ಕೀಟೊ ಡಯಟ್ ಮಾಡಿದ್ರೆ ಕೇವಲ 10 ದಿನಗಳಲ್ಲಿ ನಿಮ್ಮ ಡೊಳ್ಳು ಹೊಟ್ಟೆ ಮಂಗಮಾಯ..!

Keto Diet: ಬಟರ್​ಫ್ರೂಟ್ (ಅವಕಾಡೊ ಅಥವಾ ಬೆಣ್ಣೆಹಣ್ಣು)ಗಳನ್ನು ಹೆಚ್ಚಾಗಿ ಸೇವಿಸಿ. ಅವಕಾಡೊದಲ್ಲಿ ಸುಮಾರು 9 ಗ್ರಾಂ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್, ಖನಿಜಗಳು ಮತ್ತು ಪೊಟ್ಯಾಷಿಯಂ ಅಂಶಗಳನ್ನು ಒಳಗೊಂಡಿರುತ್ತವೆ.

zahir | news18-kannada
Updated:August 3, 2019, 6:29 PM IST
ಕೀಟೊ ಡಯಟ್ ಮಾಡಿದ್ರೆ ಕೇವಲ 10 ದಿನಗಳಲ್ಲಿ ನಿಮ್ಮ ಡೊಳ್ಳು ಹೊಟ್ಟೆ ಮಂಗಮಾಯ..!
Keto Diet
  • Share this:
ಏನೋ ಹೊಟ್ಟೆ ಬಂದಿದೆ.., ಇಷ್ಟೊಂದು ದೊಡ್ಡ ಹೊಟ್ಟೆ ಹಿಟ್ಕೊಂಡು ಅದೇಗೋ ಬದುಕ್ತೀಯಾ..ಇಂತಹದೊಂದು ಪ್ರಶ್ನೆ ಡೊಳ್ಳು ಹೊಟ್ಟೆ ಹೊಂದಿರುವವರಿಗೆ ಸದಾ ಕಾಡುತ್ತಿರುತ್ತದೆ. ಸ್ಲಿಮ್ ಆಗಲು ಬಯಕೆಯಿದ್ದರೂ, ಈ ಹೊಟ್ಟೆಯನ್ನು ಅದೇಗಪ್ಪಾ ಕರಗಿಸಲಿ ಎಂಬ ಚಿಂತೆಯಲ್ಲಿ ಹಲವರಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಆಧುನಿಕ ಜೀವನಶೈಲಿಯಲ್ಲಿ ಸ್ಥೂಲಕಾಯತೆ ಎಂಬುದು ಹೊಸ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಹೀಗಾಗಿಯೇ ಹಲವರು ಜಿಮ್​ನತ್ತ ಮುಖ ಮಾಡಿದರೆ, ಮತ್ತೆ ಕೆಲವರು ಡಯಟ್​ನತ್ತ ಗಮನ ನೀಡುತ್ತಿದ್ದಾರೆ. ಆದರೆ ತೂಕ ಇಳಿಸುವ ವಿಷಯದಲ್ಲಿ ಇವರೆಡಕ್ಕಿಂತ ಮುಖ್ಯವಾಗಿ ಇದೀಗ ಸದ್ದು ಮಾಡುತ್ತಿರುವುದು ಕೀಟೊ ಡಯಟ್. ಸಾಮಾನ್ಯವಾಗಿ ಬಾಲಿವುಡ್ ಸಿನಿತಾರೆಯರು ಇಂತಹದೊಂದು ಡಯಟಿಂಗ್ ಆಹಾರ ಕ್ರಮಗಳ ಮೂಲಕ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಕೀಟೋ ಡಯಟ್ ಕೂಡ ಚಿತ್ರತಾರೆಗಳಂತೆ ಏಕಾಏಕಿ ಫೇಮಸ್​ ಆಗಿಬಿಟ್ಟಿದೆ.

ಅಷ್ಟಕ್ಕೂ ಕೀಟೋ ಡಯಟ್ ಎಂದರೇನು?

ಕೀಟೊ ಡಯಟ್ ಅನ್ನು ಕಡಿಮೆ ಕಾರ್ಬ್ ಕೀಟೊ ಡಯಟ್ (Low-Carb Keto Diet) ಎಂದು ಕರೆಯಲಾಗುತ್ತದೆ. ಈ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮ್ಮ ಯಕೃತ್ತಿನಲ್ಲಿ ಕೀಟೋನ್ ಉತ್ಪತ್ತಿಯಾಗುತ್ತದೆ. ದೇಹದ ಕೊಬ್ಬನ್ನು ಕರಗಿಸುವಲ್ಲಿ ಇದು ತುಂಬಾ ಪರಿಣಾಮಕಾರಿ. ಇದರಿಂದ, ನೀವು ಕೇವಲ 10 ದಿನಗಳಲ್ಲಿ ಗರಿಷ್ಠ ತೂಕವನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ. ಈ ಆಹಾರ ಕ್ರಮದಲ್ಲಿ ಸಂಪೂರ್ಣ ಕೊಬ್ಬಿನ ಆಹಾರಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಕಡಿಮೆ ಪ್ರೋಟೀನ್ ಮತ್ತು ಅತೀ ಕಡಿಮೆ ಕಾರ್ಬೋಹೈಡ್ರೇಟ್‌ ಆಹಾರಗಳನ್ನು ಸೇವಿಸಲಾಗುತ್ತದೆ. ಪ್ರಮಾಣಿತ ಕೀಟೊ ಆಹಾರದಲ್ಲಿ 70% ಕೊಬ್ಬು, 25% ಪ್ರೋಟೀನ್ ಮತ್ತು 5% ಕಾರ್ಬೋಹೈಡ್ರೇಟ್‌ಗಳು ಇರಬೇಕು.

ನೀವು ಕೀಟೊ ಡಯಟ್‌ ಪಾಲಿಸಬೇಕಿದ್ದರೆ ಏನು ಮಾಡಬೇಕು?

- ಕಡಿಮೆ ಕಾರ್ಬೋಹೈಡ್ರೇಟ್ ತರಕಾರಿಗಳಾದ ಕೋಸುಗಡ್ಡೆ, ಹೂಕೋಸು, ಎಲೆಕೋಸುಗಳನ್ನು ಹೆಚ್ಚು ತಿನ್ನಬೇಕು.

- ಬಟರ್​ಫ್ರೂಟ್ (ಅವಕಾಡೊ ಅಥವಾ ಬೆಣ್ಣೆಹಣ್ಣು)ಗಳನ್ನು ಹೆಚ್ಚಾಗಿ ಸೇವಿಸಿ. ಅವಕಾಡೊದಲ್ಲಿ ಸುಮಾರು 9 ಗ್ರಾಂ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್, ಖನಿಜಗಳು ಮತ್ತು ಪೊಟ್ಯಾಷಿಯಂ ಅಂಶಗಳನ್ನು ಒಳಗೊಂಡಿರುತ್ತವೆ.- ಸೀಫುಡ್​ಗಳನ್ನು ಹೆಚ್ಚು ಸೇವಿಸಿ. ಅಂದರೆ ಮೀನು, ಸೀಗಡಿಗಳು, ಏಡಿ ಇತ್ಯಾದಿಗಳು.

- ಇನ್ನು ಚಿಕನ್, ಮಾಂಸಹಾರಗಳು ಸಹ ಉತ್ತಮ ಆಯ್ಕೆಯಾಗಿದೆ. ಅವುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವು ತುಂಬಾ ಕಡಿಮೆಯಾಗಿದೆ.

- ಮೊಟ್ಟೆಯಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಇರುತ್ತದೆ.

- ಗ್ರೀಕ್ ಮೊಸರು. 150 ಗ್ರಾಂ ಗ್ರೀಕ್​ ಮೊಸರಿನಲ್ಲಿ 5 ಗ್ರಾಂ ಕಾರ್ಬೋಹೈಡ್ರೇಟ್‌ ಹೊಂದಿರುತ್ತದೆ.

ಈ ಆಹಾರಗಳಲ್ಲಿ ಫ್ಯಾಟ್ (ಕೊಬ್ಬು) ಅಂಶ ಹೆಚ್ಚಿದ್ದರೂ ಕಾರ್ಬೋಹೈಡ್ರೇಟ್​ ಅಂಶಗಳು ಕಡಿಮೆ ಪ್ರಮಾಣದಲ್ಲಿದೆ.

ಇದಾಗ್ಯೂ ಕೀಟೋ ಆಹಾರದ ಕೆಲವು ಅನಾನುಕೂಲತೆಗಳಿವೆ..!

- ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಕೊರತೆಯಿಂದಾಗಿ ಇದು ದೇಹದ ಸ್ನಾಯುಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

- ತಲೆನೋವು, ಭಾರ ಅಥವಾ ವಾಂತಿ ಭಾವನೆ ಕೂಡ ಕೀಟೋ ಡಯಟ್‌ನ ಅಡ್ಡಪರಿಣಾಮಗಳಾಗಬಹುದು.

- ಕೀಟೊ ಆಹಾರದಿಂದ ನೀವು ಕಡಿಮೆ ಹಸಿವನ್ನು ಅನುಭವಿಸುತ್ತೀರಿ.

ಈ ಡಯಟ್​ ಅನ್ನು ಪಾಲಿಸುವ ಮುನ್ನ ನುರಿತ ಡಯಟ್ ಸಲಹೆಗಾರರನ್ನು ಭೇಟಿಯಾಗುವುದು ಉತ್ತಮ.

ಇದನ್ನೂ ಓದಿ: ಶೀಘ್ರದಲ್ಲೇ ವಾಟ್ಸ್​ಆ್ಯಪ್-ಇನ್​ಸ್ಟಾಗ್ರಾಂ ಹೆಸರು ಬದಲಾವಣೆ: ಇನ್ಮುಂದೆ ಹೀಗೆ ಕಾಣಿಸಲಿದೆ ನಿಮ್ಮ ಆ್ಯಪ್
First published: August 3, 2019, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading