ಕೇತುಗ್ರಸ್ಥ ಸೂರ್ಯಗ್ರಹಣ ; ಮಕರ, ಧನಸ್ಸು, ತುಲಾ ರಾಶಿಯವರು ಈ ಶ್ಲೋಕ ಓದಿದರೆ ಒಳಿತು

ಸೂರ್ಯಗ್ರಹಣದಲ್ಲಿ ಮೂಲ ನಕ್ಷತ, ಧನಸ್ಸು, ವೃಶ್ಚಿಕ ಹಾಗೂ ಮಕರ ರಾಶಿಯವರಿಗೆ ಹೆಚ್ಚಿನ ಪರಿಣಾಮ ಬೀರುವ ಹಿನ್ನೆಲೆ ಈ ಶ್ಲೋಕವನ್ನು ಓದಿದರೆ ಒಳಿತು

Seema.R | news18-kannada
Updated:December 25, 2019, 7:23 AM IST
ಕೇತುಗ್ರಸ್ಥ ಸೂರ್ಯಗ್ರಹಣ ; ಮಕರ, ಧನಸ್ಸು, ತುಲಾ ರಾಶಿಯವರು ಈ ಶ್ಲೋಕ ಓದಿದರೆ ಒಳಿತು
ಕೇತುಗ್ರಸ್ಥ ಸೂರ್ಯಗ್ರಹಣದ ಚಿತ್ರಣ
  • Share this:
ಬೆಂಗಳೂರು(ಡಿ. 24): ಈ ವರ್ಷ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ವರ್ಷದ ಅಂತಿಮದಲ್ಲಿ ಬರುತ್ತಿರುವ ಕೇತುಗ್ರಸ್ಥ ಅಥವಾ ಕಂಕಣ ಸೂರ್ಯಗ್ರಹಣ ಎಲ್ಲರ ಗಮನಸೆಳೆದಿದೆ. 

ಪೂರ್ಣ ಪ್ರಮಾಣದಲ್ಲಿ ಸಂಭವಿಸುವ ಈ ಸೂರ್ಯಗ್ರಹಣವನ್ನು ರಕ್ತಸೂರ್ಯಗ್ರಹಣ ಎಂದು ಕೂಡ ಕರೆಯುತ್ತಾರೆ. ಸೂರ್ಯಮತ್ತು ಭೂಮಿ ನಡುವೆ ಬರುವ ಚಂದ್ರ ಪೂರ್ಣಪ್ರಮಾಣದಲ್ಲಿ ಸಂಭವಿಸಲಿದೆ.

ಶ್ರೀ ವಿಕಾರಿ ನಾಮ ಸಂವತ್ಸರದ ಮಾರ್ಗಶಿರ ಬಹುಳ ಅಮಾವಾಸ್ಯೆಯಂದು ಸಂಭವಿಸುವ ಈ ಸೂರ್ಯಗ್ರಹಣ ಮೂಲ ನಕ್ಷತ್ರ, ಧನಸ್ಸು ರಾಶಿಯಲ್ಲಿ, ವೃಶ್ಚಿಕ,  ಮತ್ತು ಮಕರ ಲಗ್ನಗಳಲ್ಲಿ  ಸಂಭವಿಸಲಿದೆ.

ಇನ್ನು ಗ್ರಹಣ ಸ್ಪರ್ಶ ಕಾಲ 8.7 ನಿಮಿಷಕ್ಕೆ ಆರಂಭವಾಗಲಿದ್ದು, ಗ್ರಹಣ ಮಧ್ಯಕಾಲ 9.37 ನಿಮಿಷಕ್ಕೆ ಚಂದ್ರ ಸಂಪೂರ್ಣವಾಗಿ ಚಂದ್ರ, ಭೂಮಿ ನಡುವೆ ಕಾಣಲಿದ್ದಾನೆ. 11 ಗಂಟೆ 8 ನಿಮಿಷಕ್ಕೆ ಸಂಪೂರ್ಣ ಗ್ರಹಣ ಮುಕ್ತಾಯವಾಗಲಿದೆ.

ಸೂರ್ಯಗ್ರಹಣದಲ್ಲಿ ಮೂಲ ನಕ್ಷತ್ರ, ಧನಸ್ಸು, ವೃಶ್ಚಿಕ ಹಾಗೂ ಮಕರ ರಾಶಿಯವರಿಗೆ ಹೆಚ್ಚಿನ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ಶ್ಲೋಕವನ್ನು ಓದಿದರೆ ಒಳಿತು

ಶ್ಲೋಕ :

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||

 
Published by: Seema R
First published: December 25, 2019, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading