• Home
  • »
  • News
  • »
  • lifestyle
  • »
  • Cataract In Children: ಮಕ್ಕಳಲ್ಲಿ ಹೆಚ್ಚಾಗ್ತಿದೆ ಕಣ್ಣಿನ ಪೊರೆ ಸಮಸ್ಯೆ, ಈ ಲಕ್ಷಣಗಳು ಕಂಡು ಬಂದ್ರೆ ನೆಗ್ಲೆಕ್ಟ್​ ಮಾಡ್ಬೇಡಿ

Cataract In Children: ಮಕ್ಕಳಲ್ಲಿ ಹೆಚ್ಚಾಗ್ತಿದೆ ಕಣ್ಣಿನ ಪೊರೆ ಸಮಸ್ಯೆ, ಈ ಲಕ್ಷಣಗಳು ಕಂಡು ಬಂದ್ರೆ ನೆಗ್ಲೆಕ್ಟ್​ ಮಾಡ್ಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cataract in India Cases Rise: ಮಕ್ಕಳಲ್ಲಿ ಕಣ್ಣಿನ ಪೊರೆಯು ಭಾರತದಲ್ಲಿ ಬಾಲ್ಯದಲ್ಲಿಯೇ ಬರುವ ಕುರುಡುತನಕ್ಕೆ ಪ್ರಮುಖ ಕಾರಣವಾಗಿದೆ ಎಂದು ನೋಯ್ಡಾದ ICARE ಕಣ್ಣಿನ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಸೌರಭ್ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • Share this:

ಕಣ್ಣಿನ ಪೊರೆ (cataract ) ಅಥವಾ ಸಾಮಾನ್ಯವಾಗಿ ಸುರಕ್ಷಿತ ಮೋಟಿಯಾ (safed motiya ) ಎಂದು ಕರೆಯಲ್ಪಡುವ ಸಮಸ್ಯೆ (Problem) ಈಗ  ಮಕ್ಕಳಲ್ಲಿ ಸಾಮಾನ್ಯವಾಗಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ. ಭಾರತದಲ್ಲಿ, (India)  ಪ್ರತಿ 10,000 ಮಕ್ಕಳಲ್ಲಿ ಆರು ಮಕ್ಕಳು ಇಂತಹ ಸಮಸ್ಯೆಯೊಂದಿಗೆ ಜನಿಸುತ್ತಾರೆ. ಅಲ್ಲದೇ, ಇದು ಬಾಲ್ಯದ ಕುರುಡುತನ ಸಮಸ್ಯೆಯ ಶೇಕಡಾ 10 ರಷ್ಟಿದೆ ಎಂದು ವರದಿ ತಿಳಿಸಿದೆ. ಮಕ್ಕಳ (Kid) ಕಣ್ಣಿನ ಪೊರೆಗಳ ಸಮಸ್ಯೆಯು ವಾಸ್ತವವಾಗಿ, ಅನೇಕ ಕಾರಣಗಳಿಂದ ಹೆಚ್ಚಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.  ಕಣ್ಣಿನ ಪೊರೆ ಎಂಬುದು ಒಂದು ವೈದ್ಯಕೀಯ ಸಮಸ್ಯೆಯಾಗಿದ್ದು, ಇದು ನೈಸರ್ಗಿಕ ಕಣ್ಣಿನ ಪೊರೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರುವ ಶಾರೀರಿಕ ಕ್ಷೀಣಗೊಳ್ಳುವ ಬದಲಾವಣೆ ಎನ್ನಬಹುದು.


ಮಕ್ಕಳಲ್ಲಿ ಹೆಚ್ಚಾಗ್ತಿದೆ  ಕಣ್ಣಿನ ಸಮಸ್ಯೆ


ಕಣ್ಣಿನೊಳಗಿನ ಸಾಮಾನ್ಯವಾಗಿ ಪಾರದರ್ಶಕ, ಸ್ಫಟಿಕದಂತಹ ಲೆನ್ಸ್​ ಅಪಾರದರ್ಶಕವಾದಾಗ ಅಥವಾ ಮಸುಕಾದಾಗ ಈ ಸಮಸ್ಯೆ ಸಂಭವಿಸುತ್ತದೆ. ಆದರೆ ಕಣ್ಣಿನ ತಜ್ಞರ ಪ್ರಕಾರ,ಮಕ್ಕಳಲ್ಲಿ, ಈ ಸಮಸ್ಯೆಗೆ ಕಾರಣಗಳು ವಿಭಿನ್ನವಾಗಿವೆ. ನವಜಾತ ಶಿಶುಗಳಲ್ಲಿ ಹುಟ್ಟಿದ ಸಮಯದಿಂದಲೇ ಕಣ್ಣಿನ ಪೊರೆಯ ಸಮಸ್ಯೆ ಕಂಡುಬರುತ್ತದೆ. ಇದು ಒಂದು ಸೈಡ್​ ಅಥವಾ ಎರಡು ಸೈಡ್​ ಆಗಿರಬಹದು. ಸಾಮಾನ್ಯವಾಗಿ ತಾಯಿಯ ಸೋಂಕುಗಳು ಅಥವಾ ಡೌನ್ ಸಿಂಡ್ರೋಮ್‌ನಂತಹ ಇತರ ಆರೋಗ್ಯ ಸಮಸ್ಯೆಗಳ ಇತಿಹಾಸ ಹೊಂದಿರುತ್ತದೆ ಎಂದು ಹೈದರಾಬಾದ್‌ನ ಮ್ಯಾಕ್ಸಿವಿಷನ್ ಐ ಆಸ್ಪತ್ರೆಯ ನೇತ್ರಶಾಸ್ತ್ರಜ್ಞ ಡಾ ಸತ್ಯ ಪ್ರಸಾದ್ ಬಾಲ್ಕಿ ನ್ಯೂಸ್​18ಗೆ ತಿಳಿಸಿದ್ದಾರೆ.


10 ವರ್ಷಗಳ ಹಿಂದೆ ಹೋಲಿಸಿದರೆ, ಗರ್ಭಾವಸ್ಥೆಯಲ್ಲಿ ಉತ್ತಮ ಆರೈಕೆ, ತಾಯಿಗೆ ಉಂಟಾಗುವ ಸೋಂಕುಗಳು ಕಡಿಮೆಯಾಗಿದ್ದು, ಮತ್ತು ಶುದ್ಧ ಹಾಗೂ ಹೆರಿಗೆ ಪದ್ಧತಿಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಕಡಿಮೆಯಾಗಿವೆ. ನಗರದಲ್ಲಿ, ಸ್ಟೆರಾಯ್ಡ್ ಸಮಸ್ಯೆ, ಆನುವಂಶಿಕ ಆರೋಗ್ಯ ಸಮಸ್ಯೆ, ಚಯಾಪಚಯ ಸಮಸ್ಯೆಗಳು ಮತ್ತು ಅಕಾಲಿಕ ಜನನಗಳಂತಹ ಇತರ ಅಂಶಗಳಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.


ಮಕ್ಕಳಲ್ಲಿ ಕಣ್ಣಿನ ಪೊರೆಯು ಭಾರತದಲ್ಲಿ ಬಾಲ್ಯದಲ್ಲಿಯೇ ಬರುವ ಕುರುಡುತನಕ್ಕೆ ಪ್ರಮುಖ ಕಾರಣವಾಗಿದೆ ಎಂದು ನೋಯ್ಡಾದ ICARE ಕಣ್ಣಿನ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಸೌರಭ್ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಕೆಲ ಮಾಹಿತಿಗಳ ಪ್ರಕಾರ ಬಾಲ್ಯದ ಕುರುಡುತನದ ಸುಮಾರು 15% ಪ್ರಕರಣಗಳು ಅನುವಂಶಿಕತೆಯಿಂದ ಉಂಟಾಗುತ್ತವೆ. ಭಾರತವು ಸುಮಾರು 3-3.5 ಲಕ್ಷ ಅಂಧ ಮಕ್ಕಳನ್ನು ಹೊಂದಿದ್ದು, ಅದರಲ್ಲಿ 15% ಕಣ್ಣಿನ ಪೊರೆಯಿಂದ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.


ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರರಾದ ಡಾ ಅಮೃತಾ ಕಪೂರ್ ಚತುರ್ವೇದಿ ಅವರ ಪ್ರಕಾರ, ವಿಶ್ವದಾದ್ಯಂತ 2 ಲಕ್ಷ ಮಕ್ಕಳು ಕಣ್ಣಿನ ಪೊರೆ ಸಮಸ್ಯೆಯಿಂದಾಗಿ ಕುರುಡರಾಗಿದ್ದಾರೆ ಮತ್ತು ಪ್ರತಿ ವರ್ಷ 20,000-40,000 ಮಕ್ಕಳು ಈ ಸಮಸ್ಯೆಯೊಂದಿಗೆ ಜನಿಸುತ್ತಾರೆ ಎಂದು ತಿಳಿಸಿದ್ದಾರೆ.




ಮಕ್ಕಳ ಕಣ್ಣಿನ ಪೊರೆಯ ಹೆಚ್ಚಿನ ಪ್ರಕರಣಗಳು, ಮಕ್ಕಳ ಕಣ್ಣಿನ ತಪಾಸಣೆಯ ಸಮಯದಲ್ಲಿ ಅಥವಾ ಪೋಷಕರು ತಮ್ಮ ಕಣ್ಣುಗಳಲ್ಲಿ ಬಿಳಿ ಹೊಳಪನ್ನು ಗಮನಿಸಿದಾಗ ಮಾತ್ರ ಕಂಡು ಹಿಡಿಯಲು ಸಾಧ್ಯವಾಗಿದ್ದು,  ಮಕ್ಕಳು ತಮ್ಮ ದೃಷ್ಟಿ ಕಡಿಮೆಯಾಗುವುದನ್ನು ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ, ಹಾಗಾಗಿ ಪೋಷಕರೇ ಇದನ್ನು ಗುರುತಿಸಬೇಕು ಎಂದು ನೇತ್ರಶಾಸ್ತ್ರಜ್ಞರು ಹೇಳುತ್ತಾರೆ.


ನಾವು ಪರೀಕ್ಷೆ ಮಾಡುವ ಪ್ರತಿ 1,000 ಮಕ್ಕಳಲ್ಲಿ 1-2 ಕಣ್ಣಿನ ಪೊರೆ ಸಮಸ್ಯೆ ಹೊಂದಿರುವುದನ್ನು ನಾವು ನೋಡುತ್ತೇವೆ" ಎಂದು ಅಮೃತಾ ಆಸ್ಪತ್ರೆಯ ಚತುರ್ವೇದಿ ಹೇಳುತ್ತಾರೆ. ಇದಲ್ಲದೇ, ಇತರ ಕಣ್ಣಿನ ಸಮಸ್ಯೆಗಳನ್ನು ಹೊಂದಿರುವವರು, ಕಣ್ಣಿನ ಪೊರೆಗಳನ್ನು ಹೊಂದಿರುವ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಸಹ ಮಾಹಿತಿ ನೀಡಿದ್ದಾರೆ. ಅಲ್ಲದೇ, ಭಾರತದಲ್ಲಿ ಬಾಲ್ಯದಲ್ಲಿಯೇ ಕಣ್ಣಿನ ಪೊರೆಗಳ ಸಮಸ್ಯೆ ಹೆಚ್ಚಳಕ್ಕೆ ಹಲವಾರು ಅಂಶಗಳು ಕಾರಣವಾಗುತ್ತಿದೆ ಎಂದು ICARE ಯ ವೈದ್ಯ ಚೌಧರಿ ಹೇಳಿದ್ದಾರೆ.


ಹಿಂದಿನ ಕಾಲಕ್ಕೆ ಹೋಲಿಸಿದರೆ ಬಾಲ್ಯದಲ್ಲಿ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದ ಪ್ರಕರಣಗಳು ಕಡಿಮೆಯಾಗುತ್ತಿವೆ. ಸಮಯಕ್ಕೆ ಮೊದಲೇ ಜನಿಸಿದ ಹೆಚ್ಚು ಮಕ್ಕಳು ಬದುಕುಳಿಯುತ್ತಿವೆ. ಆದರೆ, ಮಕ್ಕಳಲ್ಲಿ ಅಸ್ತಮಾ ಪ್ರಕರಣಗಳೂ ಹೆಚ್ಚಾಗುತ್ತಿವೆ. ಈ ಸಂದರ್ಭಗಳಲ್ಲಿ ಸ್ಟೆರಾಯ್ಡ್‌ಗಳನ್ನು ಹೆಚ್ಚಾಗಿ ಚಿಕಿತ್ಸೆಯ ಮುಖ್ಯ ಮಾರ್ಗವಾಗಿ ಬಳಸಲಾಗುತ್ತದೆ, ಇದು ಕಣ್ಣಿನ ಪೊರೆಗೆ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯ.


ಈ ಸಮಸ್ಯೆಗೆ ಕಾರಣವೇನು?


ಕಿರಿಯ ವಯಸ್ಸಿನ ಮಕ್ಕಳ ಕುಟುಂಬದಲ್ಲಿ  ಕಣ್ಣಿನ ಪೊರೆಗಳ ಇತಿಹಾಸವಿದ್ದರೆ, ಹುಟ್ಟಿನಿಂದಲೇ ಕಣ್ಣಿನ ಪೊರೆ ಬೆಳೆಯುವ ಸಾಧ್ಯತೆಯು ಹೆಚ್ಚಾಗುತ್ತದೆ. ಹುಟ್ಟುವ ಮಕ್ಕಳ ಹೆಚ್ಚಿನ ಕಣ್ಣಿನ ಪೊರೆಗಳು ಇತರ ಕಣ್ಣು ಅಥವಾ ಆರೋಗ್ಯ ಸಮಸ್ಯೆಗಳ ಜೊತೆಯಲ್ಲಿ ಉಂಟಾಗುತ್ತದೆ. ಈ ರೀತಿಯ ಕಣ್ಣಿನ ಪೊರೆಯು ಆನುವಂಶಿಕ ಅಂಶಗಳಿಂದ ಉಂಟಾಗಬಹುದು.


ಇದನ್ನೂ ಓದಿ: ಗರ್ಭಿಣಿಯರು ಪ್ರತಿ ರಾತ್ರಿ ಈ ಜ್ಯೂಸ್​ಗಳನ್ನು ಕುಡಿಬೇಕಂತೆ


ಗರ್ಭಾವಸ್ಥೆಯಲ್ಲಿ ತಾಯಿಯು ದಡಾರದಂತಹ ಸೋಂಕಿಗೆ ಒಳಗಾದಾಗ, ಕಣ್ಣಿನ ಪೊರೆಗಳು ಬೆಳೆಯಬಹುದು. ಅಸಮರ್ಪಕ ಪೋಷಣೆ, ಚಯಾಪಚಯ ಸಮಸ್ಯೆಗಳು, ಗರ್ಭಾವಸ್ಥೆಯ ಮಧುಮೇಹ ಅಥವಾ ತಾಯಿಯಲ್ಲಿ ಔಷಧ ಪ್ರತಿಕ್ರಿಯೆಗಳು ಸಹ ಇದಕ್ಕೆ ಕಾರಣವಾಗಬಹುದು.


 ಕಂಡು ಹಿಡಿಯುವುದು ಹೇಗೆ?


ಪೋಷಕರು ಮಗುವಿನಲ್ಲಿ ಆರಂಭಿಕ ಚಿಹ್ನೆಗಳಾದ ದೃಷ್ಟಿ ಕಡಿಮೆಯಾಗುವುದು, ವಸ್ತುಗಳನ್ನು ಗುರುತಿಸುವಲ್ಲಿ ವಿಫಲತೆ, ಕಣ್ಣಿನ ಮಧ್ಯದಲ್ಲಿ ಬಿಳಿ ಚುಕ್ಕೆಗಳು ಮತ್ತು ಮುಂತಾದ ಸಮಸ್ಯೆಯನ್ನು ಗಮನಿಸಬೇಕು. ದೃಷ್ಟಿಯ ಬೆಳವಣಿಗೆಗೆ ಇದು ಬಹಳ ಅಗತ್ಯ. ಹಾಗಾಗಿ ಯಾವುದೇ ರೀತಿ ನಿರ್ಲಕ್ಷ್ಯ ಮಾಡುವುದು ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗುವುದರಿಂದ ಈ ಸಮಸ್ಯೆಗೆ ಶೀಘ್ರವಾಗಿ ಚಿಕಿತ್ಸೆ ನೀಡುವುದು ಅತ್ಯಗತ್ಯ ಎಂದು ವೈದ್ಯರು ಸೂಚಿಸುತ್ತಾರೆ.


ಮಗುವಿನ ಲಕ್ಷಣಗಳು, ವಯಸ್ಸು ಮತ್ತು ಒಟ್ಟಾರೆ ಆರೋಗ್ಯವು ಚಿಕಿತ್ಸೆಯ ಮೇಲೆ ಪ್ರಭಾವ ಬೀರುತ್ತದೆ. ಸಮಸ್ಯೆಯ ಗಂಭೀರತೆಯಿಂದಲೂ ಇದನ್ನು ನಿರ್ಧರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮಗುವಿಗೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್‌ಗಳು ಬೇಕಾಗಬಹುದು ಎಂದು ಗುರುಗ್ರಾಮ್‌ನ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.


ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತಂತೆ


ಮಕ್ಕಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಮಾಡುವಾಗ ಹಲವಾರು ಸವಾಲುಗಳು ಎದುರಾಗುತ್ತದೆ. ಮಗುವಿನ ಕಣ್ಣುಗಳು ಚಿಕ್ಕದಾಗಿದ್ದು, ಇನ್ನೂ ಸಂಪೂರ್ಣವಾಗಿ ಬೆಳವಣಿಗೆಯಾಗದಿದ್ದರೆ, ಚಿಕಿತ್ಸೆ ಕಷ್ಟ ಎನ್ನುತ್ತಾರೆ ವೈದ್ಯರು.

Published by:Sandhya M
First published: