ಈ ವಿಮಾನಗಳಲ್ಲಿ ಕುಟುಂಬದೊಂದಿಗೆ ಮಕ್ಕಳು ಉಚಿತ ಪ್ರವಾಸ ಕೈಗೊಳ್ಳಬಹುದು

news18
Updated:May 9, 2018, 1:15 PM IST
ಈ ವಿಮಾನಗಳಲ್ಲಿ ಕುಟುಂಬದೊಂದಿಗೆ ಮಕ್ಕಳು ಉಚಿತ ಪ್ರವಾಸ ಕೈಗೊಳ್ಳಬಹುದು
news18
Updated: May 9, 2018, 1:15 PM IST
ನ್ಯೂಸ್ 18 ಕನ್ನಡ

ಪ್ರವಾಸ ಹೋಗುವಾಗ ದೊಡ್ಡ ತಲೆನೋವೆಂದರೆ ಪ್ರವಾಸದ ಬಜೆಟ್. ಪ್ರವಾಸಿಗರಿಗಾಗಿ ಅನೇಕ ಟ್ರಾವೆಲಿಂಗ್​ ಸಂಸ್ಥೆಗಳು ವಿವಿಧ ರೀತಿಯ ಆಫರ್​ಗಳನ್ನು ನೀಡುತ್ತವೆ. ಆದರೂ ಕೆಲವೊಂದು ಬಾರಿ ಕುಟುಂಬದ ಒಟ್ಟಾರೆ ಪ್ರಯಾಣದ ವೆಚ್ಚ ಕಾರಣ, ಪ್ರವಾಸದಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಅಮೆರಿಕದ ವಿಮಾನ ಸಂಸ್ಥೆ ಸ್ಕ್ಯಾಂಡಿನೇವಿಯನ್ ಏರ್​ಲೈನ್ಸ್ (ಎಸ್ಎಎಸ್) ಪ್ರವಾಸಿ ಕುಟುಂಬಗಳಿಗೆ ಅನುಕೂಲ ಆಗುವಂತಹ ಭರ್ಜರಿ ಆಫರೊಂದನ್ನು ನೀಡಿದೆ.  ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವ ಮಕ್ಕಳಿಗೆ ಈ ವಿಮಾನದಲ್ಲಿ ಟಿಕೆಟ್ ವೆಚ್ಚ ಭರಿಸಬೇಕಿಲ್ಲ.

ಸಂಸ್ಥೆಯು ಹನ್ನೊಂದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ್ದು, ಪ್ರಯಾಣದ ತೆರಿಗೆಯನ್ನು ಮಾತ್ರ ಪಾವತಿಸ ಬೇಕಾಗುತ್ತದೆ ಎಂದಿದೆ. ಈ ಆಫರ್ ಅವಧಿಯು ಆಗಸ್ಟ್​​ 20ರಿಂದ ಮಾರ್ಚ್ 2019ವರೆಗೆ ಇರಲಿದೆ ಎಂದು ಸಂಸ್ಥೆ ಹೇಳಿದೆ. ಅಮೆರಿಕದ ಕೋಪನ್ ಹೇಗನ್, ಹೆಲ್ಸಿಂಕಿ, ಓಸ್ಲೋ ಮತ್ತು ಸ್ಟಾಕ್​ಹೋಮ್​ನಂತಹ ಪ್ರವಾಸಿ ನಗರಗಳನ್ನು ಈ ಪ್ರಯಾಣಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು.

ಸ್ಕ್ಯಾಂಡಿನೇವಿಯನ್ ಏರ್​ಲೈನ್ಸ್​ನ ಉಚಿತ ಪ್ರಯಾಣದ ಆಫರ್​ನ ಬುಕಿಂಗ್ ಮೇ13ರಿಂದ ಪ್ರಾರಂಭವಾಗಲಿದೆ. ಅಮೆರಿಕದ  ವಿಮಾನ ಸಂಸ್ಥೆಯಲ್ಲದೆ ಇಂತಹದ್ದೆ ಆಫರ್​ನ್ನು ಬ್ರಿಟನ್​ನ ಬ್ರಿಟಿಷ್ ಏರ್​ವೇಸ್​​ ಪ್ರವಾಸಿಗರಿಗೆ ನೀಡುತ್ತಿದೆ. ಇದರಲ್ಲಿ ಲಂಡನ್ ನಗರದ​ ಹಿಥ್ರೋವಿನಿಂದ ಹೊರಡುವ ವಿಮಾನಗಳ ಮೂಲಕ ಬೆಲ್ಪಾಸ್ಟ್, ಗ್ಲ್ಯಾಸ್ಗೊ, ಅಬರ್ಡಿನ್, ಲೀಡ್ಸ್ ಮತ್ತು ನ್ಯೂ ಕ್ಯಾಸ್ಟಲ್​ ಪ್ರದೇಶಗಳಿಗೆ ಪ್ರಯಾಣಿಸಬಹುದು. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವ ಮಕ್ಕಳ ವಯೋಮಿತಿ 12 ವರ್ಷದ ಒಳಗಿದ್ದರೆ ಬ್ರಿಟಿಷ್ ಏರ್​ವೇಸ್​ನಲ್ಲಿ ಉಚಿತವಾಗಿ ಪ್ರವಾಸ ಕೈಗೊಳ್ಳಬಹದು ಎಂದು ಸಂಸ್ಥೆ ತಿಳಿಸಿದೆ.
First published:May 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...