Beauty Tips: ಕಿಯಾರಾ ಅಡ್ವಾಣಿಯ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ? ಇಲ್ಲಿದೆ ನೋಡಿ

ಸೆಲೆಬ್ರೆಟಿಗಳ ಫೇಜ್‌ಗಳನ್ನು ಫಾಲೋ ಮಾಡುವುದಲ್ಲದೇ ಅವರಿಗೆ ನಿಮ್ಮ ಸುಂದರ ತ್ವಚೆಯ ಆರೈಕೆ ಬಗ್ಗೆ ನಮಗೆ ತಿಳಿಸಿ ಎಂದು ಆಗಾಗ ಕಾಮೆಂಟ್‌ ಹಾಕುತ್ತಾ ಬೇಡಿಕೆ ಇರಿಸುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದರಲ್ಲಿ ಈಗ ಅಭಿಮಾನಿಗಳು ಒಬ್ಬ ಸೆಲೆಬ್ರಿಟಿಗೆ ನಿಮ್ಮ ಪ್ರತಿದಿನದ ತ್ವಚೆಯ ಆರೈಕೆ ಬಗ್ಗೆ ಅಪ್‌ಲೋಡ್‌ ಮಾಡಿ ಎಂದು ಹೆಚ್ಚು ಬೇಡಿಕೆಯನ್ನು ಇರಿಸಿದ್ದಾರೆ.

ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ

  • Share this:
ಸೆಲೆಬ್ರಿಟಿಗಳ (Celebrity) ಜೀವನ ಶೈಲಿ ಬಗ್ಗೆ ತಿಳಿಯಲು ಅಭಿಮಾನಿಗಳು ಯಾವಾಗಲೂ ಕಾತರದಿಂದ ಕಾಯುತ್ತಿರುತ್ತಾರೆ. ಅವರ ಬಗ್ಗೆ ಡಯೆಟ್‌ (Diet), ತ್ವಚೆಯ ಆರೈಕೆ ಬಗ್ಗೆ ಯಾವ-ಯಾವ ಸಲಹೆಗಳನ್ನು ಅವರು ಅನುಸರಿಸುತ್ತಾರೆ ಎಂಬುದರ ತಿಳಿಯಬೇಕೆಂದು ಅವರನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಯಾವಾಗಲೂ ಫಾಲೋ ಮಾಡುತ್ತಲೇ ಇರುತ್ತಾರೆ. ಸೆಲೆಬ್ರೆಟಿಗಳ ಫೇಜ್‌ಗಳನ್ನು ಫಾಲೋ ಮಾಡುವುದಲ್ಲದೇ ಅವರಿಗೆ ನಿಮ್ಮ ಸುಂದರ ತ್ವಚೆಯ ಆರೈಕೆ ಬಗ್ಗೆ ನಮಗೆ ತಿಳಿಸಿ ಎಂದು ಆಗಾಗ ಕಾಮೆಂಟ್‌ (Comment) ಹಾಕುತ್ತಾ ಬೇಡಿಕೆ ಇರಿಸುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದರಲ್ಲಿ ಈಗ ಅಭಿಮಾನಿಗಳು ಒಬ್ಬ ಸೆಲೆಬ್ರಿಟಿಗೆ ನಿಮ್ಮ ಪ್ರತಿದಿನದ ತ್ವಚೆಯ ಆರೈಕೆ (Skin Care) ಬಗ್ಗೆ ಅಪ್‌ಲೋಡ್‌ ಮಾಡಿ ಎಂದು ಹೆಚ್ಚು ಬೇಡಿಕೆಯನ್ನು ಇರಿಸಿದ್ದಾರೆ.

ಆ ಸೆಲೆಬ್ರೆಟಿ ಯಾರು?
ಅವರೇ ಕಿಯಾರಾ ಅಡ್ವಾಣಿ, ಹಿಂದಿ ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ಇವರು ನಾಯಕನಟಿಯಾಗಿ ಗುರುತಿಸಿಕೊಂಡಿದ್ದಾರೆ. ಫಗ್ಲಿ ಎಂಬ ಹಾಸ್ಯ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಇವರು ಎಂ.ಎಸ್‌. ಧೋನಿ : ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಧೋನಿ ಪತ್ನಿಯಾಗಿ ನಟಿಸಿದ್ದಾರೆ. ಇವರು ಈಗ ತಮ್ಮ ತ್ವಚೆಯ ದಿನಚರಿ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ಮುಂದಾಗಿದ್ದಾರೆ. ಅತಿಯಾಗಿ ಮೇಕ್‌ಅಪ್‌ ಮಾಡಿಕೊಳ್ಳದೇ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುವ ಕಿಯಾರಾ ತಮ್ಮ ಸುಂದರ ತ್ವಚೆಯ ರಹಸ್ಯದ ಬಗ್ಗೆ ಮಾತಾಡಿದ್ದಾರೆ. ಇವರ ಸುಂದರ ಹೊಳಪಿನ ತ್ವಚೆಯ ರಹಸ್ಯವು ಒಂದು ಕಪ್‌ ಕಡ್ಲೆ ಬೇಳೆ ಹಿಟ್ಟು ಸಾಮಾನ್ಯವಾಗಿ ಕರೆಯುವ ಬೇಸಾನ್‌ ಪೌಡರ್‌ ಆಗಿದೆಅಂತೆ.

ಇದನ್ನೂ ಓದಿ: Fitness Secrets: ಬಾಲಿವುಡ್ ನಟಿಯರ ಫಿಟ್ನೆಸ್ ಸೀಕ್ರೆಟ್; ತೂಕ ಇಳಿಸಲು ಏನ್ ಮಾಡ್ತಾರೆ ಹೀರೋಯಿನ್ಸ್​?

“ಈ ಬೇಸನ್‌ ಪೌಡರ್‌ ಅನ್ನು ಬಳಸುವುದನ್ನು ನಾನು ನನ್ನ ತಾಯಿಯಿಂದ ಕಲಿತುಕೊಂಡಿದ್ದೇನೆ. ನನ್ನ ತಾಯಿಯು ಈ ಬೇಸನ್‌ ಪೌಡರ್‌ ಜೊತೆ ತಾಜಾ ಕೆನೆಯನ್ನು ಸೇರಿಸಿ ತ್ವಚೆಗೆ ಒಂದು ರೀತಿಯ ಫೇಸ್ ಪ್ಯಾಕ್‌ ಹಾಕಲು ಅನುಕೂಲವಾಗುವಂತೆ ಮಾಡುತ್ತಾರೆ. ಈ ಮನೆ ಚಿಕಿತ್ಸೆಯನ್ನು ನಾನು ತಿಂಗಳಿಗೊಮ್ಮೆ ಅನುಸರಿಸುತ್ತೇನೆ. ಇದು ತ್ವಚೆಯಲ್ಲಿ ಇರುವ ಗಾಢವಾದ ಕೊಳೆಯನ್ನು ಸ್ಕ್ರಬ್‌ ರೀತಿಯಲ್ಲಿ ಆಳವಾಗಿ ಸ್ವಚ್ಛಗೊಳಿಸುತ್ತದೆ” ಎಂದು ಕಿಯಾರಾ ತಮ್ಮ ಹೊಳೆಯುವ ತ್ವಚೆಯ ಗುಟ್ಟನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಈ ಕಡ್ಲೆ ಬೇಳೆ ಹಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಇದು ನೈಸರ್ಗಿಕ ತ್ವಚೆಯನ್ನು ಪಡೆಯಲು ಸಹಾಯಕಾರಿ ಆಗಿದೆ. ಈ ಹಿಟ್ಟಿನಿಂದ ನೀವು ಬೇರೆ ಬೇರೆ ತ್ವಚೆಯ ಆರೈಕೆಯನ್ನು ಮಾಡುವ ವಿಧಾನಗಳನ್ನು ಟ್ರೈ ಮಾಡಬೇಕೆ.

ಇದನ್ನೂ ಓದಿ:  Skin Care: ಮುಖದ ಅಂದಕ್ಕಾಗಿ ಯಾವ ಪದಾರ್ಥಗಳ ಫೇಸ್ ಪ್ಯಾಕ್ ಉತ್ತಮ? ಬೆಸ್ಟ್ ಆಯ್ಕೆಗಳಿವು

ತ್ವಚೆಯ ಆರೈಕೆಗೆ ಕೆಲವು ವಿಧಾನಗಳು ಇಲ್ಲಿವೆ ತಯಾರಿಸಿ ನೋಡಿ.

  1. ಟ್ಯಾನಿಂಗ್‌ ನಿವಾರಿಸಲು ಬೇಸನ್ ಮತ್ತು ಅಲೋವೆರಾ ಫೇಸ್ ಮಾಸ್ಕ್
    ನೀವು ಬೇಸಿಗೆ ರಜೆ ಕಳೆದು ಬಂದಿದ್ದೀರಿ ಅಂದ್ರೆ ಆ ಸುಡು ಬಿಸಿಲಿನಿಂದ ನಿಮ್ಮ ತ್ವಚೆ ಟ್ಯಾನ್‌ ಆಗಿಯೇ ಆಗಿರುತ್ತದೆ. ಆಗ ನೀವು ಈ ಬೇಸನ್‌ ಪೌಡರ್‌ ಅನ್ನು ಅಲೋವೆರಾ ದೊಂದಿಗೆ ಬೆರೆಸಿ ಮುಖಕ್ಕೆ ಫೇಸ್‌ ಮಾಸ್ಕ್‌ ರೀತಿಯಲ್ಲಿ ವಾರಕ್ಕೆ ಮೂರು ಬಾರಿ ಬಳಸುವುದರಿಂದ ನಿಮ್ಮ ತ್ವಚೆಯು ಟ್ಯಾನ್‌ ನಿಂದ ಮುಕ್ತಿ ಪಡೆದು ಸುಂದರ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.

  2. ಎಣ್ಣೆಯುಕ್ತ ಚರ್ಮದವರಿಗಾಗಿ ಬೇಸನ್‌ ಮತ್ತು ಮುಲ್ತಾನಿ ಮಟ್ಟಿ ಫೇಸ್‌ ಮಾಸ್ಕ್‌:
    ಎಣ್ಣೆಯುಕ್ತ ಚರ್ಮದವರಿಗಾಗಿ ಈ ಬೇಸನ್‌ ಪೌಡರ್‌ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಮುಖದಲ್ಲಿನ ಎಣ್ಣೆ ಅಂಶವನ್ನು ತೆಗೆದು ಹಾಕುವ ಕೆಲಸ ಮಾಡುತ್ತದೆ. ಬೇಸನ್‌ ಪೌಡರ್‌ ಮತ್ತು ಮುಲ್ತಾನಿ ಮಟ್ಟಿ ಪೌಡರ್‌ ಅನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ರೋಸ್‌ ವಾಟರ್‌ ಅನ್ನು ಬಳಸಿ ನಯವಾದ ಪೇಸ್ಟ್‌ ಮಾಡಿಕೊಳ್ಳಿ. ನಂತರ ಇದನ್ನು ಫೇಸ್‌ ಮಾಸ್ಕ್‌ ಹಾಕಿಕೊಳ್ಳಿ. ಇದರಿಂದ ನಿಮ್ಮ ತ್ವಚೆಯಲ್ಲಿನ ಎಣ್ಣೆ ಅಂಶ ಹೊರಟು ಹೋಗಿ ಸುಂದರ ತ್ವಚೆ ನಿಮ್ಮದಾಗುತ್ತದೆ.

  3. ಓಟ್ಸ್‌ ಮತ್ತು ಬೇಸನ್‌ ಪೌಡರ್‌ನ ಸ್ಕ್ರಬ್‌
    ಓಟ್ಸ್‌ ಮತ್ತು ಬೇಸನ್‌ ಪೌಡರ್‌ ಜೊತೆಗೆ ಹಸಿ ಹಾಲನ್ನು ಸೇರಿಸಿ ನಯವಾಗಿ ಪೇಸ್ಟ್‌ ಮಾಡಿಕೊಳ್ಳಿ, ವಾರಕ್ಕೊಮ್ಮೆ ಇದನ್ನು ಸ್ಕ್ರಬ್‌ ತರಹ ಬಳಸಿ, ನಿಮ್ಮಲ್ಲಿನ ತ್ವಚೆಯ ಕೊಳೆಯನ್ನು ದೂರವಾಗಿಸಿ. ಸುಂದರ ತ್ವಚೆ ನಿಮ್ಮದಾಗಿಸಿಕೊಳ್ಳಿ.

Published by:Ashwini Prabhu
First published: