Kidney Health: ಎಚ್ಚರ..! ಈ ಅಭ್ಯಾಸಗಳು ನಿಮ್ಮ ಕಿಡ್ನಿಯ ಆರೋಗ್ಯ ಹಾಳು ಮಾಡುತ್ತವೆ..!

Save your kidneys: ನಿಮ್ಮ ಕೆಲ ಅಭ್ಯಾಸಗಳಿಂದ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮಗೆ ತಿಳಿಯದೇ ಮೂತ್ರಪಿಂಡಕ್ಕೆ ಹಾನಿಯಾಗುತ್ತಿರುತ್ತೆ. ಹೀಗಾಗಿ ಆರೋಗ್ಯ ಸುಧಾರಣೆ ಮತ್ತು ಮೂತ್ರಪಿಂಡದ ಆರೋಗ್ಯಕ್ಕಾಗಿ ಕೆಲವು ಅಭ್ಯಾಸಗಳನ್ನ ನಿಲ್ಲಿಸುವುದು ಒಳಿತು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹಕ್ಕೆ ಮೂತ್ರಪಿಂಡ(Kidneys) ಬಹಳ ಮುಖ್ಯ. ದೇಹದಿಂದ ಬಂದಿರುವ ಎಲ್ಲಾ ವಿಷಕಾರಿ ವಸ್ತುಗಳು ಮೂತ್ರ ಪಿಂಡಗಳ ಸಹಾಯದಿಂದ ದೇಹದಿಂದ ಹೊರ ಬರುತ್ತವೆ. ಹೀಗೆ ವಿಷಕಾರಿ ವಸ್ತುಗಳು ದೇಹದಿಂದ ಹೊರಬಂದರೆ ಮಾತ್ರ ನಾವು ಆರೋಗ್ಯ(Healthy)ವಾಗಿರುತ್ತೇವೆ.  ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಮೂತ್ರಪಿಂಡ ಸಹಾಯಕ. ಇದಲ್ಲದೇ, ನೀರು, ಉಪ್ಪು, ಖನಿಜಾಂಶಗಳನ್ನು ಸಮ ಪ್ರಮಾಣದಲ್ಲಿಡಲು ಸಹಾಯ ಮಾಡುತ್ತದೆ. ಈ ರೀತಿ ಕಾರ್ಯಗಳು ದೇಹದಲ್ಲಿ ಆಗದಿದ್ದರೆ ನರಗಳು, ಜೀವಕೋಶಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಿಮ್ಮ ದೇಹವನ್ನು ಆರೋಗ್ಯವಾಗಿರಿಸಲು ಮೂತ್ರಪಿಂಡ ಬಹಳ ಆರೋಗ್ಯ ಹಾಗೂ ಆ್ಯಕ್ಟೀವ್​ ಆಗಿರುವುದು ಮುಖ್ಯ. ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಿದ್ದರೆ, ವಿಷಕಾರಿ ವಸ್ತುಗಳು ದೇಹದಲ್ಲಿ ಉಳಿಯುತ್ತವೆ ಮತ್ತು ನಮ್ಮ ರಕ್ತದಲ್ಲಿ ಸೇರಿ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ನಿಮ್ಮ ಮೂತ್ರಪಿಡಂಗಳನ್ನು ಆರೋಗ್ಯವಾಗಿಡಲು ಕೆಲ ಟಿಪ್ಸ್​ ಇಲ್ಲಿದೆ ನೋಡಿ.

    ಮೂತ್ರಪಿಂಡಗಳು ಬೀನ್ಸ್​ ಬೀಜಗಳ ಆಕಾರದಲ್ಲಿರುವ ಎರಡು ಅಂಗಗಳು. ಎದೆಗೂಡಿನ ಕೆಳಭಾಗದಲ್ಲಿ, ನಿಮ್ಮ ಬೆನ್ನಿಗೆ ಅಂಟಿಕೊಂಡಂತೆ ಎಡ ಮತ್ತು ಬಲ ಭಾಗದಲ್ಲಿ ಇರುತ್ತವೆ. ಸರಿಯಾಗಿ ನಮ್ಮ ಮುಷ್ಟಿಯಷ್ಟೇ ದೊಡ್ಡದಿರುವ ಕಿಡ್ನಿಗಳು ಹಲವಾರು ಕಾರ್ಯಗಳನ್ನ ನಿರ್ವಹಿಸುವ ಜವಾಬ್ದಾರಿ ಇದೆ. ನಿಮ್ಮ ಕೆಲ ಅಭ್ಯಾಸಗಳಿಂದ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮಗೆ ತಿಳಿಯದೇ ಮೂತ್ರಪಿಂಡಕ್ಕೆ ಹಾನಿಯಾಗುತ್ತಿರುತ್ತೆ. ಹೀಗಾಗಿ ಆರೋಗ್ಯ ಸುಧಾರಣೆ ಮತ್ತು ಮೂತ್ರಪಿಂಡದ ಆರೋಗ್ಯಕ್ಕಾಗಿ ಕೆಲವು ಅಭ್ಯಾಸಗಳನ್ನ ನಿಲ್ಲಿಸುವುದು ಒಳಿತು.

    1. ಅತಿಯಾದ ಉಪ್ಪು ಬಳಕೆನಿಮ್ಮ ಮೂತ್ರಪಿಂಡ ಆರೋಗ್ಯವಾಗಿರಬೇಕು ಎಂದರೇ ಮೊದಲು ಅತಿಯಾದ ಉಪ್ಪು ಬಳಕೆ ಮಾಡುವುದನ್ನ ನಿಲ್ಲಿಸಿ. ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇದ್ದರೆ, ರಕ್ತದೊತ್ತಡ ಸಮಸ್ಯೆಯನ್ನ ಹೆಚ್ಚಿಸುತ್ತೆ. ಕಡಿಮೆ ಉಪ್ಪು ಬಳಸಿ, ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    2. ಹೆಚ್ಚಿನ ಸಕ್ಕರೆ ಬಳಕೆಯೂ ಅಪಾಯಅಧಿಕ ಪ್ರಮಾಣದಲ್ಲಿ ಸಕ್ಕರೆ ಪದಾರ್ಥಗಳನ್ನ ಸೇವಿಸಿದರೂ ನಿಮ್ಮ ಮೂತ್ರಪಿಂಡಕ್ಕೆ ಅಪಾಯ. ಸಕ್ಕರೆ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಹೆಚ್ಚುತ್ತದೆ. ಇಷ್ಟೆ ಅಲ್ಲದೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯೂ ಹೆಚ್ಚುತ್ತಲೆ ಇರುತ್ತವೆ. ಹೀಗಾಗು ನಿಯಮಿತವಾಗಿ ಸಕ್ಕರೆ ಅಂಶವನ್ನು ನಿಮ್ಮ ದೇಹಕ್ಕೆ ಸೇರಿಸುವ ಅಭ್ಯಾಸ ಮಾಡಿಕೊಳ್ಳಿ.

    ಇದನ್ನೂ ಓದಿ:Healthy Breakfast: ಪ್ರತಿ ದಿನ ಉಪಹಾರಕ್ಕೆ 2 ಮೊಟ್ಟೆ ಸೇವಿಸಿ, ಆರೋಗ್ಯವಾಗಿರಿ

    3.  ಪೇನ್​ ಕಿಲ್ಲರ್​ ತೆಗೆದುಕೊಳ್ಳುವ ಮುನ್ನ ಎಚ್ಚರಇನ್ನೂ ದೇಹದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರು ಸಾಕು ಜನರು ಪೇನ್​ ಕಿಲ್ಲರ್​ ಮಾತ್ರೆಗಳನ್ನ ನುಂಗುತ್ತಾರೆ. ಈ ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡಕ್ಕೆ ಹಾನಿಯುಂಟು ಮಾಡುತ್ತದೆ. ಒಂದು ವೇಳೆ ನೀವು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆ ಪಡೆದು ಪೇನ್​ ಕಿಲ್ಲರ್​ ಮಾತ್ರೆಗಳನ್ನ ಸೇವಿಸಿ

    4. ಧೂಮಪಾನದಿಂದ ದೂರವಿರಿಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಈ ಚಟಗಳನ್ನ ಅಂಟಿಸಿಕೊಂಡಿರುತ್ತಾರೆ. ಧೂಮಪಾನ ಮಾಡುವುದು ಮೂತ್ರಪಿಂಡದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನಿಮಗೆ ಈ ಅಭ್ಯಾಸಗಳು ಇದ್ದರೆ ಕ್ರಮೇಣ ಕಡಿಮೆ ಮಾಡುತ್ತಾ ಬನ್ನಿ.

    ಈ ಅಭ್ಯಾಗಳನ್ನ ನೀವು ರೂಡಿಸಿಕೊಂಡಿದ್ದರೇ ಕಡಿಮೆ ಮಾಡಿ. ಹೆಚ್ಚಾಗಿ ನೀರು ಸೇವಿಸುವುದು, ಚೆನ್ನಾಗಿ 8ರಿಂದ 9 ಗಂಟೆ ನಿದ್ದೆ ಮಾಡುವುದನ್ನ ರೂಡಿಸಿಕೊಳ್ಳಿ. ಹೆಚ್ಚಾಗಿ ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್​ ಆಗುವುದನ್ನ ತಪ್ಪಿಸಬಹುದು. ಚೆನ್ನಾಗಿ ನಿದ್ರೆ ಮಾಡುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತೆ.

    ವರದಿ- ವಾಸುದೇವ್​.ಎಂ
    Published by:Latha CG
    First published: