Kidney Health: ಕಿಡ್ನಿಗೆ ಹಾನಿ ಮಾಡುವ ಪದಾರ್ಥಗಳಿವು! ಆರೋಗ್ಯಕ್ಕಾಗಿ ಇವನ್ನು ಅವಾಯ್ಡ್ ಮಾಡಲೇಬೇಕು

ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸುವ ಹಾರ್ಮೋನುಗಳನ್ನು ಸಹ ತಯಾರಿಸಲು ಮೂತ್ರಪಿಂಡಗಳು ಬೇಕು. ಮೂತ್ರಪಿಂಡವು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಆದರೂ ಕೆಲವು ಅಂಶಗಳ ಕಾರಣದಿಂದ ಅದು ರೋಗಗಳಿಂದ ಸುತ್ತುವರಿಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಾನವ ದೇಹದಲ್ಲಿ (Human Body) ಎಲ್ಲಾ ಅಂಗಗಳು (Parts) ಮುಖ್ಯವಾಗಿ ತಮ್ಮದೇ ಆದ ಕೆಲಸ (Work) ಮಾಡುತ್ತವೆ. ಹಾಗೆಯೇ  ಮೂತ್ರಪಿಂಡಗಳು (Kidneys) ಸೈನಿಕನಂತೆ (Soldier) ಕೆಲಸ ಮಾಡುವ ಅಂಗಗಳು ಆಗಿವೆ. ನೀವು ತಿನ್ನುವ ಅಥವಾ ಕುಡಿಯುವ ಪದಾರ್ಥಗಳಲ್ಲಿ ಅಡಗಿರುವ ಹಾಗೂ ದೇಹದಲ್ಲಿ ಸಂಗ್ರಹವಾಗುವ ವಿಷವನ್ನು ಹೊರ ಹಾಕುವ ಮೂಲಕ ಇದು ಕೆಲಸ ಮಾಡುತ್ತದೆ. ಅವರು ಪ್ರತಿದಿನ ಮೂತ್ರದ ಮೂಲಕ ನಿಮ್ಮ ರಕ್ತದಿಂದ ಸುಮಾರು 1,500 ಮಿಲಿ ತ್ಯಾಜ್ಯ ಅಥವಾ ಕೊಳೆ ತೆಗೆದು ಹಾಕುತ್ತಾರೆ. ಅಲ್ಲದೆ ದೇಹದ ಖನಿಜ ಸಮತೋಲನ ನಿಯಂತ್ರಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ.

    ದೇಹವನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತವೆ ಮೂತ್ರಪಿಂಡಗಳು

    ಇದಲ್ಲದೆ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸುವ ಹಾರ್ಮೋನುಗಳನ್ನು ಸಹ ತಯಾರಿಸಲಾಗುತ್ತದೆ. ಮೂತ್ರಪಿಂಡವು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಆದರೂ ಕೆಲವು ಅಂಶಗಳ ಕಾರಣದಿಂದ ಅದು ರೋಗಗಳಿಂದ ಸುತ್ತುವರಿಯುತ್ತದೆ.

    ಕಿಡ್ನಿ ರೋಗ

    ಹೆಪಟೈಟಿಸ್ ಸಿ ವೈರಸ್ ಸೇರಿದಂತೆ ವಯಸ್ಸು, ಅಧಿಕ ರಕ್ತದೊತ್ತಡ, ಹೃದ್ರೋಗ, ಆಲ್ಕೋಹಾಲ್ ಬಳಕೆ ಮತ್ತು ಮಧುಮೇಹದಿಂದ ಮೂತ್ರಪಿಂಡಗಳು ಪರಿಣಾಮ ಬೀರಬಹುದು. ಕಿಡ್ನಿ ರೋಗವನ್ನು ನಾಲ್ಕು ಸ್ಥಿತಿಯಲ್ಲಿ ವಿಂಗಡಿಸಲಾಗುತ್ತದೆ. ಇವುಗಳಲ್ಲಿ ಮೂತ್ರಪಿಂಡದ ಕಲ್ಲುಗಳು, ತೀವ್ರವಾದ ಮೂತ್ರಪಿಂಡದ ಗಾಯ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆ (ESRD) ಸೇರಿವೆ.

    ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

    ಸಂಸ್ಕರಿಸಿದ ಚಿಕನ್ ಸೇವನೆ ತಪ್ಪಿಸಿ

    ಸಂಸ್ಕರಿಸಿದ ಮಾಂಸಗಳಾದ ಬೇಕನ್, ಸಾಸೇಜ್, ಹಾಟ್ ಡಾಗ್‌, ಡೆಲಿ ಮಾಂಸಗಳು ಮತ್ತು ಬರ್ಗರ್ ಪ್ಯಾಟಿಗಳು ಮೂತ್ರಪಿಂಡದ ಆರೋಗ್ಯಕ್ಕೆ ಎರಡು ಪಟ್ಟು ಅಪಾಯ ಹೆಚ್ಚು ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಸೋಡಿಯಂ ನ್ನು ಹೊಂದಿದೆ. ಆರೋಗ್ಯವಂತ ಜನರು ದಿನಕ್ಕೆ 2,300 ಮಿಲಿ ಗ್ರಾಂ ಸೋಡಿಯಂ ಸೇವಿಸಬಾರದು ಎಂದು ರಾಷ್ಟ್ರೀಯ ಕಿಡ್ನಿ ಫೌಂಡೇಶನ್ ಸಲಹೆ ನೀಡುತ್ತದೆ.

    ಘನೀಕೃತ ಪಿಜ್ಜಾ ಸೇವನೆ ಹಾನಿಕರ

    ಬಿಳಿ ಬ್ರೆಡ್ ಕ್ರಸ್ಟ್, ಹೆಚ್ಚಿನ ಸೋಡಿಯಂ ಟೊಮೆಟೊ ಸಾಸ್, ಚೀಸ್ ಮತ್ತು ಸಾಸೇಜ್ ಅಥವಾ ಪೆಪ್ಪೆರೋನಿಯಂತಹ ಸಂಸ್ಕರಿಸಿದ ಮಾಂಸದಿಂದ ತಯಾರಿಸಿದ ಪಿಜ್ಜಾ ಸೇವನೆಯನ್ನು ನೀವು ಹೆಚ್ಚು ಮಾಡುತ್ತಿದ್ದರೆ, ನೀವು ನಿಜವಾಗಿಯೂ ನಿಮ್ಮ ಮೂತ್ರಪಿಂಡ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದರಲ್ಲಿ ನಾಲ್ಕು ಪಟ್ಟು ಹೆಚ್ಚು ಸೋಡಿಯಂ ಇದೆ.

    ಮೂತ್ರಪಿಂಡದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಸೂಪ್

    ಶೀತ ಅಥವಾ ಜ್ವರದ ರೋಗ ಲಕ್ಷಣಗಳು ಉಂಟಾದಾಗ ನೋಯುತ್ತಿರುವ ಗಂಟಲು ರಿಲೀಫ್ ಮಾಡಲು ಸೂಪ್‌ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಆದರೆ ಸೂಪ್‌ನಲ್ಲಿರುವ ಉಪ್ಪಿನ ಪ್ರಮಾಣವು ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಿಸುತ್ತದೆ. ಇದು ನಿಮ್ಮ ಮೂತ್ರಪಿಂಡಕ್ಕೆ ಆರೋಗ್ಯಕರವಲ್ಲ.

    ಚಿಕನ್ ಸೂಪ್, ವಿಶೇಷವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಪ್ರತಿ ಕಪ್‌ಗೆ 800 ಮಿಲಿಗ್ರಾಂಗಳಿಗಿಂತ ಹೆಚ್ಚು ಸೋಡಿಯಂ ಇದರಲ್ಲಿರುತ್ತದೆ. ಹಾಗಾಗಿ ನೀವು ಸೂಪ್ ಕುಡಿಯಲು ಬಯಸಿದರೆ, ತರಕಾರಿ ಸ್ಕ್ರ್ಯಾಪ್ಗಳು, ಗಿಡಮೂಲಿಕೆ ಮತ್ತು ಸೋಡಿಯಂ-ಮುಕ್ತ ಮಸಾಲೆ ಬಳಸಿ.

    ಫ್ರೆಂಚ್ ಫ್ರೈ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ

    ಆಲೂಗಡ್ಡೆ ಕುದಿಸಿ ಅಥವಾ ಬೇಯಿಸಿ ತಿನ್ನುವುದು ಆರೋಗ್ಯಕರ. ಆದರೆ ದೀರ್ಘಕಾಲ ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ನಿಮ್ಮ ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಫ್ರೆಂಚ್ ಫ್ರೈಸ್, ಹ್ಯಾಶ್ ಬ್ರೌನ್ಸ್, ಆಲೂಗಡ್ಡೆ ಚಿಪ್ಸ್ ಅಥವಾ ಆಲೂಗಡ್ಡೆ ಪ್ಯಾನ್‌ಕೇಕ್‌ಗಳಂತಹ ಎಲ್ಲಾ ಆಹಾರಗಳು ನಿಮ್ಮ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ಸೋಯಾ ಸಾಸ್ ನಿಂದ ಕಿಡ್ನಿಗೆ ಹಾನಿ

    ಸೋಯಾ ಸಾಸ್ ಸೂಪರ್ ರ್ಮಾರ್ಕೆಟ್ಗಳಲ್ಲಿ ಲಭ್ಯವಿರುವ ಉನ್ನತ ಮಟ್ಟದ ಸೋಡಿಯಂ ಸಾಸ್ಗಳಲ್ಲಿ ಒಂದಾಗಿದೆ. ಈ ಉತ್ಪನ್ನಗಳು ಪ್ರತಿ ಚಮಚಕ್ಕೆ 950 ಮಿಲಿಗ್ರಾಂ ಸೋಡಿಯಂ ಅನ್ನು ಹೊಂದಿರುತ್ತವೆ. ನಿಮ್ಮ ಮೂತ್ರಪಿಂಡವನ್ನು ಒಳಗಿನಿಂದ ಟೊಳ್ಳು ಮಾಡುತ್ತದೆ.
    Published by:renukadariyannavar
    First published: