ಮುತ್ತಿನ ಮತ್ತೇ ಗಮ್ಮತ್ತು, ಆದರೀಗ ಇದುವೇ ತರುತ್ತೆ ಜೀವಕ್ಕೆ ಕುತ್ತು..!

2016 ರಿಂದ ಹದಿಹರೆಯದವರು ಮತ್ತು ಯುವಕರಲ್ಲಿ ಈ ಸೋಂಕು ಅತಿಯಾಗಿ ಕಂಡುಬರುತ್ತಿದ್ದು, ಸೋಂಕಿತರ ಪ್ರಮಾಣದಲ್ಲಿ ದಿನ ಕಳೆದಂತೆ ಏರಿಕೆಯಾಗುತ್ತಿದೆ.

news18
Updated:July 22, 2019, 6:47 PM IST
ಮುತ್ತಿನ ಮತ್ತೇ ಗಮ್ಮತ್ತು, ಆದರೀಗ ಇದುವೇ ತರುತ್ತೆ ಜೀವಕ್ಕೆ ಕುತ್ತು..!
@Days Of The Year
  • News18
  • Last Updated: July 22, 2019, 6:47 PM IST
  • Share this:
ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಮತ್ತೂ ಮುಂದುವರಿದರೆ ಜೀವಕ್ಕೆ ಕುತ್ತು ಈ ಮಾತನ್ನು ಯಾರು ಹೇಳಿದರೋ ಗೊತ್ತಿಲ್ಲ. ಆದರೆ ಈ ಮಾತು ಅಕ್ಷರಶಃ ನಿಜವಾಗುತ್ತಿದೆ .ಪ್ರೀತಿಯಿಂದ ಪಡೆಯುವ ಮುತ್ತು ಹಾಗೂ ಕಿಸ್‌ ಮಾಡುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ ಎಂದು ಹಿಂದೊಂದು ಸಂಶೋಧನೆಯಿಂದ ತಿಳಿದು ಬಂದಿತ್ತು. ಆದರೆ ಇದೀಗ ಇದೇ ಮುತ್ತು ಜೀವಕ್ಕೆ ಕುತ್ತು ತರುತ್ತದೆ ಎಂದರೆ..! ಹೌದು, ಇತ್ತೀಚಿನ ಅಧ್ಯಯನವೊಂದರಲ್ಲಿ ಪರಸ್ಪರ ಮುತ್ತಿಡುವುದರಿಂದ ಗೊನೊರಿಯಾದಂತಹ ಲೈಂಗಿಕ ಕಾಯಿಲೆ ಹರಡುತ್ತದೆ ಎಂದು ತಿಳಿದು ಬಂದಿದೆ.

ಮೊನೊರ್ಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಿಟ್ ಫೇರ್ಲಿ ಮತ್ತು ಸಂಶೋಧಕರ ತಂಡ ನಡೆಸಿದ ಈ ಅಧ್ಯಯನದಲ್ಲಿ ಗೊನೊರಿಯಾದ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದಕ್ಕೆ ಲೈಂಗಿಕ ಕ್ರಿಯೆ ಮಾತ್ರವಲ್ಲ, ಪರಸ್ಪರ ಮುತ್ತಿಕ್ಕುವ ಕ್ರಿಯೆಯು ಕಾರಣವಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಇಂತಹ ಸೋಂಕನ್ನು ತಡೆಗಟ್ಟಲು ಆಂಟಿ ಬ್ಯಾಕ್ಟೀರಿಯಲ್ ಮೌತ್​ವಾಶ್​ ಅನ್ನು ಬಳಸುವುದು ಉತ್ತಮ ಎಂದಿದ್ದಾರೆ.

ಸಾಮಾನ್ಯವಾಗಿ ಗೊನೊರಿಯಾ ಸೋಂಕು ಸಂಭೋಗದಿಂದ ಹರಡುತ್ತದೆ. ಆದರೆ ಇತ್ತೀಚಿನ ದಿನಗಳಿಗೆ ಹೋಲಿಸಿದರೆ ಲೈಂಗಿಕ ಸಂಪರ್ಕಕ್ಕಿಂತ ಚುಂಬನದಿಂದ ಈ ಸೋಂಕು ವ್ಯಾಪಕವಾಗಿ ಹರಡಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಗೊನೊರಿಯಾ ಸೋಂಕು?
ನೀಸ್ಸೆರಿಯಾ ಗೊನೊರ್ಹೋಯೆ ಅಥವಾ ಗೊರ್ನೊಕೊಕಸ್ ಎನ್ನುವ ಬ್ಯಾಕ್ಟೀರಿಯಾದಿಂದ ಗೊನೊರಿಯಾ ಸೋಂಕು ಉಂಟಾಗುತ್ತದೆ. ಈ ರೋಗವು ಯೋನಿಯ ಲೈಂಗಿಕ ಕ್ರಿಯೆ, ಗುದದ ಲೈಂಗಿಕ ಕ್ರಿಯೆ ಮತ್ತು ಬಾಯಿಯಿಂದಲೂ  ಹರಡಬಹುದು. ಈ ಮೊದಲು ಸಂಭೋಗದಿಂದ ಹರಡುತ್ತಿದ್ದ ಈ ಸೋಂಕು ಇದೀಗ ಚುಂಬನದ ಮೂಲಕ ಬಾಯಿಯಿಂದ ಹರಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಗೊನೊರಿಯಾ ಸಮಸ್ಯೆಯು ಪುರುಷರಲ್ಲೂ ಹಾಗೂ ಮಹಿಳೆಯರಲ್ಲೂ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಪೀಡಿತ ಮಹಿಳೆಯಿಂದ ಹೆರಿಗೆ ಸಮಯದಲ್ಲಿ ಮಗುವಿಗೂ ಈ ರೋಗ ಹರಡಬಹುದು.

ವರದಿವೊಂದರ ಪ್ರಕಾರ ವಿಶ್ವದಲ್ಲಿ ಪ್ರತಿವರ್ಷ ಸುಮಾರು 820,000 ಹೊಸತಾಗಿ ಗೊನೊರಿಯಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. 2016 ರಿಂದ ಹದಿಹರೆಯದವರು ಮತ್ತು ಯುವಕರಲ್ಲಿ ಈ ಸೋಂಕು ಅತಿಯಾಗಿ ಕಂಡುಬರುತ್ತಿದ್ದು, ಸೋಂಕಿತರ ಪ್ರಮಾಣದಲ್ಲಿ ದಿನ ಕಳೆದಂತೆ ಏರಿಕೆಯಾಗುತ್ತಿದೆ. ಹೀಗಾಗಿ ಇದನ್ನು ಕೂಡ ಗಂಭೀರ ಲೈಂಗಿಕ ಕಾಯಿಲೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ನೀವು ಪೋರ್ನ್ ವಿಡಿಯೋ ನೋಡುತ್ತೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್
First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ