿಗೆಮನೆ ಸ್ವಚ್ಛಗೊಳಿಸುವ ಉಪಾಯಗಳನ್ನು ನೀಡಲಾಗಿದೆ.

ಕೊಳೆಯಾದ ಪಾತ್ರೆಗಳನ್ನು ನೆನೆಸಿ:

ಪ್ಲೇಟ್ ಮತ್ತು ಇತರ ಪಾತ್ರೆಗಳಿಂದ ಒಣಗಿದ ಆಹಾರದ ಪದಾರ್ಥಗಳನ್ನು ಉಜ್ಜುವುದು ಸುಲಭವಲ್ಲ. ಆದ್ದರಿಂದ ನೀವು ಸ್ವಚ್ಛಗೊಳಿಸುವ ಮೊದಲು ಪಾತ್ರೆಗಳನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿ ಶೀಘ್ರವೇ ತೊಳೆಯಿರಿ. ನೀರು ಮತ್ತು ಸೋಪ್ ಅನ್ನು ಸಿಂಕ್ ಗೆ ಹಾಕಿ ನೀವು ಇತರ ಕೆಲಸ ಮಾಡುವಾಗ ಅವು ನೆನೆಯಲು ಬಿಡಿ.

ಮೇಲಿನಿಂದ ಕೆಳಗೆ:

ಮೇಲಿನಿಂದ ಕೆಳಗೆ ಸ್ವಚ್ಛಮಾಡುವ ವಿಧಾನದಿಂದ ಆರಂಭಿಸಿ. ನೀವು ಮೊದಲು ಕೌಂಟರ್ ಸ್ವಚ್ಛಗೊಳಿಸಿ ನಂತರ ಸ್ಟವ್ ಟಾಪ್ ಸ್ವಚ್ಛಗೊಳಿಸಿದರೆ, ಸ್ಟವ್ ಟಾಪ್ ನಿಂದ ಮತ್ತೆ ಕೊಳೆ ಕೌಂಟರ್ ಮೇಲೆ ಬೀಳುತ್ತದೆ. ಆದ್ದರಿಂದ ಮೇಲಿನಿಂದ ಕೆಳಗೆ ಆರಂಭಿಸಿ.

https://wecleanamerica.com/clean-kitchen-right-way/

ತೆಳು ಬಣ್ಣದ ಕ್ಯಾಬಿನೆಟ್ ತಪ್ಪಿಸಬೇಡಿ:

ನಿಮ್ಮ ಮನೆಯಲ್ಲಿ ಯಾವುದೇ ತೆಳು ಬಣ್ಣದ ಕ್ಯಾಬಿನೆಟ್ ಇದ್ದರೆ, ಮೊದಲು ಅವುಗಳನ್ನು ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಸಣ್ಣ ಗ್ರೀಸ್ ಕಲೆ ಸಹ ಇಡೀ ಅಡಿಗೆಮನೆ ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ.

ಈ ಮೂರು ಸರಳ ಸಲಹೆಗಳು ನಿಮ್ಮ ಅಡಿಗೆಮನೆ ಚೆನ್ನಾಗಿ ಕಾಣಲು ನೆರವಾಗುತ್ತವೆ.
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...