• Home
 • »
 • News
 • »
 • lifestyle
 • »
 • Keto Diet: ಸಣ್ಣ ಆಗೋಕೆ ಕಿಟೋ ಡಯೆಟ್ ಮಾಡ್ತಾ ಇದ್ದೀರಾ? ಹಾಗಿದ್ರೆ ಎಚ್ಚರ..

Keto Diet: ಸಣ್ಣ ಆಗೋಕೆ ಕಿಟೋ ಡಯೆಟ್ ಮಾಡ್ತಾ ಇದ್ದೀರಾ? ಹಾಗಿದ್ರೆ ಎಚ್ಚರ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Keto Diet Dangers: ಕಿಟೋಜೆನಿಕ್ ಡಯಟ್ ಮೆದುಳಿನ ಮೇಲೆ ಪರಿಣಾಮ ಬೀರಲಿದೆ. ಕಾರ್ಬ್‌ಗಳ ಸೇವನೆಯಲ್ಲಿ ತ್ವರಿತ ಇಳಿಕೆಯು ಮಿದುಳಿಗೆ ಗ್ಲುಕೋಸ್‌ನ ಲಭ್ಯತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಇದರಿಂದ ಮಿದುಳಿಗೆ ಮಂಕು ಕವಿದಿರುವಂತೆ ನಿಮಗೆ ಭಾಸವಾಗುತ್ತದೆ.

 • Share this:

  ಆಧುನಿಕ ಜೀವನಶೈಲಿಯಲ್ಲಿ(Life Style) ದೇಹ ತೂಕ(Body weight) ಇಳಿಸಿಕೊಳ್ಳಲು ನಾನಾ ರೀತಿಯ ಸರ್ಕಸ್ ಮಾಡುವವರೇ ಹೆಚ್ಚು. ಆರೋಗ್ಯಕರ ಜೀವನಶೈಲಿ(Healthy Lifestyle) ಮತ್ತು ಸೌಂದರ್ಯದ(Beauty) ಕಲ್ಪನೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತವೆ. ಅದರಲ್ಲೂ ಗ್ಲಾಮರ್(Glamar) ಮತ್ತು ಶೋ ಜಗತ್ತಿನಲ್ಲಿ, ಡಯಟಿಂಗ್(Diet) ಪರಿಕಲ್ಪನೆಯು ಮಹತ್ವ ಪಡೆದುಕೊಂಡಿದೆ.ಹೀಗಾಗಿಯೇ ಹಲವರು ಜಿಮ್​ನತ್ತ(Gym) ಮುಖ ಮಾಡಿದರೆ, ಮತ್ತೆ ಕೆಲವರು ಡಯಟ್​ನತ್ತ ಗಮನ ನೀಡುತ್ತಿದ್ದಾರೆ. ಆದರೆ ತೂಕ ಇಳಿಸುವ ವಿಷಯದಲ್ಲಿ ಇವರೆಡಕ್ಕಿಂತ ಮುಖ್ಯವಾಗಿ ಇದೀಗ ಸದ್ದು ಮಾಡುತ್ತಿರುವುದು ಕೀಟೊ ಡಯಟ್. ಸಾಮಾನ್ಯವಾಗಿ ಬಾಲಿವುಡ್ ಸಿನಿತಾರೆಯರು ಇಂತಹದೊಂದು ಡಯಟಿಂಗ್ ಆಹಾರ ಕ್ರಮಗಳ ಮೂಲಕ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಕೀಟೋ ಡಯಟ್ ಕೂಡ ಏಕಾಏಕಿ ಫೇಮಸ್​ ಆಗಿಬಿಟ್ಟಿದೆ.


  ಏನಿದು ಕಿಟೋ ಡಯೆಟ್..?


  ಕೀಟೊ ಡಯಟ್ ಅನ್ನು ಕಡಿಮೆ ಕಾರ್ಬ್ ಕೀಟೊ ಡಯಟ್ ಎಂದು ಕರೆಯಲಾಗುತ್ತದೆ. ಈ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮ್ಮ ಯಕೃತ್ತಿನಲ್ಲಿ ಕೀಟೋನ್ ಉತ್ಪತ್ತಿಯಾಗುತ್ತದೆ. ದೇಹದ ಕೊಬ್ಬನ್ನು ಕರಗಿಸುವಲ್ಲಿ ಇದು ತುಂಬಾ ಪರಿಣಾಮಕಾರಿ. ಕಡಿಮೆ ಪ್ರೋಟೀನ್ ಮತ್ತು ಅತೀ ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ಆಹಾರ ಪದ್ಧತಿಯೆ ಕೀಟೊ ಡಯಟ್..


  ಹೆಚ್ಚು ಅಪಾಯಕಾರಿ ಕಿಟೋ ಡಯೆಟ್..


  ತೂಕ ಇಳಿಸಿಕೊಳ್ಳಲು ಸಹಾಯಕರಾಗಿರುವ ಕೀಟೋ ಡಯಟ್ ಹಲವು ರೋಗಗಳನ್ನು ತಂದೊಡ್ಡಬಹುದು.. ಹೀಗಾಗಿ ಕೇಟೋ ಡಯಟ್ ನಿಂದ ಆಗುವ ಪರಿಣಾಮಗಳು ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ..


  1)ಕಿಡ್ನಿ ಸ್ಟೋನ್: ಕಿಟೋ ಡಯಟ್ ಕೆಲವು ಪ್ರಕರಣಗಳಲ್ಲಿ ಮೂತ್ರಪಿಂಡ ಕಲ್ಲುಗಳಿಗೂ ಕಾರಣವಾಗುತ್ತದೆ. ಈ ಆಹಾರ ಕ್ರಮದಲ್ಲಿ ಪ್ರಾಣಿಜನ್ಯ ಪ್ರೋಟಿನ್‌ಗಳ ಅಧಿಕ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮತ್ತು ಯೂರಿಕ್ ಆ್ಯಸಿಡ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಈ ಮಟ್ಟಗಳು ಹೆಚ್ಚುತ್ತಿದ್ದಂತೆ ಮೂತ್ರಪಿಂಡ ಕಲ್ಲುಗಳಾಗುವ ಅಪಾಯವೂ ಹೆಚ್ಚುತ್ತ ಹೋಗುತ್ತದೆ ಎನ್ನುತ್ತಾರೆ ತಜ್ಞರು.


  ಇದನ್ನೂ ಓದಿ: ಬೇಗ ತೂಕ ಇಳಿಸಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ


  2)ಯೋಚನಾ ಶಕ್ತಿ ಮೇಲೆ ಪರಿಣಾಮ: ಕಿಟೋಜೆನಿಕ್ ಡಯಟ್ ಮೆದುಳಿನ ಮೇಲೆ ಪರಿಣಾಮ ಬೀರಲಿದೆ. ಕಾರ್ಬ್‌ಗಳ ಸೇವನೆಯಲ್ಲಿ ತ್ವರಿತ ಇಳಿಕೆಯು ಮಿದುಳಿಗೆ ಗ್ಲುಕೋಸ್‌ನ ಲಭ್ಯತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಇದರಿಂದ ಮಿದುಳಿಗೆ ಮಂಕು ಕವಿದಿರುವಂತೆ ನಿಮಗೆ ಭಾಸವಾಗುತ್ತದೆ. ನಿಮ್ಮ ಚಿಂತನೆಗಳು ಮತ್ತು ಏಕಾಗ್ರತೆ ವ್ಯತ್ಯಯಗೊಂಡಿರುವಂತೆ ನಿಮಗೆ ಅನಿಸಬಹುದು. ಮಿದುಳು ಕಾರ್ಬ್‌ಗಳ ಅನುಪಸ್ಥಿತಿಯಲ್ಲಿ ಶಕ್ತಿಗಾಗಿ ಕಿಟೋನ್ ಗಳನ್ನು ಬಳಸಿಕೊಳ್ಳಲು ಸಮರ್ಥವಾಗಿರುತ್ತದೆ. ಶರೀರವು ಹೆಚ್ಚುಹೆಚ್ಚಾಗಿ ಕಿಟೋನ್‌ಗಳನ್ನು ಉತ್ಪಾದಿಸುತ್ತಿದ್ದಂತೆ ಸಾಮಾನ್ಯವಾಗಿ ಮಿದುಳಿಗೆ ಕವಿದಿರುವ ಈ ಮಂಕು ಮಾಯವಾಗುತ್ತದೆ.


  3)ಸ್ನಾಯುಗಳ ದುರ್ಬಲತೆ: ಕಿಟೋ ಡಯಟ್ ಕಡಿಮೆ ಕಾರ್ಬ್‌ಗಳನ್ನು ಮಾತ್ರವಲ್ಲ,ಪ್ರೋಟಿನ್ ಅನ್ನು ಸಹ ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ಹೀಗಾಗಿ ಸ್ನಾಯುಗಳ ದ್ರವ್ಯರಾಶಿ ಸಹ ಕಡಿಮೆಯಾಗಿ ನಿಮ್ಮ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದಕ್ಕೆ ಪ್ರೋಟಿನ್ ಸೇವನೆ ಕಡಿಮೆಯಾಗಿರುವುದು ಕಾರಣವಾಗಿರುತ್ತದೆ. ಈ ದುಷ್ಪರಿಣಾಮ ಕಿಟೋ ಡಯಟ್‌ನೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡುವವರನ್ನೂ ಬಿಡುವುದಿಲ್ಲ.


  4)ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹೆಚ್ಚಳ: ಮಧುಮೇಹದಿಂದ ಬಳಲುತ್ತಿರುವ ಕೆಲವರು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿಸಲು ಕಿಟೋ ವರದಾನವೆಂದು ಭಾವಿಸಿರುತ್ತಾರೆ. ಕಡಿಮೆ ಕಾರ್ಬ್‌ಗಳನ್ನು ಒಳಗೊಂಡಿರುವ ಕಿಟೋ ಆಹಾರಕ್ರಮವು ಸುಮಾರು ನಾಲ್ಕು ತಿಂಗಳುಗಳ ಬಳಿಕ ಸಕ್ಕರೆಯ ಮಟ್ಟದ ಮೇಲೆ ನಿಯಂತ್ರಣವನ್ನು ಹೆಚ್ಚಿಸಬಹುದು.


  5)ಜೀರ್ಣಕ್ರಿಯೆ ಮೇಲೆ ಪರಿಣಾಮ: ತೂಕ ಇಳಿಕೆಗಾಗಿ ಕಾರ್ಬ್‌ಗಳ ಸೇವನೆಯನ್ನು ಕಡಿತ ಮಾಡುತ್ತಿದ್ದೀರಿ ಅಂದರೆ ನಾರಿನಂತಹ ಒಳ್ಳೆಯ ಕಾರ್ಬ್‌ಗಳೂ ಕಡಿಮೆಯಾಗುತ್ತವೆ ಎಂದು ಅರ್ಥ. ಸಾಕಷ್ಟು ನಾರು ಸೇವಿಸದಿದ್ದರೆ ನಿಮ್ಮ ಪಚನಕ್ರಿಯೆಯು ಹಳಿ ತಪ್ಪುತ್ತದೆ. ಇದರಿಂದ ಹೊಟ್ಟೆನೋವು,ಮೂಲವ್ಯಾಧಿ ಮತ್ತು ದೊಡ್ಡಕರುಳಿನ ಕಾರ್ಯಕ್ಕೆ ತೊಡಕು ಇತ್ಯಾದಿ ಸಮಸ್ಯೆ ಆಗುತ್ತದೆ..


  ಇದನ್ನೂ ಓದಿ: ಭಾರತೀಯ ಆಹಾರ ಪದ್ಧತಿಯಿಂದಲೇ ಇಳಿಸಿಕೊಳ್ಳಬಹುದು ತೂಕ


  6)ಕೊಲೆಸ್ಟ್ರಾಲ್ ಹೆಚ್ಚಳ: ಸಾಮಾನ್ಯ ಕಿಟೋ ಡಯಟ್ ಕೊಬ್ಬಿನಿಂದ ನಿಮ್ಮ ಶರೀರದ ಶೇ.85 ರಷ್ಟು ದೈನಂದಿನ ಕ್ಯಾಲೊರಿ ಅಗತ್ಯವು ಒದಗಿಸಲ್ಪಡುತ್ತದೆ. ಇಷ್ಟೆಲ್ಲ ಕೊಬ್ಬನ್ನು ಒಳಗೊಂಡಿರುವ ಡಯಟ್ ಹೃದಯಕ್ಕೆ ಅಷ್ಟೊಂದು ಆರೋಗ್ಯಕರವಲ್ಲ. ಕಿಟೊ ಡಯಟ್‌ನ ಅಡ್ಡ ಪರಿಣಾಮಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದೂ ಸೇರಿದೆ ಮತ್ತು ಇದು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ರಿಣಾಮವನ್ನುಂಟು ಮಾಡುತ್ತದೆ.

  Published by:ranjumbkgowda1 ranjumbkgowda1
  First published: