ಕೆಲವು ವಸ್ತುಗಳನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಅವುಗಳು ಹೆಚ್ಚು ದಿನ ಬಾಳಿಕೆ ಬರಬಹುದು, ಆದರೆ ಇತರ ವಸ್ತುಗಳಿಗೆ ಅದರಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಣ್ಣುಗಳು, ತರಕಾರಿ, ಸಿಹಿತಿನಿಸುಗಳು, ಬ್ರೆಡ್ಡು ಹೀಗೆ ಸಾಮಾನ್ಯವಾಗಿ ನಾವು ಎಲ್ಲವನ್ನು ನಮ್ಮ ಫ್ರಿಡ್ಜ್ನಲ್ಲಿ ಸಂಗ್ರಹಿಸಿಡುತ್ತೇವೆ.ಕೆಲವರು ತಮ್ಮ ಫ್ರಿಡ್ಜ್ನಲ್ಲಿ ಸಾಸ್ಗಳನ್ನು, ಮ್ಯಾರಿನೇಡ್ಗಳನ್ನು ಮತ್ತು ಕ್ಯಾನ್ಗಳನ್ನು ಕೂಡ ಇಡುತ್ತಾರೆ. ಆದರೆ ಇಂತಹ ಕೆಲವು ವಸ್ತುಗಳನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಅವುಗಳು ಹೆಚ್ಚು ದಿನ ಬಾಳಿಕೆ ಬರಬಹುದು, ಆದರೆ ಇತರ ವಸ್ತುಗಳಿಗೆ ಅದರಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಬೇರೆ ಬೇರೆ ವಸ್ತುಗಳನ್ನು ಸಂಗ್ರಹಿಸಿಡುವ ವಿಧಾನದಲ್ಲೂ ವ್ಯತ್ಯಾಸವಿರುತ್ತದೆ. ಅಂತಹ ಕೆಲವು ವಸ್ತುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸೂರ್ಯನ ಬೆಳಕು ಬೀಳದಂತೆ ಕಪಾಟಿನಲ್ಲಿ ಇಡಬೇಕಾದ ವಸ್ತುಗಳು:
ಬ್ರೆಡ್
ಬ್ರೆಡ್ ಅನ್ನು ಸ್ವಲ್ಪ ಉಪ್ಪು ಹಾಕಿ ಗಟ್ಟಿಯಾಗಿ ಮುಚ್ಚಿದ ಡಬ್ಬದಲ್ಲಿ ಇಡಬೇಕು. ನೀವು ಅಂಗಡಿಯಿಂದ ತಂದ ಬ್ರೆಡನ್ನು ಹಾಗೆಯೇ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟರೆ ,ಅದು ಮೃದುವಾಗಿ ಇರಬಹುದು, ಆದರೆ ಕೆಲವು ದಿನಗಳ ನಂತರ ಅದರಲ್ಲಿ ಫಂಗಸ್ ಹುಟ್ಟಬಹುದು. ಫ್ರಿಡ್ಜ್ನಲ್ಲಿ ಇಟ್ಟರೂ ಕೂಡ, ಬ್ರೆಡ್ ತೇವಗೊಂಡು ಬೇಗ ಹಾಳಾಗುತ್ತದೆ. ಆದರೆ ಬ್ರೆಡ್ಡನ್ನು ಫ್ರೀಜರ್ನಲ್ಲಿ ಇಟ್ಟರೆ, 4-6 ತಿಂಗಳವರೆಗೆ ಕೆಡುವುದಿಲ್ಲ.
ಚಾಕೊಲೇಟ್ಸ್
ಚಾಕೋಲೇಟ್ಸ್ ಸಂಗ್ರಹಿಸಿಡುವುದು ಸುಲಭ. ತಣ್ಣಗಿನ, ಬೆಳಕಿಲ್ಲದ ಜಾಗದಲ್ಲಿ ಅದನ್ನು ಇಟ್ಟುಬಿಡಿ. ಆದರೆ ಫ್ರಿಡ್ಜ್ನಲ್ಲಿ ಇಡಬೇಡಿ. ಹಾಗೆ ಮಾಡಿದಲ್ಲಿ, ತಾಪಮಾನದ ವ್ಯತ್ಯಾಸವು ಚಾಕೊಲೇಟಿನ ಮೇಲೆ ಬಿಳಿ ಪದರಗಳು ಹುಟ್ಟಿಕೊಳ್ಳುವಂತೆ ಮಾಡುತ್ತದೆ, ಅದರಿಂದ ರುಚಿಯಲ್ಲಿ ವ್ಯತ್ಯಾಸವೇನೂ ಕಾಣುವುದಿಲ್ಲ, ಆದರೆ ಚಾಕೊಲೇಟ್ ನೋಡಲು ಆಕರ್ಷಕವಾಗಿ ಕಾಣುವುದಿಲ್ಲ.
ಜೇನು ತುಪ್ಪ
ಜೇನುತುಪ್ಪವನ್ನು ಎಷ್ಟು ಕಾಲ ಇಟ್ಟರೂ ಕೆಡುವುದಿಲ್ಲ, ಆದರೆ ಹೇಗೆ ಸಂಗ್ರಹಿಸಿ ಇಡುತ್ತೀರಿ ಎಂಬುದನ್ನು ಅದು ಅವಲಂಬಿಸಿದೆ. ಜೇನು ತುಪ್ಪವನ್ನು ತಣ್ಣಗಿನ, ಬೆಳಕು ಬೀಳದ ಜಾಗದಲ್ಲಿ ಇಡಬೇಕು. ಆದರೆ ಫ್ರಿಡ್ಜ್ನಲ್ಲಿ ಇಡಬಾರದು. ಫ್ರಿಡ್ಜ್ನಲ್ಲಿ ಅದು ಹರಳುಗಟ್ಟಬಹುದು ಮತ್ತು ತನ್ನ ಲಾಭದಾಯಕ ಗುಣಗಳನ್ನು ಕಳೆದುಕೊಳ್ಳಬಹುದು.
ಆಲಿವ್ ಎಣ್ಣೆ
ಆಲಿವ್ ಎಣ್ಣೆಯನ್ನು ಕೋಣೆಯ ತಾಪಮಾನದಲ್ಲಿ, ಸೂರ್ಯನ ಕಿರಣಗಳು ನೇರವಾಗಿ ಬೀಳದಂತ ಜಾಗದಲ್ಲಿ ಇಡಬೇಕು. ಆದರೆ ಫ್ರಿಡ್ಜ್ನಲ್ಲಿ ಇಡಲೇಬೇಡಿ.
ಈರುಳ್ಳಿ ಮತ್ತು ಬೆಳ್ಳುಳ್ಳಿ
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ತಾಜಾವಾಗಿ ಇಡಬೇಕಾದರೆ, ತಣ್ಣಗಿನ ಒಣ ಜಾಗದಲ್ಲಿ ಇಡಿ. ಆದರೆ ಫ್ರಿಡ್ಜ್ನಲ್ಲಿ ಇಟ್ಟರೆ ಬೇಗ ಹಾಳಾಗಬಹುದು.
ಅಡುಗೆ ಮನೆಯ ಶೆಲ್ಫ್ ಅಥವಾ ಟೇಬಲ್ನಲ್ಲಿ ಇಡಬಹುದಾದ ವಸ್ತುಗಳು:
ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳನ್ನುಅಡುಗೆ ಮನೆಯ ಟೇಬಲ್ನಲ್ಲಿ ಇಡಬಹುದು. ಅವು ಬೇಗ ಹಾಳಾಗುವುದಿಲ್ಲ. ಫ್ರಿಡ್ಜ್ನಲ್ಲಿ ಅವುಗಳನ್ನು ಇಟ್ಟರೆ, ರುಚಿ ಬೇಗ ಕೆಡಬಹುದು ಮತ್ತು ಅದರ ಆರೋಗ್ಯಕರ ಗುಣಗಳು ಸ್ವಲ್ಪ ಮಟ್ಟಿಗೆ ನಷ್ಟವಾಗಬಹುದು.
ಅವಕಾಡೋ
ಅವಕಾಡೋವನ್ನು ಸಂಗ್ರಹಿಸಿಡುವುದು ಕಷ್ಟ. ಅದು ಪೂರ್ತಿ ಹಣ್ಣಾಗಿದ್ದರೆ ಫ್ರಿಡ್ಜ್ನಲ್ಲಿ ಇಡಿ. ಹಣ್ಣಾಗಿಲ್ಲದಿದ್ದರೆ, ಇಡಬೇಡಿ, ಏಕೆಂದರೆ ಫ್ರಿಡ್ಜ್ನ ಶೀತಲತೆ ಹಣ್ಣಾಗುವ ಪ್ರಕ್ರಿಯೆಯನ್ನು ನಿಧಾನ ಮಾಡುತ್ತದೆ.
ಸೌತೆಕಾಯಿ
ಸೌತೆಕಾಯಿಯನ್ನು ಫ್ರಿಡ್ಜ್ನಲ್ಲಿ ಇಡಬಹುದು, ಆದರೆ ಕೆಲವು ದಿನಗಳವರೆಗೆ ಮಾತ್ರ. ತರಕಾರಿಗಳನ್ನು ತುಂಬಾ ದಿನಗಳವರೆಗೆ ತಾಜಾವಾಗಿ ಇಡಬೇಕೆಂದರೆ, ಅವುಗಳನ್ನು ಫ್ರಿಡ್ಜ್ನ ಹೊರಗೆ ಇಡಿ.
ಬದನೆಕಾಯಿ
ಬದನೆಕಾಯಿಯನ್ನು ಫ್ರಿಡ್ಜ್ನಲ್ಲಿ ಇಡಲೇಬೇಡಿ. ಅವು ಬೇಗ ಮೆತ್ತಗಾಗುತ್ತವೆ ಮತ್ತು ತಮ್ಮ ಅತ್ಯುತ್ತಮ ಗುಣಗಳನ್ನು ಕಳೆದುಕೊಳ್ಳುತ್ತವೆ. ಅವುಗಳನ್ನು ಕೋಣೆಯ ತಾಪಮಾನದಲ್ಲಿ, ಸೂರ್ಯನ ಬೆಳಕು ಬೀಳದ ಜಾಗದಲ್ಲಿ ಇಡಿ.
ಟೊಮ್ಯಾಟೋ
ಟೊಮ್ಯಾಟೋಗಳನ್ನು ಫ್ರಿಡ್ಜ್ನಲ್ಲಿ ಇಡಬೇಡಿ. ಅವು ತಮ್ಮ ನೈಸರ್ಗಿಕ ಸತ್ವ ಹಾಗೂ ರುಚಿಯನ್ನು ಕಳೆದುಕೊಳ್ಳುತ್ತದೆ. ಅವುಗಳನ್ನು ಕೋಣೆಯ ತಾಪಮಾನದಲ್ಲಿ ಚೆನ್ನಾಗಿ ಗಾಳಿಯಾಡುವ ಬುಟ್ಟಿಯಲ್ಲಿ ಇಡಿ.
ಫ್ರಿಡ್ಜ್ನಲ್ಲಿ ಇಡಬಹುದಾದ ವಸ್ತುಗಳು:
ಮೊಟ್ಟೆ
ಮೊಟ್ಟೆಗಳನ್ನು ಫ್ರಿಡ್ಜ್ನಲ್ಲೂ ಇಡಬಹುದು, ಹೊರಗೆಯೂ ಇಡಬಹುದು. ಆದರೆ ಫ್ರಿಡ್ಜ್ ಬಾಗಿಲಿನಲ್ಲಿ ಇಡಬಾರದು, ತಾಪಮಾನದ ವ್ಯತ್ಯಾಸದಿಂದ ಅವುಗಳ ಬಾಳಿಕೆ ಕಡಿಮೆ ಆಗಬಹುದು. ಮೊಟ್ಟೆಗಳನ್ನು ಅವುಗಳನ್ನು ಕೊಂಡುತಂದ ಕಂಟೈನರ್ಗಳಿಂದ ತೆಗೆಯದೆ ಹಾಗೇ ಸಂಗ್ರಹಿಸಿಡುವಂತೆ ತಜ್ಜರು ಹೇಳುತ್ತಾರೆ.
ಹಿಟ್ಟು
ಹಿಟ್ಟನ್ನು ಮುಚ್ಚಿದ ಜಾರ್ನಲ್ಲಿ, ಫ್ರಿಡ್ಜ್ ಅಥವಾ ಕಪಾಟಿನಲ್ಲಿ ಇಡಿ. ತಾಪಮಾನ 50 ಮತ್ತು 65 ಡಿಗ್ರಿ ಫ್ಯಾರನ್ಹೀಟ್ ಇರಬೇಕು.
ಬಾದಾಮಿ, ವಾಲ್ನಟ್, ಪಿಸ್ತಾ
ಡ್ರೈ ಫ್ರೂಟ್ಸ್ಗಳಾದ ಬಾದಾಮಿ, ಪಿಸ್ತಾ ವಾಲ್ನಟ್ ಮುಂತಾದ ಒಣ ಬೀಜಗಳನ್ನು ಕೋಣೆಯ ತಾಪಮಾನದಲ್ಲಿ ಇಟ್ಟರೆ ದೀರ್ಘ ಬಾಳಿಕೆ ಬರುವುದಿಲ್ಲ. ಅವುಗಳನ್ನು ಫ್ರಿಡ್ಜ್ನಲ್ಲಿ ಇಟ್ಟರೆ ತಿಂಗಳುಗಟ್ಟಳೆ ಬಾಳಿಕೆ ಬರುತ್ತವೆ.
ಸೆಲೆರಿ
ಸೆಲೆರಿಯನ್ನು ಫ್ರಿಡ್ಜ್ನಲ್ಲಿ ಇಡಬೇಕು. ಆದರೆ ಅದನ್ನು ಪ್ಲಾಸ್ಟಿಕ್ನಲ್ಲಿ ಇಡಬೇಡಿ. ಬೇಕಿದ್ದರೆ ಫ್ರಿಡ್ಜ್ನೊಳಗೆ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಸುತ್ತಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ