HOME » NEWS » Lifestyle » KETO DIET NEW DIET FOR WEIGHT LOSS WHAT IS LAZY KETO DIET BENEFITS HOW IT WORKS HEALTH TIPS STG SCT

Weight Loss Diet: ತೆಳ್ಳಗಾಗಲು ಪರದಾಡ್ತಿದ್ದೀರಾ?; ಕೀಟೋ ಡಯೆಟ್​ನಿಂದ ಹತ್ತೇ ದಿನದಲ್ಲಿ ತೂಕ ಇಳಿಸಿ!

Keto Diet Benefits | ನೀವೇನಾದರೂ ತೂಕ ಇಳಿಸಲು ಪರದಾಡುತ್ತಿದ್ದರೆ ಒಂದು ವಾರ ಅಥವಾ ಹತ್ತು ದಿನಗಳ ಒಳಗೆ ಲೇಜಿ ಕೀಟೋ ಡಯಟ್‌ನಿಂದ ತೂಕ ಇಳಿಸಬಹುದು. ಏನಿದು ಕೀಟೋ ಡಯೆಟ್? ಇಲ್ಲಿದೆ ಮಾಹಿತಿ.

Trending Desk
Updated:June 9, 2021, 12:27 PM IST
Weight Loss Diet: ತೆಳ್ಳಗಾಗಲು ಪರದಾಡ್ತಿದ್ದೀರಾ?; ಕೀಟೋ ಡಯೆಟ್​ನಿಂದ ಹತ್ತೇ ದಿನದಲ್ಲಿ ತೂಕ ಇಳಿಸಿ!
ಸಾಂದರ್ಭಿಕ ಚಿತ್ರ
  • Share this:
ತೆಳ್ಳಗೆ ಆರೋಗ್ಯಯುತವಾಗಿ ಕಾಣಬೇಕೆಂಬುದು ಎಲ್ಲರ ಆಸೆ. ಆದರೆ, ಸದ್ಯದ ಆಹಾರ ಪದ್ಧತಿ, ಜೀವನಶೈಲಿಯಿಂದ ಬೇಡವೆಂದರೂ ಬೊಜ್ಜು ಮೈತುಂಬ ಆವರಿಸಿಕೊಳ್ಳುತ್ತಿದೆ. ಹೀಗಾಗಿ, ನೀವೇನಾದರೂ ತೂಕ ಇಳಿಸಲು ಪರದಾಡುತ್ತಿದ್ದರೆ ಒಂದು ವಾರ ಅಥವಾ ಹತ್ತು ದಿನಗಳ ಒಳಗೆ ಲೇಜಿ ಕೀಟೋ ಡಯಟ್‌ನಿಂದ ತೂಕ ಇಳಿಸಬಹುದು. ಏನಿದು ಕೀಟೋ ಡಯೆಟ್? ಇಲ್ಲಿದೆ ಮಾಹಿತಿ.

ತೂಕ ಇಳಿಸಿಕೊಳ್ಳುವ ಆಲೋಚನೆಯಲ್ಲಿ ಇದ್ದೀರಾ? ಈ ಲಾಕ್‍ಡೌನ್ ಸಂದರ್ಭದಲ್ಲಿ ಇದು ಕೊಂಚ ಕಷ್ಟಾನೇ ಬಿಡಿ. ಮನೆಯೊಳಗೆ ಇದ್ದು ದೈಹಿಕ ವ್ಯಾಯಾಮವಂತೂ ಇಲ್ಲದಂತಾಗಿದೆ, ಜೊತೆಗೆ ಇಷ್ಟ ಬಂದದ್ದನ್ನು ಮಾಡಿಕೊಂಡು ತಿಂದರಂತೂ ಮುಗಿಯಿತು , ತೂಕ ಇಳಿಸುವುದು ಅಷ್ಟರಲ್ಲೇ ಇದೆ ಬಿಡಿ. ಇಲ್ಲ . . .ಇಲ್ಲ ಹಾಗೇನಿಲ್ಲ ತೂಕ ಇಳಿಸಲೇಬೇಕು ಎಂದು ಪಣ ತೊಟ್ಟಿದ್ದೀರಾ? ಹಾಗಾದರೆ ನಿಮಗಾಗಿ ಇಲ್ಲಿದೆ, ಲೇಜಿ ಕೀಟೋ ಡಯಟ್ ಪ್ಲಾನ್. ಹೆಸರಲ್ಲೇ ಲೇಜಿ ಅಂತಿದೆ, ಸೋಮಾರಿಯಾಗಿದ್ದುಕೊಂಡು ಹೇಗಪ್ಪಾ ತೂಕ ಇಳಿಸೋದು ಎಂದು ಸೋಜಿಗ ಪಡಬೇಡಿ. ವಿಷಯ ಹಾಗಲ್ಲ, ಹೀಗಿದೆ. . ಸ್ವಲ್ಪ ಓದಿ ನೋಡಿ.ಲೇಜಿ ಕೀಟೋ ಡಯಟ್‌ ಎಂದರೇನು?
ಇದನ್ನು ಸ್ಪಿನ್ ಆಫ್ ಕಿಟೋ ಡಯಟ್‌ ಎಂದು ಕರೆಯಬಹುದು. ಇದು ಮೂಲತಃ, ನಾವು ಸೇವಿಸುವ ಕ್ಯಾಲೊರಿಗಳು, ಪ್ರೋಟೀನ್‌, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡುವುದಾಗಿದೆ. ಲೇಜಿ ಕೀಟೋ ಡಯೆಟ್, ಕ್ಯಾಲೋರಿ ಲೆಕ್ಕ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಲೆಕ್ಕ ಇಡಲಿಕ್ಕಿರುವುದಿಲ್ಲ, ಕೇವಲ ನಾವು ಸೇವಿಸುವ ಕಾರ್ಬೋಹೈಡ್ರೇಟ್‍ಗಳ ಮೇಲೆ ಗಮನ ಇಡಬೇಕಾಗುತ್ತದೆ.


ಇದನ್ನೂ ಓದಿ: Hair Care: ಎಣ್ಣೆ ಹಚ್ಚಿದರೆ ಕೂದಲು ಉದ್ದವಾಗಿ ಬೆಳೆಯುತ್ತಾ?; ಕೂದಲ ಸಮಸ್ಯೆಗೆ ಇಲ್ಲಿದೆ ಪರಿಹಾರ

“ಲೇಜಿ ಕೀಟೋ ಡಯಟ್‌, ಕೀಟೋಸಿಸನ್ನು ಆಧರಿಸಿದೆ. ಅದು ನಿಮ್ಮ ದೇಹವು ಶಕ್ತಿಯ ಬಳಕೆಗಾಗಿ ಸಂಗ್ರಹಿಸಿಡಲಾದ ಗ್ಲೈಕೋಜಿನನ್ನು ದೇಹವು ಬಳಸುವುದನ್ನು ನಿಲ್ಲಿಸಿ, ಬದಲಿಗೆ ಕೊಬ್ಬನ್ನು ಕರಗಿಸುವ ಪ್ರಕ್ರಿಯೆ. ಇದು ನಿಮ್ಮ ದೇಹದಲ್ಲಿರುವ ಮತ್ತು ನೀವು ಸೇವಿಸುವ ಕೊಬ್ಬನ್ನು ಕರಗಿಸುತ್ತದೆ” ಎಂದು ಆಹಾರ ತಜ್ಞೆ ರೋಹಿಣಿ ಪಾಟೀಲ್ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.


ಲೇಜಿ ಕೀಟೋ ಮತ್ತು ರಕ್ತ ಸಕ್ಕರೆ ಮಟ್ಟತೂಕ ಇಳಿಸುವುದರ ಜೊತೆಗೆ ಲೇಜಿ ಕೀಟೋ ಡಯಟ್‍ನಿಂದ ಆರೋಗ್ಯದ ಲಾಭಗಳೂ ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಯೆಟಿಶಿಯನ್ ವಿಧಿ ಚಾವ್ಲಾ ಸುದ್ದಿ ಸೈಟ್‍ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, “ ತಜ್ಞರ ಮೇಲ್ವಿಚಾರಣೆಯಲ್ಲಿ ಈ ಡಯೆಟನ್ನು ಸರಿಯಾಗಿ ಅನುಸರಿಸಿದರೆ, ಅದು ಟೈಪ್ 2 ಡಯಾಬಿಟಿಸ್ ಹೊಂದಿರುವ ರೋಗಿಗಳಲ್ಲಿ ರಕ್ತ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.


ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು
ಈ ಡಯೆಟ್‍ನಿಂದ ಬೇಗ ತೂಕ ಇಳಿಯುತ್ತದೆಯಾದರೂ, ಈ ಫಲಿತಾಂಶ ತಾತ್ಕಾಲಿಕ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. “ಇದು ಕೇವಲ ಕಾರ್ಬ್‍ಗಳನ್ನು ಎಣಿಸುತ್ತಿದ್ದರೂ, ದಿನಕ್ಕೆ 20-40 ಗ್ರಾಂ ಕಾರ್ಬ್‍ಗಳನ್ನು ಸೇವಿಸುವ ಮಿತಿಯನ್ನು ಅತಿಯಾಗಿ ನಿಯಂತ್ರಿಸಲಾಗುತ್ತದೆ. ನೀವು ಈ ಡಯಟ್ ಆರಂಭಿಸುವ ಮೊದಲು, ವೈದ್ಯರನ್ನು ಸಂಪರ್ಕಿಸಿ, ನಿಮ್ಮ ದೇಹದ ಪ್ರಕೃತಿ ಮತ್ತು ಕೀಟೋಜೆನಿಸಿಸ್ ಪ್ರಕ್ರಿಯೆ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ” ಎನ್ನುತ್ತಾರೆ ಆಹಾರ ತಜ್ಞೆ ರೋಹಿಣಿ ಪಾಟೀಲ್.


ಇದನ್ನೂ ಓದಿ: Weight Loss: ಸಣ್ಣಗೆ ಆಗಬೇಕು ಎಂದರೆ ಈ 7 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

“ಈ ಡಯೆಟ್, ರಕ್ತ ನಾಳದ ಕಾಯಿಲೆಗಳು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಲ್ಲ. ಹಾಗೆಯೇ ಇದನ್ನು ದೀರ್ಘ ಕಾಲ ಮುಂದುವರೆಸಿದರೆ, ನೀವು ಹಲವಾರು ಅಗತ್ಯ ಪೋಷಕಾಂಶಗಳಿಂದ ವಂಚಿತರಾಗಬೇಕಾಗುತ್ತದೆ” ಎನ್ನುತ್ತಾರೆ ಅವರು.Youtube Video

ನೀವು ಯಾವುದಾದರು ಸಮಾರಂಭಕ್ಕೆ ಹೋಗಲಿಕ್ಕಿದ್ದು, ದಿಢೀರ್ ತೂಕ ಇಳಿಸಲಿಕ್ಕಿದ್ದರೆ, ಒಂದು ವಾರ ಅಥವಾ ಹತ್ತು ದಿನಗಳ ಒಳಗೆ ಲೇಜಿ ಕೀಟೋ ಡಯಟ್‍ನಿಂದ ತೂಕ ಇಳಿಸಬಹುದು. ಆದರೆ ಜೊತೆಗೆ ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮ ಕೂಡ ಮಾಡಬೇಕು. ಹಾಗೆಯೇ ಸಾಕಷ್ಟು ನೀರು ಕುಡಿಯುವುದನ್ನು ಕೂಡ ಮರೆಯದಿರಿ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವೈದ್ಯರು ಅಥವಾ ಆಹಾರ ತಜ್ಷರನ್ನು ಸಂಪರ್ಕಿಸಿ.


Published by: Sushma Chakre
First published: June 9, 2021, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories