Kidney Stones: ಕಿಡ್ನಿ ಕಲ್ಲುಗಳು ಕರಗೋದಕ್ಕೆ ಈ ಮನೆಮದ್ದು ಬೆಸ್ಟ್! ನಿಮಗೂ ಸಮಸ್ಯೆ ಇದ್ರೆ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಪ್ಪು ಅಥವಾ ಸಕ್ಕರೆ ಅಧಿಕವಾಗಿರುವ ಆಹಾರ ಸೇವನೆಯಿಂದ ಕಿಡ್ನಿ ಸ್ಟೋನ್ಸ್ ಉಂಟಾಗುತ್ತದೆ. ಮೂತ್ರಪಿಂಡದ ಕಲ್ಲುಗಳು ಚಿಕ್ಕದು ಅಥವಾ ದೊಡ್ಡದು ಇರಬಹುದು. ಸಣ್ಣ ಕಲ್ಲುಗಳು ಸಾಮಾನ್ಯವಾಗಿ ಮೂತ್ರದ ಮೂಲಕ ಹಾದು ಹೋಗುತ್ತವೆ. ಕೆಲವೊಮ್ಮೆ ಅದು ಹೊರ ಬರುವುದಿಲ್ಲ ಅಲ್ಲದೇ ಅದರ ಗಾತ್ರವೂ ಹೆಚ್ಚಾಗುತ್ತದೆ. ಈ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು...

ಮುಂದೆ ಓದಿ ...
  • Share this:

    ಕಿಡ್ನಿ ಕಲ್ಲುಗಳು (Kidney Stones) ಸಾಮಾನ್ಯ ಆರೋಗ್ಯ ಸಮಸ್ಯೆ (Health Problem). ಇದಕ್ಕಾಗಿ ಪ್ರತಿಯೊಬ್ಬರೂ ಮಾತ್ರೆಯ (Medicine) ಮೊರೆ ಹೋಗ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು (People) ಕಿಡ್ನಿ ಸ್ಟೋನ್ಸ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವರದಿಯ ಪ್ರಕಾರ, ಹತ್ತು ಜನರಲ್ಲಿ ಒಬ್ಬರು ತಮ್ಮ ಜೀವನದಲ್ಲಿ (Life) ಒಂದು ಹಂತದಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೊಂದುತ್ತಾರೆ. ಮೂತ್ರಪಿಂಡದ ಕಲ್ಲುಗಳ ಅಪಾಯವು ಪುರುಷರಲ್ಲಿ ಸುಮಾರು 11 ಪ್ರತಿಶತ ಮತ್ತು ಮಹಿಳೆಯರಲ್ಲಿ 9 ಪ್ರತಿಶತ ಇದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಹಲವು ಅನಾರೋಗ್ಯಕರ ಜೀವನವು ಇತರೆ ಕಾಯಿಲೆಗಳು ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತದೆ.


    ಮೂತ್ರಪಿಂಡದ ಕಲ್ಲುಗಳು ಉಂಟಾದಾಗ ಯಾವೆಲ್ಲಾ ಲಕ್ಷಣಗಳು ಗೋಚರಿಸುತ್ತವೆ?


    ಮೂತ್ರಪಿಂಡದ ಕಲ್ಲುಗಳ ಸಾಮಾನ್ಯ ಲಕ್ಷಣವೆಂದರೆ ತೀವ್ರವಾದ ಕೆಳ ಬೆನ್ನು ನೋವು, ಮೂತ್ರದಲ್ಲಿ ರಕ್ತ, ವಾಕರಿಕೆ, ವಾಂತಿ, ಜ್ವರ, ಶೀತ, ದುರ್ವಾಸನೆಯುಕ್ತ ಮೂತ್ರ ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ.


    ಕಿಡ್ನಿ ಸ್ಟೋನ್ಸ್ ಆಗಲು ಮುಖ್ಯ ಕಾರಣಗಳೇನು?


    ಕಿಡ್ನಿ ಕಲ್ಲುಗಳು ಉಂಟಾಗಲು ಸಾಕಷ್ಟು ನೀರು ಕುಡಿಯದಿರುವುದು, ವ್ಯಾಯಾಮ ಹೆಚ್ಚು ಅಥವಾ ಕಡಿಮೆ ಮಾಡುವುದು, ಸ್ಥೂಲಕಾಯತೆ, ತೂಕ ನಷ್ಟ ಶಸ್ತ್ರಚಿಕಿತ್ಸೆ, ಉಪ್ಪು ಅಥವಾ ಸಕ್ಕರೆ ಅಧಿಕವಾಗಿರುವ ಆಹಾರ ಸೇವನೆಯಿಂದ ಕಿಡ್ನಿ ಸ್ಟೋನ್ಸ್ ಉಂಟಾಗುತ್ತದೆ.




    ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗೆ ಚಿಕಿತ್ಸೆ ಏನಿದೆ?


    ಮೂತ್ರಪಿಂಡದ ಕಲ್ಲುಗಳು ಚಿಕ್ಕದು ಅಥವಾ ದೊಡ್ಡದು ಇರಬಹುದು. ಸಣ್ಣ ಕಲ್ಲುಗಳು ಸಾಮಾನ್ಯವಾಗಿ ಮೂತ್ರದ ಮೂಲಕ ಹಾದು ಹೋಗುತ್ತವೆ. ಕೆಲವೊಮ್ಮೆ ಅದು ಹೊರ ಬರುವುದಿಲ್ಲ. ಮತ್ತು ಅದರ ಗಾತ್ರವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ದೊಡ್ಡ ಕಲ್ಲುಗಳು ಔಷಧಿಗಳಿಂದ ಒಡೆಯುತ್ತವೆ. ಆಪರೇಷನ್ ಸಹ ಮಾಡಬೇಕಾಗಬಹುದು.


    ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದು ಟ್ರೈ ಮಾಡಿ


    ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಹೊರತಾಗಿ, ಮೂತ್ರಪಿಂಡದ ಕಲ್ಲು ತೆಗೆದು ಹಾಕಲು ಅಥವಾ ಕರಗಿಸಲು ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ. ಅವುಗಳನ್ನು ನೀವು ಟ್ರೈ ಮಾಡಿ. ಅತ್ಯಂತ ಶಕ್ತಿಶಾಲಿ ಪರಿಹಾರವೆಂದರೆ ಬಿಜೋರಾ ನಿಂಬೆ. ಅಂದ್ರೆ ದೊಡ್ಡ ನಿಂಬೆ.


    ದೊಡ್ಡ ನಿಂಬೆ ಕಿಡ್ನಿ ಸ್ಟೊನ್ಸ್ ಕಲ್ಲಿಗೆ ಮದ್ದು


    ಎಲ್ಲರೂ ಬಳಸುವ ಚಿಕ್ಕ ನಿಂಬೆ ಹಣ್ಣುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸಿಗುತ್ತವೆ. ಸಾಮಾನ್ಯ ಭಾಷೆಯಲ್ಲಿ ದೊಡ್ಡ ನಿಂಬೆ ಅಥವಾ ಬಿಜೋರಾ ನಿಂಬೆ ಹಾಗಲಕಾಯಿಯಂತೆ ಕಾಣುತ್ತದೆ. ಮತ್ತು ಅದರ ಬಣ್ಣ ಹಳದಿ ಅಥವಾ ಹಸಿರು. ಇದರ ಬೀಜಗಳು ಸ್ವಲ್ಪ ದೊಡ್ಡದಾಗಿರುತ್ತವೆ.


    ಸಾಂದರ್ಭಿಕ ಚಿತ್ರ


    ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿದ್ದರೆ, ಪರಿಹಾರಕ್ಕಾಗಿ ದೊಡ್ಡ ನಿಂಬೆ ಬಳಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದೊಡ್ಡ ನಿಂಬೆಹಣ್ಣಿನ 20 ಮಿಲಿ ರಸ ಕುಡಿಯಿರಿ. 3-4 ವಾರಗಳಿಗಿಂತ ಹೆಚ್ಚು ಕಾಲ ಸೇವಿಸಬೇಡಿ.


    ಹುರಳೆ ಕಾಳು


    ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರಕ್ಕೆ ಹುರಳೆ ಬೀಜಗಳು ಪರಿಣಾಮಕಾರಿ. ಎರಡು ಚಮಚ ಹುರಳೆ ಕಾಳನ್ನು ರಾತ್ರಿಯಿಡೀ ಎರಡು ಕಪ್ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಅದನ್ನು ಕುದಿಸಿ ತಿನ್ನಿರಿ.


    ಬಾರ್ಲಿ ನೀರು ಮದ್ದು


    ಕಿಡ್ನಿ ಸ್ಟೋನ್ ರೋಗಿಗಳಿಗೆ ಬಾರ್ಲಿ ಉತ್ತಮ. ಎರಡು ಚಮಚ ಬಾರ್ಲಿಯನ್ನು ಎರಡು ಲೋಟ ನೀರಿಗೆ ಹಾಕಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ ಹತ್ತು ನಿಮಿಷ ಕುದಿಸಿ ನಂತರ ಫಿಲ್ಟರ್ ಮಾಡಿ ಸೇವಿಸಿ.


    ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ


    ಇತರ ಸಲಹೆಗಳು


    ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ತೆಳು ಬೇಳೆ ಕಾಳು ಸೇವಿಸಿ. ತರಕಾರಿ ಸೂಪ್ ಸೇವಿಸಿ. ಮೂತ್ರ ಮತ್ತು ಮಲವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳಬೇಡಿ. ಹೆಚ್ಚು ಉಪ್ಪು ತಿನ್ನಬೇಡಿ. ಮದ್ಯಪಾನ, ಧೂಮಪಾನ ತಪ್ಪಿಸಿ.

    Published by:renukadariyannavar
    First published: